Connect with us

    DAKSHINA KANNADA

    ಮಂಗಳೂರು: ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ- ಅರ್ಜಿ ಸಲ್ಲಿಸಿ

    Published

    on

    ಮಂಗಳೂರು: ಮುಖ್ಯಮಂತ್ರಿಗಳ ವಿದ್ಯಾನಿಧಿ ಕಾರ್ಯಕ್ರಮದಡಿ ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹ ಶಿಷ್ಯವೇತನ ಯೋಜನೆ ಅನುಷ್ಠಾನಗೊಂಡಿದ್ದು, ಈ ಯೋಜನೆಯು ಮೆಟ್ರಿಕ್ ವಿದ್ಯಾಭ್ಯಾಸ ಪೂರ್ಣಗೊಳಿಸಿ

    ಅಧಿಕೃತ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳವರೆಗೆ ವಿದ್ಯಾಭ್ಯಾಸ ನಡೆಸುತ್ತಿರುವ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ 2500 ರೂ.ಗಳಿಂದ 11,000 ರೂ.ಗಳವರೆಗೆ ಶಿಷ್ಯವೇತನ ನೀಡಲಾಗುತ್ತಿದೆ.


    ವಿದ್ಯಾರ್ಥಿಗಳು ರೈತ ಕುಟುಂಬದ ಮಕ್ಕಳಾಗಿದ್ದಲ್ಲಿ ಈಗಾಗಲೇ ಇತರೆ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.

    ಪದವಿ ಮುಂಚೆ ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಕೋರ್ಸು ಹುಡುಗರಿಗೆ 2,500 ರೂ.ಗಳು, ಹುಡುಗಿಯರಿಗೆ 3,000 ರೂಪಾಯಿ ಶಿಷ್ಯ ವೇತನ ಸಿಗಲಿದೆ.

    ಎಲ್ಲಾ ಬಿ.ಎ, ಬಿ.ಎಸ್ಸಿ, ಬಿ.ಕಾಂ ಹಾಗೂ ಎಂ.ಬಿ.ಬಿ.ಬಿಎಸ್ಸಿ, ಬಿ.ಇ, ಬಿ.ಟೆಕ್ ಮತ್ತು ವೃತ್ತಿಪರ ಕೋರ್ಸ್‍ಗಳನ್ನು ಹೊರತುಪಡಿಸಿ ಹುಡುಗರಿಗೆ 5,000 ರೂ.ಗಳು, ಹುಡುಗಿಯರಿಗೆ 5,500 ರೂ.ಗಳಷ್ಟು ವಿದ್ಯಾರ್ಥಿ ವೇತನ ಸೌಲಭ್ಯ ಇದೆ.

    ಅಷ್ಟೇ ಅಲ್ಲದೆ ಎಲ್.ಎಲ್.ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ್, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್‍ಗಳು ಹುಡುಗರಿಗೆ 7,500 ರೂ.ಗಳು, ಹುಡುಗಿಯರಿಗೆ 8,000 ರೂ.ಗಳು ಹಾಗೆಯೇ

    ಎಂ.ಬಿ.ಬಿ.ಬಿಎಸ್ಸಿ/ಬಿ.ಇ/ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳು ಹುಡುಗರಿಗೆ 7,500 ರೂ.ಗಳು, ಹುಡುಗಿಯರಿಗೆ 8,000 ರೂ.ಗಳು. ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು.

    ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ದೂ.ಸಂಖ್ಯೆ: 0824-2423604 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಪಿಲಿಕುಳ ಕಂಬಳಕ್ಕೆ ಪ್ರಾಣಿಪ್ರಿಯರ ವಿರೋಧ !

    Published

    on

    ಮಂಗಳೂರು: ಕಂಬಳ ಕರಾವಳಿ ಕರ್ನಾಟಕದ ಜನಪದ ಕ್ರೀಡೆ. ಈ ಹಿಂದೆ ನಿಷೇಧಕ್ಕೆ ಒಳಪಟ್ಟರೂ ನಂತರ ಕಂಬಳ ನಡೆಸುವುದಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈಗ ಸರ್ಕಾರಿ ಪ್ರಾಯೋಜಿತ ಮೊದಲ ಕಂಬಳಕ್ಕೆ ಪ್ರಾಣಿ ಪ್ರಿಯರ ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

