ಪುತ್ತೂರು: ರಸ್ತೆಗಳು ಗ್ರಾಮಗಳ ಜೀವನಾಡಿ. ಸಮರ್ಪಕ ರಸ್ತೆಗಳಿಲ್ಲದಿದ್ದರೆ ಸಮಸ್ಯೆಗಳು ಆನೇಕ ರಸ್ತೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡವನ್ನೂರಿನ ನಿವಾಸಿಗಳು ಪುತ್ತೂರು ಮಿನಿ ವಿಧಾನ ಸೌಧದ ಮುಂದೆ ಇಂದು ಮೌನ ಪ್ರತಿಭಟನೆ ನಡೆಸಿದರು.
ಪಡವನ್ನೂರು ಗ್ರಾಮದ ಅಂಬಡೆಮೂಲೆಯ ಐದು ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಬಳಸುತ್ತಿದ್ದ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೋರ್ವರು ಜೆಸಿಬಿ ಬಳಸಿ ಅಗೆದು ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.
ರಸ್ತೆ ಸಂಪರ್ಕವನ್ನು ಸರಿಪಡಿಸುವಂತೆ ಸ್ಥಳೀಯ ಬಡಗನ್ನೂರು ಗ್ರಾಮಪಂಚಾಯತ್ ಗೆ ಹಲವು ಬಾರಿ ಮನವಿ ಮಾಡಿದರೂ, ಪಂಚಾಯತ್ ಸ್ಪಂದಿಸದ ಹಿನ್ನಲೆಯಲ್ಲಿ ತಹಶೀಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ನಿವಾಸಿಗಳು, ರಸ್ತೆ ಇಲ್ಲದ ಕಾರಣ ಆನಾರೋಗ್ಯಕ್ಕೀಡಾದವರನ್ನು ಆಸ್ಪತ್ರೆಗೂ ಸಾಗಿಸಲಾಗದ ಸ್ಥಿತಿ ನಿರ್ಮಾಣಗೊಂಡಿದೆ.
ರಸ್ತೆಯನ್ನು ಅಗೆದ ಪರಿಣಾಮ ನೀರಿನ ಸಂಪರ್ಕವೂ ಕಡಿತಗೊಂಡಿದ್ದು,ನೀರಿಲ್ಲದೆ ಬದುಕುವ ಪರಿಸ್ಥಿತಿಯಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಶ್ರೀ ಕಟೀಲು ಮೇಳದಲ್ಲಿ ನಿರಂತರ 35 ವರ್ಷಗಳಿಂದ ಕಲಾ ಸೇವೆ ಗೈಯುತ್ತಿರುವ ಬಣ್ಣದ ವೇಷಧಾರಿ ಶ್ರೀ ನಗ್ರಿ ಮಹಾಬಲ ರೈ ಅವರಿಗೆ ಕದ್ರಿ ಯಕ್ಷ ಬಳಗವು ಪ್ರತಿಷ್ಠಿತ “ಕದ್ರಿ ವಿಷ್ಣು ಪ್ರಶಸ್ತಿ -2024” ನೀಡಿ ಗೌರವಿಸಿತು. ಕದ್ರಿ ಯಕ್ಷ ಬಳಗ ವು ಶ್ರೀ ಕಟೀಲು ಮೇಳದ ಸೇವೆ ಆಟ ದ ಸಂದರ್ಭದಲ್ಲಿ ಕಳೆದ ಒoಭತ್ತು ವರ್ಷ ಗಳಿಂದ ನಿರಂತರ ವಾಗಿ ಕದ್ರಿ ವಿಷ್ಣು ಪ್ರಶಸ್ತಿ ನೀಡುತ್ತಿದೆ.
