ಮಂಗಳೂರು : ಕರಾವಳಿಯಲ್ಲಿ ಬಂಟ ಅಥವಾ ಶೆಟ್ಟಿ ಸಮುದಾಯದ ಮದುವೆಯಾದ ಮಹಿಳೆಯರು ತಾಳಿಯಷ್ಟೇ ಪವಿತ್ರ ಎಂದು ಆರಾಧಿಸಿ ಧರಿಸುವ ಉಂಗುರವನ್ನು ಸಾನ್ಯ ಅಯ್ಯರ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಇದೀಗ ಸಾಕಷ್ಟು ವೈರಲ್ ಆಗ್ತಿದೆ.
ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಇಬ್ಬರೂ ಬಿಗ್ ಬಾಸ್ ಸ್ಪರ್ಧಿಗಳು. ಅದರಲ್ಲೂ ರೂಪೇಶ್ ವಿನ್ನರ್ ಆಗಿ ಇತ್ತೀಚಿಗೆ ಹೊರಹೊಮ್ಮಿದ್ದಾರೆ. ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇವೆಲ್ಲದರ ಮಧ್ಯೆ ಶೆಟ್ಟಿ ವಧು ಧರಿಸುವ ಒಡ್ಡುಂಗರ/ ಒಡ್ಡು ಉಂಗುರ/ ಒಡ್ಡಿ ಉಂಗಿಲವನ್ನು ಧರಿಸಿರುವುದು, ಸಾನ್ಯ ಅಯ್ಯರ್ ಗುಟ್ಟಾಗಿ ಮದುವೆಯಾಗಿದ್ದಾರೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ.
ಈ ಒಡ್ಡು ಉಂಗುರ/ಒಡ್ಡು ಉಂಗುರ/ ಒಡ್ಡಿ ಉಂಗಿಲ/ ಒಡ್ಡಿಂಗಿಲ ಎಂದು ಕರೆಯಲ್ಪಡುವ ಉಂಗುರವನ್ನು ಬಂಟ ಸಮುದಾಯ ಅಥವಾ ಶೆಟ್ಟಿ ಸಮುದಾಯದ ವಿವಾಹಿತ ಮಹಿಳೆಯರು ಮಾತ್ರ ಧರಿಸುತ್ತಾರೆ.
ತಾಳಿಯಷ್ಟೇ ಪ್ರಾಮುಖ್ಯತೆ ಪಡೆದಿರುವ, ವಿವಾಹವಾಗಿದೆ ಎಂಬುದನ್ನು ಸೂಚಿಸುವ ಉಂಗುರ ಇದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಫ್ಯಾಷನ್ ರೀತಿ ಅನೇಕರು ಬಳಸುತ್ತಾರೆ.
ಮನೆಯಿಂದ ದಿಬ್ಬಣ ಹೊರಡುವ ಮುನ್ನ, ವಧುವಿನ ಅತ್ತಿಗೆ/ನಾದಿನಿ ಆದವಳು ಮದುಮಗಳಿಗೆ ತೊಡಿಸುವ ಪ್ರಮುಖ ಉಂಗುರ ಇದಾಗಿದೆ.
ಇದೀಗ ಸಾನ್ಯ ಧರಿಸಿ ಚರ್ಚೆ ಹುಟ್ಟುಹಾಕಿದ್ದ ಉಂಗುರ ಬಗ್ಗೆ ಸಾನ್ಯ ಮಾತ್ರ ಉತ್ತರ ಕೊಡಬಲ್ಲವರಾಗಿದ್ದಾರೆ..