DAKSHINA KANNADA
ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ 30 ಲಕ್ಷ ರೂಪಾಯಿ ದರೋಡೆ
Published
2 days agoon
ಬಂಟ್ವಾಳ : ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ ದಾಳಿ ನಡೆಸಿ 30 ಲಕ್ಷ ರೂಪಾಯಿ ದರೋಡೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಈ ಘಟನೆ ನಡೆದಿದೆ.
ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿದ ಖದೀಮರು ಬರೋಬ್ಬರಿ 30 ಲಕ್ಷ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡ ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳವರೆಗೆ ತನಿಖೆ ನಡೆಸಿ, ಮನೆಯಲ್ಲಿದ್ದ ಸುಮರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ : ಟಿಆರ್‌ಪಿಯಲ್ಲಿ ಬಿಗ್‌ಬಾಸನ್ನು ಹಿಂದಿಕ್ಕಿದ ಸರಿಗಮಪ
ಸ್ಥಳಕ್ಕೆ ದ.ಕ ಜಿಲ್ಲಾ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ.
ಬಜಪೆ: ಎಲೆಕ್ಟ್ರಾನಿಕ್ ಅಂಗಡಿ, ಬೇಕರಿ, ತರಕಾರಿ ಅಂಗಡಿ ಹಾಗೂ ಬಂಡ ಶಾಲೆಯ ಒಂದು ಗೂಡಂಗಡಿಗೆ ಶುಕ್ರವಾರದ ರಾತ್ರಿ ವೇಳೆಯಲ್ಲಿ ಕಳ್ಳರು ನುಗ್ಗಿ, ಮೊಬೈಲ್, ಎಲೆಕ್ಟ್ರಾನಿಕ್ ಸಾಮಾಗ್ರಿ, ಚಿನ್ನದ ಉಂಗುರ, ನಗದು, ಬೇಕರಿಯಿಂದ ತಿಂಡಿ, ನಗದು, ತರಕಾರಿ ಅಂಗಡಿಯಿಂದ ನಗದು ನಾಣ್ಯ, ಸಿಗರೇಟ್, ಗೂಡಂಗಡಿಯಿಂದ ಬಿಸ್ಕತ್‌ನ್ನು ಕಳವು ಮಾಡಿರುವ ಘಟನೆ ಗುರುಪುರ ಪೇಟೆಯಲ್ಲಿ ನಡೆದಿದೆ.
ಗುರುಪುರ ಪೇಟೆಯ ಉಮೇಶ್ ಭಟ್ ರ ಎಲೆಕ್ಟ್ರಾನಿಕ್ ಅಂಗಡಿಗೆ ನುಗ್ಗಿ 12 ಮೊಬೈಲ್ ಫೋನ್, 20 ಸಾವಿರ ರೂಪಾಯಿ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿಗಳು, 60 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಉಂಗುರ, ಸುಮಾರು 25 ಸಾವಿರ ರೂಪಾಯಿ ನಗದು ಕಳವು ಮಾಡಲಾಗಿದೆ. ಉಮೇಶ್ ನ ಸಹೋದರ ರಮೇಶ್ ಭಟ್ ರ ಬೇಕರಿ ಅಂಗಡಿಗೆ ನುಗ್ಗಿದ ಕಳ್ಳರು ಬೇಕರಿ ತಿಂಡಿಗಳನ್ನು ಹಾಗೂ ನಗದುಗಳನ್ನು ಶಟರ್ ಬೀಗ ಒಡೆದು ಕಳವು ಮಾಡಿದ್ದಾರೆ. ಸಂಶುದ್ದೀನ್ ನ ತರಕಾರಿ ಅಂಗಡಿಯ ಮರದ ಬಾಗಿಲಿನ ಬೀಗವನ್ನು ಒಡೆದು ನುಗ್ಗಿದ ಕಳ್ಳರು, ಡಬ್ಬಿಯಲ್ಲಿದ್ದ ಹತ್ತು ರೂಪಾಯಿಯ ನ್ಯಾಣ ಸುಮಾರು 10 ಸಾವಿರ ರೂಪಾಯಿ ನಗದು, ಸುಮಾರು 10ಸಾವಿರ ರೂಪಾಯಿ ಮೌಲ್ಯದ ಸಿಗರೇಟ್ ಸಹಿತ 20 ಸಾವಿರ ರೂಪಾಯಿ ಮೌಲ್ಯದ ಸೊತ್ತು ಕಳವು ಮಾಡಿದ ಕಳ್ಳರು ಅಂಗಡಿಯಲ್ಲಿನ ಫ್ರೀಜ್‌ನಲ್ಲಿದ್ದ ಮೊಸರನ್ನು ಕುಡಿದಿದ್ದಾರೆ ಹಾಗೂ ಚೆಲ್ಲಿದ್ದಾರೆ. ಅಂಗಡಿಯಲ್ಲಿದ್ದ ಅನಾನಸನ್ನು ತುಂಡು ಮಾಡಿ,ತಿಂದಿದ್ದಾರೆ. ಇಲ್ಲಿ ಕಳ್ಳರು ಹಲವು ಹೊತ್ತು ಕಾಲ ಕಳೆದಿರುವುದು ಕಂಡು ಬಂದಿದೆ.ಬಂಡಸಾಲೆಯಲ್ಲಿ ಧರ್ಮಣ ಪೂಜಾರಿ ಗೂಡಂಗಡಿಯ ಶಟರ್‌ನ ಬೀಗ ಮುರಿದು ಬಿಸ್ಕತ್‌ನ್ನು ಕಳವು ಮಾಡಿದ್ದಾರೆ.
ಸುಮಾರು ರಾತ್ರಿ 2 ರಿಂದ 3 ಗಂಟೆಯೊಳಗೆ ಈ ಕಳವು ನಡೆದಿದೆ. ಇದು ಒಂದು ಕಳ್ಳರ ತಂಡವಾಗಿದ್ದು, ಗುರುಪುರ ಪೇಟೆಯಲ್ಲಿ ಸಿಸಿ ಕ್ಯಾಮಾರದಲ್ಲಿ ಕಳ್ಳರ ಸುಳಿವು ಸಿಗುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ. ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕಳವಿನ ಬಗ್ಗೆ ಮಾಹಿತಿ ಪಡೆದು ಹೇಳಿಕೆ ತೆಗೆದುಕೊಂಡು ಹೋಗಿದ್ದಾರೆ.
DAKSHINA KANNADA
ಸಾರ್ವಜನಿಕ ಶೌಚಾಲಯದಲ್ಲಿದ್ದ ಮಹಿಳೆಯ ಪೋಟೋ ತೆಗೆದು ಪರಾರಿಯಾದ ಕಿಡಿಗೇಡಿ
Published
4 hours agoon
06/01/2025ಸುಳ್ಯ: ಶೌಚಾಲಯದಲ್ಲಿ ಮಹಿಳೆಯೊಬ್ಬರು ಇದ್ದಾಗ ಹಿಂಬದಿ ಕಿಟಕಿ ಮೂಲಕ ಯಾರೋ ಫೋಟೋ ತೆಗೆದು ಪರಾರಿಯಾಗಿರುವ ಘಟನೆ ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ಬಳಿ ಶನಿವಾರ (ಜ.4) ರಾತ್ರಿ ನಡೆದಿದೆ.
ಶೌಚಾಲಯಕ್ಕೆ ಮಹಿಳೆ ಹೋಗಿದ್ದಾಗ ಹಿಂಬದಿಯಲ್ಲಿರುವ ಕಿಟಕಿಯ ಮೂಲಕ ಫೋಟೋ ತೆಗೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಈ ಭಾಗದ ಕಿಟಕಿಯ ಗ್ಲಾಸ್ ಸರಿದಿದ್ದು, ಸರಿದ ಭಾಗದಿಂದ ಫೋಟೋವನ್ನು ಕ್ಲಿಕ್ಕಿಸಿದ್ದಾನೆ. ಈ ಸಂಧರ್ಭ ಆ ಮಹಿಳೆ ಜೋರಾಗಿ ಕಿರುಚಿಕೊಂಡ ಕಾರಣ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ವೇಶ್ಯಾವಾಟಿಕೆ: ಇಬ್ಬರು ಆರೋಪಿಗಳ ಬಂಧನ, ಯುವತಿಯ ರಕ್ಷಣೆ
ಬಸ್ ನಿಲ್ದಾಣದ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದು, ಶೌಚಾಲಯದ ಭಾಗದ ಅವ್ಯವಸ್ಥೆಯ ಬಗ್ಗೆ ಶೀಘ್ರವಾಗಿ ಸರಿಪಡಿಸುವಂತೆ ಸೂಚನೆಯನ್ನು ನೀಡಿದ್ದಾರೆ.
