Connect with us

LATEST NEWS

ಬೆಂಗಳೂರು ಪ್ರವೇಶಿಸುವರಿಗೆ ‘ಆರ್‌ಟಿ-ಪಿಸಿಆರ್‌’ ನೆಗೆಟಿವ್ ಕಡ್ಡಾಯ-ಏಪ್ರಿಲ್ 1 ರಿಂದಲೇ ಜಾರಿ..!

Published

on

ಬೆಂಗಳೂರು:  ರಾಜ್ಯದಲ್ಲಿ ಕೊರೊನಾ ಹೊಸ ರೂಪ ಪಡೆದುಕೊಂಡು ಬಂದಿದ್ದು, ದಿನದಿಂದ ದಿನಕ್ಕೆ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರನ್ನು ಪ್ರವೇಶ ಮಾಡುವವರಿಗೆ ಸರ್ಕಾರ ಕಡ್ಡಾಯ ನಿಯಮಗಳನ್ನು ಜಾರಿ ಮಾಡಿದೆ.

ಏಪ್ರಿಲ್‌ 1ರಿಂದಲೇ ಈ ಹೊಸ ನಿಯಮ ಜಾರಿಯಾಗಲಿದೆ. ಕರ್ನಾಟಕದ ಹೊರ ಭಾಗದಿಂದ ಬೆಂಗಳೂರು ಪ್ರವೇಶಿಸುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ.

ನೆರೆಯ ಕೆಲವು ರಾಜ್ಯಗಳಲ್ಲಿ ಕರೊನಾ ಹೊಸರೂಪಾಂತರಿ ಅಟ್ಟಹಾಸ ಮೆರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ, ಇಂಥದ್ದೊಂದು ನಿಯಮ ಜಾರಿಯಾಗಿದೆ.

ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾಹಿತಿ ನೀಡಿದ್ದಾರೆ. ಕರ್ನಾಟಕ ಬಿಟ್ಟು ಹೊರಭಾಗಗಳಿಂದ ಏಪ್ರಿಲ್‌ 1ರಿಂದ ರಾಜ್ಯವನ್ನು ಪ್ರವೇಶಿಸುವವರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಿರಬೇಕು (Reverse transcription polymerase chain reaction) ಹಾಗೂ ಕರೊನಾವರದಿ ನೆಗೆಟಿವ್‌ ಇರಬೇಕು.

ಪ್ರಸ್ತುತ ಮಹಾರಾಷ್ಟ್ರ, ಕೇರಳ, ಪಂಜಾಬ್‌ ಹಾಗೂ ಚಂಡೀಗಡದಿಂದ ಬರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯವಿದೆ. ಈಗ ಎಲ್ಲಾ ರಾಜ್ಯಗಳಿಗೂ ಇದು ಅನ್ವಯ ಆಗಲಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಲು ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ಅವರು ಬಸ್‌ ನಿಲ್ದಾಣಗಳು, ಮಾರುಕಟ್ಟೆಗಳು, ಚಿತ್ರ ಮಂದಿರಗಳು, ಮದುವೆ ಹಾಗೂ ಸಮಾರಂಭಗಳ ಸಭಾಂಗಣಗಳು, ಶಾಲೆಗಳು ಹಾಗೂ ಕಾಲೇಜುಗಳ ಆವರಣಗಳಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ.

20ರಿಂದ 40 ವರ್ಷ ವಯಸ್ಸಿನವರಲ್ಲಿ ಕರೊನಾ ಹೆಚ್ಚಾಗುತ್ತಿದ್ದು, ಅವರು ಐಸೋಲೇಷನ್‌ನಲ್ಲಿ ಇರುವ ಸಂದರ್ಭಗಳಲ್ಲಿ ಹೊರಗಡೆ ತಿರುಗಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ವಾಚ್‌ ಆಯಪ್‌ ಶುರು ಮಾಡಿದ್ದೇವೆ.

ಇದರಿಂದ ಐಸೋಲೇಷನ್‌ನಲ್ಲಿ ಇರುವವರ ಮೇಲೆ ನಿಗಾ ವಹಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

LATEST NEWS

ಉಡುಪಿ : ದೇಶದಲ್ಲಿ ಕೇಸರಿ ಆಡಳಿತವೇ ನಮ್ಮ ಉದ್ದೇಶ : ಸುನಿಲ್ ಕುಮಾರ್

Published

on

ಉಡುಪಿ : ದೇಶದಲ್ಲಿ ಕೇಸರಿ ಆಡಳಿತವನ್ನು ಮಾಡಲೆಂದೇ ಬಿಜೆಪಿ ಚುನಾವಣೆಗೆ ಹೋಗುತ್ತಿದೆ. ಇದನ್ನು ಹೇಳಿಕೊಳ್ಳಲು ನಮಗೆ ಯಾವುದೇ ಸಂಕೋಚ ಇಲ್ಲ. ನಾವು ಕೇಸರಿ ಆಡಳಿತವನ್ನ ತರಲು ಹೊರಟಿದ್ದೇವೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.


ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುನಿಲ್ ಕುಮಾರ್, ಕಾಂಗ್ರೆಸ್ ಒಂದು ಕೋಮಿನವರಿಗೆ ಬೆಂಬಲ ನೀಡುತ್ತಿದೆ. ಆ ಮೂಲಕ ಇನ್ನೊಂದು ಕೋಮಿನವರು ನೆಮ್ಮದಿಯಾಗಿ ಬದುಕಬಾರದು ಅನ್ನೋದು ಅವರ ಸಿದ್ಧಾಂತ. ಇದಕ್ಕೆ ನಮ್ಮ ವಿರೋಧವಿದ್ದು, ನಾವು ರಾಷ್ಟ್ರೀಯತೆಯ ಸಂಕೇತವಾದ ಕೇಸರಿಯನ್ನೇ ಮುಂದಿಟ್ಟು ಆಡಳಿತ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್
ಚೊಂಬು ಕೊಟ್ಟಿದ್ದು ಕಾಂಗ್ರೆಸ್ :

ಕಾಂಗ್ರೆಸ್ ನೀಡಿದ ಚೊಂಬಿನ ಜಾಹಿರಾತು ವಿಚಾರವಾಗಿ ಮಾತನಾಡಿದ ಸುನಿಲ್ ಕುಮಾರ್, ಶೌಚಾಲಯ ನಿರ್ಮಾಣ ಮಾಡದೆ ಹಳ್ಳಿಯ ಮಹಿಳೆಯರಿಗೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್‌ ಸರ್ಕಾರ. ಆದ್ರೆ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕೇಸರಿ ಹಾಕಿಕೊಂಡು ದ್ವೇಷ ಮಾಡಲು ಹೊರಟಿಲ್ಲ. ನಾವು ರಾಷ್ಟ್ರದಲ್ಲಿ ಕೇಸರಿ ಆಡಳಿತ ತರಲು ಹೊರಟಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

Continue Reading

DAKSHINA KANNADA

ಪದ್ಮರಾಜ್ ಪೂಜಾರಿ ಪ್ರಚಾರ ಶೈಲಿ..! ಜನಾರ್ದನ ಪೂಜಾರಿಯನ್ನ ನೆನೆದ ಜನ…!

Published

on

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರ ಪ್ರಚಾರ ಶೈಲಿಗೆ ಜನ ಜನಾರ್ದನ ಪೂಜಾರಿಯವರನ್ನು ನೆನಪಿಸಿಕೊಳ್ತಾ ಇದ್ದಾರೆ. ಗುರುವಿನಂತೆ ಶಿಷ್ಯ ಕೂಡಾ ಪ್ರಚಾರ ಮಾಡ್ತಾ ಇರೋದು ನೋಡಿದ ಜನ ಇವರು ನಿಜವಾಗಿಯೂ ಜನಾರ್ದನ ಪೂಜಾರಿ ಅವರಂತೆ ಜನನಾಯಕ ಅಂತಿದ್ದಾರೆ.

