LATEST NEWS
ಸಾಹುಕಾರ್ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ : ಸಿಡಿ ಯುವತಿ ಮನೆಯಲ್ಲಿ 23 ಲಕ್ಷ ಹಣ ಪತ್ತೆ..!
Published
4 years agoon
By
Adminಬೆಂಗಳೂರು: ಸಿಡಿ ಪ್ರಕರಣದಲ್ಲಿ ಕೇಳಿ ಬಂದಿರುವ ಯುವತಿಯ ಮನೆ ಮೇಲೆ ನಿನ್ನೆ ವಿಶೇಷ ತನಿಖಾ ತಂಡ(ಎಸ್‌ಐಟಿ) ದಾಳಿ ನಡೆಸಿದ್ದು ಈ ವೇಳೆ 23 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿಟಿ ಪ್ರಕರಣ ಟ್ವಿಸ್ಟ್ ಪಡೆದಿದೆ.
ಆರ್‌ಟಿ ನಗರದಲ್ಲಿ ನೆಲೆಸಿದ್ದ ಯುವತಿಯ ಮನೆಯ ಮೇಲೆ ನಿನ್ನೆ ದಾಳಿ ನಡೆದಿತ್ತು. ದಾಳಿಯ ವೇಳೆ ಒಟ್ಟು 23 ಲಕ್ಷ ರೂ. ಹಣ ಮತ್ತು ಮಹತ್ವದ ದಾಖಲೆಗಳು ಪತ್ತೆಯಾಗಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಎಸ್‌ಐಟಿ ಕಳೆದ ವಾರವೇ ಯುವತಿಯ ಮನೆಗೆ ನೋಟಿಸ್ ಅಂಟಿಸಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ. ಆದರೆ ವಿಚಾರಣೆ ಗೈರು ಹಾಜರಿಯಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ.
ಸಿಡಿಯಲ್ಲಿ ಇರುವ ಯುವತಿ ಈಗ ಎಲ್ಲಿದ್ದಾಳೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಈಕೆ ಮಾರ್ಚ್ 2ರ ರಾತ್ರಿ 9:30ಕ್ಕೆ ಮನೆಯಿಂದ ಹೊರಕ್ಕೆ ಹೋಗಿದ್ದಳು.
ಮಾರ್ಚ್ 2ರ ಸಂಜೆ ಸ್ಫೋಟಕ ಸಿಡಿ ರಿಲೀಸ್ ಆಗಿತ್ತು. ಸಿಡಿ ರಿಲೀಸ್ ಆಗಿ 4 ಗಂಟೆ ಬಳಿಕ ಸಂತ್ರಸ್ತೆ ಮನೆಯಿಂದ ಹೊರಗಡೆ ಬಂದಿದ್ದಾಳೆ. ಬ್ಯಾಗ್ ಇಟ್ಟುಕೊಂಡು ಮನೆಯಿಂದ ಏಕಾಂಗಿಯಾಗಿ ಹೊರಗೆ ಬಂದ ಯುವತಿ ನಡೆದುಕೊಂಡೇ ಮುಖ್ಯ ರಸ್ತೆಗೆ ತಲುಪಿದ್ದಳು.
ಮನೆಯಿಂದ ಹೊರಬಂದ ಬಳಿಕ ಮೊಬೈಲ್ ಸ್ವಿಚ್‍ಆಫ್ ಮಾಡಿ ಸಿಮ್ ಡಿಆಕ್ಟಿವೇಟ್ ಮಾಡಿದ್ದಾಳೆ. ಮೊಬೈಲ್ ಸ್ವಿಚ್ ಆಫ್ ಮಾಡಿರುವ ವಿಚಾರ ತಾಂತ್ರಿಕ ದಾಖಲೆಗಳಿಂದ ಲಭ್ಯವಾಗಿದೆ.
ಆರಂಭದಲ್ಲಿ ಯುವತಿ ಆರ್‌ಟಿ ನಗರದ ಪಿಜಿಯಲ್ಲಿ ವಾಸವಾಗಿದ್ದಳು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈಗ ಆಕೆ ಪಿಜಿಯಲ್ಲಿ ಇರಲಿಲ್ಲ. ಆರ್‌ಟಿ ನಗರದ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದ ವಿಚಾರ ಲಭ್ಯವಾಗಿತ್ತು.
