Monday, May 23, 2022

ಅಕ್ಟೋಬರ್ ನಲ್ಲಿ ಬಂಟ್ವಾಳದಲ್ಲಿ ನಾಪತ್ತೆಯಾದ ಸತೀಶ್ ಆಚಾರ್ಯಗೂ ಈ ವಿಡಿಯೋದಲ್ಲಿನ ವ್ಯಕ್ತಿಗೂ ಸಂಬಂಧವಿದೆಯೇ..?

ಬಂಟ್ವಾಳ: ಅಕ್ಟೋಬರ್ ತಿಂಗಳಲ್ಲಿ ನದಿಗೆ ಹಾರಿದ ವ್ಯಕ್ತಿಯ ಬಗ್ಗೆ ಮೂರು ತಿಂಗಳಾದರೂ ಪತ್ತೆಯಾಗಿಲ್ಲ.
ಬಂಟ್ವಾಳ ಅಜೆಕಲ ನಾಗಶ್ರೀ ಕಂಪೌಂಡು ನಿವಾಸಿ ಕೆ.ಸತೀಶ್ ಆಚಾರ್ಯ (58) ಅವರು ಅಕ್ಟೋಬರ್ 9 ರಂದು ಮಧ್ಯಾಹ್ನ 3 ಗಂಟೆಗೆ ವಾಕಿಂಗ್ ಹೋಗುತ್ತೇನೆಂದು ಮನೆಯಿಂದ ಹೋದವರು ಪತ್ತೆಯಾಗಿಲ್ಲ.

ಸತೀಶ್ ಅವರು ಮನೆಯಿಂದ ವಾಕಿಂಗ್ ವಾಕಿಂಗ್ ಹೋಗುತ್ತೇನೆ ಎಂದು ಹೋದವರು ಬಂಟ್ವಾಳ ವೆಂಕಟರಮಣ ಸ್ವಾಮಿ ದೇವಸ್ಥಾನ ದ ಬಳಿ ನೇತ್ರಾವತಿ ನದಿಗೆ ಹಾರಿ ದ ವಿಡಿಯೋ ದೇವಸ್ಥಾನ ದ ಸಿಸಿ ಕ್ಯಾಮಾದಲ್ಲಿ ಸೆರೆಯಾಗಿದೆ.

ನದಿಗೆ ಹಾರಿ ಈಜುವ ರೀತಿಯಲ್ಲಿ ವಿಡಿಯೋದಲ್ಲಿ ಕಂಡುಬಂದಿದೆ.ಆದರೆ ಅವರು ಪಾರ್ಶ್ವವಾಯು ಒಳಗಾಗಿದ್ದು ಈಜಾಡಲು ಕಷ್ಟ ಸಾಧ್ಯ ಎಂಬುದನ್ನು ಸ್ಥಳೀಯರು ತಿಳಿಸಿದ್ದಾರೆ.

ಇವರು ಸುಮಾರು 5.6.ಇಂಚು ಎತ್ತರ ಇದ್ದು, ಎಡಕೈಯ ಮಧ್ಯದ ಬೆರಳು ತುಂಡಾಗಿದೆ. ಅಲ್ಲದೆ ತೋಳುಬೆರಳು ಬೆಂಡ್ ಆಗಿದೆ.

ಇವರು ಎಲ್ಲಿಯಾದರೂ ಕಾಣ ಸಿಕ್ಕರೆ ಬಂಟ್ವಾಳ ನಗರ ಪೋಲಿಸ್ ಠಾಣೆಯನ್ನು ಸಂಪರ್ಕ ಮಾಡುವಂತೆ ಕೋರಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಜಿರೆ SDM ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ನಿಧನ

ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ (66) ಅನಾರೋಗ್ಯದಿಂದಾಗಿ ನಿನ್ನೆ ಮಧ್ಯರಾತ್ರಿ ಸಿಂಗಾಪುರದಲ್ಲಿ ನಿಧನರಾಗಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ...

ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಜೆದ್ದಾ: ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್ ಸೋಂಕು ಮತ್ತೆ ಏರಿಕೆ ಕಂಡುಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ದೇಶದ ನಾಗರಿಕರು ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.ಲೆಬನಾನ್, ಸಿರಿಯಾ, ಟರ್ಕಿ,...

ಆಟೋ ರಿಕ್ಷಾ- ಪಿಕಪ್ ಢಿಕ್ಕಿ: ಓರ್ವನಿಗೆ ಗಾಯ

ಬಂಟ್ವಾಳ: ಆಟೋ ರಿಕ್ಷಾ ಮತ್ತು ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನ ಎಂಬಲ್ಲಿ ನಿನ್ನೆ ನಡೆದಿದೆ.ಅಪಘಾತದಿಂದಾಗಿ ಆಟೋ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು...