ಮಂಗಳೂರು: ಟೈಮ್ಸ್ ಬ್ಯುಸಿನೆಸ್ ಅವಾರ್ಡ್‌ನ 2023ನೇ ವರ್ಷದ ‘ಎಮರ್ಜಿಂಗ್ ಪ್ರಾಜೆಕ್ಟ್ ಆಫ್ ದಿ ಈಯರ್’ ಪ್ರಶಸ್ತಿಗೆ ಮಂಗಳೂರಿನ ರೋಹನ್ ಕಾರ್ಪೋರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ರೋಹನ್ ಮೊಂತೇರೊ ಅವರಿಗೆ ನೀಡಿ ಗೌರವಿಸಲಾಗಿದೆ.
ಮಾ.14 ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಹನ್ ಪರವಾಗಿ ಸೇಲ್ಸ್ ಮಾರ್ಕೆಟಿಂಗ್‌ನ ಜನರಲ್ ಮ್ಯಾನೇಜರ್ ದೀಮಂತ್ ಸುವರ್ಣ ಮತ್ತು ಸೇಲ್ಸ್ ಅಸೋಸಿಯೇಟ್ ಅಲ್ಫೋನ್ಸ್ ಫೆರ್ನಾಂಡಿಸ್ ಪ್ರಶಸ್ತಿ ಸ್ವೀಕರಿಸಿದರು.
ಸೈಲೆಂಟ್ ಶೋರ್ಸ್‍ರೆಸಾರ್ಟ್ ಮತ್ತು ಸ್ಪಾನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ರಾಶಿ ಖನ್ನಾ ಅವರು ಬಿಸಿನೆಸ್ ಐಕಾನ್‍ಗಳಿಗೆ ಪ್ರಶಸ್ತಿಗಳನ್ನು ನೀಡಿದರು. ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಕೆ.ಎಸ್. ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.