2018ರಿಂದ ಅವರು ಇಲ್ಲಿ ನೆಲೆಸಿದ್ದರು. ರೂಮಿನಲ್ಲಿ ಆಕೆ ಒಬ್ಬಳೇ ಇದ್ದಳು. ಸೋಮವಾರ ಇಲ್ಲಿಂದ ತೆರಳಿದ್ದಾಳೆ ಎಂದು ತಿಳಿಸಿದ್ದಾರೆ.
International news
ಐಪಿಎಲ್ ಹರಾಜಿನಲ್ಲಿ ಬದಲಾವಣೆ ತಂದ ಬಿಸಿಸಿಐ; ಏನು ಗೊತ್ತಾ!?
Published
8 hours agoon
23/11/2024By
NEWS DESK3ಬೆಂಗಳೂರು/ಮುಂಬೈ: ಐಪಿಎಲ್ ಸೀಸನ್ 18ರ ಮೆಗಾ ಹರಾಜು ಪ್ರಕ್ರಿಯೆ ನಾಳೆಯಿಂದ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿದೆ. ಆದರೆ ಐಪಿಎಲ್ ಹರಾಜಿನ ನಡುವೆ ಬಿಸಿಸಿಐ ಹೊಸ ಟ್ವಿಸ್ಟ್ ಕೊಟ್ಟಿದೆ.
ಈ ಬಾರಿಯ ಮೆಗಾ ಹರಾಜಿನಲ್ಲಿ 577 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. 204 ಸ್ಥಾನಗಳಿಗೆ ನಡೆಯುವ ಈ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಹಾಗೂ ವಿದೇಶಿ ಆಟಗಾರರು ಕೋಟಿ-ಕೋಟಿ ಮೌಲ್ಯದಲ್ಲಿ ವಿವಿಧ ತಂಡಗಳಿಗೆ ಸೇರಿಕೊಳ್ಳಲಿದ್ದಾರೆ. 10 ಫ್ರಾಂಚೈಸಿಗಳು ಮುಂಬರುವ ಐಪಿಎಲ್ ಸೀಸನ್ ಗಾಗಿ ತಮ್ಮ ತಂಡಗಳನ್ನು ರೂಪಿಸಿಕೊಳ್ಳಲಿದೆ. ಆದರೆ ಬಿಸಿಸಿಐ ಮೆಗಾ ಹರಾಜಿನ ಸಮಯವನ್ನು ಸ್ವಲ್ಪ ಬದಲಾಯಿಸಿದೆ.
ಇದನ್ನೂ ಓದಿ :ಜೈಲಲ್ಲಿ ರಜತ್ ಹೊಸ ವರಸೆ.. ಕಂಬಿ ಹಿಂದೆ ಇದ್ದುಕೊಂಡೇ ಎದುರಾಳಿಗಳ ಆಟವಾಡಿಸಿದ ಸ್ಪರ್ಧಿ..!
ಈಗಗಾಲೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಪಂದ್ಯಾಟ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆಯುತ್ತಿದೆ. ಅದೇ ದಿನ ಮೊದಲ ಟೆಸ್ಟ್ ನ ಮೂರನೇ ಮತ್ತು ನಾಲ್ಕನೇ ದಿನದ ಆಟ ನಡೆಯಲಿದೆ. ಟೆಸ್ಷ್ ಪಂದ್ಯವು ಮಧ್ಯಾಹ್ನ 2:50ಕ್ಕೆ ಮುಕ್ತಾಯವಾಗಲಿದೆ. ಒಂದು ವೇಳೆ ಬದಲಾದ ಸಂದರ್ಭದಲ್ಲಿ ಪಂದ್ಯ ಮುಂದುವರಿದರೆ ಮಧ್ಯಾಹ್ನ 3:20ರವರೆಗೂ ನಡೆಯಲಿದೆ. ನಿಗದಿಯಂತೆ ಹರಾಜು ಪ್ರಕ್ರಿಯೆ ನಡೆದರೆ ನೇರ ಪ್ರಸಾರಕ್ಕೆ ತೊಂದರೆಯಾಗಲಿದೆ.
ಪ್ರಸಾರಕರ ಕೋರಿಕೆ ಮೆರೆಗೆ ಬಿಸಿಸಿಐ ಐಪಿಎಲ್ ಹರಾಜಿನ ಸಮಯವನ್ನು ಮಧ್ಯಾಹ್ನ 3ರಿಂದ 3:30ಕ್ಕೆ ಬದಲಾಯಿಸಿದೆ. ಈ ಮೊದಲು ನಿಗಧಿಯಂತೆ 3:30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಬೇಕಿತ್ತು. ಇದರಿಂದ ನಾಳೆಯ ಹರಾಜು ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದೆ.
LATEST NEWS
ಜಾರ್ಖಂಡ್ ನಲ್ಲಿ ಇಂಡಿಯಾಗೆ ಮುನ್ನಡೆ; ಎನ್ ಡಿಎಗೆ ಹಿನ್ನಡೆ
Published
8 hours agoon
23/11/2024By
NEWS DESK3ಮಂಗಳೂರು/ಜಾರ್ಖಂಡ್: ಜಾರ್ಖಂಡ್ ನಲ್ಲಿ ಈಗಾಗಲೇ ಮತಎಣಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಜಾರ್ಖಂಡ್ ನಲ್ಲಿ ಬಿಜೆಪಿ ನೇತೃತ್ವದ ‘ಎನ್ ಡಿಎ’ ಮೈತ್ರಿ ಕೂಟ ಅಧಿಕಾರಕ್ಕೆ ಬರುವುದು ಅನುಮಾನ ಮೂಡಿಸಿದೆ. ಇನ್ನೊಂದು ಕಡೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸುತ್ತಿದೆ.
ನವೆಂಬರ್ 13ರಂದು ಜಾರ್ಖಂಡ್ ನಲ್ಲಿ 43 ಕ್ಷೇತ್ರಗಳ ಮೊದಲ ಹಂತದ ಮತದಾನ ನಡೆದಿತ್ತು. ಎರಡನೇ ಹಂತದ ಮತದಾನ 38 ಕ್ಷೇತ್ರಗಳಿಗೆ ನ.20ರಂದು ನಡೆದಿತ್ತು. ಈಗಾಗಲೇ ಜಾರ್ಖಂಡ್ ನಲ್ಲಿ ಫಲಿತಾಂಶದ ಕಾವು ಜೋರಾಗಿದ್ದು, ಜಾರ್ಖಂಡ್ ನಲ್ಲಿ ಒಟ್ಟು 81 ಸ್ಥಾನಗಳಲ್ಲಿ, ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ 41 ಸ್ಥಾನಗಳಲ್ಲಿ ಜಯ ದಾಖಲಿಸಬೇಕಿದೆ.
ಹೀಗಾಗಿ ಅಧಿಕಾರದ ಕುರ್ಚಿ ಯಾರ ಪಾಲಾಗುತ್ತದೆ ಎಂದು ಕೊನೆವರೆಗೂ ಕುತೂಹಲ ಮೂಡಿಸುವ ಸಾಧ್ಯತೆ ಇದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿರುವ ಸಿಎಂ ಹೇಮಂತ್ ಸೊರೆನ್ ಅವರು ಈ ಬಾರಿ ತಮ್ಮ ಕ್ಷೇತ್ರ ಬದಲಿಸಿದ್ದು, ಹಿಂದಿನ ಚುನಾವಣೆಯಲ್ಲಿ ದುಮ್ಕಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಈ ಬಾರಿ ಬರ್ಹೈತ್ ಕ್ಷೇತ್ರದಿಂದ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಇದನ್ನೂ ಓದಿ :3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
ಇನ್ನೂ ಜಾರ್ಖಂಡ್ ವಿಧಾನಸಭೆಯ ಒಟ್ಟು 81 ಕ್ಷೇತ್ರಗಳ ಪೈಕಿ 68 ಕ್ಷೇತ್ರಗಳಲ್ಲಿ ಬಿಜೆಪಿಯು ಕಣಕ್ಕಿಳಿಸಿದ್ದು, ಉಳಿದವುಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಚುನಾವಾಣೋತ್ತರ ಸಮಿಕ್ಷೆಯ ಪ್ರಕಾರ ಜಾರ್ಖಂಡ್ ನಲ್ಲಿ ಅಧಿಕಾರದ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿತ್ತು. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ 81 ಸದಸ್ಯರ ವಿಧಾನಸಭೆಯಲ್ಲಿ 34 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ ಈಗ ಬಿಜೆಪಿ ನೇತೃತ್ವದ ‘ಎನ್ ಡಿಎ’ ಮೈತ್ರಿಕೂಟ 23 ಸ್ಥಾನಗಳನ್ನು ಪಡೆದು ಹಿನ್ನಡೆ ಅನುಭವಿಸಿದರೆ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿ ಕೂಟ 57 ಸ್ಥಾನಗಳನ್ನು ಪಡೆದು ಮುನ್ನುಗುತ್ತಿದೆ, ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ.