DAKSHINA KANNADA
ಸಾಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಡಾ ನಾ ಡಿ ಸೋಜ ಅಂತಿಮ ದರ್ಶನ
Published
4 hours agoon
06/01/2025By
NEWS DESK3ಮಂಗಳೂರು : ನಾಡಿನ ಹಿರಿಯ ಸಾಹಿತಿ ಡಾ ನಾ ಡಿ ಸೋಜ ಅವರು ತಮ್ಮ 87ರ ಹರೆಯದಲ್ಲಿ ವಯೋಸಹಜ ಅನಾರೋಗ್ಯದಿಂದ ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
75ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ಇವರ ಮಂಜಿನ ಕಾನು, ಈ ನೆಲ ಈ ಜಲ, ಕೆಂಪು ತ್ರಿಕೋನ, ನೆಲೆ, ಗಾಂಧಿ ಬಂದರು, ದ್ವೀಪ, ಜೀವಕಳೆ, ಚೆನ್ನೈ ಚೆನ್ನಮ್ಮ ಚೆನ್ನಮ್ಮಾಜಿ ಪ್ರಸಿದ್ದ ಕಾದಂಬರಿಗಳು.
1964ರಲ್ಲಿ ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟಗೊಂಡಿತ್ತು. ಇವರು ಬರೆದ ಮುಳುಗಡೆ, ಕೊಳಗ, ಒಳಿತನ್ನು ಮಾಡಲು ಬಂದವರು, ಬಣ್ಣ ಪಾದರಿಯಾಗುವ ಹುಡುಗ, ‘ಇಬ್ಬರು ಮಾಜಿಗಳು’ ಮುಂತಾದ ಕಾದಂಬರಿಗಳು ಕುವೆಂಪು ವಿಶ್ವ ವಿದ್ಯಾನಿಲಯ, ಬೆಂಗಳೂರು ವಿವಿ, ಮಂಗಳೂರು ವಿವಿ ಮತ್ತು ಧಾರವಾಡದ ಕರ್ನಾಟಕ ವಿವಿಯ ಪಠ್ಯಪುಸ್ತಕಗಳಾಗಿಯೂ ಆಯ್ಕೆಯಾಗಿದೆ.
ಇದನ್ನೂ ಓದಿ: ಮಂಗಳೂರು : ಎನ್‌ಸಿಸಿಯ ರಾಷ್ಟ್ರಮಟ್ಟದ ಪ್ಯಾರಾ ಜಂಪ್‌ನಲ್ಲಿ ತೇರ್ಗಡೆಯಾದ ಗ್ರಾಮೀಣ ಪ್ರತಿಭೆ
ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ,ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಇವರು ಬರೆದ ದ್ವೀಪ ಕೃತಿ ಸಿನೆಮಾವಾಗಿ ಅದಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು. ಮುಂಬೈಯ ಅಖಿಲ ಭಾರತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ, ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಆಗಿದ್ದರು.
ಅಗಲಿದ ಸಾಹಿತಿಯ ಅಂತಿಮ ದರ್ಶನ ಇಂದು ಮುಂಜಾನೆ 10ರಿಂದ 3 ಗಂಟೆಯವರೆಗೆ ಸಾಗರದ ಗಾಂಧಿ ಮೈದಾನದಲ್ಲಿ ಅವಕಾಶ ಇದ್ದು, 4 ಗಂಟೆಗೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
LATEST NEWS
ಪತ್ರಕರ್ತನ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಪೊಲೀಸ್ ವಶಕ್ಕೆ
UPI ಬಳಕೆದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಯೇ ಖಾಲಿ.!
ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?
ಬೈಕ್ ಕಾರು ನಡೆವೆ ಭೀಕರ ಅ*ಪಘಾ*ತ ; ಆರ್ಎಸ್ಎಸ್ ಪ್ರಮುಖ್ ವಿ*ಧಿವಶ
ಮತ್ತೋರ್ವ ಬಾಣಂತಿ ಸಾವು – ಸಾವಿನ ಸಂಖ್ಯೆ 12ಕ್ಕೆ ಏರಿಕೆ
BBK 11: ತ್ರಿವಿಕ್ರಮ್ ಡೇಂಜರ್ ಎಂದ ಭವ್ಯಾ ಗೌಡ
Trending
- DAKSHINA KANNADA5 days ago
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
- DAKSHINA KANNADA3 days ago
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
- LATEST NEWS6 days ago
ಮೈಸೂರು: ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷ; ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ಸೂಚನೆ
- BIG BOSS2 days ago
2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಹುಡುಗಿ ಯಾರು ಗೊತ್ತಾ..?