Connect with us

DAKSHINA KANNADA

ಅಪರೂಪದ ಯಕ್ಷ ಪ್ರತಿಭೆ ಸಂಜಯ ರಾವ್-ಪ್ರದೀಪ ಕಲ್ಕೂರ

Published

on

ಮಂಗಳೂರು: “ಹವ್ಯಾಸಿ ಯಕ್ಷಗಾನ ವೇಷಧಾರಿ ,ಅರ್ಥಧಾರಿ , ಚೆಂಡೆ ಮದ್ದಳೆ ವಾದಕ, ಯಕ್ಷಗುರು , ಸಂಘಟಕ , ಕಲಾ ಪೋಷಕ ಪಿ.ಸಂಜಯ ಕುಮಾರ್ ರಾವ್ ಅವರ ನಿಸ್ವಾರ್ಥ ಯಕ್ಷಗಾನ ಸೇವೆ ಅನನ್ಯ ,ಅಪೂರ್ವ ” ಎಂದು ಕನ್ನಡ ಸಾಹಿತ್ಯ ಪರಿಷತ್ ನ ನಿಕಟ ಪೂರ್ವ ಜಿಲ್ಲಾಧ್ಯಕ್ಷ ,ವಾಗೀಶ್ವರೀ ಸಂಘದ ಗೌರವಾಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಅವರು ಹೇಳಿದರು.


ಮಂಗಳೂರು ಪುರಭವನದಲ್ಲಿ ಮಂಗಳೂರು ಶಾರದಾ ಮಹೋತ್ಸವ ಶತಮಾನೋತ್ಸವ ಸಾಂಸ್ಕೃತಿಕ ಸಪ್ತಾಹದ ಎರಡನೆಯ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಶತಮಾನೋತ್ಸವವನ್ನು ಆಚರಿಸುತ್ತಿರುವ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದಲ್ಲಿ ಕಳೆದ ನಾಲ್ಕು ದಶಕಗಳಿಂದ ಭಕ್ತಿ ನಿಷ್ಟೆಯಿಂದ ಕುಡ್ತೇರಿ ಮಹಾಮಯಾ ಸನ್ನಿಧಿಯಲ್ಲಿ ವಾರದ ತಾಳಮದ್ದಳೆ ಹಾಗೂ ನವರಾತ್ರಿ ಬಯಲಾಟದ ಸಂಘಟನೆಯಲ್ಲಿ ತನು ಮನ ಧನದೊಂದಿಗೆ ತೊಡಗಿಸಿಕೊಂಡಿರುವ ತನ್ನ ಒಡನಾಡಿ ಕಲಾವಿದರು ಸಂಜಯರು” ಎಂದು ಸಂಘದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.

ಪತ್ನಿ ಭಾರತಿ ರಾವ್ ,ಪುತ್ರಿ ನಂದಿತಾ ಅವರೊಂದಿಗೆ ಸಂಜಯರಿಗೆ “ಶ್ರೀ ವಾಗೀಶ್ವರೀ ಶತಮಾನೋತ್ಸವ ಗೌರವ ಪ್ರಶಸ್ತಿ” ನೀಡಿ ಸಂಮಾನಿಸಲಾಯಿತು.

ಎನ್.ಮಾಧವ ಆಚಾರ್ಯರು ವಾಗೀಶ್ವರೀ ಸಂಘವನ್ನು ಮುನ್ನಡೆಸುತ್ತಿದ್ದ ಸಂದರ್ಭ ವನ್ನು ನೆನಪಿಸಿ ಕೊಂಡ ಆಚಾರ್ಯ ಮಠದ ಪಂಡಿತ್ ನರಸಿಂಹ ಆಚಾರ್ಯ ಅವರು ಮಹಾಮಾಯಾ ಸಾನಿಧ್ಯವು ತನ್ನ ಆಧ್ಯಾತ್ಮ ಸಾಧನೆಗೆ ನಾಂದಿಯಾದ ಸಂಧರ್ಭವನ್ನು ಸ್ಮರಿಸಿಕೊಂಡರು.

