Home ಬೆಳ್ತಂಗಡಿ ಕೆಥೋಲಿಕ್ ಮಹಾ ಸಮಾವೇಶದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಕೆಣಕಿದ ಕುಲಸೋ..!!

ಕೆಥೋಲಿಕ್ ಮಹಾ ಸಮಾವೇಶದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ರನ್ನು ಕೆಣಕಿದ ಕುಲಸೋ..!!

ಬೆಳ್ತಂಗಡಿ: ಜನರ ಮನಸ್ಸುಗಳನ್ನು ಒಡೆಯುವ ಕಾರ್ಯವನ್ನು ಮಾಡದಿರಿ ಎಂದು ಅನಿವಾಸಿ ಉದ್ಯಮಿ ರೊನಾಲ್ಡ್ ಕುಲಾಸೊ ಕಲ್ಲಡ್ಕ ಪ್ರಭಾಕರ್ ಭಟ್‌ರಿಗೆ ಸಲಹೆ ನೀಡಿದ್ದಾರೆ. ನಾನು ಕೂಡ ಕಲ್ಲಡ್ಕ ಶ್ರೀರಾಮ ಶಾಲೆಯ ಅಭಿಮಾನಿ. ಆ ಶಾಲೆಗೆ ನಾನು ಕೂಡ ಅನುದಾನ ನೀಡಿದ್ದೇನೆ. ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಆದರೆ ಮನಸ್ಸು ಒಡೆಯುವ ಕೆಲಸ ಮಾಡಲಿಲ್ಲ. ನೀವೂ ಮಾಡದಿರಿ, ಎಂದು ಅನಿವಾಸಿ ಉದ್ಯಮಿ ರೊನಾಲ್ಡ್ ಕುಲಾಸೊ ಕಿಡಿಕಾರಿದ್ದಾರೆ.

ಅವರು ಮಡಂತ್ಯಾರ್ ಚರ್ಚ್ ವಠಾರದಲ್ಲಿ ನಡೆದ ಕೆಥೊಲಿಕ್ ಮಹಾ ಸಮಾವೇಶ-2020ರಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಧರ್ಮಗುರುಗಳನ್ನು ಫಾದರ್ ಗಳೆಂದು ಯಾಕೆ ಕರೆಯುತ್ತಾರೆ ಎಂಬುವುದಕ್ಕೆ ರೊನಾಲ್ಡ್ ಕುಲಾಸೊ ಪ್ರತಿಕ್ರಿಯಿಸಿದ್ದು, ಕಲ್ಲಡ್ಕ ಪ್ರಭಾಕರ್ ಭಟ್ ಚರ್ಚ್ ನಲ್ಲಿ ಧರ್ಮಗುರುಗಳ ಬಗ್ಗೆ ಮಾತನಾಡಿದ್ದಾರೆ. ಅವರನ್ನು ಫಾದರ್ ಎಂದು ಕರೆಯೋದಕ್ಕೆ ಪ್ರಶ್ನಿಸಿದ್ದಾರೆ.

ಇದಕ್ಕೆ ತೀಕ್ಷವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾವು ದೇಶದಲ್ಲಿರುವ ಮಹಿಳೆಯರಿಗೆ ತಾಯಿಯ ಸಮಾನವಾದ ಗೌರವ ನೀಡುತ್ತೇವೆ. ಅದೇ ರೀತಿ ನಮ್ಮ ಧರ್ಮದ ಧರ್ಮಗುರುಗಳಿಗೂ ನಾವು ಗೌರವವನ್ನು ನೀಡುತ್ತಿದ್ದೇವೆ ಎಂದಿದ್ದಾರೆ. ಈ ವಿಚಾರಗಳ ಬಗ್ಗೆ ಸುಖಾ-ಸುಮ್ಮನೆ ಹೇಳಿಕೆ ನೀಡಿಕೊಂಡು ಜನರ ಮನಸ್ಸುಗಳನ್ನು ಒಡೆಯುವ ಕಾರ್ಯ ನಡೆಸಬೇಡಿ ಎಂದು ರೊನಾಲ್ಡ್ ಕುಲಾಸೊ ಮನವಿ ಮಾಡಿಕೊಂಡಿದ್ದಾರೆ.

ವೀಡಿಯೋ

 

 

- Advertisment -

RECENT NEWS

ದಿಲ್ಲಿ ಹಿಂಸಾಚಾರ ಪ್ರಕರಣ: ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

ದಿಲ್ಲಿ ಹಿಂಸಾಚಾರ ಪ್ರಕರಣ: ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ನವದೆಹಲಿ: ದಿಲ್ಲಿ ಹಿಂಸಾಚಾರದ ವೇಳೆ ಗಂಭೀರ ಗಾಯಗೊಂಡಿದ್ದ ಮತ್ತಷ್ಟು ಮಂದಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದು, ಚರಂಡಿಗಳಿಂದ ಕೆಲ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ....

ಬಿಎಸ್‌ವೈ ಹುಟ್ಟುಹಬ್ಬ ಹಿನ್ನಲೆ 30 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

ಬಿಎಸ್‌ವೈ ಹುಟ್ಟುಹಬ್ಬ ಹಿನ್ನಲೆ 30 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಉಡುಪಿ: ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣಗುರು ಶಿಕ್ಷಣ ಟ್ರಸ್ಟ್ ಇದರ ಅಂಗಸಂಸ್ಥೆಯಾದ ಶ್ರೀ ನಾರಾಯಣಗುರು ಅನುದಾನಿತ ಪ್ರೌಢಶಾಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ಜನ್ಮದಿನದ ಪ್ರಯುಕ್ತ...

ಮ.ನ.ಪಾ ದ ನೂತನ ಮೇಯರ್ ಆಗಿ ದಿವಾಕರ್, ಉಪಮೇಯರ್ ವೇದಾವತಿ ಆಯ್ಕೆ

ಮ.ನ.ಪಾ ದ ನೂತನ ಮೇಯರ್ ಆಗಿ ದಿವಾಕರ್, ಉಪಮೇಯರ್ ವೇದಾವತಿ ಆಯ್ಕೆ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 21 ನೇ ಅವಧಿಗೆ ಮೇಯರ್-ಉಪಮೇಯರ್ ಚುನಾವಣೆ ನಡೆದಿದ್ದು, ಕಂಟೋನ್ಮೆಂಟ್ ವಾರ್ಡ್ ನ ದಿವಾಕರ್ ಅವರು ಮೇಯರ್...

ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾಗಿ ವಿನಯ್‌ ಎಲ್‌ ಶೆಟ್ಟಿ ಆಯ್ಕೆ

ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾಗಿ ವಿನಯ್‌ ಎಲ್‌ ಶೆಟ್ಟಿ ಆಯ್ಕೆ ಮಂಗಳೂರು: ಮಾಜಿ ಭಜರಂಗ ದಳದ ಜಿಲ್ಲಾ ಸಂಚಾಲಕರೂ ಆಗಿರುವ ವಿನಯ್‌ ಎಲ್‌ ಶೆಟ್ಟಿ ಅವರಿಗೆ ಸರ್ಕಾರ ಹೊಸ ಜವಾಬ್ದಾರಿ ವಹಿಸಿದೆ. ಕರ್ನಾಟಕ...