Friday, July 1, 2022

‘VA ಕೆಲ್ಸ ಕೊಡಿಸ್ತೇನೆಂದ 40 ಲಕ್ಷ ಇಸ್ಕೊಂಡ: ಹಣ-ಕೆಲ್ಸನ ಕೇಳ್ದಾಗ “ಪೆಟ್ರೋಲ್‌ ಹಾಕಿ ಸುಡ್ತೇನೆಂದ” ‘

ಮಂಗಳೂರು: ಪೊಲೀಸ್‌ ನೇಮಕಾತಿಯಲ್ಲಿ ಅಕ್ರಮ ನಡೆದು ತೀವ್ರ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಗ್ರಾಮಲೆಕ್ಕಾಧಿಕಾರಿ ಹುದ್ದೆ ಕೊಡಿಸುತ್ತೇನೆಂದು 40 ಲಕ್ಷ ರೂಪಾಯಿ ವಂಚಿಸಿ, ನೀವೇನಾದರೂ ಪೊಲೀಸ್ ದೂರು ನೀಡಿದರೆ, ಪೆಟ್ರೋಲ್ ಸುರಿದು ಸುಟ್ಟು ಹಾಕುತ್ತೇವೆ ಎಂದು ಕೊಲೆ ಬೆದರಿಕೆಯೊಡ್ಡಿದ ಘಟನೆ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೃಷ್ಣ ಗೌಡ ಎಂಬುವವರ ಮಗ ಮತ್ತು ಇತರ 3 ಜನರಾದ ಹಾಸನದ ಹೇಮಾವತಿ,

ಚಿಕ್ಕಮಗಳೂರಿನ ಲೋಹಿತ್ ಮತ್ತು ಬೆಂಗಳೂರಿನ ಮಹಮ್ಮದ್ ಷರೀಫ್ ಎಂಬವರು ಬೆಂಗಳೂರಿನಲ್ಲಿ ಕೋಚಿಂಗ್ ಪಡೆಯಲು ಹೋಗಿದ್ದಾಗ ಪರಿಚಿತರಾಗಿದ್ದರು.

ಈ ಸಮಯದಲ್ಲಿ ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಸರಕಾರಿ ನೇಮಕಾತಿ ಇರುವ ಜಾಹೀರಾತು ಬಂದಿದೆ.

ಈ ಬಗ್ಗೆ ಕೃಷ್ಣ ಗೌಡರ ಮಗ ಮತ್ತು ಇತರ 3 ಜನರು ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಹೀಗಿರುವಾಗ ಮಹಮ್ಮದ್ ಷರೀಫ್ ಎಂಬವರ ನೆರೆಮನೆಯವರಾದ ಶ್ರೀಮತಿ ನಿರ್ಮಲಾ ವೆಂಕಟಸ್ವಾಮಿ ಎಂಬವರ ಮನೆಗೆ ಪೂಜೆಗೆ ಬರುತ್ತಿರುವ ಮಂಗಳೂರು ಮುಲ್ಕಿಯ ಮಹೇಶ್ ಭಟ್ ಎಂಬವರಲ್ಲಿ ಮಹಮ್ಮದ್ ಷರೀಫ್ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಅರ್ಜಿ ಸಲ್ಲಿಸಿರುವ ವಿಚಾರ ತಿಳಿಸಿದಾಗ,

ಮಹೇಶ್ ಭಟ್ ರವರು ನನಗೆ ಸಿಬಿಐಯಲ್ಲಿ ದೊಡ್ಡ ಹುದ್ದೆಯಲ್ಲಿರುವ ನಾರಾಯಣ ಸ್ವಾಮಿ ಎಂಬವರ ಪರಿಚಯವಿದ್ದು, ಅವರು ಸರಕಾದ ವಿವಿಧ ಹುದ್ದೆಗಳಿಗೆ ನೇಮಕ ಮಾಡಲು ಅಧಿಕಾರಿ ಮತ್ತು ರಾಜಕಾರಣಿ ವಲಯದಲ್ಲಿ ಪ್ರಭಾವ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ನಂತರ 2019ರ ಆಗಸ್ಟ್ನಲ್ಲಿ ಕೃಷ್ಣಭಟ್‌ ಹಾಗೂ ಅವರ ಮನೆಯವರು ಹಾಗೂ ಹೇಮಾವತಿ, ಮಹಮ್ಮದ್ ಷರೀಫ್ ಎಂಬವರು ಮಂಗಳೂರಿನ ಮುಲ್ಕಿಯಲ್ಲಿರುವ ಮಹೇಶ್ ಭಟ್ ಮನೆಗೆ ಹೋದಾಗ ಅಲ್ಲಿ ನಾರಾಯಣ ಸ್ವಾಮಿ ಕೂಡಾ ಇದ್ದು,

