Wednesday, September 30, 2020

17ರ ವಯಸ್ಸಿನ ಮಾಡೆಲ್ ಗೆ ಬೆತ್ತಲಾಗಲು ಹೇಳಿದ ಖ್ಯಾತ ನಿರ್ಮಾಪಕ ಸಾಜಿದ್ ಖಾನ್

ಮುಡಿಪು ಅಕ್ರಮ ಮಣ್ಣು ಗಣಿಗಾರಿಕೆ ಪ್ರದೇಶಕ್ಕೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ

ಮಂಗಳೂರು : ಅಕ್ರಮ ಮಣ್ಣು ಗಣಿಗಾರಿಕೆ ಪ್ರದೇಶಕ್ಕೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ ನಡೆಸಿ 28 ಲಾರಿ , 6 ಜೆಸಿಬಿ ಹಾಗೂ ಮೂರು ಹಿಟಾಚಿಯನ್ನು ವಶಕ್ಕೆ ತೆಗೆದುಕೊಂಡಿದೆ. ಸಹಾಯಕ ಆಯುಕ್ತ ಮದನ್...

ಕೌಡೂರಿನಲ್ಲಿ ನಾಗರಿಕರೊಂದಿಗೆ ಶಾಸಕ ಡಾ.ಭರತ್ ಶೆಟ್ಟಿ ಸಮಾಲೋಚನೆ, ಮೂಲಹಕ್ಕುಪತ್ರ ನೀಡಲು ಶೀಘ್ರ ಕ್ರಮ

ಮಂಗಳೂರು: ಹಕ್ಕುಪತ್ರ ಸಿಗದೆ ಭಾರಿ ಸಮಸ್ಯೆಯ ಉಂಟಾಗಿರುವ ಕಂದಾವರ ಗ್ರಾಮ ಪಂಚಾಯತ್ ಕೌಡೂರು ಪ್ರದೇಶಕ್ಕೆ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಸ್ಥಳೀಯ...

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ವಿರೋಧಿಸಿ ಎಸ್ ಡಿಪಿಐ ಪ್ರತಿಭಟನೆ

ಮಂಗಳೂರು : ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಆರೋಪಿಗಳಿಗೆ ಖುಲಾಸೆಗೊಳಿಸಿ ಕ್ಲೀನ್ ಚಿಟ್ ನೀಡಿರುವ ಲಕ್ನೋ ಸಿಬಿಐ ಕೋರ್ಟಿನ ತೀರ್ಪನ್ನು ಖಂಡಿಸಿ ಎಸ್ ಡಿಪಿಐ ದಕ್ಷಿಣಕನ್ನಡ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಾಬರಿ...

ಸತ್ಯಮೇವ ಜಯತೆ ಎಂಬ ಮಾತು ನಿಜವಾಗಿದೆ – ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಎಲ್ಲಾ ನಾಯಕರುಗಳನ್ನು ದೋಷಮುಕ್ತ ಗೊಳಿಸಿದ ತೀರ್ಪನ್ನು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ. ಸಿಪಿಐ...

ಬೆಳ್ಳಾರೆ ಬಾಲಕಿ ಸ್ನಾನ ಮಾಡುವ ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಣ

ಪುತ್ತೂರು: ಸ್ನಾನದ ಕೊಠಡಿಯಲ್ಲಿ ಸ್ನಾನ ಮಾಡುತ್ತಿದ್ದ ಅಪ್ರಾಪ್ತ ಬಾಲಕಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‌‌ನಲ್ಲಿ ಸೆರೆ ಹಿಡಿದಿದ್ದ ಯುವಕನ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಸುಳ್ಯ ಕಲ್ಮಡ್ಕ ಗ್ರಾಮದ ನಿವಾಸಿ ಶ್ಯಾಮ್...

ಮುಂಬೈ: ಕಳೆದ ವರ್ಷ ಇಡೀ ವಿಶ್ವದ ಚಿತ್ರರಂಗವನ್ನು ಅಲ್ಲಾಡಿಸಿದ್ದ ಮಿ.ಟೂ ಚಳುವಳಿ ಈಗ ಮತ್ತೆ ಹುಟ್ಟಿಕೊಂಡಿದೆ. ಕಳೆದ ವರ್ಷ ಚಿತ್ರರಂಗದಲ್ಲಿ ಮೀಟೂ ಅಭಿಯಾನ ನಡೆಯುತ್ತಿದ್ದ ಸಂದರ್ಭದಲ್ಲಿ ಅನೇಕ ನಟಿಯರು ಚಿತ್ರರಂಗದಲ್ಲಿ ತಾವು ಅನುಭವಿಸಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೆ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಮಾಡೆಲ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮೂವರು ಆ ಸಂದರ್ಭದಲ್ಲಿ ಆರೋಪಿಸಿದ್ದರು. ಈಗ ಮಾಡೆಲ್ ಒಬ್ಬರು ಮತ್ತೆ ಸಾಜಿದ್ ಖಾನ್ ನ ಲೈಂಗಿಕ ದೌರ್ಜನ್ಯ ವಿರುದ್ದ ಧ್ವನಿ ಎತ್ತಿದ್ದಾರೆ.


ಮುಂಬೈ ಮಾಡೆಲ್ ಪೌಲಾ ತನಗೆ 17ನೇ ವಯಸ್ಸಿನಲ್ಲಿದ್ದಾಗಲೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ನಟಿ ಪೌಲಾ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಸಾಜಿದ್ ಖಾನ್ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ.
“ಮೀಟೂ ಅಭಿಯಾನ ಶುರುವಾದ ಸಂದರ್ಭದಲ್ಲಿ ಸಾಜಿದ್ ಖಾನ್ ಮೇಲೆ ಅನೇಕರು ಮಾತನಾಡಿದ್ದರು. ಆದರೆ ನಾನು ಆಗ ಸಾಜಿದ್ ಖಾನ್ ವಿರುದ್ಧ ಮಾತನಾಡಲು ಧೈರ್ಯ ಮಾಡಲಿಲ್ಲ. ಯಾಕೆಂದರೆ ಚಿತ್ರರಂಗದಲ್ಲಿ ಗಾಡ್ ಫಾದರ್ ಇಲ್ಲದ ನಾನು ಕುಟುಂಬಕ್ಕಾಗಿ ಸಂಪಾದನೆ ಮಾಡುತ್ತಿದ್ದೆ. ಆದ್ದರಿಂದ ಮಾತನಾಡದೆ ಸುಮ್ಮನಿದ್ದೆ” ಎಂದು ಬರೆದುಕೊಂಡಿದ್ದಾರೆ.


“ಈಗ ನನ್ನೊಂದಿಗೆ ನನ್ನ ಪೋಷಕರು ಇಲ್ಲ. ನನಗಾಗಿ ಸಂಪಾದಿಸುತ್ತಿದ್ದೇನೆ. ಆದ್ದರಿಂದ ಈಗ ನಾನು 17ನೇ ವಯಸ್ಸಿನಲ್ಲಿ ಸಾಜಿದ್ ಖಾನ್‍ನಿಂದ ಕಿರುಕುಳಕ್ಕೊಳಗಾಗಿದ್ದೇನೆ ಎಂದು ಹೇಳಲು ನನಗೆ ಧೈರ್ಯವಿದೆ ಎಂದರು. ಅಷ್ಟೇ ಅಲ್ಲದೇ, ಅವರು ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದರು. ನನ್ನನ್ನು ಮುಟ್ಟಲು ಪ್ರಯತ್ನಿಸಿದರು. ಅವರ ಮುಂಬರುವ ‘ಹೌಸ್‍ಫುಲ್’ ಸಿನಿಮಾದಲ್ಲಿ ಅವಕಾಶ ಬೇಕು ಎಂದರೆ ನನ್ನ ಮುಂದೆ ಬೆತ್ತಲಾಗುವಂತೆ ಹೇಳಿದರು” ಎಂದು ಹೌಸ್‍ಫುಲ್ ಚಿತ್ರದ ವೇಳೆ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.


ಇದೇ ರೀತಿ ಎಷ್ಟು ಹುಡುಗಿಯರೊಂದಿಗೆ ಮಾಡಿದ್ದಾರೆಂದು ದೇವರಿಗೆ ತಿಳಿದಿದೆ. ನಾನು ಈಗ ಹೇಳುತ್ತಿರುವುದು ನನ್ನ ಮೇಲೆ ಕರುಣೆ ತೋರಲಿ ಅಂತಲ್ಲ. ನಾನು ಬಾಲ್ಯದಲ್ಲಿದ್ದಾಗ ಈ ಘಟನೆ ನನ್ನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ಈ ಬಗ್ಗೆ ಮಾತನಾಡಲು ನಿರ್ಧರಿಸಿದ್ದೇನೆ. ಇವರು ಕನಸುಗಳನ್ನು ನುಚ್ಚುನೂರು ಮಾಡುತ್ತಾರೆ. ಹೀಗಾಗಿ ಇಂತಹವರನ್ನು ಜೈಲಿಗೆ ಕಳುಹಿಸಬೇಕು. ಆದರೆ ನಾನು ಸುಮ್ಮನಿರಲ್ಲ. ಇದರ ಬಗ್ಗೆ ಮಾತನಾಡದೆ ಇರುವುದು ತಪ್ಪು ಎಂದು ಮಾಡೆಲ್ ಪೌಲಾ ಸುದೀರ್ಘವಾಗಿ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.