ತಿರುವಂತನಪುರಂ : ದಕ್ದಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದೇಗುಲ ಇಂದಿನಿಂದ ಎರಡು ತಿಂಗಳು ತೆರೆಯಲಿದೆ.
ಆದರೆ ಅಯ್ಯಪ್ಪನ ದರ್ಶನ ಪಡೆಯುವ ಭಕ್ತರಿಗೆ ಕೋವಿಡ್ ಲಸಿಕೆಯ ಪ್ರಮಾಣಪತ್ರ ಮತ್ತು ಜೊತೆಗೆ 72 ಗಂಟೆಗಳೊಳಗಿನ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯ ಮಾಡಲಾಗಿದೆ.
ಮಂಡಲ-ಮಕರವಿಳಕ್ಕು ಹಬ್ಬದ ಹಿನ್ನೆಲೆಯಲ್ಲಿ ಶಬರಿಮಲೆ ಹಾಗೂ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಎರಡು ತಿಂಗಳ ಕಾಲ ನಡೆಯುವ ಮಕರ ಸಂಕ್ರಾಂತಿಗಾಗಿ ಶಬರಿಮಲೆ ದೇಗುಲವನ್ನು ಇಂದು ಸಂಜೆಯಿಂದ ತೆರಯಲಾಗುತ್ತೆ. ನಾಳೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಮಂಡಲಪೂಜೆಗಾಗಿ ದೇವಸ್ಥಾನವನ್ನು ಡಿಸೆಂಬರ್ 25ರವರಗೆ ತೆರಯಲಾಗಿರುತ್ತೆ.
ಮಕರ ಸಂಕ್ರಾಂತಿ ಉತ್ಸವಕ್ಕಾಗಿ 2021ರ ಜನವರಿ 20ರವರೆಗೆ ಭಕ್ತರಿಗೆ ದೇವಲಾಯದ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ.
ನಾಳೆಯಿಂದ ದೇವರ ದರ್ಶನ ಪಡೆಯುವವರ ಪಾದಯಾತ್ರೆ ಆರಂಭವಾಗಲಿದ್ದು, ಇಂದು ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ ಕಂದರಾರು ಮಹೇಶ್ ಮೋಹನರಾರು ಅವರ ಉಪಸ್ಥಿತಿಯಲ್ಲಿ ನಿರ್ಗಮಿತ ಅರ್ಚಕ ವಿ.ಕೆ.ಜಯರಾಜ್ ಪೊಟ್ಟಿಅವರು ದೇವಾಲಯದ ಗರ್ಭಗುಡಿಯನ್ನು ತೆರೆಯಲಿದ್ದಾರೆ.
ಆದರೆ ಕೋವಿಡ್-19 ಪ್ರೋಟೋಕಾಲ್‍ಗೆ ಬದ್ಧವಾಗಿ ಶಬರಿಮಲೆ ತೀರ್ಥಯಾತ್ರೆ ನಡೆಯಲಿದೆ. ಭಕ್ತರು ದೇಗುಲಕ್ಕೆ ಭೇಟಿ ನೀಡುವ 72 ಗಂಟೆಗಳ ಒಳಗೆ ಮಾಡಿಸಿರುವ ಆರ್ಟಿ-ಪಿಸಿಆರ್ ಟೆಸ್ಟ್ ರಿಪೋರ್ಟ್ ಅನ್ನು ಇಲ್ಲಿ ಸಲ್ಲಿಸಬೇಕು.
ಇದರ ಜೊತೆಗೆ ಎರಡು ಡೋಸ್ ಲಸಿಕೆಯನ್ನು ಪಡೆದುಕೊಂಡಿರುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಇದರ ಜೊತೆ ಎಲ್ಲಾ ಭಕ್ತರು ತಮ್ಮ ಆಧಾರ್ ಕಾರ್ಡ್ಗಳನ್ನು ಸಹ ತೋರಿಸಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಪಂಪಾದಿಂದ ಅಯ್ಯಪ್ಪನ ದೇವಾಲಯವರೆಗಿನ 4.5 ಕಿಮೀ ಟ್ರೆಕ್ಕಿಂಗ್ ಮಾರ್ಗದಲ್ಲಿ ಐದು ಸ್ಥಳಗಳಲ್ಲಿ ತುರ್ತು ವೈದ್ಯಕೀಯ ಕೇಂದ್ರಗಳು ಮತ್ತು ಆಮ್ಲಜನಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ದೇವಸ್ಥಾನಕ್ಕೆ ಪ್ರಯಾಣಿಸುವಾಗ ಯಾರಾದರೂ ಅತಿಯಾದ ಹೃದಯ ಬಡಿತ, ಉಸಿರಾಟದ ತೊಂದರೆ ಅಥವಾ ಎದೆ ನೋವು ಅನುಭವಿಸಿದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ತರಬೇತಿ ಪಡೆದ ಸ್ಟಾಫ್ ನರ್ಸ್ ಮತ್ತು ಇತರ ವೈದ್ಯಕೀಯ ಸೌಲಭ್ಯಗಳು ಎಲ್ಲಾ ಸಮಯದಲ್ಲೂ ಲಭ್ಯವಿರುತ್ತವೆ ಅಂತ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಯುವ ದಿನ 2025 : ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನು ರಾಷ್ಟ್ರೀಯ ಯುವ ದಿವಸ್ ಎಂದು ಆಚರಿಸಲಾಗುತ್ತದೆ. ಯುವಕರನ್ನು ಪ್ರೇರೇಪಿಸುವಂತಹ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಸುತ್ತ ಹರಡಿಸಿ ದೇಶಕ್ಕೆ ಉತ್ತಮ ಭವಿಷ್ಯವನ್ನು ರೂಪಿಸುವುದು ಈ ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.
