Connect with us

    LATEST NEWS

    ಎರಡೂ ತರಗತಿಗೂ ಒಂದೇ ಪದ್ಯ: ವಿವಾದದ ಮಧ್ಯೆ ಪಠ್ಯಪುಸಕ್ತ ಪರಿಷ್ಕರಣಾ ಸಮಿತಿಯ ಎಡವಟ್ಟು

    Published

    on

    ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸಕ್ತ ಪರಿಷ್ಕರಣಾ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಮಧ್ಯೆ ಪಠ್ಯಪುಸ್ತಕ ಪರಿಶೀಲನಾ ಸಮಿತಿಯಿಂದ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. 3 ಮತ್ತು 4ನೇ ತರಗತಿ ಪುಸ್ತಕಗಳಲ್ಲಿ ಒಂದೇ ಪದ್ಯವನ್ನು ಸೇರ್ಪಡೆಗೊಳಿಸಿದ್ದು, ಇದು ಶಿಕ್ಷಕರಿಗೆ ಗೊಂದಲಕ್ಕೆ ಸಿಲುಕಿಸಿದೆ.


    ಬಿ.ಎಂ ಶರ್ಮಾರವರು ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನು 3 ಮತ್ತು 4ನೇ ತರಗತಿ ಪುಸ್ತಕಗಳಲ್ಲಿ ಸೇರಿಸಿ ಸಮಿತಿ ಎಡವಟ್ಟು ಮಾಡಿದೆ.
    ಬಾವಿಯಲ್ಲಿ ಚಂದ್ರ ಶೀರ್ಷಿಕೆಯ ಪದ್ಯವನ್ನು ಹಿಂದಿನ ಸಮಿತಿಯು 3ನೇ ತರಗತಿ ನಲಿ-ಕಲಿ ಕನ್ನಡ ಪಠ್ಯದಲ್ಲಿ ಸೇರಿಸಿತ್ತು.

    ರೋಹಿತ್ ಚಕ್ರತೀರ್ಥ ಸಮಿತಿಯು 3ನೇ ತರಗತಿಯ ನಲಿಕಲಿ ಕನ್ನಡ ಪಠ್ಯದಲ್ಲಿ ಮುಂದುವರೆಸಿದೆ. ಅಲ್ಲದೆ 4ನೇ ತರಗತಿಯ ಸವಿ ಕನ್ನಡ ಪುಸ್ತಕದಲ್ಲಿಯೂ ಇದೇ ಪದ್ಯ ಸೇರಿಸಲಾಗಿದ್ದು, ಈ ಮಧ್ಯೆ ಪರಿಷ್ಕರಣಾ ಸಮಿತಿ ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.

    ಸಮಿತಿ ವಿಸರ್ಜನೆ
    ಬೆಂಗಳೂರು: ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕಾರ್ಯ ಮುಗಿದಿರುವ ಹಿನ್ನೆಲೆಯಲ್ಲಿ ಆ ಸಮಿತಿಯನ್ನು ವಿಸರ್ಜಿಸಲಾಗಿದೆ.

    ಇದೇ ವೇಳೆ, ಹಳೇ ಪಠ್ಯಪುಸ್ತಕಗಳನ್ನು ಮುದ್ರಣ ಮಾಡಿ ನೀಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಆದೇಶವನ್ನು ಕೂಡಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.


    ವಿವಾದದ ಅಲೆಯನ್ನೇ ಎಬ್ಬಿಸಿದ್ದ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ನೀಡಿ ವರದಿ ಸಲ್ಲಿಸಿದರು.
    ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿನ ಕೆಲವು ಲೋಪದೋಷಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ಸರಕಾರ, ಪರಿಷ್ಕೃತ ಪಠ್ಯದಲ್ಲೂ ಪರಿಷ್ಕರಣೆಗೆ ಸಹಮತ ವ್ಯಕ್ತಪಡಿಸಿದೆ. ಜತೆಗೆ, ರೋಹಿತ್‌ ಚಕ್ರತೀರ್ಥ ನೇತೃತ್ವದ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದೆ.

    ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ “ಪಂಡಿತಾರಾಧ್ಯ ಸ್ವಾಮೀಜಿಗಳು ಹಾಗೂ ನಾಡಿನ ಇತರೆ ಸ್ವಾಮೀಜಿಗಳು ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ.

    ಆದರೆ, ಬರಗೂರು ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಹಾಗೂ ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯವಾದ ಅಂಶಗಳಿವೆ.

    ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಕ್ಕೆ ಸಂಬಂಧಿಸಿ ಯಾರ ಭಾವನೆಗೂ ಧಕ್ಕೆಯಾಗದಂತೆ ಪರಿಷ್ಕರಿಸಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.
    ಅದೇ ರೀತಿ ಕುವೆಂಪು ಅವರ ಬಗ್ಗೆ ಅವಹೇಳನ ಮಾಡುವ ರೀತಿಯ ಅಂಶಗಳು ಪಠ್ಯಪುಸ್ತಕದಲ್ಲಿಲ್ಲ.

    ಆದರೂ, ಸಾಮಾಜಿಕ ಜಾಲತಾಣಗಳಲ್ಲಿ ನಾಡಗೀತೆಯ ಮೂಲ ಕವನ ತಿದ್ದಿ ಪೋಸ್ಟ್‌ ಮಾಡಿದ ವ್ಯಕ್ತಿಗಳ ಬಗ್ಗೆ ಕಾನೂನಾತ್ಮಕ ತನಿಖೆಯ ಕ್ರಮವನ್ನು ಸರಕಾರ ತೆಗೆದುಕೊಳ್ಳಲಿದೆ’ ಎಂಬ ಭರವಸೆಯನ್ನು ನೀಡಿದ್ದಾರೆ.

    ‘ಬರಗೂರು ಸಮಿತಿಯಲ್ಲಿ ಕುವೆಂಪು ಬಗ್ಗೆ 7 ಪಠ್ಯಗಳಿದ್ದವು. ಇದನ್ನು ಪರಿಷ್ಕರಣಾ ಸಮಿತಿ 10ಕ್ಕೆ ಹೆಚ್ಚಿಸಿದೆ. ಇನ್ನು ನಾಡಪ್ರಭು ಕೆಂಪೇಗೌಡರ ಕುರಿತಾದ ಪಾಠವನ್ನು ಹೊಸದಾಗಿ ಸೇರ್ಪಡೆ ಮಾಡಿದೆ.

    ಈ ಹಿಂದಿನ ಪಠ್ಯಪುಸ್ತಕಗಳಲ್ಲಿ ಪರಿಚಯಿಸಲಾಗಿದ್ದ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಜತೆಗೆ ಹಿಂದೂ ಧರ್ಮದ ವಿಷಯವನ್ನೂ ಸೇರ್ಪಡೆ ಮಾಡಿ ಪರಿಚಯಿಸಲಾಗಿದೆ’ ಎಂದು ತಿಳಿಸಿದ್ದಾರೆ.

    ಪರಿಷ್ಕರಣೆ ಸಂಬಂಧಿಸಿದಂತೆ ಬಂದಿರುವ ಆರೋಪ ಮತ್ತು ಆಕ್ಷೇಪಣೆಗಳಿಗೆ ಸ್ಪಷ್ಟೀಕರಣಗಳನ್ನು ಒಳಗೊಂಡ ಟಿಪ್ಪಣಿ ಲಗತ್ತಿಸಿದೆ.

    ಹಲವಾರು ಅಂಶಗಳಿಗೆ ವಾಸ್ತವ ಅಂಶಗಳಿಂದ ಸ್ಪಷ್ಟೀಕರಣವನ್ನು ಕೊಡಲಾಗಿದೆ. ಪ್ರಸ್ತುತ ಆಕ್ಷೇಪ ಮಾಡಿರುವಂತೆ ಮಹಾನ್‌ ವ್ಯಕ್ತಿಗಳ ಯಾವುದೇ ಪಾಠವನ್ನು ಕೈಬಿಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..!

    Published

    on

    ಮಂಗಳೂರು:ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ಡಿ.26 ರ ರಾತ್ರಿ  ವಿಧಿವಶರಾಗಿದ್ದಾರೆ. ರಾತ್ರಿ 8 ಗಂಟೆಗೆ ಏಮ್ಸ್ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್ ಅವರು ರಾತ್ರಿ 9.30 ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. 2004 ರಿಂದ 2014 ರ ವರೆಗೆ ಎರಡು ಅವಧಿಗೆ ದೇಶದ ಮೊದಲ ಸಿಕ್ ಪ್ರಧಾನಿಯಾಗಿದ್ದರು. ನೆಹರು ಇಂದಿರಾ ಗಾಂಧಿ ಮತ್ತು ಮೋದಿ ಬಳಿಕ ಹೆಚ್ಚು ಕಾಲ ದೇಶದ ಪ್ರಧಾನಿಯಾಗಿದ್ದ ಹೆಗ್ಗಳಿಕೆ ಇವರದು.

    1932 ರ ಸೆಪ್ಟಂಬರ್ 26 ರಲ್ಲಿ ಪಶ್ಚಿಮ ಪಂಜಾಬ್ ನಲ್ಲಿ ಜನಿಸಿದ್ದ ಮನಮೋಹನ್ ಸಿಂಗ್
    ಅಮೃತಸರ ಹಿಂದೂ ಕಾಲೇಜಿನಲ್ಲಿ ಅದ್ಯಯನ ಮಾಡಿದ್ದು ಉನ್ನತ ವ್ಯಾಸಂಗವನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಟ್ರೈಪೋಸ್ ಪೂರ್ಣ ಮಾಡಿದ್ದರು.

    ಖ್ಯಾತ ಅರ್ಥ ಶಾಸ್ತ್ರಜ್ಞರಾಗಿ, ಶಿಕ್ಷಣ ತಜ್ಞರಾಗಿ ಮನಮೋಹನ್ ಸಿಂಗ್ ಆರ್ಥಿಕ ಕ್ರಾಂತಿಯನ್ನು ದೇಶದಲ್ಲಿ ಮಾಡಿದ್ದರು. ದೇಶದ ಪ್ರಧಾನಿಯಾಗುವ ಮೊದಲು ಹಲವು ದೇಶಗಳ ಆರ್ಥಿಕ ಸಲಹೆಗಾರರಾಗಿ ಆ ದೇಶಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ್ದರು.
    ಮಿತಭಾಷಿಯಾಗಿದ್ದ ಅವರು ತಮ್ಮ ಕೆಲಸದ ಮೂಲಕವೇ ಎಲ್ಲದಕ್ಕೂ ಉತ್ತರ ನೀಡುತ್ತಿದ್ದರು.

    ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ದೇಶದ ಜಿಡಿಪಿ ಶೇಖಡಾ9 ರಲ್ಲಿ ಇದ್ದು ಅಭಿವೃದ್ಧಿಶೀಲ ದೇಶಗಳ ಸಾಲಿನಲ್ಲಿ ದೇಶವನ್ನು ಗುರುತಿಸುವಂತೆ ಮಾಡಿದ್ದರು.

    ಮಾಜಿ ಪ್ರಧಾನಿ ಅಗಲುವಿಕೆಯ ಸುದ್ದಿ ಕೇಳಿ ಸೋನಿಯಾ ಗಾಂಧಿ ಆದಿಯಾಗಿ ಕಾಂಗ್ರೆಸ್ ನಾಯಕರ ದಂಡು ಏಮ್ಸ್ ಆಸ್ಪತ್ರೆಗೆ ದಾವಿಸಿದ್ದಾರೆ. ಅಗಲಿದ ನಾಯಕನಿಗೆ ಪ್ರಧಾನಿ ಮೋದಿ ಸಹಿತ ಪ್ರಮುಖ ನಾಯಕರು ಶೃದ್ದಾಂಜಲಿ ಸಲ್ಲಿಸಿದ್ದಾರೆ.

    Continue Reading

    LATEST NEWS

    ಸಕಲ ಗೌರವಗಳೊಂದಿಗೆ ಹುತಾತ್ಮ ಯೋಧ ಅನೂಪ್ ಅಂತ್ಯಕ್ರಿಯೆ

    Published

    on

    ಕುಂದಾಪುರ : ಪೂಂಚ್‌ನಲ್ಲಿ ನಡೆದ ಅಪಘಾ*ತದಲ್ಲಿ ಹುತಾ*ತ್ಮರಾದ ಕುಂದಾಪುರದ ಬೀಜಾಡಿಯ ಯೋಧ ಅನೂಪ್ ಪೂಜಾರಿ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

     

    ಯೋಧ ಅನೂಪ್ ಪೂಜಾರಿ ಅವರ ಅಂತ್ಯ ಸಂಸ್ಕಾರ ಬೀಜಾಡಿಯ ಕಡಲ ತೀರದಲ್ಲಿ ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು.  ಮೂರು ಸುತ್ತು ಕುಶಾಲ ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಲಾಯಿತು.

    ಇದನ್ನೂ ಓದಿ : ಮಗನ ಆ ಒಂದು ನಿರ್ಧಾರದಿಂದ ಸಾ*ವಿಗೆ ಶರಣಾದ ಹೆತ್ತವರು!

    ಮೆರವಣಿಗೆಯ ಮೂಲಕ ಪಾರ್ಥೀವ ಶರೀರವನ್ನು ಬೀಜಾಡಿಯ ಅನೂಪ್ ನಿವಾಸಕ್ಕೆ ತರಲಾಯಿತು. ಅಲ್ಲಿ ಅಂತಿಮ ವಿಧಿ ವಿಧಾನ ನಡೆದು ಬೀಜಾಡಿ ಪಡುಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು. ನೂರಾರು ಮಂದಿ ಆಗಮಿಸಿ ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದರು.  ಬಳಿಕ ಅಂತ್ಯಕ್ರಿಯೆ ನಡೆಯಿತು.

