Connect with us

    sports

    4ನೇ ಟೆಸ್ಟ್ ಪಂದ್ಯಕ್ಕೆ ಮೊಹಮ್ಮದ್ ಶಮೀ ಲಭ್ಯತೆ ಬಗ್ಗೆ ಮಾತನಾಡಿದ ರೋಹಿತ್ !

    Published

    on

    ಮಂಗಳೂರು/ಬ್ರಿಸ್ಬೇನ್: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಆದರೆ ಟೀಂ ಇಂಡಿಯಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸ್ಥಿರತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ.

    ವಿಶ್ವಕಪ್ ಗೆದ್ದ ಬಳಿಕ ಭಾರತ ಯಾಕೋ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ವಿಫಲ ಸಾಧಿಸುತ್ತಿದೆ. ಇದು ಕೋಚ್ ಹಾಗೂ ಅಭಿಮಾನಿಗಳಿಗೆ ತುಂಬಾ ಬೇಸರ ಹುಟ್ಟು ಹಾಕಿದೆ.

    ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ ವೈಫಲ್ಯವೇ ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ತಂಡದ ಯಾವೊಬ್ಬ ಬ್ಯಾಟರ್​ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಇದು ಆಡಳಿತ ಮಂಡಳಿಯ ನಿದ್ದೆಗೆಡಿಸಿದ್ದರೆ ಇನ್ನೊಂದೆಡೆ ತಂಡಕ್ಕೆ ಮತ್ತೊಬ್ಬ ಅನುಭವಿ ವೇಗಿಯ ಅನುಪಸ್ಥಿತಿ ಮೊದಲ ಟೆಸ್ಟ್​ನಿಂದಲೂ ಕಾಡುತ್ತಿದೆ.

    ಇದನ್ನೂ ಓದಿ: ಟೀಂ ಇಂಡಿಯಾದ WTC ಫೈನಲ್ ಭವಿಷ್ಯ !

    ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾರನ್ನು ಬಿಟ್ಟರೆ ಉಳಿದವರಿಂದ ಸ್ಥಿರ ಪ್ರದರ್ಶನ ಕಂಡುಬರುತ್ತಿಲ್ಲ. ಬುಮ್ರಾ ಜೊತೆಗೆ ಮತ್ತೊಬ್ಬ ಅನುಭವಿಯಾಗಿ ಸಿರಾಜ್ ತಂಡದಲ್ಲಿ ಇದ್ದರಾದರೂ ಅವರು ಅವಶ್ಯಕ ಸಂದರ್ಭದಲ್ಲಿ ವಿಕೆಟ್ ಪಡೆಯುತ್ತಿಲ್ಲ. ಇದು ಬುಮ್ರಾ ಅವರ ಮೇಲೆ ಒತ್ತಡ ತರುತ್ತಿದೆ. ಹೀಗಾಗಿ ಬುಮ್ರಾಗೆ ಸಾಥ್ ನೀಡುವ ಮತ್ತೊಬ್ಬ ವೇಗಿ ಮೊಹಮ್ಮದ್ ಶಮಿಯನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳಬೇಕು ಎಂಬುದು ಅನುಭವಿಗಳ ಅಭಿಪ್ರಾಯವಾಗಿದೆ.

    ಶಮಿ ಲಭ್ಯತೆ ಬಗ್ಗೆ ಮಾತನಾಡಿದ ರೋಹಿತ್, ‘ಶಮಿ ಅವರ ಸ್ಥಿತಿಯ ಬಗ್ಗೆ ಎನ್‌ಸಿಎ ಸ್ಪಷ್ಟ ಮಾಹಿತಿ ನೀಡುವವರೆಗೆ ಅವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳುವ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ. ಎನ್‌ಸಿಎಯಿಂದ ಯಾರಾದರೂ ಅವರ ಬಗ್ಗೆ ಮಾತನಾಡಬೇಕಾದ ಸಮಯ ಬಂದಿದೆ. ನಮ್ಮ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಶಮಿ ಪುನರ್ವಸತಿಗೆ ಒಳಗಾಗಿದ್ದಾರೆ. ಹೀಗಾಗಿ ಎನ್​ಸಿಎಯಿಂದಲೇ ನಮಗೆ ಏನಾದರೂ ಅಪ್‌ಡೇಟ್‌ ಕೊಡಬೇಕು’ ಎಂದರು.

    LATEST NEWS

    ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯಾಳುಗಳ ಬರೆ !

    Published

    on

    ಮಂಗಳೂರು/ಮೆಲ್ಬೋರ್ನ್: ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬೋರ್ನ್ ನ ಎಂಸಿಜಿಯಲ್ಲಿ ಡಿ.26ರಂದು ಆರಂಭವಾಗಲಿದೆ. ಈಗಾಗಲೇ ಸರಣಿ 1-1ರಿಂದ ಸಮಬಲವಾಗಿದ್ದು, ಮುನ್ನಡೆಗಾಗಿ ಉಭಯ ತಂಡಗಳು ಸಿದ್ದತೆಯಲ್ಲಿದೆ.

    ಆದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಹೊಸ ಸಮಸ್ಯೆಯೊಂದು ಎದುರಾಗಿದೆ. ಅದುವೇ ಗಾಯಾಳುಗಳ ಸಮಸ್ಯೆ. ಭಾನುವಾರ ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಅಭ್ಯಾಸದ ವೇಳೆ ಹಿಟ್ ಮ್ಯಾನ್ ಗಾಯಗೊಂಡಿದ್ದು, ಹೀಗಾಗಿ ಅರ್ಧದಲ್ಲೇ ಪ್ರಾಕ್ಟೀಸ್ ನಿಲ್ಲಿಸಿದ್ದಾರೆ.

    ಇದನ್ನೂ ಓದಿ: ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಸ್ಪಷ್ಟನೆ !

    ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಥ್ರೋಡೌನ್ ಸ್ಪೆಷಲಿಸ್ಟ್ ದಯಾ ಅವರು ರೋಹಿತ್ ಶರ್ಮಾಗೆ ಚೆಂಡೆಸೆಯುತ್ತಿದ್ದರು. ಇದೇ ವೇಳೆ ಚೆಂಡು ಅವರ ಎಡ ಮೊಣಕಾಲಿಗೆ ತಾಗಿದೆ. ಇದರಿಂದ ನೋವಿಗೆ ಒಳಗಾದ ರೋಹಿತ್ ಶರ್ಮಾ ತಕ್ಷಣವೇ ಅಭ್ಯಾಸವನ್ನು ನಿಲ್ಲಿಸಿದ್ದಾರೆ. ಅಲ್ಲದೆ ಆ ಬಳಿಕ ಅವರಿಗೆ ಫಿಸಿಯೋ ಆರೈಕೆ ಮಾಡಿದ್ದಾರೆ.

    ಈ ಆರೈಕೆಯ ಹೊರತಾಗಿಯೂ ನೋವಿನ ಕಾರಣ ರೋಹಿತ್ ಶರ್ಮಾ ಅಭ್ಯಾಸವನ್ನು ಮುಂದುವರೆಸಲಿಲ್ಲ. ಅಲ್ಲದೆ ನಿಲ್ಲಲು ಕೂಡ ತಡಕಾಡಿದರು. ಹೀಗಾಗಿ ಭಾನುವಾರದ 2ನೇ ಅವಧಿಯ ಅಭ್ಯಾಸದಿಂದ ರೋಹಿತ್ ಶರ್ಮಾ ಹೊರಗುಳಿದರು. ಇದೀಗ ಹಿಟ್ ಮ್ಯಾನ್ ಗಾಯಗೊಂಡಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.

    ಕೆ.ಎಲ್.ರಾಹುಲ್ ಗೆ ಗಾಯ

    ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸದ ವೇಳೆ ಕೆ.ಎಲ್.ರಾಹುಲ್ ಅವರ ಕೈ ಬೆರಳಿಗೆ ಏಟು ಬಿದ್ದ ಘಟನೆ ಸಂಭವಿಸಿದೆ. ಕೂಡಲೇ ಚಿಕಿತ್ಸೆ ನೀಡಲಾಯಿತು.

    ಇದೇನೂ ಗಂಭೀರ ಸ್ವರೂಪದ ಗಾಯವಲ್ಲ ಎನ್ನಲಾಗಿದೆಯಾದರೂ, ಮುಂದಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಭಾರತೀಯ ತಂಡದಲ್ಲಿ ಗಾಯದ ಭೀತಿ ಎದುರಾಗಿದೆ.

    Continue Reading

    LATEST NEWS

    ಎಷ್ಟು ದಿನ ಅಂತಾ ಈ ತಾರತಮ್ಯ ಸಹಿಸೋಕೆ ಸಾಧ್ಯ; ಸ್ಪೋಟಕ ಹೇಳಿಕೆ ನೀಡಿದ ಅಶ್ವಿನ್ ತಂದೆ !

    Published

    on

    ಮಂಗಳೂರು/ಮುಂಬೈ: ರವಿಚಂದ್ರನ್ ಅಶ್ವಿನ್ ಅವರ ಅನಿರೀಕ್ಷಿತ ಅಂತರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಅಘಾತ ಉಂಟುಮಾಡಿದೆ. ಅವರ ತಂದೆ ರವಿಚಂದ್ರನ್, ತಮ್ಮ ಮಗನನ್ನು ತಂಡದಲ್ಲಿ ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಡ್ರಾ ಸಾಧಿಸಿದವು. ಪಂದ್ಯ ಮುಗಿದ ಬೆನ್ನಲ್ಲೇ ಅಶ್ವಿನ್ ನಿವೃತ್ತಿ ಘೋಷಿಸಿದರು. ಇವರು ವಿದಾಯ ಹೇಳಿದ ರೀತಿ ಈಗ ಭಾರೀ ಚರ್ಚೆಗೆ ಒಳಗಾಗಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಅಶ್ವಿನ್ ಸರಣಿಯ ಮಧ್ಯದಲ್ಲೇ ಈ ರೀತಿಯ ಹಠಾತ್ ನಿರ್ಧಾರ ತೆಗೆದುಕೊಂಡಿದ್ದರು.

    ನನ್ನಲ್ಲಿ ಇನ್ನೂ ಕ್ರಿಕೆಟ್ ಇದೆ ಎಂದ ಅಶ್ವಿನ್
    ನಿವೃತ್ತಿ ಘೋಷಿಸಿ ಮಾತನಾಡಿದ ಆರ್. ಅಶ್ವಿನ್, ತಮ್ಮಲ್ಲಿ ಇನ್ನೂ ಕ್ರಿಕೆಟ್ ಇದೆ ಎಂದಿದ್ದಾರೆ. ತನ್ನಲ್ಲಿ ಇರೋ ಕ್ರಿಕೆಟ್ ಅನ್ನು ಕ್ಲಬ್ ಮಟ್ಟದ ಟೂರ್ನಮೆಂಟ್ ಮತ್ತು ಐಪಿಎಲ್ ನಲ್ಲಿ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ಹೇಳಿಕೆಯು ಟೀಂ ಇಂಡಿಯಾದಲ್ಲಿ ಅನುಭವಿ ಆಟಗಾರರಿಗೆ ಮನ್ನಣೆ ಇಲ್ಲ ಎಂಬುದು ಹೇಳುತ್ತಿದೆ. ಇದರ ಮಧ್ಯೆ ಆರ್. ಅಶ್ವಿನ್ ತಂದೆ ಅಸಮಾಧಾನ ಹೊರಹಾಕಿದ್ದಾರೆ.

    ಇದನ್ನೂ ಓದಿ: ವಿಂಡೀಸ್ ವಿರುದ್ದ ಭಾರತಕ್ಕೆ ಭರ್ಜರಿ ಜಯ, ಸರಣಿ ವಶ

    ಆಕ್ರೋಶ ಹೊರಹಾಕಿದ ಅಶ್ವಿನ್ ತಂದೆ
    ನನ್ನ ಮಗನ ನಿವೃತ್ತಿ ನಿರ್ಧಾರದ ಬಗ್ಗೆ ನನಗೂ ತಿಳಿಯಿತು. ಅವನ ಮನಸ್ಸಿನಲ್ಲಿ ಏನಾಗುತ್ತಿದೆಯೋ ಗೊತ್ತಿಲ್ಲ. ನಾನಂತೂ ಸಂಪೂರ್ಣ ಸಂತೋಷದಿಂದ ಒಪ್ಪಿಕೊಂಡೆ. ಆದರೆ ಅವರು ನಿವೃತ್ತಿ ಘೋಷಿಸಿದ ರೀತಿ, ಒಂದು ಕಡೆ ನನಗೆ ತುಂಬಾ ಸಂತೋಷ ನೀಡಿದ್ದರೆ, ಮತ್ತೊಂದೆಡೆ ನನಗೆ ನೋವುಂಟು ಮಾಡಿದೆ. ಏಕೆಂದರೆ ಅವನು ತನ್ನ ಆಟವನ್ನು ಮುಂದುವರಿಸಬೇಕಾಗಿತ್ತು. ನಿವೃತ್ತಿ ಎಂಬುದು ಅಶ್ವಿನ್ ಅವರ ನಿರ್ಧಾರವಾಗಿದ್ದು, ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಅವನು ನಿವೃತ್ತಿ ತೆಗೆದುಕೊಂಡ ರೀತಿಗೆ ಹಲವು ಕಾರಣಗಳಿರಬಹುದು. ಅದು ಅಶ್ವಿನ್​ಗೆ ಮಾತ್ರ ಗೊತ್ತು, ಇದರಲ್ಲಿ ತಂಡದಲ್ಲಿ ಆತನಿಗೆ ಆಗುತ್ತಿದ್ದ ಅವಮಾನವೂ ಕಾರಣವಾಗಿರಬಹುದು.

    ಅಶ್ವಿನ್ ಅವರ ನಿವೃತ್ತಿ ನಮಗೆ ಭಾವನಾತ್ಮಕ ಕ್ಷಣವಾಗಿದೆ. ಏಕೆಂದರೆ ಅವರು 14-15 ವರ್ಷಗಳ ಕಾಲ ತಂಡದಲ್ಲಿ ಆಡಿದರು. ಹೀಗಾಗಿ ಅವರ ಹಠಾತ್ ನಿವೃತ್ತಿ ನಮಗೆ ಆಘಾತ ತಂದಿತು. ಆತನನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ನಾವು ಭಾವಿಸುತ್ತೇವೆ. ಈ ಮೂಲಕ ಕ್ಯಾಪ್ಟನ್ ರೋಹಿತ್ ಮತ್ತು ಮುಖ್ಯ ಕೋಚ್ ಗಂಭೀರ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಅಶ್ವಿನ್ ತಂದೆಯ ಈ ರೀತಿಯ ಹೇಳಿಕೆ ಭಾರತೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

     

     

     

     

     

     

    Continue Reading

    International news

    ಟೀಂ ಇಂಡಿಯಾದ WTC ಫೈನಲ್ ಭವಿಷ್ಯ !

    Published

    on

    ಮಂಗಳೂರು/ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ಎರಡು ತಂಡಗಳು WTC ಫೈನಲ್ ರೇಸ್ ನಲ್ಲಿವೆ. ಹೀಗಾಗಿ ಎರಡೂ ತಂಡಗಳಿಗೂ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಪಂದ್ಯಗಳು ಬಹಳ ಮುಖ್ಯವಾದುದು. ಇದೀಗ ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ. ಆದರೆ ಟೀಂ ಇಂಡಿಯಾಗೆ ಚಿಂತಿಸುವ ಅಗತ್ಯವಿಲ್ಲ.

    ಏಕೆಂದರೆ ಭಾರತ ತಂಡವು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಗೇರಬಹುದು. ಅಂದರೆ ಈ ಸರಣಿಯನ್ನು ಟೀಮ್ ಇಂಡಿಯಾ 3-1 ಅಂತರದಿಂದ ಗೆದ್ದರೆ ಫೈನಲ್ ಗೆ ಪ್ರವೇಶಿಸುವುದು ಬಹುತೇಕ ಖಚಿತ.

    ಇದನ್ನೂ ಓದಿ: ಡ್ರಾನಲ್ಲಿ ಅಂತ್ಯವಾದ ಮೂರನೇ ಟೆಸ್ಟ್ !  

    ಕೊನೆಯ ಎರಡು ಟಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾ ಅಂಕ ಪಟ್ಟಿಯಲ್ಲಿ ಶೇ.60.52 ಪಾಯಿಂಟ್ಸ್ ಪಡೆಯಲು ಉತ್ತಮ ಅವಕಾಶವಿದೆ. ಈ ಮೂಲಕ ದ್ವಿತೀಯ ಸ್ಥಾನದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಗೇರಬಹುದು.

    ಅತ್ತ ಆಸ್ಟ್ರೇಲಿಯಾ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಸೋತರೆ ಫೈನಲ್ ರೇಸ್ ನಿಂದ ಹೊರಬೀಳಲಿದೆ. ಏಕೆಂದರೆ ಟೀಮ್ ಇಂಡಿಯಾ 3-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದರೆ, ಆಸ್ಟ್ರೇಲಿಯಾ ತಂಡದ ಶೇಕಡಾವಾರು ಅಂಕ ಕಡಿಮೆಯಾಗಲಿದೆ. ಅಲ್ಲದೆ ಶ್ರೀಲಂಕಾ ವಿರುದ್ದದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದರೂ ಶೇ.57 ಅಂಕಗಳನ್ನು ಮಾತ್ರ ಪಡೆಯಲಿದೆ.

    ಇದರಿಂದ ಶೇ.60.52 ಅಂಕಗಳೊಂದಿಗೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಡುವುದು ಖಚಿತವಾಗಲಿದೆ.

    Continue Reading

    LATEST NEWS

    Trending