ಕೊರೊನಾ ವಾರಿಯರ್ಸ್ ಗಳು ಕೋವಿಡ್ ನಲ್ಲಿ ಮೃತರಾದ್ರೆ 30 ಲಕ್ಷ ಪರಿಹಾರ..!
ಬೆಂಗಳೂರು: ಕೊರೊನಾ ವಾರಿಯರ್ಸ್ ಗಳಾಗಿ ದುಡಿಯುತ್ತಿರುವವರು ಕೋವಿಡ್ ಸೋಂಕಿಗೆ ಮೃತರಾದಲ್ಲಿ 30 ಲಕ್ಷ ರೂಪಾಯಿ ಪರಿಹಾರ ಒದಗಿಸಲು ಸರ್ಕಾರವು ಮಂಜೂರಾತಿ ನೀಡಿದೆ ಎಂದು ರಾಜ್ಯದ ಆರ್ಥಿಕ ಇಲಾಖೆ ಆದೇಶಿಸಿದೆ.
ಪೊಲೀಸ್ ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್ಸ್ ಕೋವಿಡ್ ಸೋಂಕಿಗೆ ಒಳಪಟ್ಟು ಮೃತಪಟ್ಟರೆ, 30 ಲಕ್ಷ ರೂಪಾಯಿಗಳ ವಿಮೆ ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮಾರ್ಗಸೂಚಿಯಂತೆ ಕೋವಿಡ್-19 ಕೆಲಸದಲ್ಲಿ ಪಾಲ್ಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು,
ಸಹಾಯಕಿಯರು, ಪೌರ ಕಾರ್ಮಿಕರು ಹಾಗು ಪೊಲೀಸ್ ಸಿಬ್ಬಂದಿ, ಹೋಮ್ ಗಾರ್ಡ್ ಸೇರಿದಂತೆ ಕೊರೊನಾ ವಾರಿಯರ್ಸ್ ಗಳಾಗಿ ದುಡಿಯುತ್ತಿರುವವರು,
ಕೋವಿಡ್ ಸೋಂಕಿಗೆ ಮೃತರಾದಲ್ಲಿ ಈ ಕೆಲಸದಲ್ಲಿರುವವರಿಗೆ ಮನೋಸ್ಥೈರ್ಯ ಹೆಚ್ಚಿಸಲು 30 ಲಕ್ಷ ರೂಪಾಯಿ ಪರಿಹಾರ ಒದಗಿಸಲು ಸರ್ಕಾರವು ಮಂಜೂರಾತಿ ನೀಡಿದೆ ಎಂದು ರಾಜ್ಯದ ಆರ್ಥಿಕ ಇಲಾಖೆ ಆದೇಶಿಸಿದೆ.
ವಿವಿಧೆಡೆ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ಕೋವಿಡ್ 19 ವಾರಿಯರ್ಸ್ ಗಳಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದಾರೆ.
ಆದರೆ ನಮಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದ್ದರು.
ಮೇಲೆ ತಿಳಿಸಿದ ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆ ಮೊದಲಾದವರಿಗೆ 50 ಲಕ್ಷ ವಿಮೆ ಸೌಲಭ್ಯ ನೀಡುವ ಪ್ರಸ್ತಾವ ಸರ್ಕಾರದ ಮುಂದಿತ್ತು.
ಈಗ 30 ಲಕ್ಷ ವಿಮೆಯನ್ನು ಸರ್ಕಾರ ಮಂಜೂರು ಮಾಡಿದೆ. ಕೋವಿಡ್ 19 ಸೋಂಕಿನ ವಿರುದ್ಧ ಸೆಣಸುತ್ತಿರುವ ವೈದ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರಿಗೆ ಸರಕಾರ ಆರೋಗ್ಯ ವಿಮೆ ಜಾರಿಗೊಳಿಸಿದೆ.
ಆದರೆ ಅಂಗನವಾಡಿ ಕಾರ್ಯಕರ್ತರನ್ನು ಮಾತ್ರ ನಿರ್ಲಕ್ಷಿಸಲಾಗಿದೆ. ಕೋವಿಡ್ 19 ತಡೆ ಕಾರ್ಯಾಚರಣೆ ಸಂದರ್ಭದಲ್ಲಿ ಕಾರ್ಯಕರ್ತೆಯರು ಸೋಂಕಿತರಾದರೆ ಅಥವಾ ಅನಾಹುತ ಉಂಟಾದರೆ ಯಾವುದೇ ರಕ್ಷಣೆ ಇಲ್ಲ.
ಅಂಗನವಾಡಿ ಕಾರ್ಯಕರ್ತೆಯರಿಗೂ ಕೂಡ ಸರಕಾರ ವಿಮಾ ಸೌಲಭ್ಯ ಜಾರಿಗೊಳಿಸಬೇಕು ಮತ್ತು ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯಾಗಿತ್ತು.
ಮಂಗಳೂರು/ಟೆಹ್ರಾನ್ : ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಗುಂಡಿಕ್ಕಿ ಹ*ತ್ಯೆ ಮಾಡಿರುವ ಘಟನೆ ಟೆಹ್ರಾನ್‌ನಲ್ಲಿ ಇಂದು (ಶನಿವಾರ) ನಡೆದಿದೆ.
ಈ ಘಟನೆಯಲ್ಲಿ ಮತ್ತೋರ್ವ ನ್ಯಾಯಮೂರ್ತಿ ಗಾಯಗೊಂಡಿದ್ದಾರೆ ಎಂದು ನ್ಯಾಯಾಂಗದ ‘ಮಿಜಾನ್’ ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ. ಆಯತುಲ್ಲಾ ಮೊಹಮ್ಮದ್ ಮೊಘಿಶೆ ಹಾಗೂ ಅಲಿ ರಝನಿ ಹ*ತ್ಯೆಗೀಡಾದ ನ್ಯಾಯಮೂರ್ತಿಗಳು.
ಸುಪ್ರೀಂ ಕೋರ್ಟ್‌ನ ಹೊರಗೆ ನ್ಯಾಯಮೂರ್ತಿಗಳ ಮೇಲೆ ಗುಂಡಿನ ದಾಳಿ ನಡೆಸಿದ ದಾಳಿಕೋರ ಬಳಿಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಘಟನೆಯಲ್ಲಿ ನ್ಯಾಯಮೂರ್ತಿಯೊಬ್ಬರ ಅಂಗರಕ್ಷಕ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಹ*ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮಂಗಳೂರು/ಕೊಲ್ಕತ್ತಾ : ಆರ್.ಜಿ.ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾ*ಚಾರ ಹಾಗೂ ಕೊ*ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಜಯ್ ರಾಯ್ ತಪ್ಪಿತಸ್ಥ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಿಯಾಲ್ದಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಶನಿವಾರ(ಜ.18)ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಸೋಮವಾರ(ಜ.20) ಪ್ರಕಟಿಸಲಿದ್ದಾರೆ.
2024ರ ಆಗಸ್ಟ್ 9 ರಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ ನಡೆಸಿ, ಹ*ತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಇಡೀ ದೇಶದಾದ್ಯಂತ ಭಾರಿ ಆಕ್ರೋಶ ಕೇಳಿ ಬಂದಿತ್ತು. ದೇಶದ ಬಹುತೇಕ ಭಾಗಗಳಲ್ಲಿ ವೈದ್ಯರು ಮುಷ್ಕರ ನಡೆಸಿದ್ದರು. ಆಗಸ್ಟ್ 10 ರಂದು ಸಂಜಯ್ ರಾಯ್‌ನನ್ನು ಬಂಧಿಸಲಾಯಿತು.
ಕೊಲ್ಕತ್ತಾ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಆರೋಪಿಗೆ ಗ*ಲ್ಲು ಶಿಕ್ಷೆ ಆಗಬೇಕು ಎಂದು ಸಿಬಿಐ ವಾದಿಸಿದೆ. ಪ್ರಕರಣದ ವಿಚಾರಣೆ ನವೆಂಬರ್ 12 ರಂದು ಆರಂಭವಾಗಿತ್ತು. ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಆರೋಪಿಯ ವಿಚಾರಣೆ ಜ.9ರಂದು ಕೊನೆಗೊಂಡಿತ್ತು.
ಮಂಗಳೂರು/ಮುಂಬೈ : ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿರುವ ಭಾರತದ 15 ಸದಸ್ಯರ ಕ್ರಿಕೆಟ್ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದೆ.
ಚಾಂಪಿಯನ್ಸ್ ಟ್ರೋಫಿ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ, 15 ಸದಸ್ಯರ ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಉಪನಾಯಕರಾಗಿ ಶುಭ್‌ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದ ವೇಳೆ ಫಿಟ್‌ನೆಸ್ ಸಮಸ್ಯಗೆ ಒಳಗಾಗಿದ್ದ ಜಸ್‌ಪ್ರೀತ್ ಬುಮ್ರಾ ಅವರನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾಗಿದೆ.