Connect with us

kerala

ಶಬರಿಮಲೆ ಯಾತ್ರಿಕರಿದ್ದ ಬಸ್ ಅ*ಪಘಾತ; 19 ಮಂದಿಗೆ ಗಾ*ಯ, ಒಂದು ಸಾ*ವು

Published

on

ಕೊಲ್ಲಂ: ಅಯ್ಯಪ್ಪ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್‌ ಸರಕು ಸಾಗಣೆ ಟ್ರಕ್‌ಗೆ ಡಿ*ಕ್ಕಿ ಹೊಡೆದ ಪರಿಣಾಮ ಶಬರಿಮಲೆ ಯಾತ್ರಿಕರಾಗಿದ್ದ 46 ವರ್ಷದ ವ್ಯಕ್ತಿ ಮೃ*ತಪಟ್ಟಿರುವ ಘಟನೆ ಕೊಲ್ಲಂನ ಆರ್ಯಂಕಾವು ಚೆಕ್‌ಪೋಸ್ಟ್ ಬಳಿ ಇಂದು (ಡಿ.4) ಬೆಳಿಗ್ಗೆ ಸಂಭವಿಸಿದೆ.

ಬೆಳಗಿನ ಜಾವ 4.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ತಮಿಳುನಾಡಿನ 19 ಮಂದಿ ಯಾತ್ರಿಕರು ಗಾ*ಯಗೊಂಡಿದ್ದಾರೆ ಎಂದು ತೆನ್ಮಲ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಿನಿ ಬಸ್ ಸುಮಾರು 24 ಯಾತ್ರಾರ್ಥಿಗಳೊಂದಿಗೆ ಶಬರಿಮಲೆಯಿಂದ ತಮಿಳುನಾಡಿಗೆ ಹಿಂದಿರುಗುತ್ತಿದ್ದಾಗ ನೆರೆಯ ರಾಜ್ಯದಿಂದ ಬಂದ ಸರಕು ಟ್ರಕ್‌ಗೆ ಮುಖಾಮುಖಿ ಡಿ*ಕ್ಕಿ ಹೊಡೆದಿದೆ. ಗಾ*ಯಗೊಂಡವರಲ್ಲಿ 17 ಮಂದಿ ಪುನಲೂರಿನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರನ್ನು ತಿರುವನಂತಪುರ ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಅ*ಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

kerala

ಚಾರ್ಲ್ಸ್ ದೊರೆಯ ಆಪ್ತ ಕಾರ್ಯದರ್ಶಿಯಾಗಿ ಕಾಸರಗೋಡಿನ ಸಂಶುದ್ಧೀನ್ ನೇಮಕ !!

Published

on

ಕಾಸರಗೋಡು: ಲಂಡನ್‌ನ ಚಾರ್ಲ್ಸ್ ದೊರೆಯ ಸಹಾಯಕ ಆಪ್ತ ಕಾರ್ಯದರ್ಶಿಯಾಗಿ ಕಾಸರಗೋಡು ಮೂಲದ ಮುನಾ ಶಂಸುದ್ದೀನ್ ನೇಮಕಗೊಂಡಿದ್ದಾರೆ.

ಪುದಿಯಪುರಯಿಲ್ ನಿವಾಸಿ ಶಂಸುದ್ದೀನ್ ಲಂಡನ್‌ನಲ್ಲಿ ಓತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದರು.

ಬ್ರಿಟಿಷ್ ಕಾನೂನು ಸಲಹೆ ಕಚೇರಿಯಲ್ಲಿ ಉದ್ಯೋಗ ಆರಂಭಿಸಿ ಲಂಡನ್ ವಿದೇಶಾಂಗ ಇಲಾಖೆಯ ಕಾಮನ್ವೆಲ್ತ್ ಡೆವಲಪ್‌ಮೆಂಟ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ ದೊರೆಯ ಪ್ರಧಾನ ಅಸಿಸ್ಟೆಂಟ್ ಸೆಕ್ರೆಟರಿಯಾಗುವ ಅವಕಾಶ ಲಭಿಸಿತು.

