Connect with us

    BIG BOSS

    ಬಿಗ್ ಬಾಸ್ ಮನೆಯಲ್ಲಿ ಮತ್ತೆ ಗಲಾಟೆ; ರಜತ್ ಗೆ ಹೊಡೆದ್ರಾ ಧನರಾಜ್ ?

    Published

    on

    ಮಂಗಳೂರು/ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 11, 71ನೇ ದಿನಕ್ಕೆ ಕಾಲಿಟ್ಟಿದೆ. 11ನೇ ವಾರಕ್ಕೆ ಕಾಲಿಟ್ಟಿರೋ ನಡುವೆ ದೊಡ್ಮನೆಯಲ್ಲಿ ಮತ್ತೊಂದು ಗಲಾಟೆ ನಡೆದಿದೆ.

    ಬಿಗ್ ಬಾಸ್ ಮನೆಗೆ ಹಳೆಯ ಸ್ಪರ್ಧಿಗಳು ಆಗಮಿಸುತ್ತಿದ್ದು, ತುಕಾಲಿ ಸಂತೋಷ್ ದೊಡ್ಮನೆಗೆ ಎಂಟ್ರಿ ಕೊಟ್ಟು, ಅವರ ಸಮ್ಮುಖದಲ್ಲೇ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು. ಅಲ್ಲಿ ಧನರಾಜ್, ರಜತ್ ಅವರನ್ನು ನಾಮಿನೇಟ್ ಮಾಡಿದ್ದರು. ಇದೇ ವಿಚಾರಕ್ಕೆ ರಜತ್ ಧನರಾಜ್ ಜೊತೆಗೆ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

    ಇದನ್ನೂ ಓದಿ: ನಾಟಿ ಕೋಳಿಯನ್ನೇ ಲಂಚವಾಗಿ ಕೇಳಿದ ಬ್ಯಾಂಕ್ ಮ್ಯಾನೇಜರ್ !

    ಸಣ್ಣ ವಿಚಾರಕ್ಕೆ ಶುರುವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇನ್ನೂ ಬಿಗ್ ಬಾಸ್ ಮನೆಗೆ ಸೀಸನ್ 10 ಸ್ಪರ್ಧಿಗಳಾದ ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಎಂಟ್ರಿ ಕೊಟ್ಟಿದ್ದಾರೆ.

    ಇನ್ನೂ ರಜತ್ ಹಾಗೂ ಧನ್ ರಾಜ್ ನಡುವೆ ನಡೆಯುತ್ತಿದ್ದ ಫೈಟ್ ಬಿಡಿಸಲು ಮಂಜಣ್ಣ ಮತ್ತು ಗೌತಮಿ ಓಡಿ ಬಂದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ.

    BIG BOSS

    ಮುನಿಸು ಮರೆತು ಒಂದಾಗ್ತಾರಾ ಗೌತಮಿ, ಮೋಕ್ಷಿತಾ; ಮತ್ತೆ ರೌದ್ರವತಾರ ತಾಳಿದ ಮಂಜು !

    Published

    on

    ಮಂಗಳೂರು/ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಉತ್ತಮ ಗೆಳೆತನ ಹೊಂದಿದ್ದ ಗೌತಮಿ ಹಾಗೂ ಮಂಜು ಈಗ ವೈರಿಗಳಾಗಿದ್ದಾರೆ. ಅದರಲ್ಲೂ ಕಳೆದ ಮೂರು ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿ ಮಂಜು, ಗೌತಮಿ ವರ್ಸಸ್ ಮೋಕ್ಷಿತಾ ಎನ್ನುವಂತಾಗಿತ್ತು.

    ಮಹಾರಾಜ ಮತ್ತು ಯುವರಾಣಿ ಟಾಸ್ಕ್ ನಿಂದ ಆರಂಭವಾಗಿದ್ದ ಇವರ ಜಿದ್ದಾಜಿದ್ದಿನ ಈ ಫೈಟ್ ಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.

