Connect with us

DAKSHINA KANNADA

ಪಾಂಡೇಶ್ವರ ಶಿವನಗರ ನಾಗರಿಕ ಸಮಿತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ & ಧಾರ್ಮಿಕ ಸಭೆ

Published

on

ಮಂಗಳೂರು: ನಗರದ ಪಾಂಡೇಶ್ವರದ ಶಿವನಗರ ನಾಗರಿಕ ಸಮಿತಿ ವತಿಯಿಂದ ಗಣಹೋಮ , ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.


ಬೆಳಿಗ್ಗೆ ಗಣಹೋಮ, ಕಶೆಕೋಡಿ ಸೂರ್ಯನಾರಾಯಣ ಭಟ್‌ ನೇತೃತ್ವದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಜರುಗಿತು.

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಆಶೀರ್ವಚನ ನೀಡಿದ ಮಂಗಳೂರು ರಾಮಕೃಷ್ಣ ಮಿಶನ್‌ನ ರಘುರಾಮಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಜೀವನದಲ್ಲಿ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಮಾಡುವ ಎಲ್ಲಾ ಕರ್ಮವೂ ಭಗವಂತನಿಗೆ ಅರ್ಪಿತ ಎಂದು ನಂಬಿಕೊಂಡು ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಎಂದರು.


ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕಲಿಯುಗದಲ್ಲಿ ಹೆಚ್ಚು ಪುಣ್ಯಕೊಡುವ ಸತ್ಯನಾರಾಯಣ ಪೂಜೆಯನ್ನು ಮಾಡಿ ಪ್ರಾರ್ಥಿಸಿದರೆ ನಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. ಕರಾವಳಿ ಜನತೆ ಧಾರ್ಮಿಕತೆಯ ವಿಚಾರದಲ್ಲಿ ಹೆಚ್ಚು ಒಲವು ಉಳ್ಳವರು ಎಂದರು.

ಕಶೆಕೋಡಿ ಸೂರ್ಯನಾರಾಯಣ ಭಟ್‌ ಧಾರ್ಮಿಕ ಉಪನ್ಯಾಸ ನೀಡಿದರು. ಸಭಾಧ್ಯಕ್ಷತೆಯನ್ನು ನಾಗರಿಕ ಸಮಿತಿ ಅಧ್ಯಕ್ಷ ಬಿ ಎನ್‌ ಪ್ರಕಾಶ್ ವಹಿಸಿದ್ದರು.


ಮಂಗಳೂರು ಮೇಯರ್ ಜಯಾನಂದ ಅಂಚನ್‌, ಮಾಜಿ ಮೇಯರ್‌ ಪ್ರೇಮಾನಂದ ಶೆಟ್ಟಿ, ಎಮ್ಮೆಕೆರೆ ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪರೀಕ್ಷಿತ್ ರೈ ವಿ, ಸ್ನೇಹ ಕಲಾವೃಂದ ಅಧ್ಯಕ್ಷ ಸದಾಶಿವ ಕುಲಾಲ್‌, ಸಮಿತಿ ಗೌರವಾಧ್ಯಕ್ಷ ಮೋಹನ್ ಬೆಂಗ್ರೆ, ಉಪಾಧ್ಯಕ್ಷ ನವಿಲ್‌ದಾಸ್, ರಾಜೇಶ್‌ ಕುಲಾಲ್‌, ಮುಖ್ಯ ಸಲಹೆಗಾರ ಸಂದೀಪ್‌ ಉಳ್ಳಾಲ್‌, ಉದ್ಯಮಿ ರಾಜೇಶ್ ಕುಮಾರ್ ಶಿವನಗರ ಮೊದಲಾದವರಿದ್ದರು.


ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಶಾಲುಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯಕಾರ್ಯಕ್ರಮ, ನಾಟಕ ಪ್ರದರ್ಶನಗೊಂಡಿತು.

DAKSHINA KANNADA

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಲಕ್ಷಾಧಿಪತಿ….ಅವರ ಆಸ್ತಿ ವಿವರ ಇಲ್ಲಿದೆ!

Published

on

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಅವರ ಸ್ಥಿರ ಮತ್ತು ಚರಾಸ್ತಿ ಒಟ್ಟು ಮೊತ್ತ 70,81,365 ಲಕ್ಷ ರೂ. ಆಗಿದೆ. ಸ್ಥಿರ ಆಸ್ತಿಯ ಒಟ್ಟು ಮೊತ್ತ 27,31,365 ಲಕ್ಷ ರೂ. ಆಗಿದೆ. ಚರಾಸ್ತಿಯ ಒಟ್ಟು ಮೊತ್ತ 43,50,000 ಲಕ್ಷ ರೂ., ಇನ್ನು ಒಟ್ಟು 9,62,010 ರೂ. ಅನ್ನು ಇನ್ನೋವಾ ಕಾರಿಗಾಗಿ ಸಾಲ ಮಾಡಿದ್ದಾರೆ.
ಇನ್ನು ಬಿಎಸ್ಸಿ ಶಿಕ್ಷಣದ ಜೊತೆಗೆ ಐಐಎಂ ಅನ್ನು ಇಂದೋರ್​ನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಡಿಫೆನ್ಸ್ ಆಫೀಸರ್ ಸರ್ಟಿಫಿಕೇಟ್ ಕೋರ್ಸ್ ಮಾಡಿದ್ದಾರೆ. ಅವರು, ಅವಿವಾಹಿತರಾಗಿದ್ದು 42 ವರ್ಷ ಪ್ರಾಯದವರಾಗಿದ್ದಾರೆ.

ಬ್ರಿಜೇಶ್‌ ಚೌಟ ಯಾರು?

ಮಂಗಳೂರಿನ ರಥಬೀದಿಯಲ್ಲಿ ನೆಲೆಸಿರುವ ಕ್ಯಾಪ್ಟನ್ ಬೃಜೇಶ್ ಚೌಟ ಕಾಲೇಜು ದಿನಗಳಲ್ಲಿಯೇ ಎನ್ ಸಿಸಿಯಲ್ಲಿ ತೊಡಗಿಕೊಂಡಿದ್ದು, ಮಂಗಳೂರು ವಿವಿಯಲ್ಲಿ ಅತ್ಯುತ್ತಮ ಕೆಡೆಟ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದ ಅವರು ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಆಡಳಿತ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಯುಪಿಎಸ್ಸಿ ಮೂಲಕ ಡಿಫೆನ್ಸ್ ಪರೀಕ್ಷೆ ಬರೆದು ತೇರ್ಗಡೆಗೊಂಡು ಚೆನ್ನೈನಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂಸೇನೆ ಸೇರಿದ್ದರು. ಪ್ರತಿಷ್ಠಿತ ಎಂಟನೇ ಗೋರ್ಖಾ ರೈಫಲ್ಸ್ 7ನೇ ಬೆಟಾಲಿಯನ್ ನಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಹುದ್ದೆಗೇರಿದ್ದರು.

ನಳಿನ್ ಬದಲು ಚೌಟ ಕಣಕ್ಕೆ :

ಕಳೆದ 15 ವರ್ಷಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಹಿಡಿತದಲ್ಲಿದೆ. ಸತತ ಮೂರು ಬಾರಿ ನಳಿನ್ ಕುಮಾರ್ ಕಟೀಲ್ ಅವರು ಗೆದ್ದುಕೊಂಡು ಬಂದಿದ್ದರು. ಈ ಬಾರಿ ಮಾಜಿ ಯೋಧ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಆ ಮೂಲಕ ನಳಿನ್ ಕುಮಾರ್ ಕಟೀಲ್​ಗೆ ಟಿಕೆಟ್​ ಕೈತಪ್ಪಿ ಹೋಗಿದೆ. ಇದೀಗ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 4 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ಸಲ್ಲಿಸಿರುವ ನಾಮಪತ್ರ ಅಫಿಡವಿಟ್‌ನಲ್ಲಿ ಲಕ್ಷಾಧಿಪತಿ ಎಂದು ಘೋಷಿಸಿಕೊಂಡಿದ್ದಾರೆ.

