Connect with us

LATEST NEWS

ಆರ್ ಬಿಐನ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ

Published

on

ಮಂಗಳೂರು/ಮುಂಬೈ: ಮುಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಕಂದಾಯ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರ ಅವರು ಡಿಸೆಂಬರ್ 11 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಅಧಿಕಾರವಧಿ ಮುಂದಿನ 3 ವರ್ಷಗಳವರೆಗೆ ಇರುತ್ತದೆ.

1990 ರ ಬ್ಯಾಚ್ ನ ರಾಜಸ್ಥಾನ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಸಂಜಯ್ ಮಲ್ಹೋತ್ರಾ, ಅವರು ಆರ್ ಬಿಐನ 26ನೇ ಗವರ್ನರ್ ಆಗಲಿದ್ದಾರೆ.

ಇದನ್ನೂ ಓದಿ: ಬಿಸಿಸಿಐ ಹಂಗಾಮಿ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ನೇಮಕ

ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧಿಕಾರವಧಿ ಮಂಗಳವಾರ ಕೊನೆಗೊಳ್ಳಲಿದೆ. ಶಕ್ತಿಕಾಂತ್ ದಾಸ್ ಅವರ ಅಧಿಕಾರವಧಿಯು ಅತ್ಯುತ್ತಮವಾಗಿತ್ತು. ಶಕ್ತಿಕಾಂತ್ ದಾಸ್ ಸುಮಾರು 6 ವರ್ಷಗಳ ಕಾಲ ಆರ್ ಬಿಐ ಗವರ್ನರ್ ಆಗಿದ್ದರು. ಊರ್ಜಿತ್ ಪಟೇಲ್ ಅವರು ಹಠಾತ್ ರಾಜೀನಾಮೆ ನೀಡಿದ ನಂತರ ಅವರು ಜವಾಬ್ದಾರಿಯನ್ನು ವಹಿಸಿಕೊಂಡರು. ಕೋವಿಡ್ ಸಮಯದಲ್ಲಿ ಮತ್ತು ನಂತರ ದೇಶದಲ್ಲಿ ಹಣದುಬ್ಬರದ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಶಕ್ತಿಕಾಂತ್ ದಾಸ್ ಗಮನಾರ್ಹ ಕೆಲಸ ಮಾಡಿದ್ದಾರೆ.

ಪ್ರಸ್ತುತ ಆರ್ ಬಿಐನ ಗವರ್ನರ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಸಂಜಯ್ ಮಲ್ಹೋತ್ರಾ ಅವರು ರಾಜಸ್ಥಾನ ಕೇಡರ್ ನ 1990ರ ಬ್ಯಾಚ್ ನ ಐಎಎಸ್ ಅಧಿಕಾರಿ. ಅವರು ಐಐಟಿ ಕಾನ್ಪುರದಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡಿದಿದ್ದಾರೆ. ಇದರ ನಂತರ ಅವರು ಅಮೆರಿಕಾದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೊತ್ತರ ಪದವಿ ಪಡೆದರು. ಸಂಜಯ್ ಮಲ್ಹೋತ್ರಾ ಅವರು 33 ವರ್ಷಗಳ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಅವರು ವಿದ್ಯುತ್, ಹಣಕಾಸು, ತೆರಿಗೆ, ಮಾಹಿತಿ ತಂತ್ರಜ್ಞಾನ ಮತ್ತು ಗಣಿಗಾರಿಕೆಯಂತಹ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.

 

DAKSHINA KANNADA

ಮಂಗಳೂರು-ಸಿಂಗಾಪುರ ನೇರ ವಿಮಾನ ಯಾನ; ಬಹುಕಾಲದ ಬೇಡಿಕೆ ಈಡೇರಿಕೆ

Published

on

ಮಂಗಳೂರು : ಹೊಸ ವರ್ಷದ ಕೊಡುಗೆ ಎಂಬಂತೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಯಾನ 2025ರ ಜನವರಿ 21 ರಿಂದ ಶುರುವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪೆನಿ ಈ ವಿಮಾನ ಹಾರಾಟ ಆರಂಭಿಸಲು ಮುಂದೆ ಬಂದಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಎಕ್ಸ್ 862 ವಿಮಾನ 5.55 ಕ್ಕೆ ಹೊರಟು 13.25 ಕ್ಕೆ ಸಿಂಗಾಪುರ ತಲಪುತ್ತದೆ. ಮರು ಪ್ರಯಾಣದಲ್ಲಿ ಐಎಕ್ಸ್ 861 ವಿಮಾನ ಸಿಂಗಾಪುರದಿಂದ 14.25 ಕ್ಕೆ ಹೊರಟು 16.55 ಕ್ಕೆ ಮಂಗಳೂರು ತಲಪುವುದು.

2025ರ ಜ.21ರಿಂದ ಸಿಂಗಾಪುರಕ್ಕೆ ವಿಮಾನ :

ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು 2024 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮಂಗಳೂರು ಮತ್ತು ಸಿಂಗಾಪುರ ನೇರ ವಿಮಾನ ಸಂಪರ್ಕ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದ್ದರು. ಫೆ.1 ರಿಂದ ದಿಲ್ಲಿಗೆ ದಿನನಿತ್ಯ ವಿಮಾನ ಸೌಲಭ್ಯಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 1, 2025 ರಿಂದ ಮಂಗಳೂರು ಮತ್ತು ರಾಜಧಾನಿ ದಿಲ್ಲಿ ನಡುವೆ ದೈನಂದಿನ ತಡೆರಹಿತ ವಿಮಾನ ಹಾರಾಟ ಸೌಲಭ್ಯವನ್ನು ಆರಂಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Continue Reading

Ancient Mangaluru

ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಭೀಕರ ಅಪ*ಘಾತ !

Published

on

ಪುತ್ತೂರು: ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ನಡೆದಿದೆ.

 

ಕಾರಿನಲ್ಲಿದ್ದವರಿಗೆ ಗಂ*ಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಗೊಂಡವರನ್ನು ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಎಸ್ಎಂ ಕೃಷ್ಣಗೆ ‘ಕರ್ನಾಟಕ ರತ್ನ’ ನೀಡುವಂತೆ ಮನವಿ ಮಾಡಿದ ವಿಪಕ್ಷ ನಾಯಕ

ಕಾರಿನಲ್ಲಿದ್ದವರು ಉಡುಪಿ ಮೂಲದವರೆಂದು ಮಾಹಿತಿ ತಿಳಿದು ಬಂದಿದೆ. ಕಾರಿನಲ್ಲಿ ಕೆಲ ಪೂಜಾ ಸಾಮಾಗ್ರಿಗಳು ಸೇರಿದಂತೆ ಕುಂಕುಮ ಪ್ರಸಾದಗಳು ಕಂಡುಬಂದಿದೆ.

Continue Reading

DAKSHINA KANNADA

ಉತ್ತಮ ಜನಸ್ಪಂದನೆಯೊಂದಿಗೆ ಮಂಗಳೂರು-ಕಾರ್ಕಳ KSRTC ಸಂಚಾರ ಆರಂಭ

Published

on

ಮಂಗಳೂರು: ಮಂಗಳೂರು ಕಾರ್ಕಳ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಾಯೋಗಿಕ ಸಂಚಾರ ಗುರುವಾರ(ಡಿ.12) ದಿಂದ ಆರಂಭವಾಗಿದೆ.

ಬೆಳಗ್ಗೆ 6-45 ಕ್ಕೆ ಮೊದಲ ಬಸ್ ಹೊರಟಿದ್ದು, ಎರಡನೇ ಬಸ್ 7-15ಕ್ಕೆ ಮಂಗಳೂರಿನಿಂದ ಹೊರಟಿದೆ. ಇದೇ ವೇಳೆ ಕಾರ್ಕಳದಿಂದಲೂ ಎರಡು ಬಸ್ ಮಂಗಳೂರಿಗೆ ಪ್ರಯಾಣ ಆರಂಭಿಸಿದೆ.

 

ಕೆ.ಎಸ್‌.ಆರ್‌.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌, ‘ಮಂಗಳೂರು-ಕಾರ್ಕಳ ಮಧ್ಯೆ 8 ಟ್ರಿಪ್‌ಗಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್‌ಗೆ ಅವಕಾಶ ನೀಡಿದೆ. ಕೇಂದ್ರ ಸರಕಾರದ ಏರಿಯಾ ಸ್ಕೀಂ ನಿಯಮ ಪ್ರಕಾರ ಹಾಗೂ ಚಾಪ್ಟರ್‌ -5ರಂತೆ ಹೊಸ ರೂಟ್‌ಗೆ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ’ ಎಂದು ವಾದ ಮಂಡಿಸಿದರು. ‘ಮುಂದಿನ ದಿನಗಳಲ್ಲಿ ಅಗತ್ಯ ಇರುವ ಇತರ ಪ್ರದೇಶಗಳಲ್ಲಿ ಸರಕಾರಿ ಬಸ್‌ ಸಂಚಾರ ಆರಂಭಿಸಲು ಸರಕಾರ ವನ್ನು ಕೇಳಿಕೊಂಡಿದ್ದೇವೆ’ ಎಂದು ಸದಸ್ಯ ಐವನ್‌ ಡಿ’ ಸೋಜಾ ತಿಳಿಸಿದರು.

ಇದನ್ನೂ ಓದಿ : ಮಂಗಳೂರು-ಕಾರ್ಕಳ ಕೆ.ಎಸ್‌.ಆರ್‌.ಟಿ.ಸಿ ಪ್ರಾಯೋಗಿಕ ಸಂಚಾರಕ್ಕೆ ನಾಳೆ ಚಾಲನೆ !!

 

ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ನಂತೂರು, ಗುರುಪುರ, ಕೈಕಂಬ, ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಬಸ್ ಸಂಚರಿಸಲಿದೆ. ಈ ಬಸ್ ಗಳಿಗೆ ನಾಲ್ಕು ತಿಂಗಳ ತಾತ್ಕಾಲಿಕ‌ ಪರವಾನಗಿ‌ ಲಭಿಸಿದ್ದು, ಮೊದಲ ದಿನವೇ ಬಸ್ ಗಳಿಗೆ ಉತ್ತಮ ಜನ‌ಸ್ಪಂದನೆ ಲಭಿಸಿದೆ.

Continue Reading

LATEST NEWS

Trending

Exit mobile version