    ಇಂದು ಕಲರ್ಸ್‌ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಮಂಜುಗೆ ಗೌತಮಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಕೂತು ಮಾತನಾಡುವ ವೇಳೆ ಗೌತಮಿ ಮಂಜುಗೆ ಬುದ್ದಿ ಹೇಳಿದ್ದಾರೆ. ಮಂಜುಗೆ ಮೋಕ್ಷಿತಾ ಬಗ್ಗೆ ವಿಚಾರಿಸಿದ್ದಾರೆ. ಮೋಕ್ಷಿತಾ ಅವರು ಏನು ಹೇಳಿದರು? ಅವರು ಇಬ್ಬರೇ ಮಾತನಾಡುತ್ತಾರೆ ಎಂದು ಆರೋಪಿಸಿದರು.

    ಇದನ್ನೂ ಓದಿ: ದೊಡ್ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ?

    ನಾವು ಇಬ್ಬರೇ ಇರಬೇಕಾದರೂ ಕೂಡ ನೀವೇ ಮಾತನಾಡುತ್ತೀರಿ ಎಂದು ನನಗೆ ಅನಿಸಿತ್ತು. ಅವರು ಹೇಳಿದ ಲೈನ್ ಗಳು ಕೂಡ ನನಗೆ ಸರಿಯಾಗಿ ಹೊಂದಾಣಿಕೆ ಇದೆ ಎಂದು ಅನಿಸಿತ್ತು. ನೀವು ಹೇಳಿದ ಹಾಗೆ ನೀವೇ ಇಲ್ಲ. ಇಲ್ಲಿ ಗೆಳೆಯ, ಗೆಳತಿ ಗೆಳತನ ಇರಲ್ಲ ಎಂದಿದ್ದಾರೆ ಗೌತಮಿ.

    ಇಷ್ಟಕ್ಕೂ ಮಂಜು ಅವರ ಕೋಪಕ್ಕೆ ಕಾರಣ, ಗೌತಮಿ ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಗಿಟ್ಟಿರುವುದು. ಇದು ಮಂಜು ಅವರನ್ನು ಗೌತಮಿ ವಿರುದ್ದ ಮತ್ತಷ್ಟು ಕೆರಳಿಸುವಂತೆ ಮಾಡಿದೆ.

    ಇನ್ನೊಂದು ಕಡೆ ಗೌತಮಿ, ಮೋಕ್ಷಿತಾ ಬಗ್ಗೆ ತುಂಬಾ ಸಹನೆಯ ಮಾತುಗಳನ್ನಾಡಿದ್ದಾರೆ. ಹೀಗಾಗಿ, ಗೌತಮಿ ಮತ್ತು ಮೋಕ್ಷಿತಾ ಮತ್ತೆ ಒಂದಾಗ್ತಾರಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

    Continue Reading

    BIG BOSS

    ದೊಡ್ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ?

    Published

    on

    ಮಂಗಳೂರು/ಬೆಂಗಳೂರು: ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ ದಿನಕ್ಕೊಂದು ಹೊಸ ಹೊಸ ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ವಾರ ದೊಡ್ಮನೆಯಲ್ಲಿ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದಿನ ಸೀಸನ್ ಗಳಲ್ಲಿಯೂ ಡಬಲ್ ಎಲಿಮಿನೇಷನ್ ಪದ್ದತಿ ಇತ್ತು.

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ವಾರ ಭಿನ್ನವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಕಳೆದ ಸೀಸನ್ ನ ಸ್ಪರ್ಧಿಗಳು ಬಂದು ನಾಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಕಾರ್ತಿಕ್ ಮಹೇಶ್, ನಮ್ರತಾ ಗೌಡ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಮೊದಲಾದವರು ಬಿಗ್ ಬಾಸ್ ಮನೆ ಒಳಗೆ ಬಂದಿದ್ದರು. ಅವರುಗಳು ಫನ್ ಮಾಡುವುದರ ಜೊತೆಗೆ, ಅವರ ನೇತೃತ್ವದಲ್ಲಿ ನಾಮಿನೇಷನ್ ಪ್ರಕ್ರೀಯೆ ನಡೆದಿದೆ.

    ಇದನ್ನೂ ಓದಿ: ಭಾರತದ ಯುದ್ದ ನೌಕೆ ಹಸ್ತಾಂತರ ವೇಳೆ ಒಗ್ಗೂಡಿದ ರಷ್ಯಾ- ಉಕ್ರೇನ್ !

    ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದೇ ಎನ್ನುವ ಪ್ರಶ್ನೆಯೂ ಕಾಡಿದೆ. ಸದ್ಯ ದೊಡ್ಮನೆಯಲ್ಲಿ 12 ಸ್ಪರ್ಧಿಗಳು ಇದ್ದಾರೆ. ಎಲಿಮಿನೇಷನ್ ನಡೆದರೆ ದೊಡ್ಮನೆಯ ಸ್ಪರ್ಧಿಗಳ ಸಂಖ್ಯೆ 10ಕ್ಕೆ ಇಳಿಕೆ ಆಗಲಿದೆ. ಆ ಬಳಿಕ ಆಟ ಮತ್ತಷ್ಟು ದುರ್ಗಮ ಆಗಲಿದೆ.

    ದೊಡ್ಮನೆಯಲ್ಲಿರುವ 11 ಸ್ಪರ್ಧಿಗಳ ಪೈಕಿ ಈ ವಾರ ಬಹುತೇಕ ಘಟಾನುಘಟಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮಿನೇಟ್ ಲಿಸ್ಟ್ ನಲ್ಲಿದ್ದಾರೆ. ಈ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಧನರಾಜ್, ಶಿಶೀರ್ ಹಾಗೂ ಚೈತ್ರಾಗೆ ಹೆಚ್ಚಿನ ಭಯ ಇದೆ.

    ಒಂದು ವೇಳೆ ಡಬಲ್ ಎಲಿಮಿನೇಷನ್ ನಡೆದರೆ ಯಾವ ಇಬ್ಬರು ಸ್ಪರ್ಧಿಗಳು ಹೊರಕ್ಕೆ ಬರಬಹುದು ಎಂಬ ಪ್ರಶ್ನೆ ಬಿಗ್ ಬಾಸ್ ನ ವಿಕ್ಷಕರಲ್ಲಿ ಕೂತುಹಲ ಕೆರಳಿಸಿದೆ.

     

    Continue Reading

    BIG BOSS

    ಚೈತ್ರಾ ಕಣ್ಣೀರು, ಐಶ್ವರ್ಯ ಆಕ್ಟಿವಿಟಿ ರೂಮ್….ಎಲಿಮಿನೆಟ್ ಆಗಿದ್ದು ?

    Published

    on

    ಮಂಗಳೂರು/ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಈ ವಾರದ ಬಿಗ್ ಬಾಸ್ ಎಲಿಮಿನೇಷನ್​ ಬಗ್ಗೆ ಸುಳಿವು ಸಿಕ್ಕಿದೆ. ಚೈತ್ರಾ ಮತ್ತು ಐಶ್ವರ್ಯಾ ಇಬ್ಬರೂ ಕೂಡ ಎಲಿಮಿನೇಟ್ ಆಗುವ ಹಂತಕ್ಕೆ ಬಂದಿದ್ದಾರೆ. ‘ನೀವು ಹೊರಗೆ ಹೋಗಲು ಬೇರೆ ದಾರಿ ಇದೆ’ ಎಂದು ಸುದೀಪ್​ ಹೇಳಿದ್ದಾರೆ.


    ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಇಬ್ಬರು ಸ್ಪರ್ಧಿಗಳನ್ನು ಬಾಟಂ 2ಕ್ಕೆ ತಂದು ನಿಲ್ಲಿಸಿದ್ದಾರೆ. ಅದರಲ್ಲಿ ಐಶ್ವರ್ಯಾ ಹಾಗೂ ಚೈತ್ರಾ ಕುಂದಾಪುರ ಇದ್ದಾರೆ. ಇವರಲ್ಲಿ ಈ ಸಲ ಮನೆಯಿಂದ ಒಬ್ಬರಾ ಅಥವಾ ಇಬ್ಬರು ಹೋಗ್ತಿರಾ ಅಂತ ಕೇಳಿದ್ದಾರೆ.

    ಇದಾದ ಬಳಿಕ ಇಬ್ಬರು ಹೊರಗಡೆ ಬರೋದಾದರೇ ಮುಖ್ಯದ್ವಾರದಿಂದ ಬರುತ್ತಿಲ್ಲ, ಬದಲಾಗಿ ಬೇರೆ ದಾರಿ ಇದೆ ಎಂದು ಹೇಳುತ್ತಾ ಚೈತ್ರಾ ಕುಂದಾಪುರಗೆ ಕನ್ಫೆಷನ್ ರೂಮ್​ಗೆ ಕಳುಹಿಸಲಾಗಿದೆ. ಐಶ್ವರ್ಯಾ ಅವರನ್ನು ಆಕ್ಟಿವಿಟಿ ರೂಮ್​ಗೆ ಕಳುಹಿಸಲಾಗಿದೆ. ಇನ್ನೂ ಕನ್ಫೆಷನ್ ರೂಮ್​ಗೆ ಹೋಗಿರೋ ಚೈತ್ರಾ ಕುಂದಾಪುರ ಅಲ್ಲಿಂದನೇ ಬಿಗ್​ಬಾಸ್​ ಮನೆಯಲ್ಲಿ ಏನೆಲ್ಲಾ ಆಗ್ತಾ ಇದೆ ಎಂದು ನೋಡ್ತಾ ಇರ್ತಾರೆ. ಚೈತ್ರಾ ಕುಂದಾಪುರ ಅವರೇ ಬಿಗ್ ಬಾಸ್ ಮನೆಯಿಂದ ಔಟ್ ಆದರು ಅಂತಾನೇ ಎಲ್ಲರೂ ಭಾವಿಸಿದ್ದಾರೆ.

    ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಯಾವ ಸ್ಪರ್ಧಿಗೆ ಹೆಚ್ಚು ಟಿಆರ್ ಪಿ ಗೊತ್ತಾ ?

    ಆದರೆ ಕೊನೆಯ ಕ್ಷಣದಲ್ಲಿ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಅದೇನೆಂದರೆ ಬಿಗ್ ಬಾಸ್ ಮನೆಯಿಂದ ಯಾವ ಸ್ಪರ್ಧಿ ಆಚೆ ಹೋಗಬೇಕು ಎಂದು ಕೇಳಿದ್ದಾರೆ. ಆಗ ಮನೆಯಲ್ಲಿರೋ ಸ್ಪರ್ಧಿಗಳು ಚೈತ್ರಾ ಕುಂದಾಪುರ ಹೆಸರನ್ನು ಹೇಳ್ತಾರೆ. ಇದಾದ ಬಳಿಕ ಕಿಚ್ಚ ಸುದೀಪ್ ಅವರ ಆದೇಶದಂತೆ ಚೈತ್ರಾ ಕುಂದಾಪುರ ಕನ್ಫೆಷನ್ ರೂಮ್​ಗೆ ಹೋಗಿದ್ದಾರೆ. ಅಲ್ಲಿ ಅವರಿಗೆ ಒಂದು ಹೆಡ್​ ಸೆಟ್ ಕೊಡಲಾಗುತ್ತೆ. ಯಾವೆಲ್ಲಾ ಸ್ಪರ್ಧಿ ಯಾವ ವಿಚಾರದ ಬಗ್ಗೆ ಮಾತಾಡುತ್ತಿದ್ದಾರೆ ಅಂತ ಕೇಳಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಕೆಲವು ಸ್ಪರ್ಧಿಗಳು ಚುಚ್ಚು ಮಾತುಗಳನ್ನು ಆಡಿದ್ದು, ಈ ಮಾತುಗಳನ್ನು ಕೇಳಸಿಕೊಂಡ ಚೈತ್ರಾ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನೂ ಹಲವು ದಿನಗಳಿಂದ ಸೀಕ್ರೆಟ್ ರೂಮ್ ಬಗ್ಗೆ ಚರ್ಚೆಗಳು ನಡೆದಿತ್ತು. ಇದೀಗ ಚೈತ್ರಾ ಅವರನ್ನು ಸೀಕ್ರೆಟ್ ರೂಮ್ ಗೆ ಕಳುಹಿಸಿರುವ ಬಗ್ಗೆ ಇಂದಿನ ಸಂಚಿಕೆಯಲ್ಲಿ ನೋಡಬಹುದು.

    Continue Reading

    LATEST NEWS

    Trending