ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲು ಎಸ್.ಡಿ.ಪಿ.ಐ ಆಗ್ರಹ..
ಮಂಗಳೂರು :ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ಕೋಮು ಪ್ರಚೋದನಕಾರಿಯಾಗಿ ಮತ್ತು ದೇಶದ್ರೋಹದ ಮಾತುಗಳನ್ನು ಆಡಿದ ಕಲ್ಲಡ್ಕ ಪ್ರಭಾಕರ್ ಭಟ್ ನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಎಸ್.ಡಿ.ಪಿ.ಐ ದ.ಕ. ಜಿಲ್ಲಾ ಸಮಿತಿ ಆಗ್ರಹಿಸಿದೆ.
ಮಂಗಳೂರು ಹೊರವಲಯದ ಉಳ್ಳಾಲ ಕೀನ್ಯಾದಲ್ಲಿ ಆಯೋಜಿಸಿದ ಸಭೆಯಲ್ಲಿ ಸಂಘಪರಿವಾರ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಉಳ್ಳಾಲವನ್ನು ಭಾರತದ ಶತ್ರುದೇಶ ಪಾಕಿಸ್ತಾನಕ್ಕೆ ಹೋಲಿಸಿ ದೇಶದ್ರೋಹದ ಮಾತುಗಳನ್ನು ಆಡಿದ ಘಟನೆಯನ್ನು ಎಸ್.ಡಿ.ಪಿ.ಐ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಣಿ ಅಬ್ಬಕ್ಕಳ ಊರು ಮತ್ತು ಎಲ್ಲಾ ಧರ್ಮದವರು ಜಾತಿ ಮತ ಭೇದವಿಲ್ಲದೆ ಗೌರವಿಸಿ ಭೇಟಿ ನೀಡುವ ಧಾರ್ಮಿಕ ಕ್ಷೇತ್ರ ಇರುವ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿ ದೇಶದ್ರೋಹದ ಮಾತುಗಳನ್ನಾಡಿ ಪರಸ್ಪರ ಅನ್ಯೋನ್ಯತೆ ಯಿಂದ ಇರುವ ಜನತೆಯ ನಡುವೆ ಹಿಂದು ಮುಸ್ಲಿಂ ಎಂಬ ಧ್ರುವೀಕರಣ ಮಾಡಿ ಜಿಲ್ಲೆಯಲ್ಲಿ ಆಶಾಂತಿಯನ್ನು ಸೃಷ್ಟಿಸಿ ಕೋಮು ಗಲಭೆಗೆ ಪ್ರಯತ್ನಿಸುವ ಹುನ್ನಾರವೇ ಈ ರೀತಿಯ ಪ್ರಚೋದಕಾರಿ ಭಾಷಣವಾಗಿದೆ.
ಅದೇ ರೀತಿ ತನಗೆ ಕೇವಲ ಒಬ್ಬ ಮಗಳಿದ್ದರೂ ಉಳಿದ ಹಿಂದು ಬಾಂದವರಿಗೆ ಹೆಚ್ಚೆಚ್ಚು ಮಕ್ಕಳನ್ನು ಹೆತ್ತು ಹಿಂದೂ ಜನಸಂಖ್ಯೆಯನ್ನು ಅಧಿಕಗೊಳಿಸಬೇಕೆಂಬ ಹಾಸ್ಯಾಸ್ಪದ ಮಾತುಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಬಾಷಣ ಮಾಡಿರುವುದು ಅವರ ಸಂಸೃತಿಯನ್ನು ತೋರಿಸುತ್ತದೆ.
ಹಾಗಾಗಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ಕೋಮು ಪ್ರಚೋದನಕಾರಿಯಾಗಿ ಮತ್ತು ದೇಶದ್ರೋಹದ ಮಾತುಗಳನ್ನು ಆಡಿದ ಕಲ್ಲಡ್ಕ ಪ್ರಭಾಕರ್ ಭಟ್ ನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಎಸ್.ಡಿ.ಪಿ.ಐ ದ.ಕ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.