Connect with us

    LATEST NEWS

    ಇಂದಿನಿಂದ ಶಬರಿಮಲೆ ಮಕರ ಜ್ಯೋತಿ ಯಾತ್ರೆ ಆರಂಭ

    Published

    on

    ಮಕರ ಜ್ಯೋತಿ ಯಾತ್ರೆಗಾಗಿ ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗುವುದು.

    ತಂತ್ರಿ ಕಂಠರಾರ್ ರಾಜೀವರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಎಸ್. ಅರುಣ್ ಕುಮಾರ್ ನಂಬೂದಿರಿ ದೇವಾಲಯದ ಬಾಗಿಲು ತೆರೆದು ದೀಪ ಬೆಳಗಲಿದ್ದಾರೆ. ಮಾಳಿಗಪ್ಪುರಂ ದೇವಾಲಯ ತೆರೆಯಲು ಪ್ರಧಾನ ಅರ್ಚಕ ವಾಸುದೇವನ್ ನಂಬೂದಿರಿ ಅವರಿಗೆ ಕೀಲಿ ಹಸ್ತಾಂತರ ಮಾಡಲಾಗುವುದು.

    18 ಮೆಟ್ಟಿಲ ಬಳಿಯ ಕುಂಡಕ್ಕೆ ಅಗ್ನಿಸ್ಪರ್ಶ ಮಾಡಿದ ನಂತರ ಭಕ್ತರಿಗೆ 18 ಮೆಟ್ಟಿಲು ಏರಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅನುಮತಿ ನೀಡಲಾಗುವುದು.ಡಿಸೆಂಬರ್ 30ರಂದು ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ಡಿಸೆಂಬರ್ 31ರಂದು ಮುಂಜಾನೆ 3ಗಂಟೆಯಿಂದ ಮಕರ ಜ್ಯೋತಿ ಪೂಜೆ ಆರಂಭವಾಗುತ್ತದೆ.

    2025ರ ಜನವರಿ 12ರಂದು ಪಂದಳ ಅರಮನೆಯಿಂದ ತಿರುವಾಭರಣ ಘೋಷಯಾತ್ರೆ ಹೊರಡಲಿದೆ. ಡಿಸೆಂಬರ್ ಜ.13ರಂದು ಪಂಪಾದಲ್ಲಿ ದೀಪೋತ್ಸವ, ಜನವರಿ 14ರಂದು ಸಂಜೆ 5ಗಂಟೆಗೆ ತಿರುವಾಭರಣ ಘೋಷ ಯಾತ್ರೆ,ಶರಂಗುತ್ತಿಗೆ ಆಗಮನ, ಮಕರ ಸಂಕ್ರಮಣ ಪೂಜೆ, ಸಂಜೆ 6.30ಕ್ಕೆ, ಅಯ್ಯಪ್ಪಸ್ವಾಮಿಗೆ ತಿರುವಾಭರಣ ತೊಡಿಸಿ ದೀಪಾರಾಧನೆ, ಮಕರ ನಕ್ಷತ್ರ ಗೋಚರಿಸಿದ ನಂತರ, ಮಕರ ಜ್ಯೋತಿ ದರ್ಶನ ನಂತರ ಜನವರಿ 19ರಂದು ರಾತ್ರಿ 10 ಗಂಟೆಯವರೆಗೆ ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಇರಲಿದೆ.

    DAKSHINA KANNADA

    ಸಾರ್ವಜನಿಕ ಶೌಚಾಲಯದಲ್ಲಿದ್ದ ಮಹಿಳೆಯ ಪೋಟೋ ತೆಗೆದು ಪರಾರಿಯಾದ ಕಿಡಿಗೇಡಿ

    Published

    on

    ಸುಳ್ಯ: ಶೌಚಾಲಯದಲ್ಲಿ ಮಹಿಳೆಯೊಬ್ಬರು ಇದ್ದಾಗ ಹಿಂಬದಿ ಕಿಟಕಿ ಮೂಲಕ ಯಾರೋ ಫೋಟೋ ತೆಗೆದು ಪರಾರಿಯಾಗಿರುವ ಘಟನೆ ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್‌ ಬಳಿ  ಶನಿವಾರ (ಜ.4) ರಾತ್ರಿ ನಡೆದಿದೆ.

