Connect with us

    BANTWAL

    ದಿ. ಜಯರಾಮ್ ಆಚಾರ್ಯ ನುಡಿ ನಮನ; ಗಣ್ಯರ ಸಂತಾಪ

    Published

    on

    ಮಂಗಳೂರು: ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಜಯರಾಮ್ ಆಚಾರ್ಯ ಅವರಿಗೆ ಶೃದ್ಧಾಂಜಲಿ ಹಾಗೂ ನುಡಿ ನಮನ ಸಲ್ಲಿಸಲಾಗಿದೆ. ಉರ್ವಾ ಸ್ಟೋರ್ಸ್‌ನ ತುಳು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಜಯರಾಮ್ ಆಚಾರ್ಯ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಯಕ್ಷಗಾನದ ಹಾಸ್ಯ ಕಲಾವಿದನಾಗಿ ಯಕ್ಷಗಾನ ಕ್ಷೇತ್ರಕ್ಕೆ ಜಯರಾಮ್‌ ಆಚಾರ್ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ ಜಯರಾಮ್ ಆಚಾರ್ಯ ಎಂದೆಂದಿಗೂ ನೆನಪಿಡುವಂತ ವ್ಯಕ್ತಿತ್ವ. ಅವರು ಯಕ್ಷಗಾನದಲ್ಲಿ ಸಲ್ಲಿಸಿದ ಸೇವೆ ಮುಂದಿನ ಪೀಳಿಗೆಗೂ ಆದರ್ಶವಾಗಿದೆ. ಅವರ ಅಗಲುವಿಕೆ ಕೇವಲ ಯಕ್ಷರಂಗಕ್ಕೆ ಮಾತ್ರವಲ್ಲದೆ ಇಡೀ ಕಲಾರಂಗಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

    ರಂಗಭೂಮಿ ಕಲಾವಿದ ನಟ ಅರವಿಂದ ಬೋಳಾರ್ ಅವರು ಮಾತನಾಡಿ, ಜಯರಾಮ್ ಆಚಾರ್ಯ ಅವರೊಬ್ಬ ಅಪ್ಪಟ ಹಾಸ್ಯ ಕಲಾವಿದ. ಅವರು ಹಾಸ್ಯದಲ್ಲಿ ಎಂದಿಗೂ ಕೆಟ್ಟ ಪದ ಬಳಸಿದ ಉದಾಹರಣೆಯೇ ಇಲ್ಲ. ಅವರು ನಾಟಕದಲ್ಲಿ ಚಿತ್ರರಂಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಅವರೊಂದು ಎಷ್ಟು ದೊಡ್ಡ ಕಲಾವಿದ ಎಂದು ಅವರಿಗೇ ಗೊತ್ತಿರಲಿಲ್ಲ. ಹೀಗಾಗಿ ಅವರು ಎಲ್ಲರೊಂದಿಗೂ ಸಹಜವಾಗಿಯೇ ಬೆರೆಯುತ್ತಿದ್ದು, ಸಲಹೆಗಳನ್ನು ನೀಡುತ್ತಿದ್ದರು. ಅಂತಹ ವ್ಯಕ್ತಿ ಇಂದು ನಮ್ಮೊಂದಿಗಿಲ್ಲವಾದ್ರೂ ಅವರ ಮಾರ್ಗದರ್ಶನ ನಮ್ಮಲ್ಲಿ ಯಾವತ್ತೂ ಇದೆ ಎಂದು ಬಂಟ್ವಾಳ ಜಯರಾಮ್‌ ಆಚಾರ್ಯ ಅವರನ್ನು ನೆನಪಿಸಿಕೊಂಡರು.

    ಯಕ್ಷಗಾನ ಕಲಾವಿದ ಶಿಕ್ಷಕ ಬಾಸ್ಕರ್‌ ರೈ ಕುಕ್ಕುವಳ್ಳಿ ಜಯಾರಾಮ್ ಆಚಾರ್ಯ ಅವರ ಒಡನಾಟದ ದಿನವನ್ನು ಸ್ಮರಿಸಿಕೊಂಡು ಅವರ ಅಗಲುವಿಕೆಗೆ ಸಂತಾಪ ಸೂಚಿಸಿದ್ರು. ಜಯಾರಾಮ್ ಆಚಾರ್ಯ ಅವರ ಭಾಷಾ ಶುದ್ಧಿ ಹಾಗೂ ಅವರ ಹಾಸ್ಯ ಯಕ್ಷಗಾನ ಪ್ರಸಂಗಗಳನ್ನು ವಿಜ್ರಂಭಿಸುವಂತೆ ಮಾಡುತ್ತಿತ್ತು. ಒಬ್ಬ ಹಾಸ್ಯಗಾರನಾಗಿ ತನ್ನ ಎದುರಿಗಿದ್ದ ಪಾತ್ರಧಾರಿಯನ್ನು ಮೇಲೆತ್ತುವ ಕೆಲಸ ಅವರಿಂದ ಆಗುತ್ತಿತ್ತು. ಅಷ್ಟೊಂದು ಪ್ರಭಾವಶಾಲಿಯಾಗಿ ಹಾಸ್ಯಗಾರನ ಪಾತ್ರಕ್ಕೆ ಜಯಾರಾಮ್ ಆಚಾರ್ಯ ಅವರು ಜೀವ ತುಂಬುತ್ತಿದ್ದರು ಎಂದು ಸ್ಮರಿಸಿದ್ರು.

    ದಿವಂಗತ ಜಯರಾಮ್ ಆಚಾರ್ಯ ಅವರ ಅಗಲುವಿಕೆಗೆ ಸಂತಾಪ ಸೂಚಿಸಿದ ಹಲವು ಗಣ್ಯರು, ಯಕ್ಷರಂಗಕ್ಕೆ ಅವರು ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದಾರೆ. ಅಗಲಿದ ಜಯರಾಮ್ ಆಚಾರ್ಯ ಅವರನ್ನು ಯಕ್ಷರಂಗ ಎಂದಿಗೂ ಮರೆಯಲಾರದು ಎಂದು ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಧ್ರುವ ಪಟ್ಲ ಫೌಂಡೇಶನ್‌, ತುಳು ನಾಟಕ ಕಲಾವಿದರ ಒಕ್ಕೂಟದಿಂದ ಈ ಶೃದ್ಧಾಂಜಲಿ ನುಡಿನಮನ ಕಾರ್ಯಕ್ರಮ ನಡೆದಿದ್ದು ಹಲವು ಗಣ್ಯರು ಹಾಗೂ ಸದಸ್ಯರು ತಮ್ಮ ನುಡಿನಮನ ಸಲ್ಲಸಿದ್ದಾರೆ.

    BANTWAL

    ಬಂಟ್ವಾಳ: ಕೆ.ಎಸ್. ಆರ್.ಟಿ.ಬಸ್ ನಿರ್ವಾಹಕನ ಮೇಲೆ ಪ್ರಯಾಣಿಕನಿಂದ ಹಲ್ಲೆ

    Published

    on

    ಬಂಟ್ವಾಳ: ಸರಕಾರಿ ಬಸ್ ನ ನಿರ್ವಾಹಕನಿಗೆ ಅಪರಿಚಿತ ಪ್ರಯಾಣಿಕನೊರ್ವ ಹಲ್ಲೆ ನಡೆಸಿದ್ದಾನೆ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಕೆ.ಎಸ್. ಆರ್.ಟಿ.ಬಸ್ ನಿರ್ವಾಹಕ ದೇವಾನಂದ ಎಂಬವರಿಗೆ ಫರಂಗಿಪೇಟೆಯಲ್ಲಿ ಅಪರಿಚಿತ ಪ್ರಯಾಣಿಕ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.ಪುತ್ತೂರಿನಿಂದ ಮಂಗಳೂರಿನ ಕಡೆಗೆ ಹೋಗುವ ವೇಳೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಬಸ್ ಗೆ ಹತ್ತಿದ ಅಪರಿಚಿತ ಪ್ರಯಾಣಿಕನೋರ್ವ ನಿರ್ವಾಹಕನಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಬಳಿಕ ಹಲ್ಲೆ ‌ನಡೆಸಿದ್ದಾನೆ.

    ಬಸ್ಸ್ ನಿಲ್ಲಿಸದೆ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಆತ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಬಗ್ಗೆ ಯೂ ದೂರಿನಲ್ಲಿ ಉಲ್ಲೇಖವಾಗಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    BANTWAL

    ಕಡಬ: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ-ಸಂಕಷ್ಟದಲ್ಲಿ ಜಾತ್ರಾ ಅಂಗಡಿಯವರು

    Published

    on

    ಕಡಬ: ಡಿ 5 ರಂದು ಸಂಜೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಸುರಿದಿದ್ದು ಷಷ್ಠಿ ಮಹೋತ್ಸವಕ್ಕೆ ಬಂದ ಅಂಗಡಿಯವರು ಸಂಕಷ್ಟಕ್ಕೆ ಬಿದ್ದಿದ್ದಾರೆ.

    ಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಅಂಗಡಿಯವರು ಬಾಡಿಗೆ ನೆಲೆಯಲ್ಲಿ ಸ್ಥಳ ಪಡೆದಿದ್ದಾರೆ. ಇಂದು ಸುಮಾರು ಎರಡು ಗಂಟೆಗಳ ಕಾಲ ಮಳೆ ಬಂದ ಕಾರಣ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. ಕೆಲ ಅಂಗಡಿಗಳಲ್ಲಿ ನೀರು ನಿಂತಿದೆ.

    ಸೆಟ್ ಮಾಡಿದ ಆಟಿಕೆಗಳನ್ನು ಮತ್ತೆ ಮುಚ್ಚಿ ಇಡಬೇಕಾದ ಪರಿಸ್ಥಿತಿ ಬಂದಿದೆ. ಕೆಲ ವಸ್ತುಗಳು ನೀರಿನಲ್ಲಿ ಒದ್ದೆಯಾಗಿರುವುದಾಗಿ ವರದಿಯಾಗಿದೆ. ಒಟ್ಟಿನಲ್ಲಿ ಸಣ್ಣ ಪುಟ್ಟ ಅಂಗಡಿಗಳು ಸಂಕಷ್ಟಕ್ಕೆ ಬಿದ್ದಿವೆ. ಅಂಗಡಿ ಸುತ್ತ, ಅಥವಾ ಅಂಗಡಿಯ ಅಡಿ ಭಾಗಕ್ಜೆ ಸಣ್ಣ ಜಲ್ಲಿ ಸುರಿದಾದರು ತಾತ್ಕಾಲಿಕ ವ್ಯವಸ್ಥೆಮಾಡಿಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಸುಳ್ಯದಲ್ಲಿಯೂ ಗುರುವಾರ ರಾತ್ರಿ ಭಾರೀ ಮಳೆ ಸುರಿದಿದ್ದು ರಥಬೀದಿ ರಸ್ತೆ ಕೆಸರುಮಯವಾಗಿದೆ.

    Continue Reading

    BANTWAL

    ಬಂಟ್ವಾಳ: ಕೆಎಸ್.ಆರ್.ಟಿಸಿ ಬಸ್ಸು, ಬೈಕ್‌ ನಡುವೆ ಡಿಕ್ಕಿ- ಸವಾರ ಸಾ*ವು

    Published

    on

    ಬಂಟ್ವಾಳ: ಬಿ.ಸಿ.ರೊಡು- ಪುಂಜಾಲಕಟ್ಟೆ ಹೆದ್ದಾರಿಯ ವಗ್ಗ ಸಮೀಪದ ಬಾಂಬಿಲದಲ್ಲಿ ಕೆಎಸ್.ಆರ್.ಟಿಸಿ ಬಸ್ಸು ಹಾಗೂ ಬೈಕ್ ಢಿಕ್ಕಿಯಾಗಿ ಸವಾರ ಮೃ*ತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

    ಬೆಳ್ತಂಗಡಿ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ರಾಜೇಂದ್ರ ಪೂಜಾರಿ (45) ಮೃ*ತಪಟ್ಟವರು. ಅವರು ಬಿ.ಸಿ.ರೋಡಿನಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಬಸ್ಸು ಬೆಳ್ತಂಗಡಿ ಭಾಗದಿಂದ ಮಂಗಳೂರಿಗೆ ತೆರಳುತ್ತಿತ್ತು.

    ಬಸ್ಸು- ಬೈಕ್ ಢಿಕ್ಕಿ ಹೊಡೆದುಕೊಂಡ ಜಾಗದ ಅನತಿ ದೂರದಲ್ಲಿ ಬುಧವಾರ ಸಂಜೆ ಕಾರು ಹಾಗೂ ಆಟೋ ರಿಕ್ಷಾ ಢಿಕ್ಕಿ ಹೊಡೆದು ಮಹಿಳೆ ಮೃ*ತಪಟ್ಟು, ಇತರ ಪ್ರಯಾಣಿಕರು ಗಾಯಗೊಂಡಿದ್ದರು. ಮೃ*ತ ರಾಜೇಂದ್ರ ಅವರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending