ಪುತ್ತೂರು: ಕರ್ನಾಟಕ ಸರ್ಕಾರದಿಂದ ಸಹಕಾರಿ ರತ್ನ ಪ್ರಶಸ್ತಿ ಪಡೆದ ಪುತ್ತೂರಿನ ಸವಣೂರು ಸೀತಾರಾಮ ರೈ ಅವರಿಗೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮವನ್ನು ಎಪ್ರಿಲ್ 2 ರಂದು ಏರ್ಪಡಿಸಲಾಗಿದೆ ಎಂದು ಸನ್ಮಾನ ಸಮಿತಿಯ ಸಂಚಾಲಕ ಶಶಿಧರ ಬಾಲ್ಯೋಟು ಮಾಹಿತಿ ನೀಡಿದರು.
ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಳೆದ ಹಲವು ವರ್ಷಗಳಿಂದ ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸವಣೂರಿನ ಶಿಲ್ಪಿ ಸೀತಾರಾಮ ರೈ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ಲಭಿಸಿರುವುದು ಪುತ್ತೂರಿನ ಜನತೆಗೆ ಸಂತಸ ಮೂಡಿಸಿದೆ.
ಈ ಸಂತಸವನ್ನು ಸಮಾಜದೊಂದಿಗೆ ಹಂಚುವ ಉದ್ದೇಶದಿಂದ ಈ ಸಾರ್ವಜನಿಕ ಸನ್ಮಾನವನ್ನು ನಡೆಸಲು ತೀರ್ಮಾನಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸನ್ಮಾನವನ್ನು ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.