Home ಪ್ರಮುಖ ಸುದ್ದಿ ಜಾಮಿಯ ಶೂಟೌಟ್ ಗೆ ಪ್ರಚೋದನೆ ನೀಡಿದ ಅನುರಾಗ್ ಠಾಗೂರ್,ಪ್ರವೇಶ್ ವರ್ಮ ಬಂಧನಕ್ಕೆ ಆಗ್ರಹಿಸಿ SDPI ಪ್ರತಿಭಟನೆ

ಜಾಮಿಯ ಶೂಟೌಟ್ ಗೆ ಪ್ರಚೋದನೆ ನೀಡಿದ ಅನುರಾಗ್ ಠಾಗೂರ್,ಪ್ರವೇಶ್ ವರ್ಮ ಬಂಧನಕ್ಕೆ ಆಗ್ರಹಿಸಿ SDPI ಪ್ರತಿಭಟನೆ

ಜಾಮಿಯ ಶೂಟೌಟ್ ಗೆ ಪ್ರಚೋದನೆ ನೀಡಿದ ಅನುರಾಗ್ ಠಾಗೂರ್,ಪ್ರವೇಶ್ ವರ್ಮ ಬಂಧನಕ್ಕೆ ಆಗ್ರಹಿಸಿ SDPI ಪ್ರತಿಭಟನೆ

ಬಂಟ್ವಾಳ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಸಮಿತಿ ವತಿಯಿಂದ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕ ರವರ ಅಧ್ಯಕ್ಷತೆಯಲ್ಲಿ ಜಾಮಿಯ ಶೂಟೌಟ್ ಗೆ ಪ್ರಚೋದನೆ ನೀಡಿದ ಅನುರಾಗ್ ಠಾಗೂರ್ ಪರ್ವೇಶ್ ವರ್ಮ ಬಂಧನಕ್ಕೆ ಆಗ್ರಹಿಸಿ ಮತ್ತು ಬೀದರ್ ಶಾಹಿನ್ ವಿದ್ಯಾರ್ಥಿ ಹಾಗೂ ಶಿಕ್ಷಕರ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಎಸ್.ಡಿ‌.ಪಿ.ಐ ವತಿಯಿಂದ ಪ್ರತಿಭಟನೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಜಾಮಿಯಾ ಮಿಲ್ಲಿಯ ಶೂಟೌಟ್ ಪ್ರಕರಣವನ್ನು ಖಂಡಿಸಿ ದೇಶದಲ್ಲಿ ಈ ರೀತಿಯ ಹಲವಾರು ಘಟನೆಗಳನ್ನು ಸಂಘಪರಿವಾರ ಪ್ರೇರಿತ ಗೋಡ್ಸೆ ಸಂತತಿಗಳು ನಡೆಸ್ತಾ ಇದ್ದಾರೆ,ಗಾಂಧಿಜಿಯನ್ನು ಕೊಂದ ದಿವಸದಂದೆ ಈ ಘೋರ ಕೃತ್ಯವನ್ನು ನಡೆಸಿದ್ದಾರೆ.

ಇದರ ಹಿಂದೆ ಕೇವಲ ಗೋಪಾಲ ಶರ್ಮ ಮಾತ್ರ ಇರುವುದಲ್ಲ ಇದರ ಹಿಂದೆ ಇದಕ್ಕೆ ಪ್ರಚೋದನೆ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಗೂರ್ ರವರು ತಮ್ಮ ಭಾಷಣದಲ್ಲಿ ಸಿಎಎ ವಿರೋಧಿಗಳು ದೇಶ ದ್ರೋಹಿಗಳು ಅವರ ಮೇಲೆ ಗೋಲಿಬಾರ್ ನಡೆಸಬೇಕು ಎಂಬ ಹೇಳಿಕೆ ನೀಡಿರುತ್ತಾರೆ, ಅದೇ ರೀತಿಯಲ್ಲಿ ಕೇಂದ್ರದ ಪರ್ವೇಶ್ ಬರ್ಮಾ ಸಂಸದ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಾಹಿನ್ ಬಾಗ್ ನ್ನು ಇಲ್ಲದಂತೆ ಮಾಡುತ್ತೇವೆ ಪ್ರಚೋದನಕಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ.