‘ರಾಷ್ಟ್ರೀಯ ಯುವ ದಿನ’ ದ ಇತಿಹಾಸ:
ಒಂದು ದೇಶದ ಅಭಿವೃದ್ಧಿಯು ಆ ದೇಶದ ಯುವ ಜನತೆಯ ಮೇಲೆ ಅವಲಂಬಿತವಾಗಿದೆ. ಹೀಗಿರುವಾಗ ಸರಿಯಾದ ದಾರಿಯಲ್ಲಿ ಸಾಗಲು ಯುವ ಜನತೆಯನ್ನು ಪ್ರೇರೇಪಿಸಲು ಸರಿಯಾದ ಮಾರ್ಗದರ್ಶನ ನೀಡುವುದು ಬಹಳ ಮುಖ್ಯವಾಗಿದೆ. ಈ ಉದ್ದೇಶದಿಂದ ಭಾರತ ಸರ್ಕಾರವು 1984 ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ಬಳಿಕ 1985 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಸ್ವಾಮಿ ವಿವೇಕಾನಂದರ ಜನ್ಮದಿನದಂದು ಪ್ರತಿ ವರ್ಷ ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್ ಮತ್ತು ಅವರ ಶಾಖೆಗಳ ಅನೇಕ ಕೇಂದ್ರಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರಕಾರ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಹಾ ಮಂಗಳ ಆರತಿ, ಭಕ್ತಿಗೀತೆಗಳು, ಧ್ಯಾನ, ಧಾರ್ಮಿಕ ಭಾಷಣ, ಸಂಧ್ಯಾ ಆರತಿ ಮುಂತಾದವುಗಳನ್ನು ನಡೆಸಲಾಗುತ್ತದೆ. ಅಲ್ಲದೆ, ವಿವಿಧ ಶಾಲಾ-ಕಾಲೇಜುಗಳಲ್ಲಿ ಮೆರವಣಿಗೆ, ಸ್ವಾಮಿ ವಿವೇಕಾನಂದರ ಕುರಿತು ಭಾಷಣ, ವಾಚನಗೋಷ್ಠಿಗಳು, ಹಾಡುಗಳು, ಸಮಾವೇಶಗಳು, ಪ್ರಬಂಧ-ಬರಹ ಸ್ಪರ್ಧೆಗಳು, ಸೆಮಿನಾರ್‌ಗಳು ಇತ್ಯಾದಿಗಳನ್ನು ಪ್ರದರ್ಶಿಸುವ ಮೂಲಕ ಆಚರಿಸಲಾಗುತ್ತದೆ. ಭಾರತೀಯ ಯುವಜನರ ಬರಹಗಳು ಮತ್ತು ಸ್ವಾಮಿ ವಿವೇಕಾನಂದರ ಉಪನ್ಯಾಸಗಳನ್ನು ಪ್ರೇರೇಪಿಸಲು ಸಹ ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಂದ. ಶಿಕ್ಷಣವನ್ನು ಉತ್ತೇಜಿಸಲು, ಯುವಕರಲ್ಲಿ ನಂಬಿಕೆಯನ್ನು ಉತ್ತೇಜಿಸಲು, ದೇಶವನ್ನು ಅಭಿವೃದ್ಧಿಪಡಿಸಲು ಭಾರತದಲ್ಲಿ ಮಾತ್ರವಲ್ಲದೆ ದೇಶದ ಹೊರಗೆ ಹಲವಾರು ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
ಮಂಗಳೂರು/ಆಂಧ್ರಪ್ರದೇಶ : ತೆಲುಗು ನಟ ಪ್ರಭಾಸ್ ಮದುವೆ ಬಗ್ಗೆ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅವರ ಮದುವೆಯ ಬಗ್ಗೆ ಯಾವಾಗಲೂ ವದಂತಿಗಳು ಹಬ್ಬುತ್ತಿರುತ್ತದೆ. ಇದೀಗ ಮತ್ತೆ ಪ್ರಭಾಸ್ ಮದುವೆ ವಿಚಾರ ಸುದ್ದಿಯಾಗುತ್ತಿದೆ. ಈ ಬಾರಿ ಗಾಸಿಪ್ ಅಲ್ಲ. ಪ್ರಭಾಸ್ ಮದುವೆ ಬಗ್ಗೆ ನಟ ರಾಮ್ ಚರಣ್ ತೇಜ ಅವರು ಮಾಹಿತಿ ನೀಡಿದ್ದಾರೆ.