Continue Reading

DAKSHINA KANNADA

ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ…! ಯಾವ ಕ್ಷೇತ್ರದಿಂದ ಸ್ಪರ್ಧೆ..!?

Published

on

ಕ್ಷಿಣ ಕನ್ನಡ ಜಿಲ್ಲೆಯ ಚೆಲುವೆ…ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸದ್ಯ ರಾಜಕೀಯ ವಲಯದಲ್ಲಿ ಸುದ್ದಿಯಾಗಿದ್ದಾರೆ. ಟಾಲಿವುಡ್‌ನ ಬ್ಯೂಟಿ ಕ್ವೀನ್‌ ಆಗಿ ಮೆರೆದಿದ್ದ ಅನುಷ್ಕಾ ಶೆಟ್ಟಿಗೆ ಇರುವ ದೊಡ್ಡ ಅಭಿಮಾನಿ ಬಳಗ ಕೂಡಾ ಇಂತಹ ಒಂದು ಚರ್ಚೆ ನಡೆಸ್ತಾ ಇದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಅನುಷ್ಕಾ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಹೀಗಾಗಿ ಈ ಬಾರಿ ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ದೊಡ್ಡ ಚರ್ಚೆ ಆರಂಭವಾಗಿದೆ.

ಲೋಕಸಭೆ ಚುನಾವಣೆಯ ಜೊತೆಯಲ್ಲೇ ಆಂಧ್ರ ವಿಧಾನಸಭೆಗೂ ಚುನಾವಣೆ ನಡೆಯುತ್ತಿರುವುದೇ ಈ ಚರ್ಚೆಗೆ ಕಾರಣವಾಗಿದೆ. ಅನುಷ್ಕಾ ಶೆಟ್ಟಿ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಅಭಿಮಾನಿಗಳು ಮಾತ್ರವಲ್ಲದೆ, ರಾಜಕೀಯ ವಲಯದಲ್ಲೂ ಚರ್ಚೆ ನಡೆದಿದೆ.

ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದಿಂದ ಅನುಷ್ಕಾ ಶೆಟ್ಟಿ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ ಅನ್ನೋ ಸುದ್ದಿ ಹರಡಿದೆ. ಬಿಜೆಪಿ ಹಾಗೂ ಟಿಡಿಪಿ ಪಕ್ಷದ ಬೆಂಬಲ ಹೊಂದಿರುವ ಜನಸೇನಾ ಪಕ್ಷದ ಪ್ರಮುಖ ನಾಯಕರ ಜೊತೆ ಅನುಷ್ಕಾ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ ಅನುಷ್ಕಾ ಜನಸೇನಾ ಪಕ್ಷಕ್ಕೆ ಸ್ಟಾರ್ ಪ್ರಚಾರಕಿಯಾಗಿ ಹೋಗಲಿದ್ದಾರೆ. ಚುನಾವಣೆಗೆ ನಿಲ್ಲೋದು ಸುಳ್ಳು ಸುದ್ದಿ ಎಂದು ಕೆಲ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನುಷ್ಕಾ ಶೆಟ್ಟಿ ರಾಜಕೀಯ ಪ್ರವೇಶ ಮಾಡ್ತಾರೆ ಅನ್ನೋದೊಂದು ನಕಲಿ ಸುದ್ದಿ ಎಂದು ಕೆಲ ಸುದ್ದಿ ವಾಹಿನಿಗಳು ಕೂಡಾ ವರದಿ ಮಾಡಿದೆ. ಅನುಷ್ಕಾ ಶೆಟ್ಟಿ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು, ರಾಜಕೀಯದಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಓದಿ ಹಿಂದಿಗೆ ರಿಮೇಕ್ ಆಗುತ್ತಿದೆ ಝೀ ಕನ್ನಡದ ಫೇಮಸ್‌ ಸೀರಿಯಲ್‌…! ಪ್ರೋಮೋ ರಿಲೀಸ್‌..! 

