ಕಡಬ: ಚಲಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಕಾರೊಂದು ಸುಟ್ಟು ಭಸ್ಮವಾದ ಘಟನೆ ಕೊಂಬಾರು ಗ್ರಾಮದ ಪೆರುಂದೋಡಿ ಕಟ್ಟೆ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕಾರಿನಲ್ಲಿದ್ದ ಪಟ್ರಮೆ ನಿವಾಸಿ ಕಾರು ಮಾಲಕ ಆನಂದ ಗೌಡ ಹಾಗೂ ಮಗು ಸಹಿತ ನಾಲ್ವರು ತತ್‌ಕ್ಷಣ ಕಾರ್‌ನಿಂದ ಇಳಿದು ಬಚಾವ್ ಆಗಿದ್ದು ಒಬ್ಬರಿಗೆ ಮಾತ್ರ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ತಿಳಿದುಬಂದಿದೆ.
ಅನಂದ ಗೌಡ ಎಂಬವರು ತನ್ನ ಫ್ಯಾಮಿಲಿ ಜೊತೆ ಮತ್ತೊಂದು ಸಂಬಂಧಿಕರ ಮನೆಗೆ ಕಾರಿನಲ್ಲಿ ಹೊರಟಿದ್ದರು.
ಆದರೆ ಅಚಾನಕ್ ಆಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದರಲ್ಲಿದ್ದವರು ಇಳಿಯುತ್ತಿದ್ದಂತೆ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಪುತ್ತೂರು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದರಾದರೂ ಅಷ್ಟರಲ್ಲೇ ಕಾರು ಸುಟ್ಟು ಬೂದಿಯಾಗಿತ್ತು.