ಜನಾರ್ದನ ಪೂಜಾರಿ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕೊನೆಯ ಸ್ಪರ್ಧೆಯನ್ನ ನೀಡಿದ್ದರು. ಹತ್ತು ವರ್ಷದ ಬಳಿಕ ಅವರ ಶಿಷ್ಯ ಪದ್ಮರಾಜ್ ಪೂಜಾರಿ ಈಗ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಪದ್ಮರಾಜ್ ಪೂಜಾರಿ ಅವರು ಜನರೊಂದಿಗೆ ಬೆರೆಯುವ ರೀತಿ, ಜನರಿಗೆ ತೋರಿಸುವ ಪ್ರೀತಿ, ಹಾಗೂ ಪ್ರಚಾರದ ವೇಳೆ ಅವರು ವರ್ತಿಸೋ ರೀತಿ ನೋಡಿದ ಸಾಕಷ್ಟು ಜನ ಜನಾರ್ಧನ ಪೂಜಾರಿ ಅವರ ಚುನಾವಣ ಪ್ರಚಾರದ ವೈಖರಿಯನ್ನು ನೆನಪಿಸಕೊಳ್ಳುವಂತೆ ಮಾಡಿದೆ.

ಸಂಸದರಾಗಿ , ಕೇಂದ್ರ ಸಚಿವರಾಗಿ, ಬಡವರ ಬಂಧು ಅಂತ ಕರೆಸಿಕೊಂಡಿದ್ದ ಜನಾರ್ದನ ಪೂಜಾರಿ ಅವರಿಗೆ ಚುನಾವಣೆಯಲ್ಲಿ ಸೋಲಾಗಿದ್ರೂ, ಜನರು ಮಾತ್ರ ಅವರನ್ನು ಮರೆತಿಲ್ಲ. ಜನಾರ್ದನ ಪೂಜಾರಿಯವರು ರಾಜಕೀಯದಿಂದ ದೂರ ಉಳಿದು ವರ್ಷಗಳೇ ಕಳೆದ್ರು ಜನರಿಗೆ ಅವರ ಮೇಲಿರೋ ಪ್ರೀತಿ ಅಭಿಮಾನ ಕಡಿಮೆ ಆಗಿಲ್ಲ. ಚುನಾವಣಾ ಸಮುಯದಲ್ಲಿ ಪ್ರಚಾರಕ್ಕೆ ಇಳಿಯುತ್ತಿದ್ದ ಜನಾರ್ದನ ಪೂಜಾರಿ ಅವರ ಪ್ರಚಾರ ವೈಖರಿಯನ್ನಂತು ಜನ ಮರೆಯೋದೆ ಕಷ್ಟ. ಮುಂಜಾನೆಯಿಂದ ರಾತ್ರಿ ವರೆಗೂ ಅವರು ಮತಯಾಚನೆ ಮಾಡುತ್ತಿದ್ದ ರೀತಿಗೆ ಜನರೇ ದಂಗಾಗಿ ಹೋಗ್ತಾ ಇದ್ರು. ಇನ್ನು ನಡೆದುಕೊಂಡು ಮತಯಾಚಿಸೋ ಜನಾರ್ದನ ಪೂಜಾರಿ ಅವರ ಜೊತೆ ಕಾರ್ಯಕರ್ತರು ಓಡಿಕೊಂಡು ಹೋಗಬೇಕು ಅನ್ನುವಷ್ಟು ವೇಗವಾಗಿ ಸಾಗ್ತಾ ಇದ್ರು. ಅದೇ ಸೇಮ್ ಟು ಸೇಮ್ ಅನ್ನುವಂತೆ ಪದ್ಮರಾಜ್ ಪೂಜಾರಿ ಕೂಡಾ ಪ್ರಚಾರ ಮಾಡ್ತಾ ಇದ್ದಾರೆ.

ಪದ್ಮರಾಜ್ ಪೂಜಾರಿಯವರು ಒಮ್ಮೆ ಬೈಕ್‌ನಲ್ಲಿ ಮತಯಾಚನೆಗೆ ತೆರಳಿದ್ರೆ, ಮತ್ತೊಮ್ಮೆ ಜೀಪ್ ಏರಿ ರೋಡ್ ಶೋ ನಡೆಸ್ತಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಪಾದಯಾತ್ರೆ ಮಾಡಿದ್ರೆ ಅವರ ವೇಗದ ನಡಿಗೆ ಮತ್ತು ಓಡಿಕೊಂಡು ಹೋಗುವ ಅವರ ಶೈಲಿ ಜನಾರ್ದನ ಪೂಜಾರಿ ಅವರನ್ನು ನೆನಪಿಸುತ್ತದೆ. ಎಲ್ಲೇ ಹೋದ್ರು ಜನ ಪದ್ಮರಾಜ್ ಅವರನ್ನು ಮುತ್ತಿಕೊಂಡು ಪ್ರೀತಿಯಿಂದ ಮಾತಾಡಿಸ್ತಾ ಇದ್ದಾರೆ. ಅದೇ ರೀತಿ ಪದ್ಮಾರಾಜ್ ಕೂಡಾ ಜನರಿಗೆ ಬಹಳಷ್ಟು ಹತ್ತಿರವಾಗಿ ಅಭಿಮಾನ ಪ್ರೀತಿಯನ್ನ ಗಳಿಸಿಕೊಂಡಿದ್ದಾರೆ. ಸದ್ಯಕ್ಕಂತು ಜನ ಜನಾರ್ದನ ಪೂಜಾರಿ ಅವರ ಸ್ಥಾನ ತುಂಬಲು ಪದ್ಮರಾಜ್ ಅವರೇ ಸರಿಯಾದ ಅಭ್ಯರ್ಥಿ ಅಂತ ಮಾತನಾಡುತ್ತಿದ್ದು, ಅವರ ಗೆಲುವಿಗೆ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್

Continue Reading

LATEST NEWS

ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್

Published

on

ಉಡುಪಿ : ರಾಜ್ಯದಲ್ಲಿ ಅನ್ಯಕೋಮಿನವರು ದೊಡ್ಡ ಪ್ರಮಾಣದಲ್ಲಿ ವಿಜ್ರಂಭಿಸಲು ಆರಂಭ ಮಾಡಿದ್ದಾರೆ. ರಾಜ್ಯದಲ್ಲಿ ಒಂದಾದ ನಂತರ ಒಂದು ಘಟನೆಗಳು ನಡೆಯುತ್ತಿದೆ. ಅನ್ಯಕೋಮಿನವರ ಈ ಪ್ರಮಾಣದ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತ ಮತ್ತು ಧೋರಣೆಯೇ ಮುಖ್ಯ ಕಾರಣ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದರು.


ಹುಬ್ಬಳ್ಳಿಯ ನೇಹಾ ಹಿರೇಮಠ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯನವರು ನೇಹಾ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ವೈಯಕ್ತಿಕ ಘಟನೆ ಎಂದು ಹೇಳುತ್ತಾರೆ.

ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣ : ಆಕ್ರೋಶ ಹೊರ ಹಾಕಿದ ಸಿನಿತಾರೆಯರು

ಮುಖ್ಯಮಂತ್ರಿಯಾದವರು ಇಂತಹ ಘಟನೆಯಾದಾಗ ಜಾರಿಕೊಂಡರೆ ರಾಜ್ಯದ ರಕ್ಷಣೆ ಯಾರು ಮಾಡಬೇಕು? ರಾಮೇಶ್ವರಂ ಬಾಂಬ್ ಸ್ಫೋಟ, ಪಾಕ್ ಜಿಂದಾಬಾದ್, ಕೊ*ಲೆ ಸಂದರ್ಭದಲ್ಲಿ ಸಿಎಂ ಮಾತನಾಡುವುದಿಲ್ಲ. ಹಾಡು ಹಗಲೇ ಹ*ತ್ಯೆಯಾದಾಗ ಕಠಿಣ ಧೋರಣೆ ವಹಿಸಬೇಕಿತ್ತು. ಲವ್ ಜಿ*ಹಾದ್, ಮತಾಂ*ಧತೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗರಿಗೆದರಿದೆ. ರಾಜ್ಯದ ರಕ್ಷಣೆ ಕಾಂಗ್ರೆಸ್ ನಿಂದ ಅಸಾಧ್ಯ. ಸಮಾಜ ದೊಡ್ಡ ಪ್ರಮಾಣದಲ್ಲಿ ಜಾಗೃತವಾಗ ಬೇಕಾದ ಅನಿವಾರ್ಯತೆ ಇದೆ ಎಂದರು.

 

Continue Reading

LATEST NEWS

Trending