Connect with us

    FILM

    ‘ಮಂಜುಮ್ಮೇಲ್ ಬಾಯ್ಸ್‌’ ಸಿನೆಮಾ ನಿರ್ಮಾಪಕರಿಂದ ಹಗರಣ..! ನೋಟೀಸ್ ಜಾರಿ..!!

    Published

    on

    ಕೇರಳ/ಮಂಗಳೂರು:  ‘ಮಂಜುಮ್ಮೇಲ್ ಬಾಯ್ಸ್‌’ ಸಿನೆಮಾ ಚಿತ್ರರಂಗದಲ್ಲೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಮಲಯಾಳಂನಲ್ಲಿ ಮೂಡಿ ಬಂದಿದ್ದ ಈ ಸಿನೆಮಾ ಸಿನಿಪ್ರೇಕ್ಷಕರನ್ನು ಮನರಂಜಿಸಿತ್ತು. ಮಲಯಾಳಂ ಅಲ್ಲದೇ ಎಲ್ಲಾ ಭಾಷೆಯವರು ಕೂಡಾ ಈ ಸಿನೆಮಾವನ್ನು ಮೆಚ್ಚಿಕೊಂಡಿದ್ದರು. ಅಲ್ಲದೆ ಬಾಕ್ಸ್ ಆಫೀಸ್‌ನಲ್ಲಿ 250ಕೋಟಿ ರೂ. ಗಳಿಕೆ ಮಾಡಿತ್ತು.

    Read More..; ಡ್ರೋನ್​ ಪ್ರತಾಪ್ ಹುಟ್ಟು ಹಬ್ಬಕ್ಕೆ ಸಿಕ್ತು ಬ್ಯೂಟಿಫುಲ್​ ಗಿಫ್ಟ್​

    ಆದರೆ ಇದೀಗ ಈ ಸಿನೆಮಾದ ಮೇಲೆ ಕೆಲವೊಂದು ಆರೋಪಗಳು ಕೇಳಿ ಬರುತ್ತಿದೆ. ಹೌದು, ಸಿನೆಮಾ ಪ್ರೊಡ್ಯೂಸರ್‌ಗೆ ಸಂಕಟ ಎದುರಾಗಿದೆ. ಅಕ್ರಮ ಹಣ ಪ್ರಕರಣದಲ್ಲಿ ಮಂಜುಮ್ಮೇಲ್ ಬಾಯ್ಸ್‌ ನಿರ್ಮಾಪಕರಾದ ಸೌಬಿನ್ ಶಾಹಿರ್, ಶಾನ್ ಆ್ಯಂಥೋನಿ, ಬಾಬು ಶಾಹಿರ್‌ರವರಿಗೆ ಕೊಚ್ಚಿಯಲ್ಲಿರುವ ಇವರ ಕಛೇರಿಗೆ ನೋಟೀಸ್ ನೀಡಲಾಗಿದೆ.  ಇಡಿ ಅಧಿಕಾರಿಗಳ ಎದುರು ನಿರ್ಮಾಪಕರುಗಳು ವಿಚಾರಣೆಗೂ ಹಾಜರಾಗಬೇಕಿದೆ.

    ಈ ಸಿನೆಮಾಗೆ ಸಿರಾಜ್ ಎಂಬಾತ 7 ಕೋಟಿ ರೂ. ಹೂಡಿಕೆ ಮಾಡಿದ್ದರು. ಈ ಸಿನೆಮಾದ ಲಾಭಾಂಶದಲ್ಲಿ ಶೇ.40 ರಷ್ಟು ಇವರಿಗೆ ನೀಡುವುದಾಗಿ ಮಾತುಕತೆ ನಡೆದಿತ್ತು. ಸಿನೆಮಾ 250 ಕೋಟಿ ರೂ. ಗಳಿಸಿತ್ತು. ಆದರೆ ಅವರಿಗೆ ಕೇವಲ 50ಲಕ್ಷ ರೂ. ಮಾತ್ರ ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆ ಕಮರ್ಷಿಯಲ್ ಕೋರ್ಟ್‌ ಗೆ ಸಿರಾಜ್ ಅರ್ಜಿ ಸಲ್ಲಿಸಿ, ಮರಾಡು ಪೊಲೀಸ್ ಠಾಣೆಯಲ್ಲಿ ನನಗೆ ಮೋಸ ಆಗಿದೆ ಎಂಬುದಾಗಿ  ದೂರು ದಾಖಲಿಸಿದ್ದರು. ಇನ್ನು ಜಾರಿ ನಿರ್ದೇಶನಾಲಯದ ನೋಟೀಸ್‌ಗೆ ನಿರ್ಮಾಪಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದಾಗಿ ಕಾದು ನೋಡಬೇಕಿದೆ.

    ಮೇ ತಿಂಗಳಿನಲ್ಲಿ ರಿಲೀಸ್ ಆದ ಈ ಸಿನೆಮಾದ ಹಾಡಿನಿಂದಾಗಿ ಈ ಹಿಂದೆಯೂ ಸಿನೆಮಾ ತಂಡ ಸಂಕಷ್ಟಕ್ಕೀಡಾಗಿತ್ತು. ಈ ಸಿನೆಮಾದ ‘ಕಣ್ಮಣಿ ಅಂಬೋಡು..’  ಗೀತೆ ಬಳಸಿದಕ್ಕಾಗಿ ಇಳಯರಾಜರವರು ಕೇಸ್ ಹಾಕಿದ್ದರು. ಈ ವಿಚಾರ ಸಾಕಷ್ಟು ಸುದ್ದಿ ಮಾಡಿತ್ತು.

    FILM

    ಸ್ವಂತ ಜಮೀನಿನಲ್ಲಿ ಅಭಿಮಾನಿ ಕಟ್ಟಿಸಿದ ʻಅಪ್ಪುʼ ದೇವಸ್ಥಾನ ಲೋಕಾರ್ಪಣೆ ಮಾಡಿದ ಅಶ್ವಿನಿ ಪುನೀತ್‌ರಾಜ್‌ ಕುಮಾರ್

    Published

    on

    ಹಾವೇರಿ: ಜಿಲ್ಲೆಯ ಯಲಗಚ್ಚ ಗ್ರಾಮದಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಪುನೀತ್‌ರಾಜ್‌ ಕುಮಾರ್ ಹೆಸರಿನಲ್ಲಿ ನಿರ್ಮಾಣವಾಗಿರುವ ದೇವಸ್ಥಾನವನ್ನು ಅವರ ಧರ್ಮಪತ್ನಿ ಅಶ್ವಿನಿ ಪುನೀತ್‌ರಾಜ್ ಕುಮಾರ್ ಉದ್ಘಾಟಸಿದರು.

    ಯಲಗಚ್ಚ ಗ್ರಾಮದ ಉಡಚ್ಚಮ್ಮ ದೇವಿಯ ದರ್ಶನ ಪಡೆದ ಅಶ್ವಿನಿಯವರನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಕುಂಬಮೇಳದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ 6 ಅಡಿ ಎತ್ತರದ ಅಪ್ಪು ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು.

    ಪುನೀತ್ ಅವರ ಅಪ್ಪಟ ಅಭಿಮಾನಿ ಯಲಗಚ್ಚ ಗ್ರಾಮದ ಪ್ರಕಾಶ ಮೊರಬದ ತಮ್ಮ ಮನೆಯ ಸ್ವಂತ ಜಾಗದಲ್ಲಿ ತಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನದಲ್ಲಿ ಪುನೀತ್ ರಾಜಕುಮಾರ್ ಮೂರ್ತಿ ಅನಾವರಣ ಮಾಡಿದ ಅಶ್ವಿನಿ, ಪ್ರಕಾಶ ಅವರ ಪುತ್ರಿಗೆ ಅಪೇಕ್ಷಾ ಎಂದು ನಾಮಕರಣ ಮಾಡಿದರು. ಅಪ್ಪು ಮೂರ್ತಿಯನ್ನು ನೋಡಿದ ಅಶ್ವಿನಿ ಭಾವುಕರಾದರು.

    ಅಭಿಮಾನಿ ಮನೆಯಲ್ಲಿ ಮಾತನಾಡಿದ ಅವರು, ಅದಕ್ಕೇ ಅಭಿಮಾನಿಗಳೇ ದೇವರು ಅನ್ನೋದು, ಇಂತಹ ಅಭಿಮಾನಿ ಸಿಕ್ಕಿರುವುದು ನಮ್ಮ ಪುಣ್ಯ. ಸ್ವಂತ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದು ನಮ್ಮ ಪುಣ್ಯ ಎಂದರು.

    ಎಂಟು ತಿಂಗಳ ಹಿಂದೆ ಪ್ರಕಾಶ ಪಾದರಕ್ಷೆ ಧರಿಸದೇ ಕೆಲಸ ಆರಂಭಿಸಿದ್ದೆ. ದೇವಸ್ಥಾನ ಪೂರ್ಣಗೊಂಡ ಇಂದು ಆತ ಪಾದರಕ್ಷೆ ಹಾಕಿದ್ದೇನೆ. ಅಭಿಮಾನಿಗಳು ಪ್ರೀತಿಯಿಂದ ಕರೆದಿದ್ದಕ್ಕೆ ಬಂದು ದೇವಸ್ಥಾನ ಉದ್ಘಾಟನೆ ಮಾಡಿದ್ದೀರಿ. ನಮ್ಮ ಪಾಲಿನ ದೇವರು ನೀವು ಎಂದು ಅಭಿಮಾನಿ ಪ್ರಕಾಶ ಮತ್ತು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

    Continue Reading

    FILM

    ಒಟಿಟಿಗೆ ಎಂಟ್ರಿ ಕೊಟ್ಟ ‘ಸ್ತ್ರೀ 2’; ಕಲೆಕ್ಷನ್ ಹೇಗಿದೆ ಗೊತ್ತಾ!?

    Published

    on

    ಮಂಗಳೂರು/ಮುಂಬೈ: ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್, ಪಂಕಜ್ ತ್ರಿಪಾಠಿ ನಟಿಸಿರುವಂತಹ ‘ಸ್ತ್ರೀ 2’ ಸಿನಿಮಾ ಈಗಾಗಲೇ ಗಲ್ಲಾ ಪೆಟ್ಟಿಗೆಯಲ್ಲಿ ಸಕತ್ ಸೌಂಡ್ ಮಾಡಿದೆ. ಕೋಟಿಗಟ್ಟಲೆ ದೋಚಿರುವ ಈ ಚಿತ್ರ ಕಳೆದ ಆಗಸ್ಟ್ನಲ್ಲಿ ಟೆಲಿ ಪರದೆಗೆ ಬಂದಿದ್ದು, ಇಲ್ಲೂ ಬರೋಬ್ಬರಿ 600 ಕೋಟಿಗಳಿಸಿದೆ.


    ‘ಸ್ತ್ರೀ 2’ ಸಿನಿಮಾ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ 349 ರೂಪಾಯಿ ಪಾವತಿಸಿ ವೀಕ್ಷಿಸಬಹುದು. ಅಮೇಜಾನ್ ಪ್ರೈಮ್ ವೀಡಿಯೋ ಮೂಲಕ ಸಿನಿಮಾ ನೋಡುವುದಾದರೂ ಪಾವತಿಸಿಯೇ ವೀಕ್ಷಿಸಬೇಕು.
    ಹಿಂದಿ ಭಾಷೆಯಲ್ಲಿ ಮಾತ್ರ ಸಿನಿಮಾನ ನೋಡಬಹುದು. ಚಂದಾದಾರರು ಇದನ್ನು ಉಚಿತವಾಗಿ ವೀಕ್ಷಿಸಬೇಕು ಎಂದರೆ ಮತ್ತಷ್ಟು ದಿನ ಕಾಯಬೇಕು. ಅಲ್ಲಿಯವರೆಗೆ ಹಣ ಪಾವತಿ ಮಾಡಿಯೇ ನೋಡಬೇಕಾಗಿದೆ.


    ಸ್ತ್ರೀ 2 ಸಿನಿಮಾವು ಹಾರರ್ ಕಾಮಿಡಿ ಪ್ರಕಾರದ ಚಿತ್ರವಾಗಿದೆ. ಚಿತ್ರದಲ್ಲಿ ಬರುವ ಪ್ರತೀ ಪಾತ್ರಗಳು ಜನರ ಮನಸೂರೆಗೊಳ್ಳುತ್ತವೆ. ಚಿತ್ರದ ಕಥೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.. ಪಾವತಿ ಮಾಡಿ ನೋಡಿದಕ್ಕೂ ಸಾರ್ಥಕವಾಯಿತು ಎಂದು ಹಲವರು ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

    Continue Reading

    FILM

    ಸೆನ್ಸಾರ್ ಆದೇಶ; ಬಾಲಿವುಡ್‌ನ ಹೊಸ ಚಿತ್ರಕ್ಕೆ 120 ಕಡೆ ಕತ್ತರಿ

    Published

    on

    ಮಂಗಳೂರು/ಪಂಜಾಬ್: ಜಾಬಿ ’95’ ಚಿತ್ರಕ್ಕೆ ಹನಿ ಟ್ರೆಹಾನ್ ನಿರ್ದೇಶನ ಮಾಡಿದ್ದು, ಸೆನ್ಸಾರ್ ಮಂಡಳಿಯವರು 85 ಕಡೆ ಕಟ್ ಮಾಡುವಂತೆ ಹೇಳಿದ್ದರು. ಈಗ ಪರಿಷ್ಕರಣಾ ಸಮಿತಿ ಕೂಡ ಸಿನಿಮಾ ವೀಕ್ಷಣೆ ಮಾಡಿದ್ದು, 120 ದೃಶ್ಯಗಳ ಬಗ್ಗೆ ಅಪಸ್ವರ ತೆಗೆದಿದೆ.