ಕದ್ರಿ ವಿಷ್ಣು ಸಂಸ್ಮರಣೆ
ಇಚ್ಲಂಪಾಡಿ, ಕೂಡ್ಲು,ಕೊರಕೋಡು, ಅಡೂರು, ಕುಂಡಾವು, ಕದ್ರಿ, ಧರ್ಮಸ್ಥಳ, ಕಟೀಲು ಮೇಳಗಳಲ್ಲಿ ತೆಂಕು ತಿಟ್ಟಿನ ರಾಜಕಿರೀಟ ವೇಷದಲ್ಲಿ ಅಪೂರ್ವ ಸಾಧನೆ ಗೈದಿದ್ದ, ಅರ್ಜುನ, ಋತುಪರ್ಣ, ಇಂದ್ರಜಿತು, ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ಮೆರದಿದ್ದ ಮೇರು ಕಲಾವಿದ ಕದ್ರಿ ವಿಷ್ಣು ಸಂಸ್ಮರಣೆಯು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಭಾಗಿತ್ವದಲ್ಲಿ, ಸದಸ್ಯ ಮೋಹನ್ ಕೊಪ್ಪಳ ಕದ್ರಿ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಅವರು “ಸುಬ್ರಮಣ್ಯ, ಧರ್ಮಸ್ಥಳ ಹಾಗೂ ಕಟೀಲು ಮೇಳಗಳಲ್ಲಿ ಒಟ್ಟು ಐದುವರೆ ದಶಕಗಳಿಂದ ತೆಂಕುತಿಟ್ಟಿನ ಪರಂಪರೆಯ ಬಣ್ಣದ ವೇಷಧಾರಿಯಾಗಿ ಯಕ್ಷ ಕಲಾಯಾನವನ್ನು ಮುನ್ನಡೆಸುತ್ತಿರುವ ನಗ್ರಿ ಮಹಾಬಲ ರೈ ಅವರು ಕಟೀಲು ಮೇಳದಲ್ಲಿ ನಿರಂತರ 34 ತಿರುಗಾಟವನ್ನು ಪೂರೈಸಿದ್ದಾರೆ. ಶ್ರೀ ದೇವಿ ಮಹಾತ್ಮೆಯ ಮಹಿಷಾಸುರ ಪಾತ್ರ ನಿರ್ವಹಣೆ ಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದಾರೆ ” ಎಂದು ಅಭಿನಂದಿಸಿದರು.
ಶಿವಪ್ರಸಾದ್ ಪ್ರಭು ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಕದ್ರಿ ವಿಷ್ಣು ಸಂಸ್ಮರಣೆ ಮಾಡಿದರು. ಪ್ರದೀಪ್ ಆಳ್ವ ಕದ್ರಿ ಸನ್ಮಾನ ಪತ್ರ ವಾಚಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ಸಂಯೋಜಿಸಿದರು.
ಮಂಗಳೂರು/ಲಿವರ್‌ಫೂಲ್(ಇಂಗ್ಲೆಂಡ್): ವಿಶ್ವದ ಅತಿ ಹಿರಿಯ ವ್ಯಕ್ತಿ ಇಂಗ್ಲೆಂಡ್‌ನ ಜಾನ್ ಟಿನ್ನಿಸ್ವುಡ್ (112) ಸೋಮವಾರ (ನ.25) ಮೃ*ತಪಟ್ಟಿದ್ದಾರೆ.
ಇಂಗ್ಲೆಂಡ್‌ನ ಲಿವರ್‌ಫೂಲ್‌ನಲ್ಲಿ 1912ರಲ್ಲಿ ಜನಿಸಿದ್ದ ಜಾನ್ ಅವರನ್ನು ಇದೇ ವರ್ಷ ಏಪ್ರಿಲ್‌ನಲ್ಲಿ ‘ವಿಶ್ವದ ಹಿರಿಯ ವ್ಯಕ್ತಿ’ ಎಂದು ಗುರುತಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಘೋಷಿಸಿತ್ತು.‘ವಾಯವ್ಯ ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನಲ್ಲಿರುವ ಕೇರ್ ಹೋಮ್‌ನಲ್ಲಿ ಟಿನ್ನಿಸ್ವುಡ್ ಸೋಮವಾರ ನಿ*ಧನರಾಗಿದ್ದಾರೆ’ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
‘ದೀರ್ಘಾಯುಷ್ಯವನ್ನು ಹೊಂದುವುದು ಅಥವಾ ಕಡಿಮೆ ಕಾಲ ಬದುಕುವುದು ಒಬ್ಬರ ಅದೃಷ್ಟದ ಮೇಲೆ ನಿಂತಿದೆ. ಈ ವಿಚಾರದಲ್ಲಿ ನಮಗೆ ಏನು ಮಾಡಲು ಸಾಧ್ಯವಿಲ್ಲ’ ಎಂದು ಸಂದರ್ಶವೊಂದರಲ್ಲಿ ಜಾನ್ ಹೇಳಿದ್ದರು.ಟೈಟಾನಿಕ್ ಹಡಗು ದುರಂತ ನಡೆದ ವರ್ಷವೇ ಜನಿಸಿದ್ದ ಜಾನ್ ಅವರು ಎರಡು ಮಹಾಯುದ್ಧಗಳು ಮತ್ತು ಕೋವಿಡ್‌ನಂತಹ ಜಾಗತಿಕ ಸಾಂಕ್ರಾಮಿಕ ರೋಗದ ನಡುವೆಯು ಬದುಕುಳಿದು ವಿಶ್ವದ ಹಿರಿಯಜ್ಜ ಎನಿಸಿಕೊಂಡಿದ್ದರು.
Sabarimala Temple: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯ 18 ಮೆಟ್ಟಿಲುಗಳ ಮೇಲೆ ನಿಂತು ಪೊಲೀಸರು ಫೋಟೋಶೂಟ್ ಮಾಡಿಸಿರುವುದು ಇದೀಗ ತೀವ್ರ ವಿವಾದಕ್ಕೀಡಾಗಿದೆ. ಈ ಘಟನೆ ಕುರಿತು ಕೇರಳದ ಎಡಿಜಿಪಿ, ದೇವಸ್ಥಾನದ ವಿಶೇಷ ಅಧಿಕಾರಿ ಬಳಿ ವರದಿ ಕೇಳಿದ್ದಾರೆ.
ದೇವಸ್ಥಾನದಲ್ಲಿ ತಮ್ಮ ಕರ್ತವ್ಯದ ನಂತರ ಮೊದಲ ಬ್ಯಾಚ್‌ನ ಪೊಲೀಸರು 18 ಮೆಟ್ಟಿಲುಗಳ ಮೇಲೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಕ್ತರಿಂದ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ವಿವಾದ ಭುಗಿಲೆದ್ದಿದೆ. ಸರ್ಕಾರಕ್ಕೆ ಭಕ್ತರ ಬಿಸಿ ತಟ್ಟುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ದೇವಸ್ಥಾನದ ಆಡಳಿತ ಮಂಡಳಿಯ ಬಳಿ ವರದಿ ಕೇಳಿದೆ.
ಪೊಲೀಸರ ಫೋಟೋಶೂಟ್ ವಿರುದ್ಧ ವಿಶ್ವ ಹಿಂದು ಪರಿಷತ್ ಹರಿಹಾಯ್ದಿದೆ. ಹದಿನೆಂಟು ಮೆಟ್ಟಿಲನ್ನು ಅಯ್ಯಪ್ಪ ಭಕ್ತರು ಆಶೀರ್ವಾದ ಎಂದು ಪರಿಗಣಿಸುತ್ತಾರೆ. ಒಂದೊಂದು ಮೆಟ್ಟಿಲಿಗೂ ಒಂದೊಂದು ಅರ್ಥವಿದೆ. 18 ಮೆಟ್ಟಿಲನ್ನು ಇಳಿಯುವಾಗಲೂ ಭಕ್ತರು ದೇವರಿಗೆ ಬೆನ್ನು ತೋರುವುದಿಲ್ಲ. ಪತಿತಂಪಾಡಿ ವಿಧಿವಿಧಾನದಲ್ಲಿರುವಾಗಲೂ ಅಯ್ಯಪ್ಪನಿಗೆ ಬೆನ್ನು ತೋರಿಸಿ ಅಯ್ಯಪ್ಪ ಭಕ್ತರು ಫೋಟೋಶೂಟ್ ಮಾಡುವಂತಿಲ್ಲ. ಹೀಗಿರುವಾಗ ಪೊಲೀಸರು ಈ ರೀತಿ ಮಾಡಬಹುದೇ ಎಂದು ವಿಶ್ವ ಹಿಂದು ಪರಿಷತ್ ಕೇರಳ ಘಟಕ ಸ್ಪಷ್ಟಪಡಿಸಿದೆ.
ವಿಶ್ವ ಹಿಂದು ಪರಿಷತ್ ರಾಜ್ಯಾಧ್ಯಕ್ಷ ವಿ.ಜಿ.ತಂಪಿ, ಪ್ರಧಾನ ಕಾರ್ಯದರ್ಶಿ ವಿ.ಆರ್.ರಾಜಶೇಖರನ್ ಮಾತನಾಡಿ, ಪೊಲೀಸ್ ಅಧಿಕಾರಿಗಳಿಗೆ ಬೆಂಬಲ ನೀಡಿದ ಮುಖ್ಯಮಂತ್ರಿಗಳ ಮೊದಲ ಆರೋಪಿಯಾಗಿದ್ದಾರೆ ಎಂದು ಕಿಡಿಕಾರಿದರು. ಈ ಘಟನೆ ಕುರಿತು ವರದಿ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಕೇರಳದ ಎಡಿಜಿಪಿ ಸೂಚನೆ ನೀಡಿದ್ದಾರೆ.