    ಚಿತೆಗೆ ಸಹೋದರ ಶಿವರಾಂ ಅಗ್ನಿಸ್ಪರ್ಶ ಮಾಡಿದ್ದು, ಸಾವಿರಾರು ಜನರು ಯೋಧನ ಅಂತಿಮ ವಿದಾಯಕ್ಕೆ ಸಾಕ್ಷಿಯಾಗಿದ್ದರು. 13 ವರ್ಷಗಳಿಗೂ ಅಧಿಕ ಕಾಲ ದೇಶ ಸೇವೆ ಮಾಡಿದ್ದ ಯೋಧ ಅಕಾಲಿಕವಾಗಿ ಅಗಲಿದ್ದು, ಇಡೀ ಜಿಲ್ಲೆಯೆ ಶೋಕ ಸಾಗರದಲ್ಲಿ ಮುಳುಗಿದೆ.

    Continue Reading

    LATEST NEWS

    ಕರಾವಳಿ ಉತ್ಸವದ ಪ್ರಯುಕ್ತ ಡಿಸೆಂಬರ್ 28 ಮತ್ತು 29 ರಂದು ಬೀಚ್ ಉತ್ಸವ

    Published

    on

    ಮಂಗಳೂರು: ಕರಾವಳಿ ಉತ್ಸವದ ಹಿನ್ನಲೆಯಲ್ಲಿ ಡಿಸೆಂಬರ್ 28 ಮತ್ತು 29 ರಂದು ತಣ್ಣೀರು ಬಾವಿ ಬೀಚ್‌ನಲ್ಲಿ ಬೀಚ್ ಉತ್ಸವ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ಜನರಿಗೆ ಬರಪೂರ ಮನರಂಜನೆ ನೀಡಲಿರುವ ಈ ಬೀಚ್ ಉತ್ಸವದಲ್ಲಿ ಖ್ಯಾತ ಹಿನ್ನೆಲೆ ಗಾಯಕರ ಸಮಾಗಮವಾಗಲಿದೆ.

    ಈ ಬೀಚ್ ಉತ್ಸವದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದು, ಕಾರ್ಯಕ್ರಮಗಳ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿರುವ ಮಣಿಕಾಂತ್ ಕದ್ರಿ ಹಾಗೂ ತನ್ನದೇ ಶೈಲಿಯ ಸಂಗೀತದ ಮೂಲಕ ಜಗತ್ಪ್ರಸಿದ್ದಿ ಪಡೆದುಕೊಂಡಿರುವ ಗಾಯಕ ರಘು ದೀಕ್ಷೀತ್ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ.

    ಇದರ ಜೊತೆಗೆ ಬೀಚ್ ಉತ್ಸವದಲ್ಲಿ ಡ್ಯಾನ್ಸ್ ಫೆಸ್ಟಿವಲ್ , ವಾಟರ್ ಸ್ಪೋರ್ಟ್ಸ್‌, ಸ್ಯಾಂಡ್ ಆರ್ಟ್‌ , ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವೀಕೆಂಡ್ ಎಂಜಾಯ್ ಮಾಡಲು ಇದೊಂದು ಸದಾವಕಾಶವಾಗಿದ್ದು, ಕರಾವಳಿ ಉತ್ಸವ ಸಂಭ್ರಮಕ್ಕೆ ಈ ಎರಡು ದಿನಗಳ ಬೀಚ್‌ನಲ್ಲಿ ಜನರಿಗೆ ಸಾಕಷ್ಟು ಮನರಂಜನೆ ಸಿಗಲಿದೆ. ವಾಹನ ನಿಲುಗಡೆಗೂ ಪೊಲೀಸ್ ಇಲಾಖೆಯಿಂದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಲ್ತಾನ್ ಬತ್ತೇರಿಯಿಂದ ಬೋಟ್ ಮೂಲಕ ತೆರಳುವವರಿಗೂ ಹೆಚ್ಚಿನ ವ್ಯವಸ್ಥೆಯನ್ನ ಮಾಡಲಾಗಿದೆ.

    ಮಂಗಳೂರಿನ ಖ್ಯಾತ ಬಿಲ್ಡರ್ ರೋಹನೊ ಕಾರ್ಪೋರೇಷನ್ ಈ ಬೀಚ್ ಫೆಸ್ಟಿವಲ್‌ಗೆ ಟೈಟಲ್ ಸ್ಪಾನ್ಸರ್ ಆಗಿ ಸಹಕರಿಸಿದ್ದು, ಬೀಚ್ ಫೆಸ್ಟಿವಲ್ ಸಮಿತಿಯ ಅದ್ಯಕ್ಷತೆಯನ್ನು ನಗರ ಪೊಲೀಸ್ ಆಯುಕ್ತರು ವಹಿಸಿಕೊಂಡಿದ್ದಾರೆ.

    Continue Reading

    LATEST NEWS

    Trending