ನಾರಾಯಣ ಸ್ವಾಮಿಯವರು ಬೆಂಗಳೂರಿನ ನಾಗಭೂಷಣ್ ಮತ್ತು ಮೂಡಬಿದ್ರೆಯ ದಿನೇಶ್ ಎಂಬವರ ಮೂಲಕ ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆ ಆದರೆ ಅವರು ಹೇಳಿದಷ್ಟು ಹಣ ವ್ಯವಸ್ಥೆ ಮಾಡಿದರೆ ಸರಕಾರಿ

ಉದ್ಯೋಗ ಗ್ಯಾರಂಟಿ ಎಂದು ತಿಳಿಸಿದಂತೆ ಕೃಷ್ಣಗೌಡ 2019 ರ ಆ. 11 ರಂದು 8 ಲಕ್ಷ ಹಣವನ್ನು ಮಂಗಳೂರಿನ ವಾಮಂಜೂರು ಎಂಬಲ್ಲಿರುವ ನಾರಾಯಣ ಸ್ವಾಮಿರವರ ಮನೆಯಲ್ಲಿ ನೀಡಿದ್ದರು.

ನಂತರ ಉದ್ಯೋಗದ ಆದೇಶದ ಪ್ರತಿ ಕೇಳಿದಾಗ ಕೊರೋನಾ ಕಾರಣ ನೀಡಿ 2021 ರಲ್ಲಿ ಆದೇಶ ಆಗುತ್ತದೆ ಎಂದು ಹೇಳಿ ಬೆಂಗಳೂರಿಗೆ ಬರಲು ತಿಳಿಸಿ ಕೃಷ್ಣಗೌಡರಿಗೆ ಗ್ರಾಮ ಲೆಕ್ಕಾಧಿಕಾರಿ ಆದೇಶದ ಪ್ರತಿಯನ್ನು ತೋರಿಸಿದ್ದರು.

ಇದನ್ನು ನಂಬಿದ ಕೃಷ್ಣಗೌಡ ಆರೋಪಿಗಳು ಕೇಳಿದಂತೆ ಅಕ್ಟೋಬರ್ 24 ರಂದು ರೂಪಾಯಿ 32 ಲಕ್ಷ ಹಣವನ್ನು ಮತ್ತೆ ನಾರಾಯಣ ಸ್ವಾಮಿ ಮನೆಯಲ್ಲಿ ನೀಡಿದ್ದರು.

ರೂಪಾಯಿ 40 ಲಕ್ಷವನ್ನು ಪಡೆದ ಆರೋಪಿಗಳಾದ ನಾಗಭೂಷಣ್, ನಾರಾಯಣ ಸ್ವಾಮಿ ರವರಲ್ಲಿ ಉದ್ಯೋಗದ ಆದೇಶ ಕೊಡಿ ಇಲ್ಲ ನೀಡಿದ ಹಣ ವಾಪಾಸ್ಸು ನೀಡಿ ಎಂದು ಕೇಳಿದಾಗ,

ನಾಗಭೂಷಣ್ ಮತ್ತು ನಾರಾಯಣ ಸ್ವಾಮಿರವರು ಕೃಷ್ಣಗೌಡನನ್ನು ಉದ್ದೇಶಿಸಿ ನೀವೇನಾದರೂ ಪೊಲೀಸ್ ದೂರು ನೀಡಿದರೆ, ಪೆಟ್ರೋಲ್ ಸುರಿದು ಸುಟ್ಟು ಹಾಕುತ್ತೇವೆ,

ನಮ್ಮ ತಂಟೆಗೆ ಬಂದರೆ ನಮಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ ನಾವು ಏನು ಬೇಕಾದರೂ ಮಾಡಲು ಹೇಸುವವರಲ್ಲ ಎಂದು ಕೃಷ್ಣಗೌಡಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕನ್ಹಯ್ಯಾಲಾಲ್ ಹತ್ಯೆ ಪ್ರಕರಣ: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಜೈಪುರ: ದೇಶಾದ್ಯಂತ ಸುದ್ದಿಯಾದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಅಖ್ತರ್ ಮತ್ತು ಮೊಹಮ್ಮದ್ ಗೌಸ್ ಉದಯಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು...

ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ‘ನನಗೆ EDಯಿಂದ ಲವ್‌ ಲೆಟರ್‌ ಬಂದಿದೆ’ ಎಂದ ಶರದ್‌ ಪವಾರ್‌

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 2004, 2009, 2014 ಮತ್ತು 2020ರ ಚುನಾವಣೆಗಳಲ್ಲಿ ಅವರು ಸಲ್ಲಿಸಿದ್ದ...

ಕ್ಷುಲ್ಲಕ ಕಾರಣಕ್ಕೆ ಮಗುವನ್ನು ಕತ್ತು ಹಿಸುಕಿ ಕೊಂದು ತಾಯಿ ಜೀವಾಂತ್ಯ

ಬೆಂಗಳೂರು: ಮೂರೂವರೆ ವರ್ಷದ ಮಗುವನ್ನು ವೇಲ್‌ನಿಂದ ನೇಣು ಬಿಗಿದು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ RR ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.ದೀಪಾ (31) ತನ್ನ ಮಗು...