    ಶೌಚಾಲಯಕ್ಕೆ ಮಹಿಳೆ ಹೋಗಿದ್ದಾಗ ಹಿಂಬದಿಯಲ್ಲಿರುವ ಕಿಟಕಿಯ ಮೂಲಕ ಫೋಟೋ ತೆಗೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಈ ಭಾಗದ ಕಿಟಕಿಯ ಗ್ಲಾಸ್ ಸರಿದಿದ್ದು, ಸರಿದ ಭಾಗದಿಂದ ಫೋಟೋವನ್ನು ಕ್ಲಿಕ್ಕಿಸಿದ್ದಾನೆ. ಈ ಸಂಧರ್ಭ ಆ ಮಹಿಳೆ ಜೋರಾಗಿ ಕಿರುಚಿಕೊಂಡ ಕಾರಣ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

     

    ಇದನ್ನೂ ಓದಿ : ವೇಶ್ಯಾವಾಟಿಕೆ: ಇಬ್ಬರು ಆರೋಪಿಗಳ ಬಂಧನ, ಯುವತಿಯ ರಕ್ಷಣೆ

     

    ಬಸ್ ನಿಲ್ದಾಣದ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದು, ಶೌಚಾಲಯದ ಭಾಗದ ಅವ್ಯವಸ್ಥೆಯ ಬಗ್ಗೆ ಶೀಘ್ರವಾಗಿ ಸರಿಪಡಿಸುವಂತೆ ಸೂಚನೆಯನ್ನು ನೀಡಿದ್ದಾರೆ.

    Continue Reading

    LATEST NEWS

    ವೇಶ್ಯಾವಾಟಿಕೆ: ಇಬ್ಬರು ಆರೋಪಿಗಳ ಬಂಧನ, ಯುವತಿಯ ರಕ್ಷಣೆ

    Published

    on

    ಉಡುಪಿ : ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಓರ್ವ ಮಹಿಳೆಯನ್ನು ರಕ್ಷಿಸಿದ ಘಟನೆ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಪೆರಪಳ್ಳಿಯಲ್ಲಿ ನಡೆದಿದೆ.

    ಪೆರಂಪಳ್ಳಿಯ ಅರ್ಪಾಟ್‌ ಮೆಂಟ್‌ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದ ಚಿಕ್ಕ ಮಗಳೂರು ಜಿಲ್ಲೆಯ ಕೊಪ್ಪ ನಿವಾಸಿ ರಘುನಂದನ್‌(40) ಮತ್ತು ದಾವರಣಗೆರೆ ಜಿಲ್ಲೆಯ ಹರಿಹರ ನಿವಾಸಿ ಅಮೀನಾ ಬೇಗಂ (55) ಎಂಬ ಇಬ್ಬರನ್ನು ದಸ್ತಗಿರಿ ಮಾಡಿ ಅವರು ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಬೆಂಗಳೂರು ಮೂಲದ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.

    ಇದನ್ನೂ ಓದಿ: 10 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ..! 16 ವರ್ಷದ ಸ್ನೇಹಿತನಿಂದ ಕೃತ್ಯ..!

    ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಹಾಸನ ಜಿಲ್ಲೆಯ ಹಿರೀಸಾವೆ ಗ್ರಾಮದ ರವೀಶ್‌ ಎಂಬ ಆರೋಪಿ ಬಂಧನಕ್ಕೆ ಮಣಿಪಾಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಉಡುಪಿ ಡಿವೈಎಸ್‌ಪಿ ಪ್ರಭು ಡಿ. ಅವರ ನಿರ್ದೇಶನದಂತೆ ಮಣಿಪಾಲ ಠಾಣೆಯ ಪೊಲೀಸ್‌ ಇನ್ಸ್‌ ಪೆಕ್ಟರ್‌ ಪಿ.ಐ ದೇವರಾಜ್‌ ಟಿ. ವಿ. ನೇತೃತ್ವದಲ್ಲಿ ಪಿಎಸ್‌ಐ ಅನಿಲ್‌, ಎಎಸ್‌ಐ ವಿವೇಕ್‌ ಹಾಗೂ ಸಿಸಿಬಂದಿ ವಿದ್ಯಾ, ಇಮ್ರಾನ್‌, ಪ್ರಸನ್‌, ಮಂಜುನಾಥ್‌ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತು.