    ಕಳೆದ ಹತ್ತು ವರ್ಷಗಳಿಂದ ನಿಂತು ಹೋಗಿದ್ದ ಪಿಲಿಕುಳದ ಸರ್ಕಾರಿ ಕಂಬಳ ಈ ಬಾರಿ ಮತ್ತೆ ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಪಿಲಿಕುಳದ ಗುತ್ತಿನ ಮನೆಯ ಮುಂದೆ ಕಂಬಳ ಕರೆ ನಿರ್ಮಾಣ ಮಾಡಿ ಕಂಬಳದ ದಿನಾಂಕ ಕೂಡಾ ಘೋಷಣೆ ಮಾಡಿತ್ತು. ನವೆಂಬರ್ 9 ರಂದು ನಿಗದಿಯಾಗಿದ್ದ ಈ ಕಂಬಳ, ಪಂಚಾಯತ್ ಉಪಚುನಾವಣೆಯ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿತ್ತು.

    ಇದನ್ನೂ ಓದಿ: 30 ವರ್ಷಕ್ಕೆ ಮದುವೆಯಾಗುವ ಯೋಚನೆ ಮಾಡಿದ್ರೆ ಇದನ್ನು ಓದಲೇ ಬೇಕು !!
    ಈ ನಡುವೆ ಪೆಟಾದವರು ಬೆಂಗಳೂರು ಕಂಬಳ ಹಾಗೂ ಪಿಲಿಕುಳ ಕಂಬಳದ ಆಯೋಜನೆಯ ಬಗ್ಗೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬೆಂಗಳೂರು ಕಂಬಳ ಇನ್ನೂ ದಿನ ನಿಗದಿಯಾಗದೇ ಇದ್ದರೂ ಕಂಬಳ ನಡೆಸಲು ಅನುಮತಿ ನೀಡಬಾರದೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪೆಟಾ ಸಲ್ಲಿಸಿದ ಈ ಅರ್ಜಿಗೆ ಬೆಂಗಳೂರು ಕಂಬಳ ಆಯೋಜಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಕೀಲರ ಮೂಲಕ ವಾದ ಮಂಡಿಸಿದ್ದಾರೆ. ಆದ್ರೇ ಪಿಲಿಕುಳದ ಸರ್ಕಾರಿ ಕಂಬಳದ ವಿಚಾರವಾಗಿ ಯಾವುದೇ ಅರ್ಜಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ.
    ಹೀಗಾಗಿ ಪಿಲಿಕುಳ ಕಂಬಳ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡಿದೆ. ಮಂಗಳೂರು ನಗರದಲ್ಲಿ ಕಂಬಳ ನಡೆಯದೇ ಇದ್ದ ಸಂದರ್ಭದಲ್ಲಿ ಪಿಲಿಕುಳದಲ್ಲಿ ಸರ್ಕಾರದ ವತಿಯಿಂದ ಕಂಬಳ ಆರಂಭಿಸಲಾಗಿತ್ತು. ಕಾರಣಾಂತರಗಳಿಂದ ನಿಂತು ಹೋಗಿದ್ದ ಕಂಬಳ ಮತ್ತೆ ಆರಂಭವಾದ ಕಾರಣ ಕಂಬಳ ಪ್ರೇಮಿಗಳು ಸಂತಸಗೊಂಡಿದ್ದರು. ಆದ್ರೆ ಇದೀಗ ಪೆಟಾ ಪಿಲಿಕುಳ ಕಂಬಳಕ್ಕೆ ಅಪಸ್ವರ ಎತ್ತಿದ್ದು, ಇಲ್ಲಿ ನಡೆಯುವ ಗದ್ದಲದಿಂದ ಪಿಲಿಕುಳದ ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಪ್ರಾಣಿಗಳಿಗೆ ತೊಂದರೆ ಆಗಲಿದೆ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಇಟ್ಟಿದೆ.