ಬ್ರಿಟನ್ ನಾಟಿಂಗಾಂ ವಿ.ವಿ.ಯಿಂದ ಮೆಥಮೆಟಿಕ್ಸ್ ಎಂಜನಿಯರಿಂಗ್‌ನಲ್ಲಿ ಪದವೀಧರೆಯಾಗಿದ್ದು, ಬ್ರಿಟಿಷ್ ವಿದೇಶಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜೆರುಸಲೇಂನಲ್ಲಿ ಬ್ರಿಟನ್ ಕನ್ಸಲೇಟಿವ್ ಜನರಲ್‌, ಪಾಕಿಸ್ಥಾನದ ಕರಾಚಿಯಲ್ಲಿ ಬ್ರಿಟನ್ ವಿದೇಶಾಂಗ ಇಲಾಖೆ ಮುಖ್ಯಸ್ಥೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಪತಿ ಡೇವಿಡ್ ಅವರು ವಿಶ್ವಸಂಸ್ಥೆಯ ಉದ್ಯೋಗಿ. 10 ವರ್ಷಗಳ ಹಿಂದೊಮ್ಮೆ ಊರಿಗೆ ಬಂದಿದ್ದರು.

Continue Reading

DAKSHINA KANNADA

ಅ*ನ್ಯಕೋಮಿನ ಯುವಕನಿಂದ ವಿದ್ಯಾರ್ಥಿನಿಗೆ ಕಿ*ರುಕುಳ; ದೂರು ದಾಖಲಿಸಲು ಪೊಲೀಸರ ಹಿಂದೇಟು !!

Published

on

ಕುಂಬಳೆ: ಬೆಳಗಿನ ಜಾವ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ಹಿಂದು ವಿಧ್ಯಾರ್ಥಿನಿಗೆ ಅ*ನ್ಯಕೋಮಿನ ಯುವಕನೊಬ್ಬ ಕಿ*ರುಕುಳ ನೀಡಲು ಪ್ರಯತ್ನಿಸಿದ ವೇಳೆ ಆತನನಿಂದ ತಪ್ಪಿಸಿಕೊಂಡು ಯುವತಿ ತನ್ನ ಮನೆಯವರು ಹಾಗು ಹಿಂದು ಐಕ್ಯವೇದಿ ನೇತಾರರ ಜೊತೆಗೆ ಹೋಗಿ ಕುಂಬಳೆ ಪೊಲೀಸರಿಗೆ ದೂರು ನೀಡಿದ ಘಟನೆ ಇತ್ತೀಚೆಗೆ ನಡೆದಿದೆ.

ಕಿ*ರುಕುಳ ನೀಡಲು ಯತ್ನಿಸಿದ ಯುವಕ ತಂಗಲ್ ವೀಡ್ ಪರಿಸರದ ಕುಂಬಳೆ ಸಿ. ಎಚ್. ಸಿ ರೋಡ್ ನಿವಾಸಿ ನೌಫಲ್ ಎಂಬಾತನೆಂದು ತಿಳಿದುಬಂದಿದೆ.

ಈತ ಪ್ರಸ್ತುತ ತಂಗಳಬೀಡು ಪರಿಸರವಾಸಿ ಎಂದು ಗುರುತಿಸಲಾಗಿದ್ದು, ಈ ವಿಚಾರದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಿದ ವೇಳೆ ಪೊಲೀಸರು ಪ್ರಕರಣ ದಾಖಲಿಸದೆ ನೌಫಾಲ್ ನನ್ನು ಕೇಸಿನಿಂದ ಪಾರು ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ವಿಷಯವನ್ನು ಅರಿತ ಹಿಂದು ಐಕ್ಯ ವೇದಿ ನೇತಾರರು ಮತ್ತು ಮನೆಯವರು ಈ ವಿಚಾರವನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯ ಗಮನಕ್ಕೆ ತಂದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಆದೇಶದಂತೆ ಕುಂಬಳೆ ಪೊಲೀಸರು ದೂರು ದಾಖಲಿಸಿ ಕೊಂಡರು.

