Friday, August 12, 2022

ಮಹಿಳೆಯರ ಸ್ವಾವಲಂಬಿ ಬದುಕಿಗೆ ಭಾಷ್ಯ ಬರೆದ ಉಡುಪಿಯ ಸವಿತಾ ಶೇಟ್

ಉಡುಪಿ: ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉಡುಪಿಯ ಮಹಿಳೆಯೊಬ್ಬರು ಪ್ರೇರಣೆಯಾಗಿದ್ದಾರೆ. ಉಡುಪಿಯ ಒಳಕಾಡು ನಿವಾಸಿ ಸವಿತಾ ಶೇಟ್ ಎಂಬವರೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ಪೂರ್ತಿದಾಯಕರಾಗಿದ್ದಾರೆ.


ಇವರ ಗಂಡ ಉದ್ಯಮಿಯಾಗಿದ್ದು ಹಾಗೂ ಮಗ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಗೃಹಿಣಿ ಆಗಿರುವ ಸವಿತಾ ಸೇಟ್ ಅವರು ತಮ್ಮ ಬಿಡುವಿನ ವೇಳೆ ತಾವು ಕಲಿತ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡ್ತಾರೆ.

ಸೋಫಾ ದಿಂಬುಗಳು, ಕೀ ಪಂಚ್, ಮಹಿಳೆಯರು ಸೌಂದರ್ಯ ಸಲಕರಣೆಗಳನ್ನು ಜೊತೆಗೆ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ.

ಕೆಲವೊಂದನ್ನು ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ಇವರು ತಯಾರು ಮಾಡಿದಂತಹ ಕೆಲವೊಂದು ಅಲಂಕಾರಿಕ ವಸ್ತುಗಳನ್ನು ಸ್ಥಳೀಯರು ಹುಟ್ಟು ಹಬ್ಬದಂತಹ ಶುಭ ಸಮಾರಂಭಗಳಿಗೆ ಗಿಫ್ಟ್ ಕೊಡಲು ತೆಗೆದುಕೊಂಡು ಹೋಗುತ್ತಾರೆ.

ಮಾತ್ರವಲ್ಲ ಸಂಘ ಸಂಸ್ಥೆಗಳು ಆಯೋಜನೆ ಮಾಡಿದ ವಸ್ತು ಪ್ರದರ್ಶನ ಮಳಿಗೆಯಲ್ಲೂ ಇವರು ಭಾಗವಹಿಸುತ್ತಾರೆ. ಜೊತೆಗೆ ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ತರಬೇತಿ ನೀಡುವಂತದ್ದು ಕೆಲಸವನ್ನು ಮಾಡುತ್ತಿದ್ದಾರೆ.

ಈ ಕುರಿತು ನಮ್ಮ ಕುಡ್ಲ ವಾಹಿನಿಯೊಂದಿಗೆ ಮಾತನಾಡಿದ ಅವರು ನಾನು ಸ್ಥಳೀಯರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದು, ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದೆ.


ಸ್ವ ಉದ್ಯೋಗಗಳಿಗೆ ಸ್ವಸಹಾಯ ಸಂಘಗಳು ಸಾಲಗಳನ್ನು ನೀಡುತ್ತಿವೆ. ಈ ಮೂಲಕ ಮಹಿಳೆಯರು ಅಲಂಕಾರಿ ವಸ್ತುಗಳು ತಯಾರಿಸಿ ಮಾರಾಟ ಮಾಡಿ ಸುಖ , ಜೀವನ ಗಳಿಸಬಹದು ಎಂದು ಹೇಳುತ್ತಾರೆ ಸಾಧಕಿ ಸವಿತಾ ಶೇಟ್.

LEAVE A REPLY

Please enter your comment!
Please enter your name here

Hot Topics

ಮಂಗಳೂರಿನಲ್ಲಿರುವ ರಸ್ತೆ ಹೊಂಡ ಗುಂಡಿಗಳ ವಿರುದ್ಧ patholeseazaadi ಅಭಿಯಾನ

ಮಂಗಳೂರು: ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಕಳೆದ ಆ.5 ರಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತಿಶ್ (20) ಮೃತಪಟ್ಟ ನಂತರ ರಾಷ್ಟ್ರೀಯ ಹೆದ್ದಾರಿ ಸಹಿತ ಮಂಗಳೂರು ನಗರದಲ್ಲಿರುವ...

ಕಾಪು: ಫ್ರಿಡ್ಜ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌-ಸುಟ್ಟು ಭಸ್ಮವಾದ ಸೊತ್ತುಗಳು

ಕಾಪು: ಮನೆಯೊಂದರಲ್ಲಿ ಫ್ರಿಡ್ಜ್‌ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಮನೆಯ ಸೊತ್ತುಗಳು ಸುಟ್ಟು ಭಸ್ಮಗೊಂಡ ಘಟನೆ ಇಂದು ಬೆಳಿಗ್ಗೆ ಕಾಪುವಿನ ಪೊಲಿಪುವಿನಲ್ಲಿ ಸಂಭವಿಸಿದೆ.ದಿನೇಶ್ ಪೂಜಾರಿ ಅವರ ವಸತಿ ಸಂಕೀರ್ಣದ ಮೇಲಂತಸ್ತಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗುರುರಾಜ್ ಅವರು...

ಆದಾಯಕ್ಕಿಂತ ಅಧಿಕ ಆಸ್ತಿ: ಮಂಗಳೂರು ಮೂಲದ ಸರ್ಕಾರಿ ಅಧಿಕಾರಿಗೆ 3 ವರ್ಷ ಜೈಲು, 50 ಲಕ್ಷ ದಂಡ

ಮಂಗಳೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಗಳಿಸಿದ್ದ ಚಿಕ್ಕಮಗಳೂರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರ ಮೇಲಿನ ಆರೋಪಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು3 ವರ್ಷ 6...