Connect with us

    LATEST NEWS

    ಮಹಾಕುಂಭ ಮೇಳದಲ್ಲಿ ಜನಪ್ರಿಯರಾಗುತ್ತಿದ್ದಾರೆ ರಷ್ಯಾ ಬಾಬ

    Published

    on

    ಮಂಗಳೂರು/ಪ್ರಯಾಗರಾಜ್ : ದೇಶ ವಿದೇಶಗಳಿಂದ ಮಹಾಕುಂಭಮೇಳಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಪುಣ್ಯಸ್ನಾನದಲ್ಲಿ ಪಾಲ್ಗೊಳ್ಳಲು ಪ್ರತಿ ದಿನ ಕೋಟಿ ಕೋಟಿ ಭಕ್ತರು ಪ್ರಯಾಗರಾಜ್‌ಗೆ ಆಗಮಿಸುತ್ತಿದ್ದಾರೆ. ಹಿಂದೂ ಮಾತ್ರವಲ್ಲದೇ, ವಿದೇಶಗಳಿಂದ ಈಗಾಗಲೇ ಹಲವರು ಹಿಂದೂ ಆಚಾರ ಹಾಗೂ ಪದ್ಧತಿಯಂತೆ ವೃತ ಕೈಗೊಂಡು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಸ್ಟೀವ್ ಜಾಬ್ಸ್ ಪತ್ನಿಯೂ ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ರಷ್ಯಾದಿಂದ ಮಹಾಕುಂಭ ಮೇಳಕ್ಕೆ ಆಗಮಿಸಿದ ಮಸ್ಕ್ಯುಲರ್ ಬಾಬಾ ಜನಪ್ರಿಯರಾಗಿದ್ದಾರೆ. 7 ಅಡಿ ಎತ್ತರ, ಕಟ್ಟು ಮಸ್ತಾದ ದೇಹ, ಖಾವಿ, ರುದ್ರಾಕ್ಷಿಗಳನ್ನು ಧರಿಸಿರುವ ಈ ಮಸ್ಕ್ಯುಲರ್ ಬಾಬ ಇದೀಗ ಆಧುನಿಕ ಪರಶುರಾಮ ಎಂದೇ ಗುರುತಿಸಿಕೊಂಡಿದ್ದಾರೆ.

    ಮಸ್ಕ್ಯುಲರ್ ಬಾಬಾ ಮೂಲ ರಷ್ಯಾ. ಇವರ ಹೆಸರು ಆತ್ಮ ಪ್ರೇಮಗಿರಿ ಮಹಾರಾಜ್. 30 ವರ್ಷಗಳ ಹಿಂದೆ ಈ ಬಾಬ ಸನಾತನದ ಧರ್ಮ ಅನುಸರಿಸಲು ಆರಂಭಿಸಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಪ್ರೇಮಗಿರಿ ಮಹಾರಾಜ್, ಕಳೆದ 30 ವರ್ಷಗಳಿಂದ ಸನಾತನ ಧರ್ಮ ಅನುಸರಿಸುತ್ತಿದ್ದಾರೆ. ರಷ್ಯಾದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಈ ಬಾಬಾ, ಆಧ್ಯಾತ್ಮದ ಕಡೆ ಒಲವು ಮೂಡಿತ್ತು. ಹೀಗಾಗಿ ವೃತ್ತಿ ತೊರೆದು ಹಿಂದೂ ಧರ್ಮ ಸೇರಿಕೊಂಡ ಪ್ರೇಮ್ ಗಿರಿ ಮಹಾರಾಜ್ ಇದೀಗ ಮಹಾಕುಂಭ ಮೇಳೆದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಹರ ಹರ ಮಹದೇವ್ ಘೋಷಣೆಯೊಂದಿಗೆ ಸಕ್ರಿಯವಾಗಿ ಮಹಾಕುಂಭ ಮೇಳದಲ್ಲಿ ಪೇಮ್ ಗಿರಿ ಮಹಾರಾಜ್ ಪಾಲ್ಗೊಂಡಿದ್ದಾರೆ. ಕೆವಿನ್ ಬುಬ್ರಿಸ್ಕಿ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಾಬಾ ಫೋಟೋ ಪೋಸ್ಟ್ ಮಾಡಲಾಗಿದೆ. ಪ್ರೇಮ್ ಗಿರಿ ಮಹಾರಾಜ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಬೆನ್ನಲ್ಲೇ ಭಾರಿ ಜನಪ್ರಿಯರಾಗಿದ್ದಾರೆ.

    ಪ್ರೇಮ್ ಗಿರಿ ಮಹಾರಾಜ್ ಪ್ರತಿ ದಿನ ಹಿಂದೂ ಧರ್ಮದ ಆಚರಣೆ, ಪದ್ಧತಿಗನ್ನು ಅನುಸರಿಸುತ್ತಾರೆ. ಜೊತಗೆ ಪ್ರತಿ ದಿನ ವ್ಯಾಯಾಮ ಮಾಡಿ ದೇಹವನ್ನು ಫಿಟ್ ಅಂಡ್ ಫೈನ್ ಆಗಿ ಇಟ್ಟಿದ್ದಾರೆ. ಮಸ್ಕ್ಯುಲರ್ ಬಾಬಾರನ್ನು ಹಲವು ಭಕ್ತರು ಭೇಟಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಐತಿಹಾಸಿಕ ಮಹಾಕುಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದೆ ಭಾಗ್ಯ ಎಂದು ಪ್ರೇಮ್ ಗಿರಿ ಮಹಾರಾಜ್ ಹೇಳಿದ್ದಾರೆ. ಮಸ್ಕ್ಯುಲರ್ ಬಾಬಾ ಮೂಲ ರಷ್ಯ ಆದರೆ ಕಳೆದ ಕೆಲ ವರ್ಷಗಳಿಂದ ಬಾಬಾ ನೇಪಾಳದಲ್ಲಿ ನೆಲೆಸಿದ್ದಾರೆ. ನೇಪಾಳದ ತಪೋವನಗಳಲ್ಲಿ ಪ್ರತಿ ದಿನ ಆಧ್ಯಾತ್ಮ, ಧ್ಯಾನ, ಪೂಜೆಗಳ ಮೂಲಕ ಹಲವು ಅನುಯಾಯಿಗಳನ್ನು ಪಡೆದಿದ್ದಾರೆ. ಮಹಾಕುಂಭ ಮೇಳೆ ಜನವರಿ 13ರಂದು ಆರಂಭಗೊಂಡಿದೆ. 45 ದಿನಗಳ ಕಾಲ ನಡೆಯಲಿರುವ ಈ ಮಹಾಕುಂಭ ಮೇಳೆ ಫೆಬ್ರವರಿ 26ರ ವರೆಗೆ ನಡೆಯಲಿದೆ. ಕೋಟ್ಯಾಂತರ ಭಕ್ತರು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಪುಣ್ಯಸ್ನಾನ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ಒಟ್ಟು 40 ರಿಂದ 45 ಕೋಟಿ ಮಂದಿ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಮದುವೆಯಾಗುವ ಹೊಸ್ತಿಲಲ್ಲಿ ಇರುವ ಯುವ ಸಮೂಹಕ್ಕೆ ಕಿವಿಮಾತು..

    Published

    on

    ಸಾವಿರಾರು ನೀರಿಕ್ಷೆಗಳೊಂದಿಗೆ ಜನರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಸಾಮಾನ್ಯ. ಆದರೆ ನಿರೀಕ್ಷೆಗಳೆಲ್ಲವೂ ಯಾವಾಗಲೂ ನನಸಾಗುವುದಿಲ್ಲ, ಹೂವಿನ ಜೊತೆಗೆ ಮುಳ್ಳು ಇರುವಂತೆಯೇ ಸುಖದ ಜೊತೆ ಕಷ್ಟವೂ ಇರುತ್ತದೆ. ಅವೆಲ್ಲವನ್ನು ಸರಿದೂಗಿಸಿಕೊಂಡು ಹೋದರಷ್ಟೇ ಜೀವನ ಸುಖಕರವಾಗಿರುತ್ತದೆ. ಹಾಗಂತ ಎಲ್ಲವನ್ನು ಸಹಿಸಿಕೊಂಡು ಹೋಗಲೇಬೇಕೆಂದೆನಿಲ್ಲ, ಆದರೆ ಕೆಲವು ತಾಳ್ಮೆಯಿಂದ ತೆಗೆದುಕೊಂಡ ನಿರ್ಧಾರಗಳು ನಮ್ಮ ಬದುಕನ್ನು ಹಸನಾಗಿಸಬಹುದು. ಹೀಗಿರುವಾಗ ನೂರೆಂಟು ಕನಸುಗಳನ್ನು ಹೊತ್ತು ಹೊಸದಾಗಿ ಮದುವೆಯಾದವರಿಗೆ, ಮದುವೆಯಾಗುತ್ತಿರುವವರಿಗೆ, ಮದುವೆಯಾಗಲು ತುದಿಗಾಲಲ್ಲಿ ನಿಂತಿರುವವರಿಗೆ ಕೆಲ ಕಿವಿಮಾತುಗಳು ಇಲ್ಲಿವೆ.

