Connect with us

    DAKSHINA KANNADA

    ಮoಗಳೂರು: KMC ಮಕ್ಕಳ ಸಮಗ್ರ ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ಪ್ರಗತಿ ರಿಷಬ್ ಶೆಟ್ಟಿ

    Published

    on

    ಮoಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ಸೆಲೆಬ್ರೆಟಿ ರಿಷಬ್‌ ಶೆಟ್ಟಿ ಪತ್ನಿ ಹಾಗೂ ಕಾಸ್ಟ್ಯೂಮ್‌ ಡಿಸೈನರ್‌ ಪ್ರಗತಿ ರಿಷಬ್ ಶೆಟ್ಟಿ ಅವರು ಕೆಎಂಸಿ ಹಾಸ್ಪಿಟಲ್ ಆರಂಭಿಸಿರುವ ಅತ್ಯಾಧುನಿಕ ಮಕ್ಕಳ ಸಮಗ್ರ ಆರೈಕೆ ಕೇಂದ್ರ(Comprehensive Centre for Pediatric Care )ವನ್ನು ಉದ್ಘಾಟಿಸಿದರು.

    ನವಜಾತ ಶಿಶು ಆರೈಕೆ, ಲಸಿಕೆಗಳು ಮತ್ತು ಉನ್ನತ ಬಹುವಿಭಾಗೀಯ ಚಿಕಿತ್ಸೆಗಳು ಹಾಗೂ ಮಕ್ಕಳ ತುರ್ತು ಸ್ಥಿತಿಗಳು ಸೇರಿದಂತೆ ವಿಸ್ತಾರವಾದ ಶ್ರೇಣಿಯ ಸೇವೆಗಳನ್ನು ಪೂರೈಸುವುದರೊಂದಿಗೆ ಈ ಅತ್ಯಾಧುನಿಕ ಸೌಲಭ್ಯ ಮಂಗಳೂರಿನಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಕ್ಕಳ ಆರೋಗ್ಯ ಸೇವೆಯಲ್ಲಿ ಕ್ರಾಂತಿ ಉಂಟು ಮಾಡುವ ಗುರಿ ಹೊಂದಿದೆ.

    ಕೆಎoಸಿ ಹಾಸ್ಪಿಟಲ್‌ನ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಖಿ ಅವರು ಮಾತನಾಡಿ, ‘ಕೆಎಂಸಿ ಹಾಸ್ಪಿಟಲ್‌ನಲ್ಲಿ ಮಕ್ಕಳ ಸಮಗ್ರ ಆರೈಕೆ ಕೇಂದ್ರವನ್ನು ಮಗುವಿನ ಎಲ್ಲಾ ಆರೋಗ್ಯ ಸೇವಾ ಅಗತ್ಯಗಳನ್ನು ಒಂದೇ ಸೂರಿನಡಿ ಪೂರೈಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

    ಉನ್ನತ ಕೌಶಲ್ಯದ ಮತ್ತು ಸಹಾನುಭೂತಿಯುಳ್ಳ ಆರೋಗ್ಯ ಸೇವಾ ವೃತ್ತಿಪರರ ತಂಡದೊಂದಿಗೆ ಮಕ್ಕಳ ಪ್ರತಿ ಹಂತದ ಬೆಳವಣಿಗೆಯಲ್ಲಿ ಅಸಾಧಾರಣ ಆರೈಕೆಯನ್ನು ಪೂರೈಸುವಲ್ಲಿ ನಾವು ಬದ್ಧರಾಗಿರುತ್ತೇವೆ.

    ನಿಖರ ರೋಗನಿರ್ಣಯ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ತಜ್ಞರ ತಂಡವು ಇತ್ತೀಚಿನ ರೋಗನಿದಾನ ತಂತ್ರಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ಬಳಸುತ್ತದೆ” ಎಂದರು.