    ಸಿನಿಮಾ ನೋಡಿದ ಬಳಿಕ ಸೆನ್ಸಾರ್ ಮಂಡಳಿಯವರು 10 ಕಡೆ ಕತ್ತರಿ ಹಾಕಲು ಹೇಳಿರುವುದು ಸಾಕಷ್ಟು ಚರ್ಚೆ ಆಗುತ್ತಿದೆ. ದಿಲ್ಜಿತ್ ದೋಸಾಂಜ್ ನಟನೆಯ ‘ಪಂಜಾಬ್ ’95’ ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿಯವರು ವಿರೋಧ ವ್ಯಕ್ತ ಪಡಿಸಿದ್ದಾರೆ.
    ‘ಪಂಜಾಬಿ ’95’ ಚಿತ್ರಕ್ಕೆ ಹನಿ ಟ್ರೆಹಾನ್ ನಿರ್ದೇಶನ ಮಾಡಿದ್ದಾರೆ. ರೋನಿ ಸ್ಕ್ರೂವಾಲಾ ನಿರ್ಮಿಸಿದ್ದಾರೆ. ನೈಜ ಘಟನೆಗಳನ್ನು ಇದು ಆಧರಿಸಿದ್ದು, ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರ ಕಥೆಯಾಧರಿತ ಸಿನಿಮಾವಾಗಿದೆ. ಪಂಜಾಬ್‌ನ ದಂಗೆಯ ಅವಧಿಯಲ್ಲಿ ನಡೆದ ಕೊಲೆ ಹಾಗೂ ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಜಸ್ವಂತ್ ಪ್ರಯತ್ನಿಸಿದ್ದರು.
    ಜಸ್ವಂತ್ ಸಿಂಗ್ ಖಲ್ರಾ ಎಂದು ಬಿಂಬಿಸಲಾದ ನಾಯಕನ ಮರುನಾಮಕರಣ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಇದು ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದು, ಈ ಪಾತ್ರಕ್ಕೆ ಸಟ್ಲೆಜ್ ಎಂದು ಹೆಸರು ಇಡುವಂತೆ ಮಂಡಳಿ ಸೂಚಿಸಿದೆ. ‘ಖಲ್ರಾ ಅವರು ಸಿಖ್ ಸಮುದಾಯದಲ್ಲಿ ಪೂಜ್ಯ ವ್ಯಕ್ತಿಯಾಗಿದ್ದಾರೆ. ಅವರ ಹೆಸರನ್ನು ಮರುನಾಮಕರಣ ಮಾಡುವುದು ಅವರ ಪರಂಪರೆಗೆ ಅಗೌರವವಾಗುತ್ತದೆ’ ಎಂದು ತಂಡದವರು ವಾದಿಸಿದ್ದಾರೆ.
    ಪಂಜಾಬ್ ’95’ ಟೈಟಲ್​ ತೆಗೆಯುವಂತೆಯೂ ಸೂಚಿಸಲಾಗಿದೆ. ಈ ಟೈಟಲ್ ಸಾರ್ವಜನಿಕರ ಮೇಲೆ ಸಾಕಷ್ಟು ಪ್ರಭಾವ ಬೀರಬಹುದು ಎಂದು ಸೆನ್ಸಾರ್ ಮಂಡಳಿ ಅಭಿಪ್ರಾಯಪಟ್ಟಿದೆ. ಸಿನಿಮಾ ಉದ್ದಕ್ಕೂ ಪಂಜಾಬ್ ಹಾಗೂ ಜಿಲ್ಲೆಗಳ ಹೆಸರನ್ನು ಉಲ್ಲೇಖ ಮಾಡಬಾರದು ಎಂದು ಮಂಡಳಿ ಹೇಳಿದೆ. ಕೆನಡಾ ಮತ್ತು ಯುಕೆ ಉಲ್ಲೇಖಗಳು ಸೂಕ್ತವಲ್ಲವೆಂದು ಪರಿಗಣಿಸಲಾಗಿದ್ದು, ತೆಗೆದುಹಾಕುವಂತೆ ತಿಳಿಸಿದ್ದಾರೆ.

    Continue Reading

    LATEST NEWS

    Trending