    Continue Reading

    DAKSHINA KANNADA

    ಸಾಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಡಾ ನಾ ಡಿ ಸೋಜ ಅಂತಿಮ ದರ್ಶನ

    Published

    on

    ಮಂಗಳೂರು : ನಾಡಿನ ಹಿರಿಯ ಸಾಹಿತಿ ಡಾ ನಾ ಡಿ ಸೋಜ ಅವರು ತಮ್ಮ 87ರ ಹರೆಯದಲ್ಲಿ ವಯೋಸಹಜ ಅನಾರೋಗ್ಯದಿಂದ ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

    75ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಇವರ ಮಂಜಿನ ಕಾನು, ಈ ನೆಲ ಈ ಜಲ, ಕೆಂಪು ತ್ರಿಕೋನ, ನೆಲೆ, ಗಾಂಧಿ ಬಂದರು, ದ್ವೀಪ, ಜೀವಕಳೆ, ಚೆನ್ನೈ ಚೆನ್ನಮ್ಮ ಚೆನ್ನಮ್ಮಾಜಿ ಪ್ರಸಿದ್ದ ಕಾದಂಬರಿಗಳು.

    1964ರಲ್ಲಿ ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟಗೊಂಡಿತ್ತು. ಇವರು ಬರೆದ ಮುಳುಗಡೆ, ಕೊಳಗ, ಒಳಿತನ್ನು ಮಾಡಲು ಬಂದವರು, ಬಣ್ಣ ಪಾದರಿಯಾಗುವ ಹುಡುಗ, ‘ಇಬ್ಬರು ಮಾಜಿಗಳು’ ಮುಂತಾದ ಕಾದಂಬರಿಗಳು ಕುವೆಂಪು ವಿಶ್ವ ವಿದ್ಯಾನಿಲಯ, ಬೆಂಗಳೂರು ವಿವಿ, ಮಂಗಳೂರು ವಿವಿ ಮತ್ತು ಧಾರವಾಡದ ಕರ್ನಾಟಕ ವಿವಿಯ ಪಠ್ಯಪುಸ್ತಕಗಳಾಗಿಯೂ ಆಯ್ಕೆಯಾಗಿದೆ.

    ಇದನ್ನೂ ಓದಿ: ಮಂಗಳೂರು : ಎನ್‌ಸಿಸಿಯ ರಾಷ್ಟ್ರಮಟ್ಟದ ಪ್ಯಾರಾ ಜಂಪ್‌ನಲ್ಲಿ ತೇರ್ಗಡೆಯಾದ ಗ್ರಾಮೀಣ ಪ್ರತಿಭೆ

    ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ,ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಇವರು ಬರೆದ ದ್ವೀಪ ಕೃತಿ ಸಿನೆಮಾವಾಗಿ ಅದಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು. ಮುಂಬೈಯ ಅಖಿಲ ಭಾರತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ, ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಆಗಿದ್ದರು.

    ಅಗಲಿದ ಸಾಹಿತಿಯ ಅಂತಿಮ ದರ್ಶನ ಇಂದು ಮುಂಜಾನೆ 10ರಿಂದ 3 ಗಂಟೆಯವರೆಗೆ ಸಾಗರದ ಗಾಂಧಿ ಮೈದಾನದಲ್ಲಿ ಅವಕಾಶ ಇದ್ದು, 4 ಗಂಟೆಗೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

    Continue Reading

    LATEST NEWS

    Trending