     

    Continue Reading

    BIG BOSS

    ಮಂಗಳೂರು: ಪತಿಯ ಅ*ನೈತಿಕ ಸಂಬಂಧ; ತ್ರಿವಳಿ ತಲಾಕ್ ಮೂಲಕ ಪತ್ನಿಗೆ ವಿಚ್ಚೇದನ

    Published

    on

    ಮಂಗಳೂರು: ತಂದೆಯನ್ನು ಮನೆಗೆ ಕರೆದು ತಂದೆಯ ಎದುರಿನಲ್ಲಿ ಪತಿ ನನಗೆ ತ್ರಿವಳಿ ತಲಾಕ್ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಉಳ್ಳಾಲದ ಸಮ್ಮರ್ ಸ್ಯಾಂಡ್ ಬಳಿಯ ನಿವಾಸಿಯಾಗಿರುವ ಮಹಮ್ಮದ್ ದಿಲ್ಫಾಜ್‌ ಎಂಬವರ ವಿರುದ್ಧ ಈ ದೂರು ದಾಖಲಾಗಿದೆ. 2019 ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಕೆಲ ಕಾಲ ಚೆನ್ನಾಗಿ ಸಂಸಾರ ಕೂಡಾ ನಡೆಸಿ ಬಳಿಕ ಪತಿ ಪರ ಸ್ತ್ರೀಯ ಜೊತೆ ಸಂಬಂಧ ಬೆಳೆಸಿದ್ದಾಗಿ ಆರೋಪಿಸಲಾಗಿದೆ.

    ಈ ವಿಚಾರವನ್ನು ಪ್ರಶ್ನೆ ಮಾಡಿದ ಪತ್ನಿಗೆ ದೈಹಿಕ ಹಿಂ*ಸೆ ನೀಡಲಾಗಿದ್ದು, ನಿರಂತರ ಕಿ*ರುಕುಳ ನೀಡಲಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಎರಡೂ ಮನೆಯವರೂ ರಾಜಿ ಪಂಚಾಯತಿ ನಡೆಸಿದ್ದರೂ ಸಂಸಾರ ಸರಿ ಹೋಗಿರಲಿಲ್ಲ. ಇದೀಗ ಹಣಕ್ಕಾಗಿ ಬೇಡಿಕೆ ಇಟ್ಟು ತಂದೆಯನ್ನು ಮನೆಗೆ ಕರೆಸಿ ಅವರ ಸಮ್ಮುಖದಲ್ಲಿ ಮೂರ ಬಾರಿ ತಲಾಕ್ ಹೇಳಿ ತವರು ಮನೆಗೆ ಕಳುಹಿಸಲಾಗಿದೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತ್ರಿವಳಿ ತಲಾಕ್ ಕಾನೂನನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದ ಈ ದೂರಿಗೆ ಪೊಲೀಸರು ಹೆಚ್ಚಿನ ಮಾನ್ಯತೆ ನೀಡಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

    Continue Reading

    BIG BOSS

    ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ ಸಂಚು ರೂಪಿಸುತ್ತಿದ್ದಾಗಲೇ ಅರೆಸ್ಟ್‌

    Published

    on

    ಮಂಗಳೂರು: ಕುಖ್ಯಾತ ರೌಡಿಶೀಟರ್ ದಾವೂದ್ (43) ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನವೆಂಬರ್ 22ರ ಸಂಜೆ ಬಂಧಿಸಿದೆ.

    ಆರೋಪಿ ದಾವೂದ್ ಉಳ್ಳಾಲದ ಧರ್ಮನಗರ ನಿವಾಸಿ. ಅವನು ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದಾಗಲೇ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ತಂಡ ರೌಡಿಶೀಟರ್‌ನನ್ನು ಬಂಧಿಸಲು ಮುಂದಾಗಿದೆ.

    ಕಾರ್ಯಾಚರಣೆ ವೇಳೆ ದಾವೂದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪಿಎಸ್ ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ. ದಾಳಿಯ ಹೊರತಾಗಿಯೂ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮಕ್ಕಾಗಿ ದಾವುದ್‌ನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

    ದಾವೂದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ನರೇಂದ್ರ ಅವರ ದೂರಿನ ಮೇರೆಗೆ ಆರೋಪಿ ದಾವುದ್ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ದಾವೂದ್ ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿರುತ್ತಾನೆ. ಉಳ್ಳಾಲ, ಮಂಗಳೂರು ದಕ್ಷಿಣ ಮತ್ತು ಬಜ್ಪೆ ಸೇರಿದಂತೆ ಇತರ ಸ್ಥಳಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ವರದಿಯಾಗಿದೆ .

    Continue Reading

    LATEST NEWS

    Trending