    ಸೌಂದರ್ಯ ಹಾಗೂ ಬ್ಯಾಂಕ್ ಬ್ಯಾಲೆನ್ಸ್‌ಗಿಂತಲೂ ಹೆಚ್ಚಾಗಿ ಸಂಗಾತಿಯ ಗುಣನಡವಳಿಕೆಗಳು ಸುಮಧುರ ದಾಂಪತ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ. ಚೆಂದ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲವೂ ಇದ್ದು, ಅವರು ನಮ್ಮಲ್ಲಿ ಗೌರವಯುತವಾಗಿ ನಡೆಸಿಕೊಳ್ಳುವುದಿಲ್ಲವೆಂದರೆ ಎಲ್ಲವೂ ನಿಷ್ಪ್ರಯೋಜಕ.ಸರಿ ತಪ್ಪುಗಳ ಪ್ರಶ್ನೆಗಳಿಗಿಂತ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ. ಯಾರು ತಪ್ಪು ಯಾರು ಸರಿ ಎಂದು ಹೋರಾಟ ಮಾಡುವವರಿಗಿಂತ ಚೆನ್ನಾಗಿ ಜೀವನ ಮಾಡುತ್ತಿರುವುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ.ರೋಮ್ಯಾನ್ಸ್ ದಾಂಪತ್ಯದ ಭಾಗವಷ್ಟೇ ಅದೇ ಎಲ್ಲವೂ ಅಲ್ಲ, ಕೆಲವೊಂದು ರಹಸ್ಯಗಳಾಗಿದ್ದರೆಯೇ ಚಂದ. ಭಾರತದಲ್ಲಿ ಮದುವೆ ಕೇವಲ ಇಬ್ಬರು ಗಂಡು ಹೆಣ್ಣಿಗೆ ಸಂಬಂಧಿಸಿದ್ದಲ್ಲ, ಇದು ಸಂಪೂರ್ಣವಾಗಿ ಕುಟುಂಬ, ಉದ್ಯೋಗ ಜೀವನ, ಬದುಕಿನ ವಾಸ್ತವತೆ, ಸಾಮಾಜಿಕ ಸಾಂಸ್ಕೃತಿಕ ನಂಬಿಕೆಗೆ ಸಂಬಂಧಿಸಿದ ವಿಚಾರವಾಗಿದೆ.

    ಮದುವೆಯಾದ ತಕ್ಷಣ ಅದೇಕೆ ಇದೇಕೆ ಅಂತ ಪ್ರಶ್ನಿಸುತ್ತಾ ಮನೆಯವರನ್ನೆಲ್ಲಾ ಎದುರು ಹಾಕಿಕೊಳ್ಳಬಾರದು. ಯಶಸ್ವಿ ಮದುವೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಫಾರ್ಮುಲಾಗಳಿಲ್ಲ. ಪ್ರತಿಯೊಂದು ಜೋಡಿಯೂ ವಿಭಿನ್ನ, ಈ ಆತ್ಮ ಸಮ್ಮಿಲನಕ್ಕೆ ಏನು ಕಾರಣವಿರಬಹುದು ಎಂಬುದನ್ನು ಕೇವಲ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರ ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತೋರಿಸುವಂತೆಯೇ ಮದುವೆ ಜೀವನ ಇರುವುದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೊಗಳನ್ನು ಹಾಕಿಕೊಂಡು ಎಂಜಾಯ್ ಮಾಡುತ್ತಿರುವ ಜೋಡಿಯ ಜೀವನದ ಜೊತೆ ನಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳಬಾರದು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಶೋಕಿ ಮಾಡುವವರು ವಾಸ್ತವದಲ್ಲಿ ಇತರರಿಗಿಂತ ಬಹಳ ಕೆಟ್ಟದಾಗಿ ಹೊಡೆದಾಡಿಕೊಂಡಿರುತ್ತಾರೆ. ಜೊತೆಯಾಗಿ ಸಾಗಲು ಕಷ್ಟಪಡುತ್ತಿರುತ್ತಾರೆ. ಕಿತ್ತಾಟವನ್ನು ಯಾವ ದಂಪತಿಯೂ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಿಲ್ಲ. ಸುಖಿ ದಾಂಪತ್ಯ ಜೀವನಕ್ಕಾಗಿ ಈ ವಿಚಾರಗಳು ಸಣ್ಣ ವಿಚಾರಗಳನ್ನು ನೆನಪಿಟ್ಟು ಬಾಳುವುದು ಉತ್ತಮ.

