ಮಸೀದಿಯಲ್ಲಿ ಊಟಕ್ಕೆ ಹೋದ ಶಾಲಾ ವಿದ್ಯಾರ್ಥಿಗಳು; ಹಿಂದೂ ಪರ ಸಂಘಟನೆ ಆಕ್ರೋಶ..!
ಪುತ್ತೂರು:ಕೊಕ್ಕಡದ ಸಂಘಪರಿವಾರದ ಸ್ಥಳೀಯ ನಾಯಕನೊಬ್ಬ ಅಲ್ಲಿನ ಪ್ರೌಢಶಾಲೆಯ ಪ್ರಾದ್ಯಾಪಕರನ್ನು ಬೆದರಿಸುವ ವಾಯ್ಸ್ ಒಂದು ವೈರಲ್ ಆಗ್ತಾ ಇದೆ, ಉದ್ಘಾಟನೆಗೊಂಡ ಮಸೀದಿಯ ಕಾರ್ಯಕ್ರಮಕ್ಕೆ ಕೊಕ್ಕಡ ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕರು ಕರೆದುಕೊಂಡು ಹೋಗಿದ್ದರು. ಇದೀಗ ಮಸೀದಿ ಉದ್ಘಾಟನೆಗೆ ಹಿಂದೂ ವಿದ್ಯಾರ್ಥಿನಿಯರನ್ನು ಕರೆದುಕೊಂಡ ಹೋದ ಬಗ್ಗೆ ವಿವಾದ ಉಂಟಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೊಕ್ಕಡ ಮಸೀದಿಯ ಉದ್ಘಾಟನೆಗೆ ಶಾಲೆಗೆ ಆಮಂತ್ರಣ ನೀಡಲಾಗಿತ್ತು ಎನ್ನಲಾಗಿದೆ. ಮಸೀದಿ ಆಡಳಿತ ಕಮಿಟಿಯು ಸೌಹಾರ್ದತೆಯಿಂದ ಊರಿನ ಸರ್ವ ಧರ್ಮದವರನ್ನು ಮಸೀದಿ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿ ಶಾಂತಿ ಸಹಬಾಳ್ವೆಯ ಸಂದೇಶವನ್ನು ಸಾರುವಾಗ ಇದನ್ನು ಸಹಿಸದ ಸಂಘಪರಿವಾರದ ಕಿಡಿಗೇಡಿಗಳು ಮುಖ್ಯೋಪಾಧ್ಯಾಯರಿಗೆ ಕರೆ ಮಾಡಿ ಬೆದರಿಕೆ ಹಾಕಿರುವುದು ಖಂಡನಾರ್ಹವಾಗಿದೆ.
ಅಲ್ಲಿ ಮಸೀದಿ ಎದುರು ವಿದ್ಯಾರ್ಥಿಗಳನ್ನು ನಿಲ್ಲಿಸಿ ಪೊಟೋ ತೆಗೆದು ಅದನ್ನು ಈಗ ಸಾಮಾಜಿಕ ಜಾಲ ತಾಣದಲ್ಲಿ ಹಾಕಿರುವುದಲ್ಲದೆ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಅನುಮತಿ ಇಲ್ಲದೆ ಹಿಂದೂ ವಿದ್ಯಾರ್ಥಿನಿಯರನ್ನು ಮಸೀದಿ ಉದ್ಘಾಟನೆಗೆ ಕರೆದುಕೊಂಡು ಹೋಗಿರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ದ.ಕ ಪೋಲಿಸ್ ಇಲಾಖೆ ಬೆದರಿಕೆ ಹಾಕಿದ ಸಂಘಪರಿವಾರದವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ ಬಂಧಿಸಬೇಕು ಎಂದು ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹೈದರ್ ನೀರ್ಸಾಲ್ ಆಗ್ರಹಿಸಿದ್ದಾರೆ.