    ಮಾಹೆ, ಮಂಗಳೂರು ಕ್ಯಾಂಪಸ್‌ನ ಪ್ರೊ.ವೈಸ್ ಚಾನ್ಸಲರ್ ಡಾ. ದಿಲೀಪ್ ನಾಯಕ್ ಅವರು ಮಾತನಾಡಿ, `ಪೋಷಿಸುವ ಮತ್ತು ಗುಣಪಡಿಸುವಂತಹ ವಾತಾವರಣವನ್ನು ಸೃಷ್ಟಿಸುವುದು ಈ ಮಕ್ಕಳ ಸಮಗ್ರ ಆರೈಕೆ ಕೇಂದ್ರದ ಗುರಿಯಾಗಿದೆ. ಇಲ್ಲಿ ಮಕ್ಕಳು ತಮ್ಮ ಆರೋಗ್ಯದ ಎಲ್ಲಾ ವಿಷಯಗಳಲ್ಲಿ ಅತ್ಯುನ್ನತ ಗುಣಮಟ್ಟದ ಆರೈಕೆ ಪಡೆಯುವರು.

    ಮಕ್ಕಳ ದೈಹಿಕ, ಭಾವನಾತ್ಮಕ ಮತ್ತು ಬೆಳವಣಿಗೆಯ ಯೋಗಕ್ಷೇಮ ಸೇರಿದಂತೆ ಸಂಪೂರ್ಣ ಮತ್ತು ಬಹು ಆಯಾಮದ ಆರೈಕೆಯನ್ನು ಮಕ್ಕಳಿಗೆ ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ’’ ಎಂದರು.

    ಕೆಎoಸಿ ಮಂಗಳೂರಿನ ಡೀನ್ ಡಾ. ಉನ್ನಿಕೃಷ್ಣನ್ ಮಾತನಾಡಿ, `ಪ್ರಸ್ತುತ ಪೀಳಿಗೆಯ ಮಕ್ಕಳ ವೈವಿಧ್ಯಪೂರ್ಣ ಆರೋಗ್ಯ ಸೇವಾ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಕೆಎಂಸಿ ಹಾಸ್ಪಿಟಲ್‌ನ ಮಕ್ಕಳ ಸಮಗ್ರ ಆರೈಕೆ ಕೇಂದ್ರವು ಪ್ರತ್ಯೇಕವಾದ ಉಪವಿಭಾಗೀಯ ಸೇವೆಗಳನ್ನು ಒಳಗೊಂಡಿರುತ್ತದೆ.

    ಇವುಗಳಲ್ಲಿ ಅಲರ್ಜಿ ಮತ್ತು ಆಸ್ತಮಾ ಕ್ಲಿನಿಕ್, ಮಕ್ಕಳ ಮತ್ತು ಹದಿಹರೆಯದವರಿಗೆ ಸಮಾಲೋಚನೆ, ಮಕ್ಕಳ ಮೂತ್ರಪಿಂಡ ರೋಗಶಾಸ್ತ್ರ ಮತ್ತು ಮೂತ್ರ ರೋಗಶಾಸ್ತ್ರ, ಮಕ್ಕಳ ನಿರ್ನಾಳ ಗ್ರಂಥಿ ಶಾಸ್ತ್ರ, ಮಕ್ಕಳ ನೇತ್ರ ವಿಜ್ಞಾನ ಶಾಸ್ತ್ರ, ಮಕ್ಕಳ ಕ್ಯಾನ್ಸರ್ ಆರೈಕೆ, ಮಕ್ಕಳ ತುರ್ತು ಚಿಕಿತ್ಸೆ ಮತ್ತು ಮಕ್ಕಳ ತೀವ್ರ ನಿಗಾ ಘಟಕ ಮುಂತಾದ ಸೇವೆಗಳು ಸೇರಿವೆ.

    ವಿಶೇಷ ತಜ್ಞರ ತಂಡ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮಕ್ಕಳ ಆರೋಗ್ಯ ಸೇವೆಯಲ್ಲಿ ನೂತನ ಹೆಗ್ಗುರುತುಗಳನ್ನು ನಾವು ಸಾಧಿಸುವ ವಿಶ್ವಾಸ ಹೊಂದಿದ್ದೇವೆ’’ ಎಂದರು.

     

    ಮುಖ್ಯ ಅತಿಥಿ ಪ್ರಗತಿ ರಿಷಬ್ ಶೆಟ್ಟಿ ಅವರು ಮಾತನಾಡಿ,`ಮಂಗಳೂರಿನಲ್ಲಿ ತನ್ನ ರೀತಿಯ ಮೊದಲ ಸಮಗ್ರ ಮಕ್ಕಳ ಆರೈಕೆ ಕೇಂದ್ರವನ್ನು ಉದ್ಘಾಟಿಸುವುದು ಒಂದು ಅದ್ಭುತವಾದ ಅನುಭವವಾಗಿದೆ. ತಾಯಿಯರ ದಿನದ ಅಂಗವಾಗಿ ಮತ್ತು ಸ್ವತಃ ಒಬ್ಬ ತಾಯಿಯಾಗಿ ಮಕ್ಕಳಿಗೆ ಸಂಪೂರ್ಣ ಆರೋಗ್ಯ ಸೇವಾ ಸೌಲಭ್ಯ ಲಭ್ಯವಿರುವುದು ನನಗೆ ಹರ್ಷದ ವಿಷಯವಾಗಿದೆ.

    ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿನ ಕೆಎಂಸಿ ಹಾಸ್ಪಿಟಲ್‌ನಲ್ಲಿ ಒಂದೇ ಸೂರಿನಡಿ ಈ ಎಲ್ಲಾ ವೈದ್ಯಕೀಯ ಅಗತ್ಯಗಳನ್ನು ಪೂರೈಸಲಾಗುವುದು. ಚಿಕಿತ್ಸೆಯ ಸಂದರ್ಭದಲ್ಲಿ ಮಕ್ಕಳ ಮನಸ್ಸನ್ನು ಉಲ್ಲಾಸದಿಂದ ಇಡುವುದಕ್ಕಾಗಿ ಮತ್ತು ಸಂಪೂರ್ಣ ವೈದ್ಯಕೀಯ ಪ್ರಕ್ರಿಯೆಯನ್ನು ಹೆಚ್ಚು ಅನುಕೂಲಕರ ಮತ್ತು ಸುಲಭವಾಗಿಸುವುದಕ್ಕಾಗಿ ನವೀನ ಕ್ರಮದ ರೂಪದಲ್ಲಿ ಸಂವಾದಯುತ ಆಟದ ಪ್ರದೇಶವನ್ನು ಇಲ್ಲಿ ಅಳವಡಿಸಲಾಗಿದ್ದು, ಇದಕ್ಕೆ ಬಹಳಷ್ಟು ಪ್ರಶಂಸೆ ಲಭಿಸಿದೆ’’ ಎಂದರು.

    DAKSHINA KANNADA

    ಕರಾವಳಿ ಉತ್ಸವ: ಕದ್ರಿ ಪಾರ್ಕಿನಲ್ಲಿ ರೋಮಾಂಚಕಾರಿಯಾದ ಚಿಟ್ಟೆ ಪ್ರದರ್ಶನ

    Published

    on

    ಮಂಗಳೂರು : ಕೆಲವು ವರ್ಷಗಳ ಬಳಿಕ ಈ ಬಾರಿ ಮತ್ತೆ ಆರಂಭಗೊಂಡಿರುವ ಕರಾವಳಿ ಉತ್ಸವ ಎರಡೇ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದಕ್ಕೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆಯನ್ನು ಕೂಡಾ ಮಾಡಿದ್ದು, ಈ ಬಾರಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಸಂಘಟಿಸಿರುವುದಕ್ಕೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.

    ಡಿಸೆಂಬರ್ 21ರಿಂದ ಆರಂಭಗೊಂಡಿರುವ ಕರಾವಳಿ ಉತ್ಸವದ ಆಕರ್ಷಕ ಮೆರವಣಿಗೆ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡಿವೆ. ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಡಿ.೨೧ರಿಂದ ಜನವರಿ ೧೯ರವರೆಗೆ ನಡೆಯಲಿದೆ. ಪ್ರತೀ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಝಲಕ್ ಇರಲಿದೆ. ಕರಾವಳಿ ಕರ್ನಾಟಕದ ಕಲೆ, ಕರಕುಶಲ ಮತ್ತು ಖಾದ್ಯಗಳ ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯಗಳ ಜೊತೆಗೆ ಮನೋರಂಜನೆಯ ಭರಪೂರವಿದೆ. ಇದಲ್ಲದೇ ಡಿ.29ರವರೆಗೆ ಮೇರಿಹಿಲ್ ಹೆಲಿಪ್ಯಾಡಿನಲ್ಲಿ ಹೆಲಿಕಾಫ್ಟರ್ ರೈಡ್ ಆರಂಭಿಸಲಾಗಿದ್ದು, ಇದಕ್ಕೂ ಬಹಳಷ್ಟು ಜನ ಆಗಮಿಸುತ್ತಿದ್ದಾರೆ. ಡಿ.22ರಿಂದ ಜ.19ರವರೆ ಕದ್ರಿ ಪಾರ್ಕಿನಲ್ಲಿ ರೋಬೋಟಿಕ್ ಚಿಟ್ಟೆ ಪ್ರದರ್ಶನವಿದ್ದು, ಈ ಪ್ರದರ್ಶನವನ್ನು ವೀಕ್ಷಣೇ ಮಾಡಲು ಬಹಳಷ್ಟು ಜನ ಆಗಮಿಸುತ್ತಿದ್ದಾರೆ.

    ಶನಿವಾರ ಮತ್ತು ಭಾನುವಾರ ಭಾರೀ ಸಂಖ್ಯೆಯಲ್ಲಿ ಜನಜಂಗುಳಿ ಕಂಡು ಬಂದಿದ್ದು, ಈ ಪ್ರದರ್ಶನ ಸಂಜೆ 4 ರಿಂದ ರಾತ್ರಿ 9 ರವರೆಗೆ ಮಾತ್ರ ಇರಲಿದೆ. ಅಲ್ಲದೆ ಇಂದು ವಸ್ತುಪ್ರದರ್ಶನ ವೇದಿಕೆಯಲ್ಲಿ ನೃತ್ಯರೂಪಕವಿರಲಿದೆ. ನೃತ್ಯೋಪಾಸನ ಕಲಾ ಅಕಾಡೆಮಿ ಪುತ್ತೂರು ಇವರಿಂದ ಕಾರ್ಯಕ್ರಮವಿದೆ. ನಾಳೆ ಸಂಜೆ ದೇವದಾಸ್ ಕಾಪಿಕಾಡ್‌ ನಿದೇಆರ್ಶನದ ತುಳುಹಾಸ್ಯ ನಾಟಕ ಎರ್ಲಾ ಗ್ಯಾರಂಟಿ ಅತ್ತ್‌ ಎನ್ನುವ ನಾಟಕ ವಸ್ತು ಪ್ರದರ್ಶನ ವೇದಿಕೆಯಲ್ಲಿ ಪ್ರದರ್ಶಿಸಲ್ಪಡಲಿದೆ.

     

    Continue Reading

    bangalore

    ಕ್ರಿಸ್ಮಸ್ ಸ್ಪೆಷಲ್ ಆಫರ್; ಮಂಗಳೂರು – ಬೆಂಗಳೂರು ವಿಶೇಷ ರೈಲು ಸಂಚಾರ

    Published

    on

    ಮಂಗಳೂರು : ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬೆಂಗಳುರು – ಮಂಗಳೂರು ನಡುವೆ ಡಿಸೆಂಬರ್ 23 ಹಾಗೂ 27 ರಂದು ವಿಶೇಷ ರೈಲು ಸಂಚರಿಸಲಿದೆ.  ಮತ್ತೆ ಪುನಃ ಅದೇ ರೈಲು (06506) ಡಿಸೆಂಬರ್ 24 ಮತ್ತು 28 ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಧ್ಯಾಹ್ನ 1:00 ಗಂಟೆಗೆ ಹೊರಟು, ಅದೇ ದಿನ ರಾತ್ರಿ 10.30 ಕ್ಕೆ ಯಶವಂತಪುರ ತಲುಪಲಿದೆ.

    ಕೆಲಸದ ನಿಮಿತ್ತ ಮಂಗಳೂರಿನ ಹಲವು ಜನ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇದೀಗ ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದ್ದು, ಊರಿಗೆ ಮರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಅವರಿಗೆಲ್ಲಾ ಅನುಕೂಲವಾಗಲೆಂದು ಈ ವಿಶೇಷ ರೈಲು ಸಂಚಾರವನ್ನು ಅಳವಡಿಸಿದ್ದು, ಹಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದರ ಫಲಾನುಭವಿಗಳಾಗಲಿದ್ದಾರೆ.

    ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಪ್ರಯಾಣಿಕರು ಅಧಿಕೃತ (www.enquiry.indianrail.gov.in) ವೆಬ್​​ಸೈಟ್​ಗೆ ಭೇಟಿ ನೀಡಿ. NTES ಅಪ್ಲಿಕೇಶನ್​​ ಬಿಳಸಿ ಅಥವಾ 139 ನಂಬರಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ವಡೆದುಕೊಳ್ಳಬಹುದು.

    Continue Reading

    DAKSHINA KANNADA

    ಮೂಲ್ಕಿ: ವಿವಿಧ ರಂಗಗಳ ಸಾಧಕರಿಗೆ ‘ಅರಸು ಕಂಬಳ’ ಪ್ರಶಸ್ತಿ ಪ್ರದಾನ

    Published

    on

    ಮೂಲ್ಕಿ: ಮೂಲ್ಕಿ ಅರಸು ಕಂಬಳ ಸಂದರ್ಭ ಮೂಲ್ಕಿ ಸೀಮೆ ವ್ಯಾಪ್ತಿಯ ವಿವಿಧ ರಂಗಗಳ 14 ಮಂದಿ ಸಾಧಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಅರಮನೆಯ ಧರ್ಮ ಚಾವಡಿಯಲ್ಲಿ ಅರಸು ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ಡಿ. 22ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಅರಸರಾದ ದುಗ್ಗಣ್ಣ ಸಾವಂತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಮೂಲ್ಕಿ ಅರಮನೆ ಟ್ರಸ್ಟ್ ಮತ್ತು ಹಳೆಯಂಗಡಿಯ ಪ್ರಿಯ ದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಸಹಭಾಗಿತ್ವದಲ್ಲಿ ಕಾಠ್ಯಕ್ರಮ ನಡೆ. ಯಲಿದೆ. ಶ್ರೀ ಅರುಣಾನಂದ ತೀರ್ಥ ಸ್ವಾಮೀ ಜಿ (ಸಾಧನಾ ಪ್ರಶಸ್ತಿ) ದಿ। ಎಚ್. ನಾರಾಯಣ ಸನಿಲ್ (ಮರಣೋತ್ತರ-ಸಮಾಜ ಸೇವೆ ಮತ್ತು ಶಿಕ್ಷಣ, ಸಹಕಾರಿ) ದಿ। ಎನ್. ಬಾಬು ಶೆಟ್ಟಿ (ಮರಣೋತ್ತರ-ಸಮಾಜ ಸೇವೆ), ಮೀರಾ ಬಾಯಿ ಕೆ. (ಶಿಕ್ಷಣ), ಎಚ್. ಶಕುಂತಳಾ ಭಟ್ (ಸಾಹಿತ್ಯ) ವಾಲ್ಟರ್ ಡಿ’ಸೋಜಾ (ಕೃಷಿ ಮತ್ತು ಪರಿಸರ), ಡಾ। ಹಸನ್ ಮುಬಾರಕ್ (ವೈದ್ಯಕೀಯ), ಸೀತಾರಾಮ್ ಕುಮಾರ್ ಕಟೀಲು (ಯಕ್ಷಗಾನ), ಪರಮಾನಂದ ಸಾಲ್ಯಾನ್ (ಸಾಹಿತ್ಯ), ಶಿವ ಸಂಜೀವಿನಿ ಸುರಗಿರಿ (ಸಂಘ ಸಂಸ್ಥೆ), ಮಾಧವ ಶೆಟ್ಟಿಗಾರ್ ಮತ್ತು ಚಂದ್ರಕುಮಾರ್ (ಸಾಮಾಜಿಕ ಕ್ಷೇತ್ರ) ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು (ಸಂಘಸಂಸ್ಥೆ) ವಿನಾಯಕಯಕ್ಷಗಾನ ಫೌಂಡೇಶನ್ ಕೆರೆಕಾಡು (ಯಕ್ಷಗಾನ ತಂಡ) ಇವರಿಗೆ ಪ್ರಶಸ್ತಿ ನೀಡಲಾಗುವುದು.

    ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆಳದಂಗಡಿ ಅರಮನೆಯ ತಿಮ್ಮಣ್ಣ ಅರಸರಾದ ಡಾ। ಪದ್ಮಪ್ರಸಾದ್ ಅಜಿಲರು, ದ.ಕ. ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ಪಿ. ಮುಂತಾದವರು ಉಪಸ್ಥಿತರಿರುವರು ಎಂದರು. ಅರಮನೆಟ್ರಸ್ಟ್‌ನ ಗೌತಮ್ ಜೈನ್, ಪ್ರಿಯದರ್ಶಿನಿ ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾಡ್ ಹಾಗೂ ಸಿಇಒ ಸುದರ್ಶನ್ ಉಪಸ್ಥಿತರಿದ್ದರು.

    Continue Reading

    LATEST NEWS

    Trending