*ಒಂದೊಂದು ಮತದವರಿಗೆ ಒಂದೊಂದು ಕಾನೂನು ಎಂದು ಹೇಳಲು ಕೇರಳ ರಾಜ್ಯವೆಂಬುದು ಒಂದು ಪ್ರತ್ಯೇಕ ಮತ ರಾಜ್ಯವಲ್ಲ* ಎಂದು ಹಿಂದು ಐಕ್ಯ ವೇದಿ ಕುಂಬಳೆ ಪಂಚಾಯತ್ ಸಮಿತಿಯು ಅಭಿಪ್ರಾಯವನ್ನು ಹಿಂದೂ ಐಕ್ಯವೇದಿ ಪತ್ರಿಕಾ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದೆ. ಇಂತಹ ಕುಕೃತ್ಯಗಳನ್ನು ಮಾಡುವವರಿಗೆ ತಕ್ಕ ಶಾಸ್ತಿಯಾಗಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.

Continue Reading

kerala

ಕುಂಬ್ಳೆ : ಮಹಿಳೆಯರ ಜೊತೆ ಬುರ್ಖಾ ಧರಿಸಿ ಕುಳಿತ್ತಿದ್ದ ಯುವಕನಿಗೆ ಧರ್ಮದೇಟು !!

Published

on

ಕುಂಬ್ಳೆ : ಬಸ್ ನಿಲ್ದಾಣದಲ್ಲಿ ಬುರ್ಖಾ ಧರಿಸಿ ಮಹಿಳೆಯರ ಸಮೀಪ ಕುಳಿತುಕೊಂಡಿದ್ದ ಯುವಕನಿಗೆ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ಇಂದು (ನ.29) ಕುಂಬ್ಳೆಯಲ್ಲಿ ನಡೆದಿದೆ.

ಹಿಂದಿ ಭಾಷೆ ಮಾತನಾಡುತ್ತಾ, ಬುರ್ಖಾ ಶರಿಸಿದ್ದ ಯುವಕನನ್ನು ಓರಿಸ್ಸಾ ಮೂಲದವ ಎನ್ನಲಾಗಿದೆ.

ಮುಸ್ಲಿಂ ಯುವತಿಯರಂತೆ ಬುರ್ಖಾ ಧರಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಮೀಪ ಕುಳಿತಿದ್ದಾನೆ. ಈ ವೇಳೆ ಗಾಳಿಗೆ ಮುಖದ ಬಟ್ಟೆ ಹಾರಿದ ಪರಿಣಾಮ ಯುವಕ ಸಿಕ್ಕಿಬಿದ್ದಿದ್ದಾನೆ.

 

ಇದನ್ನೂ ಓದಿ : ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ; ‘ಬುರ್ಖಾ ಬ್ಯಾನ್’ ಸರಕಾರದ ಆದೇಶ

 

ಈತನ ಚಲನವಲನದ ಬಗ್ಗೆ ಸಂಶಯ ಗೊಂಡ ಸ್ಥಳೀಯರು ಈತನ ಪಾದರಕ್ಷೆ ಹಾಗೂ ಪಾದವನ್ನು ವೀಕ್ಷಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ. ತನ್ನ ಗುರುತು ಹಚ್ಚಿದ್ದಾರೆಂದು ತೋರಿದ ಯುವಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ, ಆದರೆ, ಸ್ಥಳೀಯರು ಆತನನ್ನು ಹಿಡಿದು ಪೋಲಿಸರಿಗೆ ಹಿಡಿದು ಕೊಟ್ಟಿದ್ದಾರೆ.

 

WATCH VIDEO : 

 

Continue Reading

LATEST NEWS

Trending

Exit mobile version