Thursday, October 21, 2021

ಮಂಗಳೂರು ನಗರದಲ್ಲಿ ಎಸ್ ಬಿ ಐ ಬೃಹತ್ ಗೃಹ ಸಾಲ ಹಬ್ಬಕ್ಕೆ ವಿದ್ಯುಕ್ತ ಚಾಲನೆ

ಮಂಗಳೂರು: ಬೃಹತ್ ಗೃಹ ಸಾಲವನ್ನು ಒದಗಿಸುತ್ತಿರುವ ಬ್ಯಾಂಕ್ ಎಂಬ ಹೆಗ್ಗಳಿಕೆ ಇರುವ ಎಸ್ ಬಿ ಐ ಈ ಬಾರಿ ಮಂಗಳೂರು ನಗರದಲ್ಲಿ ಬೃಹತ್ ಗೃಹ ಸಲ ಹಬ್ಬವನ್ನು ನಗರದ ಟಿ. ಎಂ. ಎ.ಪೈ ಕನ್ವೆಂನ್ಷನ ಸೆಂಟರ್ ನಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮವನ್ನು
ಶಾಸಕ ವೇದವ್ಯಾಸ ಕಾಮತ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂಧರ್ಭ ಮಾತನಾಡುತ್ತಾ ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಕಾರ್ಯಗಳು ಶ್ಲಾಘನೀಯ,ಜೊತೆಗೆ ಪ್ರಧಾನ ಮಂತ್ರಿಗಳ ಮತ್ತು ಮುಖ್ಯಮಂತ್ರಿಗಳ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಏಕೈಕ ಬ್ಯಾಂಕಿಂಗ್ ಎಸ್ ಬಿ ಐ ಆಗಿದೆ ಎಂದರು.

ಪ್ರಾಮಾಣಿಕ ರೀತಿಯಲ್ಲಿ ಕೆಲ್ಸ ಮಾಡುವವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಗಲೂ ಇದ್ದಾರೆ.ಆಸಕ್ತ ಜನತೆಗೆ ಸ್ವಂತ ಮನೆ ನಿರ್ಮಾಣ ಮಾಡುವ ಕನಸನ್ನು ನನಸು ಮಾಡಲು ಎಸ್ ಬಿ ಐ ಆಯೋಜಿಸಿರುವ ಬೃಹತ್ ಗೃಹ ಸಾಲ ಹಬ್ಬವನ್ನು ಸ್ವಾಗತಿಸುತ್ತೇನೆ, ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.

ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡುತ್ತಾ , ನಗರಗಳ ಅಭಿವೃದ್ಧಿಯಲ್ಲಿ ಬ್ಯಾಂಕ್ ಗಳ ಪಾತ್ರ ದೊಡ್ಡದಿದೆ.ಮುಂದೆಯೂ ಸಹ ಬ್ಯಾಂಕ್ ಗಳ ಸಹಕಾರ ಬೇಕಾಗಿದೆ.ಈಗಾಗಲೇ ಶಕ್ತಿನಗರದಲ್ಲಿ ನಿರ್ಮಾಣವಾಗಲಿರುವ 1000ಮನೆಗಳಿಗೂ ಬ್ಯಾಂಕ್ ಸಾಲ ರೂಪದಲ್ಲಿ ಸಹಾಯ ಮಾಡಿದೆ ಎಂದು ಹೇಳಿದರು.

ಕ್ರೆಡೈ ಅಧ್ಯಕ್ಷ ಪುಷ್ಪರಾಜ ಜೈನ್ ರವರು ಮಾತನಾಡುತ್ತಾ ಎಸ್ ಬಿ ಐ ಬ್ಯಾಂಕಿಂಗ್ ಸಂಸ್ಥೆ ಜನತೆಗೆ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.ಇಂದಿನ ದಿನಗಳಲ್ಲಿ ಇಷ್ಟು ಕಡಿಮೆ ಬಡ್ಡಿದರದಲ್ಲಿ ಗೃಹ ನಿರ್ಮಾಣ ಸಾಲ ನೀಡಿ ಜನರಿಗೆ ಈ ಮೂಲಕ ಸಹಕಾರ ಕೊಡುವುದಕ್ಕೆ ಅಭಿನಂದಿಸುತ್ತೇನೆ.

ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಹಿಂದಿಗಿಂತ ಕನಿಷ್ಟ 30 ಪರ್ಸೆಂಟ್ ಜಾಸ್ತಿ ಆಗುತ್ತಾ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಫ್ಲಾಟ್ ಗಳಿಗೆ ಬೇಡಿಕೆ ಜಾಸ್ತಿ ಆಗಿ, ಸಾರ್ವಜನಿಕರು ಮುಂದಿನ ದಿನಗಳಲ್ಲಿ ಫ್ಲಾಟ್ ಗಳನ್ನೂ ಮೆಚ್ಚಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಇಂತಹ ಮೇಳದಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಸ್ಟೇಟ್ ಬ್ಯಾಂಕಿನ ರಿಜಿನಲ್ ಮ್ಯಾನೇಜರ್ ಹರಿಶಂಕರ್ ಮತ್ತು ಇತರ ಅಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮಮತರವರು ಕಾರ್ಯಕ್ರಮ ನಿರ್ವಹಿಸಿದರು.

 

ಬೃಹತ್ ಗೃಹ ಸಾಲ ಹಬ್ಬ
ನಗರದ ಟಿಎಂಎ ಪೈ ಹಾಲ್‌ನಲ್ಲಿ ಬೃಹತ್ ಗೃಹ ಸಾಲ ಹಬ್ಬ ನಡೆಯಲಿದೆ.ಎರಡು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಒಂದೇ ಸೂರಿನಡಿಯಲ್ಲಿ ನಗರದ 25ಕ್ಕೂ ಹೆಚ್ಚಿನ ಪ್ರಮುಖ ನಿರ್ಮಾಣ ಸಂಸ್ಥೆಗಳು,ಭಾಗವಹಿಸಿ ತಮ್ಮ 40ಕ್ಕೂ ಹೆಚ್ಚಿನ ಯೋಜನೆಗಳ ಮಾಹಿತಿಗಳನ್ನು ಗ್ರಾಹಕರಿಗೆ ನೀಡಲಿದ್ದಾರೆ .
ಜನರು ಎಲ್ಲಾ ನಿರ್ಮಾಣ ಸಂಸ್ಥೆಗಳು ಒದಗಿಸುವ ಸೌಲಭ್ಯಗಳನ್ನು ಹಾಗೂ ಸೌಕರ್ಯಗಳನ್ನು ಸ್ಥಳದಲ್ಲೇ ಹೋಲಿಕೆ ಮಾಡಿ ಸೂಕ್ತ ಎನಿಸಿದ ಕನಸಿನ ಮನೆಯನ್ನು ಆಯ್ಕೆ ಮಾಡಿಕೊಳ್ಳುವ ಜೊತೆಗೆ ಎಸ್‌ಬಿಐನ ಶೇಕಡ 6.70 ಕನಿಷ್ಠ ಬಡ್ಡಿ ದರದ ಸಾ ಸೌಲಭ್ಯವನ್ನು ಸಹ ಸ್ಥಳದಲ್ಲಿ ಪಡೆಯುವ ಅವಕಾಶವನ್ನು ಒದಗಿಸಲಾಗಿದೆ.ಶನಿವಾರ ಮತ್ತು ಭಾನುವಾರ ನಡೆಯಲಿರುವ ಎಸ್ ಬಿ ಐ ಗೃಹ ಸಾಲ ಹಬ್ಬ
ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಘಟಕರು ವಿನಂತಿಸಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...