ಆದ್ದರಿಂದ ಅವರನ್ನು ಕೂಡ ಬಂದಿಸಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.‌ಅದೇ ರೀತಿಯಲ್ಲಿ ಶಾಹಿನ್ ವಿದ್ಯಾ ಸಂಸ್ಥೆಯಲ್ಲಿ ಸಿಎಎ ಕಾಯಿದೆ ವಿರೋಧಿಸಿ ನಾಟಕ ಮಾಡಿದ ನೆಪವನ್ನು ಇಟ್ಟುಕೊಂಡು ವಿದ್ಯಾರ್ಥಿಯ ಪೋಷಕರನ್ನು ಮತ್ತು ಶಾಲೆಯ ಶಿಕ್ಷಕರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ ಪೋಲಿಸ್ ಇಲಾಖೆ ,ಯಾಕಾಗಿ ಕಲ್ಲಡ್ಕದಲ್ಲಿ ಪ್ರಭಾಕರ್ ಭಟ್ ನೇತ್ರತ್ವದ ಶಾಲೆಯಲ್ಲಿ ಬಾಬರಿ ಮಸ್ಜಿದ್ ದ್ವಂಸದ ಪ್ರಾತ್ಯಕ್ಷಿಕೆಯನ್ನು ನಡೆಸಿದ ವಿದ್ಯಾರ್ಥಿಗಳನ್ನು ಮತ್ತು ಅದಕ್ಕೆ ಪ್ರೋತ್ಸಾಹಿಸಿದ ಶಾಲಾ ಆಡಳಿತ ಮಂಡಳಿಯರ ಮೇಲೆ ಪ್ರಕರಣ ದಾಖಲಿಸಲಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ಆಶ್ರಫ್ ಮಂಚಿ ಮಾತನಾಡಿ ಸರ್ಕಾರದ ಕ್ರಮವನ್ನು ಖಂಡಿಸಿ ನಿಮ್ಮ ದಮನಿಸುವ ಇಂತಹ ಯಾವುದೇ ಬೆದರಿಕೆಗಳಿಗು ನಾವು ಬಗ್ಗುವುದಿಲ್ಲ.ಮಾತ್ರವಲ್ಲ ಎನ್.ಆರ್.ಸಿ ಸಿಎಎ ವಿರುದ್ಧದ ಹೋರಾಟವನ್ನು ಎಲ್ಲಾ ದೆಸೆಯಿಂದಲು ಮುಂದುವರಿಸಲಾಗುವುದು ಎಂದು ಸರಕಾರವನ್ನು ಎಚ್ಚರಿಸಿದರು.ಪ್ರತಿಭಟನಾ ಸಭೆಯಲ್ಲಿ ಎಸ್ ಡಿಪಿಐ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಎಸ್ ಎಚ್ ಉಪಸ್ಥಿತರಿದ್ದರು.

- Advertisment -

RECENT NEWS

ಚೀನಾದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ: 75,000 ಜನರಲ್ಲಿ ಸೋಂಕು ಪತ್ತೆ 

ಚೀನಾದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ: 75,000 ಜನರಲ್ಲಿ ಸೋಂಕು ಪತ್ತೆ  ಚೀನಾ: ಚೀನಾದ ಹುಬೈನಲ್ಲಿ ಕೊರೊನಾ ವೈರಸ್ ಗೆ ಮತ್ತೆ 115 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 2,236ಕ್ಕೆ ತಲುಪಿದೆ. ಚೀನಾದಲ್ಲಿ 75,000 ಜನರು...

ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಸಿ.ಚೆನ್ನಿಗಪ್ಪ ಇನ್ನಿಲ್ಲ

ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಸಿ. ಚೆನ್ನಿಗಪ್ಪ ಇನ್ನಿಲ್ಲ ಬೆಂಗಳೂರು: ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಸಿ. ಚೆನ್ನಿಗಪ್ಪ ಇಂದು ನಿಧನರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಚೆನ್ನಿಗಪ್ಪ ಅವರಿಗೆ...

ತ್ಯಾಜ್ಯ ಸಂಸ್ಕರಣಾ ಘಟಕ ಕಡ್ಡಾಯ: ಉಲ್ಲಂಘಿಸಿದವರಿಗೆ ಮ.ನ.ಪಾ ದಂಡ

ತ್ಯಾಜ್ಯ ಸಂಸ್ಕರಣಾ ಘಟಕ ಕಡ್ಡಾಯ: ಉಲ್ಲಂಘಿಸಿದವರಿಗೆ ಮ.ನ.ಪಾ ದಂಡ ಮಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕ ಹೊಂದುವಂತೆ ಮಹಾನಗರ ಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ಉಲ್ಲಂಘಿಸಿದ ಹತ್ತು ಅಪಾರ್ಟ್ ಮೆಂಟ್ ಗಳಿಗೆ ದಂಡ ವಿಧಿಸಲಾಗಿದೆ. ಕಳೆದ ಸೆಪ್ಟಂಬರ್...

ಪಾಕ್ ಪರ ಅಮೂಲ್ಯ ಘೋಷಣೆ: 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ

ಪಾಕ್ ಪರ ಅಮೂಲ್ಯ ಘೋಷಣೆ: 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಸಮಾವೇಶದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ಬಂಧಿಸಿದ ಪೋಲಿಸರು...