ಮಲಯಾಳಂ ಸಿನಿಮಾದಲ್ಲಿ ಬಿಝಿ :

‘ಬಾಹುಬಲಿ’ ಸಿನಿಮಾದ ಬಳಿಕ ಅನುಷ್ಕಾ ಶೆಟ್ಟಿ ಭಾರಿ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ‘ಬಾಹುಬಲಿ 2’ ಸಿನಿಮಾದ ಬಳಿಕ ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರವೇ ಅನುಷ್ಕಾ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಕಾಮಿಡಿ ಹಾಗೂ ಡ್ರಾಮಾ ಕಥೆಯಾಗಿದ್ದ ಇದು ಪ್ರೇಕ್ಷಕರನ್ನು ರಂಜಿಸಿದೆ.ಇದೀಗ ಅನುಷ್ಕಾ ಶೆಟ್ಟಿ ಮಲಯಾಳಂ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ.

ಮಲಯಾಳಂನಲ್ಲಿ RIAL 5- ಹಾರ‌ರ್ ಸಿನಿಮಾ ಒಂದರಲ್ಲಿ ಅನುಷ್ಕಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅನುಷ್ಕಾ ಶೆಟ್ಟಿ ರಾಜಕೀಯ ಪ್ರವೇಶ ಮಾಡುವ ಬದಲಿಗೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿರಲಿ ಎಂಬುದು ಅಭಿಮಾನಿಗಳ ಆಶಯ. ಆದ್ರೆ, ಅನುಷ್ಕಾ ರಾಜಕೀಯ ಎಂಟ್ರಿಯನ್ನೂ ತಳ್ಳಿ ಹಾಕಲು ಸಾದ್ಯವಿಲ್ಲ ಅನ್ನೋದು ಸದ್ಯ ಚಾಲ್ತಿಯಲ್ಲಿರುವ ಚರ್ಚಾ ವಿಷಯ.

Continue Reading

DAKSHINA KANNADA

ಟಿಕೆಟ್ ಕೈ ತಪ್ಪಿದ್ರೂ ಕೈ ಬಿಡದ ಹೈಕಮಾಂಡ್‌..! ಕೇರಳದ ಸಹ ಉಸ್ತುವಾರಿಯಾದ ನಳಿನ್ ಕುಮಾರ್ ಕಟೀಲ್‌

Published

on

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ವಹಿಸಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಕೇರಳದ ಚುನಾವಣಾ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು ಬಾರಿ ನಿರಾಸೆ ತಂದಿತ್ತು. ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೂಲಕ ಹೊಸ ಮುಖವನ್ನು ಪಕ್ಷ ಕಣಕ್ಕೆ ಇಳಿಸಿದೆ. ಇದು ನಳಿನ್ ಕುಮಾರ್ ಕಟೀಲ್‌ ಅವರಿಗೆ ಬೇಸರ ತಂದಿದ್ದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರು. ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಬಹಳಷ್ಟು ಭಾವುಕರಾಗಿದ್ದ ನಳಿನ್ ಕುಮಾರ್ ಕಟೀಲ್ ಪಕ್ಷ ನಿಂತ ನೀರಾಗಬಾರದು, ಹೊಸ ಮುಖಗಳು ಬರುತ್ತಿರಬೇಕು, ನಾನು ಪಕ್ಷ ಗುಡಿಸಿ ಒರೆಸು ಅಂತ ಹೇಳಿದ್ರೂ ಮಾಡ್ತೇನೆ ಅಂತ ಹೇಳಿದ್ದರು. ಆದ್ರೆ ಇದೀಗ ಪಕ್ಷ ಅವರಿಗೆ ಕೇರಳದ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಪಕ್ಷದಲ್ಲಿ ದೊಡ್ಡ ಜವಾಬ್ದಾರಿಯನ್ನೇ ನೀಡಿದೆ.

ಇದನ್ನೂ ಓದಿ : ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ…! ಯಾವ ಕ್ಷೇತ್ರದಿಂದ ಸ್ಪರ್ಧೆ..!?

Continue Reading

LATEST NEWS

Trending