Friday, August 12, 2022

ಕ್ಯಾಥೋಲಿಕ್‌ ಅಸೋಸಿಯೇಶನ್‌ ಆಫ್‌ ಸೌತ್‌ ಕೆನರಾ ವತಿಯಿಂದ ಸ್ಕಾಲರ್‌ಶಿಪ್‌ ವಿತರಣೆ

ಮಂಗಳೂರು: ಕ್ಯಾಥೋಲಿಕ್‌ ಅಸೋಸಿಯೇಶನ್‌ ಆಫ್ ಸೌತ್ ಕೆನರಾ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್‌ ವಿತರಣಾ ಸಮಾರಂಭ ಇಂದು ಬೆಳಿಗ್ಗೆ ಜರುಗಿತು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪೌಲ್‌ ಸಲ್ಡಾನಾ 141 ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್‌ ವಿತರಣೆ ಮಾಡಿದರು.


ಬಳಿಕ ಮಾತನಾಡಿದ ಅವರು ಸಮಾಜದಲ್ಲಿ ಅತೀ ಹೆಚ್ಚು ಅಂಕವನ್ನು ಪಡೆದು ತೇರ್ಗಡೆಯಾಗುವವರನ್ನು ಬಿಟ್ಟು ಅತೀ ಬಡತನದಲ್ಲಿರುವ ಮಕ್ಕಳಿಗೆ ಈ ಸ್ಕಾಲರ್ ಶಿಪ್ ನೀಡುವ ಸಂಸ್ಥೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ.


ಸಮುದಾಯದಲ್ಲಿ ದೀನದಲಿತರಾಗಿ ಹಿಂದುಳಿದವರನ್ನು ಗುರುತಿಸಿ ನಾವು ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಸಮುದಾಯಕ್ಕೆ ಕರೆ ನೀಡುವುದಾಗಿ ನುಡಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳ ಸಹಿತ ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳಿಗೂ ಸ್ಕಾಲರ್ ಶಿಪ್‌ ವಿತರಣೆ ಮಾಡಲಾಯಿತು.


ಕ್ಯಾಥೋಲಿಕ್ ಅಸೋಸಿಯೇಶನ್‌ ಅಧ್ಯಕ್ಷ ಕ್ಯಾಪ್ಟನ್‌ ವಿನ್ಸಂಟ್‌ ಪಾಯಸ್‌, ಕಾರ್ಯದರ್ಶಿ ಡಾ ಆನಂದ ಪಿರೇರಾ, ಖಜಾಂಚಿ ನೋಬರ್ಟ್‌ ಶೆನೋಯ್‌, ಡಾ ಡೆರಿಕ್‌ ಲೋಬೋ, ರೋಹನ್‌, ಡೆಫ್ನಿ ಮಥಾಯಸ್‌ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

Hot Topics

‘ಕಾಡು ಕುದುರೆ ಓಡಿ ಬಂದಿತ್ತಾ’ ಖ್ಯಾತಿಯ ಸುಬ್ಬಣ್ಣ ಇನ್ನಿಲ್ಲ

ಬೆಂಗಳೂರು: ಖ್ಯಾತ ಹಾಡುಗಾರ, ವಕೀಲ ಶಿವಮೊಗ್ಗದ ಸುಬ್ಬಣ್ಣ ಅವರು ಅನಾರೋಗ್ಯದಿಂದ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಅವರಿಗೆ 83 ವರ್ಷ ವಯಸ್ಸಾಗಿತ್ತು. 'ಕಾಡುಕುದುರೆ' ಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು, ವಕೀಲೆ ವೃತ್ತಿಯನ್ನೂ ಮಾಡುತ್ತಿದ್ದರು....

ಸಂಸದ ಡಾ. ಡಿ.ವಿ ಹೆಗ್ಗಡೆಯವರ ನೂತನ ಕಾರ್ಯಾಲಯ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಕ್ಷೇತ್ರದ ಧರ್ಮಾಧಿಕಾರಿಗಳು ಆಗಿರುವ ಹಾಗು ರಾಜ್ಯ ಸಭೆಯ ಸಂಸದರಾಗಿ ಆಯ್ಕೆಯಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೂತನ 'ಸಂಸದರ ಕಾರ್ಯಾಲಯ'ವು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದ ಬಳಿ ಉದ್ಘಾಟನೆಗೊಂಡಿತು.ಸ್ಥಳೀಯ...

ಮಂಗಳೂರು ಪಾಲಿಕೆಯ ಸದಸ್ಯ ಎ.ಸಿ ವಿನಯ್ ರಾಜ್‌ಗೆ ಪುತ್ರ ವಿಯೋಗ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಹಾಗೂ ವಿಪಕ್ಷ ನಾಯಕ ಎ.ಸಿ ವಿನಯ್ ರಾಜ್ ಅವರ ಪುತ್ರ ರಾಹುಲ್ ವಿನಯರಾಜ್ ಅಲ್ಪಕಾಲದ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.ಇಂದು ಸಂಜೆ ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ. ಆಂತೋನಿ...