ಆಂಧ್ರ ಹುಡುಗಿ ಜೊತೆ ಮದುವೆ!
ನಂದಮೂರಿ ಬಾಲಕೃಷ್ಣ ಅವರ ಜನಪ್ರಿಯ ಅನ್‌ಸ್ಟಾಪೇಬಲ್ ಟಾಕ್ ಶೋನಲ್ಲಿ ರಾಮ್ ಚರಣ್ ಸ್ನೇಹಿತ ಪ್ರಭಾಸ್ ಮದುವೆ ಬಗ್ಗೆ ಸುಳಿವು ನೀಡಿದ್ದಾರೆ. ಬಾಲಕೃಷ್ಣ ಅವರು ಪ್ರಭಾಸ್ ಮದುವೆ ಬಗ್ಗೆ ಕೇಳಿದ್ದಾರೆ. ಈ ವೇಳೆ ರಾಮ್ ಚರಣ್ ನಕ್ಕಿದ್ದಾರೆ. ಪ್ರಭಾಸ್ ಮದುವೆಯ ಕುರಿತು ಸುಳಿವು ನೀಡಿದ್ದಾರೆ. ಆಂಧ್ರಪ್ರದೇಶದ ಗಾನಪವರಂನ ಹುಡುಗಿಯನ್ನು ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ.ಸದ್ಯ ಶೋನ ಟ್ರೇಲರ್ ಬಿಡುಗಡೆಯಾಗಿದ್ದು, ರಾಮ್ ಚರಣ್ ಹೇಳಿರುವ ಕೆಲವು ದೃಶ್ಯಗಳನ್ನು ತೋರಿಸಲಾಗಿದೆ. ಜನವರಿ 14 ರಂದು ಶೋ ಪ್ರಸಾರವಾಗಲಿದೆ. ಹಾಗಾಗಿ ಟ್ರೇಲರ್‌ನಲ್ಲಿ ತೋರಿಸಲಾಗಿರುವ ವಿಚಾರಗಳ ಸ್ಪಷ್ಟನೆ ಶೋ ಪೂರ್ತಿ ನೋಡಿದ ಮೇಲೆ ಗೊತ್ತಾಗಲಿದೆ.
ಈ ಹಿಂದೆ ಬಾಹುಬಲಿ ಸಿನಿಮಾ ವೇಳೆ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ನಾನು ಶೀಘ್ರದಲ್ಲಿ ಮದುವೆಯಾಗುವುದಿಲ್ಲ. ಏಕೆಂದರೆ, ನನ್ನ ಮಹಿಳಾ ಅಭಿಮಾನಿಗಳ ಭಾವನೆಗಳನ್ನು ನೋಯಿಸಲು ನಾನು ಬಯಸುವುದಿಲ್ಲ ಎಂದಿದ್ದರು.
ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಹೆಸರು ಹಲವು ಸಮಯಗಳಿಂದ ತಳುಕು ಹಾಕುತ್ತಿದೆ. ಇತ್ತೀಚೆಗೆ ಕೃತಿ ಸನೊನ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಗುಲ್ಲೂ ಹಬ್ಬಿತ್ತು. ಸದ್ಯ ಪ್ರಭಾಸ್ ಸಲಾರ್ ಬಳಿಕ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಜೊತೆ ಮೂರು ಸಿನಿಮಾ ಮಾಡುವ ಒಪ್ಪಂದ ಮಾಡಿಕೊಂಡಿದ್ದಾರೆ.
ಇನ್ನು ಆರ್ ಆರ್ ಆರ್ ಸಿನಿಮಾ ರಾಮ್ ಚರಣ್‌ಗೆ ದೊಡ್ಡ ಯಶಸ್ಸು ನೀಡಿತ್ತು. ಈಗ ಗೇಮ್ ಛೇಂಜರ್ ಆಗಿ ಅವರು ಬೆಳ್ಳಿ ಪರದೆಯ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಶಂಕರ್ ಆ್ಯಕ್ಷನ್ ಕಟ್ ಹೇಳಿರುವ ಈ ಬಹುಭಾಷಾ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.