ಮಹಾಮಾಯಾ ದೇವಸ್ಥಾನದ ಆಡಳಿತ ಮೊಕ್ತೇಸರ ಸಿ.ಎ. ಎಸ್.ಎಸ್. ಕಾಮತ್ ಅವರು “ಸತ್ವ ಭರಿತ ಸಂಭಾಷಣೆಯನ್ನೊಳಗೊಂಡ ತಾಳಮದ್ದಳೆಗೆ ತಮ್ಮ ಕ್ಷೇತ್ರದಲ್ಲಿ ವಿಶೇಷ ಮಾನ್ಯತೆ ನೀಡಿ ಸಹಕರಿಸಲಾಗುತ್ತಿದೆ ” ಎಂದು ಶುಭ ಹಾರೈಸಿದರು.

ಟ್ರಸ್ಟಿ ಕೆ.ಪ್ರಕಾಶ್ ಕಾಮತ್ ,ವಿದ್ವಾಂಸ ವಾಸುದೇವ ಭಟ್ , ವಿದ್ವಾಂಸ ಡಾ. ಎಂ.ಪ್ರಭಾಕರ ಜೋಷಿ ,ವಾಗೀಶ್ವರೀ ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಗೌರವಾಧ್ಯಕ್ಷ ಹಾಗೂ ಕಾರ್ಯಕ್ರಮ ಪ್ರಾಯೋಜಕ ಸಿ.ಎಸ್ ಭಂಢಾರಿ,ಜಿ.ಕೆ ಭಟ್ ಸೇರಾಜೆ ಉಪಸ್ಥಿತಿಯಲ್ಲಿ ಸಂಘದ ಎಲ್ಲಾ ಕಲಾವಿದರಿಗೆ ಶಾರದಾ ಶತಮಾನೋತ್ಸವ ಕಲಾ ಸರಸ್ವತಿ ಪುರಸ್ಕಾರ ನೀಡಲಾಯಿತು.
ಶಿವಪ್ರಸಾದ ಪ್ರಭು ಸಂಮಾನ ಪತ್ರ ವಾಚಿಸಿದರು.

ಕನ್ನಡ – ತುಳು ತಾಳಮದ್ದಳೆ

ಪಟ್ಲ ಸತೀಶ ಶೆಟ್ಟಿಯವರ ಭಾಗವತಿಕೆಯಲ್ಲಿ ” ಶರ ಸೇತು ಬಂಧನ” ಹಾಗೂ ಸತೀಶ್ ಶೆಟ್ಟಿ ಬೋಂದೆಲ್ ಭಾಗವತಿಕೆಯಲ್ಲಿ ” ತುಳುನಾಡ ಬಲಿಯೇಂದ್ರೆ” ಯಕ್ಷಗಾನ ತಾಳಮದ್ದಳೆಯಲ್ಲಿ ಡಾ.ಎಂ.ಪ್ರಭಾಕರ ಜೋಷಿ ,ಜಿ.ಕೆ.ಭಟ್ ಸೇರಾಜೆ , ಭಾಸ್ಕರ ರೈ ಕುಕ್ಕುವಳ್ಳಿ ,ದಯಾನಂದ ಕತ್ತಲ್ ಸಾರ್ ಹಾಗೂ ಸಂಘದ ಕಲಾವಿದರು ಪಾಲ್ಗೊಂಡರು.

Click to comment

Leave a Reply

Your email address will not be published. Required fields are marked *

DAKSHINA KANNADA

ಮಂಡ್ಯದಲ್ಲಿ ಅವಳಿ ಮಕ್ಕಳ ಸಾ*ವಿನ ಪ್ರಕರಣಕ್ಕೆ ಟ್ವಿಸ್ಟ್..! ತಾಯಿಯಿಂದ ಕೃತ್ಯ..!

Published

on

ಮಂಗಳೂರು,(ಮಂಡ್ಯ): ಮಂಡ್ಯದಲ್ಲಿ ಐಸ್‌ ಕ್ರೀಮ್‌ ತಿಂದು ಅವಳಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಬುಧವಾರ ಅವಳಿ ಮಕ್ಕಳು ಸಾವನ್ನಪ್ಪಿದ್ದರು. ಐಸ್ ಕ್ರೀಂ ತಿಂದು ಮಕ್ಕಳು ಇಹಲೋಕ ತ್ಯಜಿಸಿವೆ ಎನ್ನಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಬಯಲಾಗಿದೆ. ತಾಯಿಯೇ ಮಕ್ಕಳಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವುದು ಖಚಿತವಾಗಿದೆ.

ಹೆತ್ತ ಮಕ್ಕಳಿಗೆ ವಿಷವಿಕ್ಕಿದ ತಾಯಿ!

