ಋಗ್ ಸಂಹಿತಾ ಮಹಾ ಯಾಗದ ಪೂರ್ಣಾಹುತಿ..!
ಚಿತ್ರ : ಮಂಜು ನೀರೇಶ್ವಾಲ್ಯ
ಮಂಗಳೂರು : ಅಧಿಕ ಮಾಸ ಪ್ರಯುಕ್ತ ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ 7 ದಿನ ಗಳ ಪರ್ಯಂತ ನಡೆದ ಋಗ್ ಸಂಹಿತಾ ಯಾಗದ ಮಹಾ ಪೂರ್ಣಾಹುತಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು.
ಈ ಪ್ರಯುಕ್ತ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ದೇವಸ್ಥಾನದಲ್ಲಿ ವಿಶೇಷ ಪಂಚಾಮೃತ ಮತ್ತು ಪುಷ್ಪಾಲಂಕಾ ರ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರು ಶ್ರೀ ವೆಂಕಟರಮಣ ದೇವಳದ ಮೊಕ್ತೇಸರರಾದ ಕೆ ಪಿ ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ , ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಸದಾಶಿವ್ ಪೈ , ಶಶಿಧರ್ ಪೈ , ರತ್ನಕರ್ ಕಾಮತ್ , ಅನಿಲ್ ಕಾಮತ್ , ರಾಧಾಕೃಷ್ಣ ಶೆಣೈ , ಪ್ರಶಾಂತ್ ಪೈ ಉಪಸ್ಥಿತರಿದ್ದರು .