ಮಂಗಳೂರು/ಕ್ಯಾಲಿಫೋರ್ನಿಯಾ : ಲಾಸ್ ಎಂಜಲೀಸ್ ನ ವಿನಾಶಕಾರಿ ಕಾಡ್ಗಿಚ್ಚಿಗೆ ಕನಿಷ್ಠ ಐದು ಮಂದಿಯನ್ನು ಬಲಿಪಡೆದಿದೆ. ಸುಂದರ ನಗರಿಯಾದ ಕ್ಯಾಲಿಫೋರ್ನಿಯಾ ನಗರದ ಸುಮಾರು ನಾಲ್ಕು ಸಾವಿರ ಕಟ್ಟಡಗಳನ್ನು ಭಸ್ಮಗೊಳಿಸಿದೆ. ಕೋಟ್ಯಾಧಿಪತಿಗಳಾಗಿದ್ದವರೆಲ್ಲಾ, ಬೀದಿಪಾಲಾಗಿದ್ದಾರೆ.
ಹೀಗೆ ಬೀದಿಪಾಲಾದವರಲ್ಲಿ ಕೋಟ್ಯಾಧಿಪತಿ ಎಡ್ವಿನ್ ಕ್ಯಾಸ್ಟ್ರೋ ಕೂಡ ಒಬ್ಬರು. ಇವರು ಕಳೆದ ವರ್ಷ ಫೆಬ್ರವರಿಯಲ್ಲಿ ವಿಶ್ವದ ಅತಿದೊಡ್ಡ ಲಾಟರಿಯಲ್ಲಿ ಬರೊಬ್ಬರಿ 2.04 ಬಿಲಿಯನ್ (16,590 ಕೋಟಿ) ಗೆದ್ದಿದ್ದರು. ಈ ಲಾಟರಿ ಹಣದಿಂದ ಎಡ್ವಿನ್ ಅವರು ಕ್ಯಾಲಿಫೋರ್ನಿಯಾದ ಹಾಲಿವುಡ್ ಹಿಲ್ಸ್ ನಲ್ಲಿ ಬರೊಬ್ಬರಿ 3.8 ಮಿಲಿಯನ್ ಗೆ ಐಷಾರಾಮಿ ಮನೆ ತೆಗೆದುಕೊಂಡಿದ್ದರು.
ಆದರೆ ದುರಾದೃಷ್ಟವಶಾತ್ ಎಡ್ವಿನ್ ಕ್ಯಾಸ್ಟ್ರೋ ಅವರ ಐಷಾರಾಮಿ ಮನೆ ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದೆ. ಮಾರಣಾಂತಿಕ ಬೆಂಕಿಯು ಕ್ಯಾಸ್ಟ್ರೋ ಅವರ 3.8 ಮಿಲಿಯನ್ ನ ಮನೆಯಲ್ಲಿ ಉಳಿದಿರುವುದು ಕಾಂಕ್ರೀಟ್ ಕಂಬಗಳು ಮತ್ತು ಹೊಗೆಯಾಡುತ್ತಿರುವ ಮರಗಳು ಮಾತ್ರ.
ಎಡ್ವಿನ್ ಅವರ ಭವ್ಯ ಬಂಗಲೆಯಲ್ಲಿ ಐದು ಬೆಡ್ ರೂಮ್ ಮತ್ತು ಆರು ಸ್ನಾನಗೃಹಗಳನ್ನು ಒಳಗೊಂಡಿತ್ತು. ವರದಿಗಳ ಪ್ರಕಾರ ಈ ಐಷಾರಾಮಿ ಮನೆ ಐಕಾನಿಕ್ ಮಾರ್ಮೊಂಟ್ ಹೋಟೆಲ್ ನ ಮೇಲೆ ಇದೆ ಮತ್ತು ಖ್ಯಾತ ಗಾಯಕಿ ಅರಿಯಾನಾ ಗ್ರಾಂಡೆ, ನಟಿ ಡಕೋಟಾ ಜಾನ್ಸನ್ ಮತ್ತು ಹಾಸ್ಯನಟ ಜಿಮ್ಮಿ ಕಿಮ್ಮೆಲ್ ಸೇರಿದಂತೆ ಪ್ರಸಿದ್ದ ಹಾಲಿವುಡ್ ತಾರೆಯರ ನೆರೆಹೊರೆಯಲ್ಲಿ ಎಡ್ವಿನ್ ಅವರ ಮನೆ ಇತ್ತು.
ಆದರೆ ಇಂದು ಭವ್ಯ ಅರಮನೆಯ ಭವ್ಯ ನೆನಪು ಮಾತ್ರ ಉಳಿದಿದೆ. ಶ್ರೀಮಂತಿಕೆಯ ಉತ್ತಂಗುದಲ್ಲಿದ್ದ ಎಡ್ವಿನ್ ಈಗ ಬೀದಿಪಾಲಾಗಿದ್ದಾನೆ.