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಸಾವನ್ನಪ್ಪಿದ್ದವು.

ಪೊಲೀಸ್‌ ತನಿಖೆಯ ಬಳಿಕ ತಾಯಿ ಪೂಜಾಳೇ ಮೂವರು ಮಕ್ಕಳಿಗೆ ವಿಷ ಹಾಕಿದ್ದಾಳೆಂಬುದು ಗೊತ್ತಾಗಿದೆ.

ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ಪೂಜಾ ಹಾಕಿದ್ದಳು. ಬಳಿಕ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದೀಗ ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.

ಪೂಜಾ ಪತಿ ಪ್ರಸನ್ನ ಪದೇ ಪದೇ ಜಗಳವಾಡುತ್ತಿದ್ದರು. ಈ ಜಗಳದಿಂದ ಬೇಸತ್ತು ಬುಧವಾರ ಮಕ್ಕಳಿಗೆ ತಾಯಿ ವಿಷ ಉಣಿಸಿದ್ದಾಳೆ. ಬಳಿಕ ತಾನೂ ಸೇವಿಸಿದ್ದಳು. ಕೂಡಲೇ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ‌ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಆಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಕೊನೆಯುಸಿರೆಳೆದಿದ್ದವು.

ಸದ್ಯ ತಾಯಿ ಹಾಗೂ ಮೊದಲ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

DAKSHINA KANNADA

ಕಾರ್ಪೋರೇಟರ್ ಮಗಳ ಹ*ತ್ಯೆ..! ಒಂಬತ್ತು ಬಾರಿ ಇರಿದ ಪಾಪಿ…!

Published

on

ಮಂಗಳೂರು (ಹುಬ್ಬಳ್ಳಿ) : ಕಾರ್ಪೋರೇಟರ್ ನಿರಂಜನ್ ಹಿರೇಮಠ ಎಂಬವರ ಮಗಳನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದಿದೆ. ನೇಹಾ ಹಿರೇಮಠ ಕೊಲೆಗೀಡಾದಾಕೆ. ಕಾಲೇಜ್ ಕ್ಯಾಂಪಸ್​ನಲ್ಲಿರುವ ಕ್ಯಾಂಟೀನ್​ನಲ್ಲಿ ಫಯಾಜ್ ಎಂಬಾತ 9 ಬಾರಿ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ನೇಹಾಳನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನೇಹಾ ಮೃತಪಟ್ಟಿದ್ದಾಳೆ.

ತಂದೆ ನಿರಂಜನ್ ಹಿರೇಮಠ ಜೊತೆಗೆ ನೇಹಾ

ಪ್ರೀತಿ ನಿರಾಕರಣೆಗೆ ಪಾಪಿಯಿಂದ ಹೇಯ ಕೃತ್ಯ..!

ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿರುವ ನೇಹಾ ಹಿರೇಮಠಗೆ ಆರೋಪಿ ಫಯಾಜ್ ಎಂಬಾತ ಪ್ರೀತಿಸುವಂತೆ ಪೀಡಿಸಿದ್ದಾನೆ. . ಆದರೆ, ನೇಹಾ ಇದನ್ನು ನಿರಾಕರಿಸುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ.
ಆರೋಪಿ ಫಯಾಜ್ ಕೊಂಡಿಕೊಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆ‌ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಸಲಾಗಿದೆ.ಇನ್ನು ನೇಹಾ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

Continue Reading

DAKSHINA KANNADA

“ಸೆಕ್ಸ್‌” ನನ್ನ ಸಾಮರ್ಥ್ಯದ ರಹಸ್ಯ…! ಮಾಜಿ ಸಂಸದೆಯ ಹೇಳಿಕೆ ವೈರಲ್‌..!

Published

on

ಮಂಗಳೂರು ( ಪಶ್ಚಿಮ ಬಂಗಾಳ ) : ಮಾಜಿ  ಸಂಸದೆ ಮಹುವಾ ಮೋಯಿತ್ರಾ ( Mahua Moitra ) ವಿವಾದದ ಕಾರಣದಿಂದ ಸಂಸತ್‌ನಿಂದ ಉಚ್ಚಾಟಿತರಾಗಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದರು ಎಂಬ ಆರೋಪ ಅವರ ಮೇಲಿತ್ತು. ಈಗ ಅವರು ಮತ್ತೊಂದು ವಿವಾದಕ್ಕೆ ಸಿಲುಕಿದ್ದು ಅವರ ಹೇಳಿಕೆ ಬಾರಿ ವೈರಲ್ ಆಗಿದೆ. ಕೃಷ್ಣ ನಗರ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿದಿದ್ದಾರೆ. ಭರ್ಜರಿ ಪ್ರಚಾರ ನಡೆಸುತ್ತಿರುವ ಅವರನ್ನ ಪತ್ರಕರ್ತರೊಬ್ಬರು ಸಂದರ್ಶನ ನಡೆಸಿದ್ದಾರೆ. ಈ ವೇಳೆ ಪತ್ರಕರ್ತ ನಿಮ್ಮ ಸಾಮಾರ್ಥ್ಯದ ರಹಸ್ಯ ಏನು ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮೊಯಿತ್ರಾ ಅವರು “ಸೆಕ್ಸ್‌” ಎಂದು ಹೇಳಿರುವ ವಿಡಿಯೋವನ್ನು ಮೋದಿ ಕಾ ಪರಿವಾರ ವೈರಲ್ ಮಾಡಿದೆ. ವಿಡಿಯೊ ವೈರಲ್‌ ಆಗುತ್ತಲೇ ಜನ ಟೀಕೆ ವ್ಯಕ್ತಪಡಿಸಿದ್ದಾರೆ. ಒಬ್ಬ ಸಂಸದೆಯಾಗಿ ಬಹಿರಂಗವಾಗಿ ಹೀಗೆ ಹೇಳುವುದು ತಪ್ಪು ಎಂದು ಖಂಡಿಸಿದ್ದಾರೆ.

ನ್ಯೂಸ್‌ ದಿ ಟ್ರುತ್‌ ಎಂಬ ಮಾದ್ಯಮ ಮಾಡಿದ ಸಂದರ್ಶನ

ಸ್ಪಷ್ಟನೆ ನೀಡಿದ ಸಂದರ್ಶನ ನೀಡಿದ ವರದಿಗಾರ..!

“ಮಹುವಾ ಮೊಯಿತ್ರಾ ಅವರನ್ನು ಸಂದರ್ಶನ ಮಾಡಿದ್ದು ನಾನೇ. ನಿಮ್ಮ ಸಾಮರ್ಥ್ಯದ ಗುಟ್ಟೇನು ಎಂಬುದಾಗಿ ಕೇಳಿದೆ. ಅದಕ್ಕೆ ಅವರು, ಎಗ್ಸ್‌ (ಮೊಟ್ಟೆಗಳು) ಎಂಬುದಾಗಿ ಎರಡು ಬಾರಿ ಉತ್ತರಿಸಿದರು. ಆದರೆ, ಭಕ್ತ ಮಂಡಳಿಯು ಎಗ್ಸ್‌ ಎಂಬುದನ್ನು ಸೆಕ್ಸ್‌ ಎಂಬುದಾಗಿ ತಿರುಚಿದೆ” ಎಂಬುದಾಗಿ ನ್ಯೂಸ್‌ ದಿ ಟ್ರುತ್‌ ಎಂಬ ಮಾಧ್ಯಮ ಸಂಸ್ಥೆ ವರದಿಗಾರ ತಮಲ್‌ ಸಾಹ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ವರದಿಗಾರ ಸ್ಪಷ್ಟನೆ ನೀಡುವ ಹೊತ್ತಿಗೆ ವಿಡಿಯೊ ಭಾರಿ ವೈರಲ್‌ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ.

49 ವರ್ಷದ ಮಹುವಾ ಮೊಯಿತ್ರಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು 2 ಕೋಟಿ ರೂ. ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ. ಮೊಯಿತ್ರಾ ಅವರು ತಮ್ಮ ಸಂಸತ್ತಿನ ಲಾಗ್-ಇನ್ ವಿವರಗಳನ್ನು ಉದ್ಯಮಿ ದರ್ಶನ್ ಹಿರಾನಂದಾನಿಗೆ ನೀಡಿದ್ದನ್ನು ಮೋಯಿತ್ರಾ ಒಪ್ಪಿಕೊಂಡಿದ್ದರು.  ಈ ಹಿನ್ನೆಲೆಯಲ್ಲಿ ಅವರನ್ನು ಡಿಸೆಂಬರ್ 8, 2023ರಂದು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು.

 

Continue Reading

LATEST NEWS

Trending