Wednesday, May 18, 2022

ಮಂಗಳೂರು: ಮಾಲೀಕನ ಎದುರೇ ಸ್ಕೂಟರ್‌ ಕದ್ದೊಯ್ದ ಕಳ್ಳ

ಮಂಗಳೂರು: ಮಾಲೀಕನ ಎದುರಿನಲ್ಲಿಯೇ ಕಳ್ಳನೊಬ್ಬ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.


ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ಜ.7ರಂದು ಬೆಳಗ್ಗೆ 11.30ರ ವೇಳೆಗೆ ಪಾರ್ಸಲ್‌ ಬಸ್‌ಗೆ ನೀಡಲು ಜ್ಯೋತಿ ವೃತ್ತದ ಬಳಿ ಸ್ಕೂಟರ್‌ ನಿಲ್ಲಿಸಿ ಬಸ್‌ಗಾಗಿ ಕಾಯುತ್ತಿದ್ದರು.

ಇದಾದ ಸ್ವಲ್ಪ ಹೊತ್ತಲ್ಲೇ ಸ್ಕೂಟರ್‌ ಕಡೆ ತಿರುಗಿ ನೋಡುವಾಗ ಸ್ಕೂಟರ್‌ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ಅಲ್ಲಿಯೇ ಸ್ವಲ್ಪ ಮುಂದೆ ಒಬ್ಬ ವ್ಯಕ್ತಿ ಆ ಸ್ಕೂಟರ್‌ನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ.

ತಕ್ಷಣ ಅವರು ಬೊಬ್ಬೆ ಹಾಕಿದಾಗ ಕಳ್ಳ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ರಾಜ್ಯ ಸರ್ಕಾರ ನಮ್ಮ ಅಧಿಕಾರ ಕಸಿದುಕೊಂಡಿದೆ: ಹೈಕೋರ್ಟ್‌ ಮುಂದೆ ಚುನಾವಣಾ ಆಯೋಗ ಅಳಲು

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗದ ರೀತಿಯಲ್ಲಿ ರಾಜ್ಯ ಸರ್ಕಾರ ನಮ್ಮ ಅಧಿಕಾರ ಕಸಿದುಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ ಮುಂದೆ ತನ್ನ ಅಸಹಾಯಕತೆ...

ವಿಟ್ಲ: ಭಾರೀ ಮಳೆಗೆ ರಸ್ತೆಗೆ ಬಿದ್ದ ವಿದ್ಯುತ್ ಕಂಬ-ಸಂಚಾರ ಸ್ಥಗಿತ

ವಿಟ್ಲ: ಸುರಿದ ಭಾರೀ ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾದ ಘಟನೆ ವಿಟ್ಲ- ಕಲ್ಲಡ್ಕ ರಸ್ತೆಯಲ್ಲಿ ನಡೆದಿದೆ.- ನಿನ್ನೆ ಸುರಿದ ಮಳೆಗೆ ಇಂದು ಮುಂಜಾನೆ...

ಉಡುಪಿ: ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರೆ ದಾರುಣ ಸಾವು

ಉಡುಪಿ: ಬೈಕ್ ನಲ್ಲಿ ಹೋಗುವಾಗ ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರೆ ಮೃತಪಟ್ಟಂತಹ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ಕಾಲ್ತೋಡು ಗ್ರಾಮದ ಮುರೂರು ಎಂಬಲ್ಲಿ ನಡದಿದೆ.ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ...