Saturday, August 20, 2022

ಸಂಪಾಜೆಯಲ್ಲಿ ಮನೆ ದರೋಡೆ ಪ್ರಕರಣ: ನಾಲ್ಕು ಅಂತರ್‌ರಾಜ್ಯ ಕಳ್ಳರ ಬಂಧನ

ಸುಳ್ಯ: ಸಂಪಾಜೆಯಲ್ಲಿ ಜ್ಯೋತಿಷಿ ಚಟ್ಟೆಕಲ್ಲು ಅಂಬರೀಶ್ ಎಂಬವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ಠಾಣೆಯ ಪೊಲೀಸರು ನಾಲ್ವರು ಬೇರೆ ರಾಜ್ಯದ ಕಳ್ಳರನ್ನು ಬಂಧಿಸಿದ್ದಾರೆ.


ತಮಿಳುನಾಡಿನ ಕೊಯಮತ್ತೂರಿನ ಅಣ್ಣೂರು ಕಾರ್ತಿಕ್ (38), ತಮಿಳುನಾಡಿನ ಧರ್ಮಾಪುರಿಯ ಬಿ. ನರಸಿಂಹನ್ (40), ಹಾಸನದ ಚಿಕ್ಕಬುವನಹಳ್ಳಿಯ ಮಧುಕುಮಾರ್ (33), ಹಾಸನದ ವಿದ್ಯಾನಗರದ ದೀಕ್ಷಿತ್ ಕೆ.ಎನ್ (26) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 1ಲಕ್ಷ 20 ಸಾವಿರ ರೂಪಾಯಿ ನಗದು, ಮೊಬೈಲ್, ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

 

LEAVE A REPLY

Please enter your comment!
Please enter your name here

Hot Topics