ಬಂಟ್ವಾಳ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ದಿನ ಬಳಕೆಯ ಆಹಾರ ಸಾಮಾಗ್ರಿ, ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆ ಏರಿಕೆಯನ್ನು ಖಂಡಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಎಸ್.ಡಿ.ಪಿ.ಐ ಬಿ.ಸಿ. ರೋಡ್ ನ ಕೈಕಂಬದಲ್ಲಿ ಪ್ರತಿಭಟನೆ ನಡೆಸಿತು.
ಈ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ “ಒಳ್ಳೆಯ ದಿನಗಳು ಬರಲಿವೆ ಎಂಬ ಭರವಸೆ ಮೂಡಿಸಿ ದೇಶದಲ್ಲಿ ಅಧಿಕಾರವನ್ನು ವಹಿಸಿದ ಬಿಜೆಪಿ ಪಕ್ಷವು ದೇಶದ ಜನತೆಗೆ ಇಂದು ಬೆಲೆಯೇರಿಕೆಯ ಬಹುಮಾನವನ್ನು ನೀಡಿದೆ.
ಬಿಜೆಪಿಯನ್ನು ನಂಬಿ ಮತ ಹಾಕಿದವರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡಾಗ ಕಾಶ್ಮೀರ ಫೈಲ್ ಚಿತ್ರದ ಟಿಕೆಟ್ ನೀಡಿ ನಿಮಗಿಂತ ಹೆಚ್ಚಿನ ಕಷ್ಟಗಳಲ್ಲಿ ಕಾಶ್ಮೀರ ಪಂಡಿತರಿದ್ದಾರೆ ಎಂಬ ಸುಳ್ಳನ್ನು ಹೇಳಿ ಕಷ್ಟಗಳನ್ನು ಸಹಿಸಿಕೊಳ್ಳುವವನೇ ನಿಜವಾದ ದೇಶ ಭಕ್ತ ಎಂದು ಕೇಸರಿ ಪಡೆಗಳನ್ನು ಸಮಾಧಾನ ಪಡಿಸಲಾಗುತ್ತಿದೆ.
ಮನೆಗೆ ಒಂದು ದಿನವೂ ದಿನಸಿ ತರಕಾರಿ ಕೊಂಡುಹೋಗದ ಮೋದಿ ಭಕ್ತರು ದೇಶ ಭಕ್ತಿ ಕಡಿಮೆಯಾಗುವುದು ಬೇಡ ಎಂದು ಮನಸ್ಸಿಲ್ಲದಿದ್ದರೂ ಜೈ ಜೈ ಮೋದಿ ಎಂದು ಬೊಬ್ಬಿಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬಂಟ್ವಾಳ: ಇಡಿ ಅಧಿಕಾರಿಗಳ ಸೋಗಿನಲ್ಲಿ ಹಣ ದರೋಡೆಯಾಗಿರುವ ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ಮನೆಗೆ ಸ್ಪೀಕರ್ ಯು.ಟಿ. ಖಾದರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತಂಡ ಬುಧವಾರ ಬೆಳಗ್ಗೆ ಭೇಟಿ ನೀಡಿ ತನಿಖೆಯ ಪ್ರಗತಿ ಪರಿಶೀಲನೆ ಮತ್ತು ಕಾರ್ಯವಿಧಾನದ ಕುರಿತು ಮನೆಯವರ ಜೊತೆಗೆ ಗೌಪ್ಯ ಸಮಾಲೋಚನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು, ತನಿಖೆ ಇನ್ನಷ್ಟು ತೀವ್ರಗೊಳಿಸಲು ಪೊಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನದೊಂದಿಗೆ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ಇದಕ್ಕೆ ಊರವರ ಮತ್ತು ಮನೆಯವರ ಸಹಕಾರ ಅಗತ್ಯ. ಈಗಾಗಲೇ ಡಿವೈಎಸ್ಪಿ ನೇತೃತ್ವದ 4 ತಂಡಗಳನ್ನು ರಚಿಸಲಾಗಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಶೀಘ್ರವೇ ದರೋಡೆಕೋರರ ಪತ್ತೆ ಹಚ್ಚುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಡಿವೈಎಸ್ಪಿ ವಿಜಯ ಪ್ರಸಾದ್ ಜೊತೆಗೆ ದರೋಡೆಗೊಳಗಾದ ಮನೆಯ ಮಾಲಕ ಸುಲೈಮಾನ್ ಹಾಜಿ ಹಾಗೂ ಪುತ್ರ ಇಕ್ಬಾಲ್ ಜೊತೆಗೆ ಗೌಪ್ಯ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಇ. ನಾಗರಾಜ್, ಸಬ್ ಇನ್ಸ್ ಪೆಕ್ಟರ್ ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ: ನೇತ್ರಾವತಿ ನದಿಯ ದೋಣಿಯ ಅಂಬಿಗ ಬರಿಮಾರು ಕಡವಿನಬಾಗಿಲು ನಿವಾಸಿ ದಿವಾಕರ ನಾಪತ್ತೆಯಾಗಿದ್ದಾರೆ.
ದಿವಾಕರ ಅವರು ಸುಮಾರು 30 ವರ್ಷಗಳಿಂದ ಅಂಬಿಗನಾಗಿ ಕೆಲಸ ಮಾಡುತ್ತಿದ್ದು, ಇವರು ನುರಿತ ಈಜುಗಾರರಾಗಿದ್ದರು. ಬರಿಮಾರು-ಸರಪಾಡಿಗೆ ದೋಣಿ ಮೂಲಕ ಸಂಪರ್ಕ ಸೇತುವೆಯಾಗಿ ಇವರು ಪ್ರತಿದಿನ ಕೆಲಸ ಮಾಡುತ್ತಿದ್ದರು.
ಜ.3 ರ ಶುಕ್ರವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಬರಿಮಾರಿನಿಂದ ಸರಪಾಡಿಗೆ ಹೋಗಿ ಅಲ್ಲಿನ ಅಂಗಡಿಯೊಂದರಿಂದ ಮನೆಗೆ ತರಕಾರಿ ಪಡೆದು, ವಾಪಸ್ ತೆರಳಿದ್ದು, 11 ಗಂಟೆ ವೇಳೆ ದೋಣಿ ಬರಿಮಾರು ಕಡವಿನ ಬಾಗಿಲಿನಲ್ಲಿ ತೇಲಾಡುವ ಸ್ಥಿತಿಯಲ್ಲಿ ಕಂಡು ಬಂದಿದೆ. ದಿವಾಕರ ಅವರು ಕಾಣಿಸಿದ ಕಾರಣ ಅವರ ಪತ್ನಿ ಸರಪಾಡಿಯ ಅಂಗಡಿಯ ಮೂಲಕ ಮಾಲೀಕರಿಗೆ ಫೋನ್ ಮಾಡಿ ವಿಚಾರಿಸಿದ್ದರು.
ಬರಿಮಾರು ಕಡವಿನ ಬಾಗಿಲಿನಲ್ಲಿ ಹಸಿಹುಲ್ಲು ಕಟ್ಟು, ಮೊಬೈಲ್, ಚಪ್ಪಲಿ ಕಂಡು ಬಂದಿದೆ. ದಿವಾಕರ ಅವರಿಗೆ ಮೂರ್ಛೆ ರೋಗವಿದ್ದು, ಈ ಹಿಂದೆ ಕೂಡಾ ನದಿ ಬದಿಯಲ್ಲಿ ಬಿದ್ದ ಘಟನೆ ನಡೆದಿತ್ತು. ಇವತ್ತು ಕೂಡಾ ಮೂರ್ಛೆ ರೋಗ ಭಾದಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಸ್ಥಳೀಯರು ನದಿ ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದು, ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.
ವಿಟ್ಲ: ಇಲ್ಲಿನ ಮಾಣಿ ಸಮೀಪದ ಮಹಾವೀರ ಎಂಬಲ್ಲಿ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್ ಟಿಸಿ ಬಸ್ಸಿನ ಡೀಸೆಲ್ ಟ್ಯಾಂಕ್ ಕಳಚಿ ಬಿದ್ದ ಘಟನೆ ಜ.2ರ ಗುರುವಾರದಂದು ನಡೆದಿದೆ.
ಸರಕಾರಿ ಬಸ್ಸೊಂದು ಮಂಗಳೂರಿನಿಂದ ಅರಸೀಕೆರೆಗೆ ಹೋಗುತ್ತಿದ್ದ ಸಂದರ್ಭ ಬಸ್ ನಿಂದ ಡಿಸೇಲ್ ಟ್ಯಾಂಕ್ ಹೆದ್ದಾರಿಗೆ ಕಳಚಿ ಬಿದ್ದಿದ್ದು, ತತ್ ಕ್ಷಣ ಬಸ್ ಸಂಚಾರ ಸ್ಥಗಿತಗೊಂಡಿದೆ.ಈ ನಡುವೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬದಲಿ ಬಸ್ಸಿನ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಯಿತು. ಹೆದ್ದಾರಿ ಅವ್ಯವಸ್ಥೆಯಿಂದಾಗಿ ಈ ಘಟನೆ ಸಂಭವಿಸಿದ ಎಂದು ಸಾರ್ವಜನಿಕರು ದೂರಿದ್ದಾರೆ.