LATEST NEWS
ತಂಗಿಯನ್ನೇ ಹನಿಟ್ರ್ಯಾಪ್‌ಗೆ ಬಳಸಿ 2 ಕೋಟಿ ಲೂಟಿ…ಜಿಮ್ ಮಾಲಕ ಸೇರಿ ಮೂವರು ಅರೆಸ್ಟ್!
Published
9 hours agoon
23/11/2024By
NEWS DESK4ಮಂಗಳೂರು/ಬೆಂಗಳೂರು : ಇತ್ತೀಚೆಗೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಹನಿಟ್ರ್ಯಾಪ್ ಗೆ ಬ*ಲಿಯಾಗಿದ್ದು, 2 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಈ ಘಟನೆ ನಡೆದಿರೋದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ.
ಜಿಮ್ ಮಾಲಕನಿಂದ ಪರಿಚಯವಾದ ಮಹಿಳೆ :
2018ರಲ್ಲಿ ಆರ್.ಟಿ ನಗರದ ಜಿಮ್ ಗೆ ಸಂ*ತ್ರಸ್ತ ವ್ಯಕ್ತಿ ಹೋಗುತ್ತಿದ್ದರು. ಈ ವೇಳೆ ಜಿಮ್ ಮಾಲಕ ಅಜೀಂ ಉದ್ದೀನ್ ನ ಸಹೋದರಿ ತಬಸ್ಸುಮ್ ಬೇಗಂ(38) ಎಂಬ ಮಹಿಳೆಯ ಪರಿಚಯವಾಗಿತ್ತು. ಮದುವೆಯಾಗಿ ಮಕ್ಕಳನ್ನು ಹೊಂದಿದ್ದ ಹಿನ್ನೆಲೆ ಸಂತ್ರಸ್ತ ಆಕೆಯೊಂದಿಗೆ ಸಂಬಂಧ ಬೆಳೆಸಲು ಹಿಂದೇಟು ಹಾಕಿದ್ದರು. ತಬಸ್ಸುಮ್ ಬೇಗಂ ಮಾತ್ರ ವ್ಯಕ್ತಿಯನ್ನು ಬಿಡಲು ಸಿದ್ಧಳಿರಲಿಲ್ಲ. ಅವಳ ಹಠಕ್ಕೆ ಮಣಿದ ವ್ಯಕ್ತಿ ಸಂಬಂಧ ಬೆಳೆಸಿದ್ದರು.
ಬಳಿಕ ದೈಹಿಕ ಸಂಬಂಧವೂ ಬೆಳೆಯಿತು. ಆಮೇಲೆ ಶುರುವಾಯ್ತು ನೋಡಿ ಕಾಟ. ಖಾಸಗಿ ಫೋಟೋ, ವೀಡಿಯೋಗಳನ್ನು ಲೀಕ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಲು ತಬಸ್ಸುಮ್ ಶುರು ಮಾಡಿದ್ದಾಳೆ. ಈ ಗ್ಯಾಂಗ್ ನಲ್ಲಿ ಇವಳು ಮಾತ್ರವಲ್ಲ ಆಕೆಯ ಸಹೋದರ ಅಜೀಂ ಉದ್ದೀನ್(41) ಮತ್ತು ಅಭಿಷೇಕ್ ಅಲಿಯಾಸ್ ಅವಿನಾಶ್(33) ಎಂಬವರೂ ಇದ್ದಾರೆ.
ಬೆ*ದರಿಕೆ ಹಾಕಿ ಹಣ ಲೂಟಿ :
ಈ ಬ್ಲಾಕ್ ಮೇಲ್ ಒಂದಲ್ಲ ಎರಡಲ್ಲ ಬರೋಬ್ಬರಿ 5 ವರ್ಷಗಳಿಂದ ನಡೆಯುತ್ತಿತ್ತಂತೆ. ಈ ಗ್ಯಾಂಗ್ ನಲ್ಲಿ ಅಭಿಷೇಕ್ ಇದ್ದಾನಲ್ಲ ಆತ ತಾನು ಪೊಲೀಸ್ ಅಧಿಕಾರಿ ಎಂದಿದ್ದನಂತೆ. ಖಾಸಗಿ, ಫೋಟೋ, ವೀಡಿಯೋಗಳನ್ನು ಸೋರಿಕೆ ಮಾಡುವ ಬೆದ*ರಿಕೆ ಹಾಕಿದ್ದ. ಸುಳ್ಳು ಅತ್ಯಾ*ಚಾರ ಪ್ರಕರಣ ದಾಖಲಿಸುವುದಾಗಿ,. ಅಲ್ಲದೇ, ಡೆ*ತ್ ನೋಟ್ ನಲ್ಲಿ ಹೆಸರು ಬರೆದು ಆ*ತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದರಂತೆ. ಇದರಿಂದ ಭಯಬಿದ್ದ ಸಂತ್ರಸ್ತ ತನ್ನ ಭವಿಷ್ಯ ನಿಧಿ ಉಳಿತಾಯದ ಹಣ ಹಿಂತೆಗೆದುಕೊಂಡಿದ್ದರು. ಅಲ್ಲದೇ, ಬ್ಯಾಂಕ್ ಸಾಲ, ಕೈ ಸಾಲವೂ ಬೆಳೆಯಿತು.
ಇದನ್ನೂ ಓದಿ : ಚಳಿ ಇದೆ ಎಂದು ಬಿಸಿನೀರು ಸ್ನಾನ ಮಾಡೋರಿಗೆ ಬಿಗ್ ಶಾಕ್ !!
ಸಂತ್ರಸ್ತ ಆರೋಪಿಗೆ ಮಾಸಿಕ 1.25 ಲಕ್ಷ ರೂ. ಹಣ ನೀಡುತ್ತಿದ್ದರು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೇರೆ ದಾರಿ ಕಾಣದೆ ಸಿಸಿಬಿ ಮೊರೆ ಹೋಗಿದ್ದಾರೆ ಸಂ*ತ್ರಸ್ತನ ದೂರಿನ ಅನ್ವಯ ಸಿಸಿಬಿ ಪೊಲೀಸರು ಮಹಿಳೆ ಹಾಗೂ ಅಜೀಂ, ಅಭಿಷೇಕ್ ನನ್ನು ಬಂಧಿಸಿದ್ದಾರೆ.
LATEST NEWS
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: KSRTC ಬಸ್ಸಿನಲ್ಲಿ ‘UPI’ ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಪಿಲಿಕುಳ ಕಂಬಳಕ್ಕೆ ಪ್ರಾಣಿಪ್ರಿಯರ ವಿರೋಧ !
Viral Video: ಮಿಂಚಿನ ವೇಗದಲ್ಲಿ ಊಟ ಬಡಿಸಿದ ನಾಲ್ವರು ಯುವಕರು
ವಿದ್ಯಾಸಿರಿ ವಿದ್ಯಾರ್ಥಿ ವೇತನ 2 ಸಾವಿರಕ್ಕೆ ಏರಿಕೆ: ಸಿಎಂ ಸಿದ್ದರಾಮಯ್ಯ
ಜಾರ್ಖಂಡ್ನಲ್ಲಿ ಬಿಗ್ ಟ್ವಿಸ್ಟ್; ಜೆಎಂಎಂ ಮುನ್ನಡೆ – ಎನ್ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ
Trending
- LATEST NEWS3 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru1 day ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION3 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- LATEST NEWS5 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!