    Continue Reading

    International news

    ಪೆಟ್ರೋಲ್ ಟ್ಯಾಂಕರ್ ಸ್ಪೋ*ಟ: 70 ಮಂದಿ ಸಾ*ವು

    Published

    on

    ಮಂಗಳೂರು/ಮೈದುಗುರಿ (ನೈಜೀರಿಯಾ) : ಉತ್ತರ ನೈಜೀರಿಯಾದಲ್ಲಿ ಶನಿವಾರ ಪೆಟ್ರೋಲ್ ಟ್ಯಾಂಕರ್ ಸ್ಪೋ*ಟಗೊಂಡ ಪರಿಣಾಮ ಕನಿಷ್ಠ 70 ಜನ ಮೃ*ತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ದೇಶದ ರಾಷ್ಟ್ರೀಯ ತುರ್ತು ಏಜೆನ್ಸಿ ತಿಳಿಸಿದೆ.

    ವರದಿಗಳ ಪ್ರಕಾರ, ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾ*ವಿಗೀಡಾಗಿದ್ದು, 56 ಜನ ಗಾಯಗೊಂಡಿದ್ದಾರೆ. 15ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.

    ಇದನ್ನೂ ಓದಿ: ರಾಯಚೂರು ಡಿಸಿ ಆಗಿದ್ದವರು…ಸನ್ಯಾಸಿ ಆಗಿದ್ದು ಹೇಗೆ ?

    ಕಳೆದ ಅಕ್ಟೋಬರ್‌ನಲ್ಲಿ ಜಿಗಾವಾ ರಾಜ್ಯದಲ್ಲಿ ಇದೇ ರೀತಿಯ ಸ್ಪೋ*ಟ ಸಂಭವಿಸಿದ್ದು, 147 ಮಂದಿ ಸಾ*ವಿಗೀಡಾಗಿದ್ದರು.

     

    Continue Reading

    FILM

    ಸೈಫ್ ಮೇಲೆ ಹ*ಲ್ಲೆ ಪ್ರಕರಣ; ಪ್ರಮುಖ ಆರೋಪಿ ಬಾಂಗ್ಲಾ ಪ್ರಜೆ ಅರೆಸ್ಟ್

    Published

    on

    ಮಂಗಳೂರು/ಥಾಣೆ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾ*ಳಿಯ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ . ಮಹಾರಾಷ್ಟ್ರದ ಥಾಣೆಯಲ್ಲಿ ಆರೋಪಿ ಮೊಹಮ್ಮದ್‌ ಇಲಿಯಾಸ್ ಅಲಿಯಾಸ್‌ ವಿಜಯ್‌ ದಾಸ್‌‌ ಯಾನೆ ಬಿಜೋಯ್‌ ದಾಸ್‌ನನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿ ಬಾಂಗ್ಲಾದೇಶದವನಾಗಿದ್ದು,  ಭಾರತಕ್ಕೆ ಬಂದ ಮೇಲೆ ತನ್ನ ಹೆಸರನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ನಿಂದ ಜಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ ಎನ್ನಲಾಗಿದೆ. ಅಲ್ಲದೇ, ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಇಲಿಯಾಸ್‌ಗಳನ್ನು ಆತ ಬಳಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಕೃ*ತ್ಯ ಎಸಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.  ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಆತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

    ಇದನ್ನೂ ಓದಿ : ಮೊಬೈಲ್‌ಗೆ ಸಿಮ್‌ ಹಾಕಿದಾಕ್ಷಣ ಬ್ಯಾಂಕ್ ಅಕೌಂಟ್‌ನಿಂದ ಕೋಟಿಗಟ್ಟಲೆ ಹಣ ಮಾಯ

    ಕಳೆದ ಗುರುವಾರ(ಜ.16) ಬೆಳಗಿನ ಜಾವ 2 ಗಂಟೆಗೆ ನಟ ಸೈಫ್ ಅಲಿ ಖಾನ್‌ ನಿವಾಸಕ್ಕೆ ನುಗ್ಗಿದ್ದ ಆರೋಪಿ ನಟನ ಮೇಲೆ ಹ*ಲ್ಲೆ ನಡೆಸಿದ್ದ. ಈ ಹ*ಲ್ಲೆಯಿಂದ ಸೈಫ್‌ ಅವರ ಕುತ್ತಿಗೆ ಹಾಗೂ ಬೆನ್ನಿನ ಭಾಗದಲ್ಲಿ ಗಾಯಗಳಾಗಿತ್ತು. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending