Thursday, August 11, 2022

ವಕೀಲರ ಮನೆಗೆ ಕನ್ನ ಹಾಕಲು ಹೋದ ಕಳ್ಳರಿಗೆ ಸಾರ್ವಜನಿಕರಿಂದ ಗೂಸಾ

ಚಿಕ್ಕಬಳ್ಳಾಪುರ: ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿ‌ ನಡೆದಿದೆ.

ಮನೆಯಲ್ಲಿ ಮಹಿಳೆ ಒಂಟಿಯಾಗಿ ಇರುವುದನ್ನು ಗಮನಿಸಿ ಕಳ್ಳರು, ವಕೀಲ ರಾಜಾರಾಂ ಎಂಬವರ ಮನೆಗೆ ನುಗ್ಗಿದ್ದಾರೆ. ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಮೂವರು‌ ಮನೆಗಳ್ಳತನಕ್ಕೆ ಯತ್ನಿಸಿದ್ದಾರೆ.

ಮಹಿಳೆಯ ಕಿರುಚಾಟ ಕೇಳಿ ಬಂದ ಅಕ್ಕಪಕ್ಕದ ಮನೆಯವರು ಮೂವರನ್ನು ಹಿಡಿದು ಧರ್ಮದೇಟು ನೀಡಿದ್ದೂ ಅಲ್ಲದೇ ಪೊಲೀಸರ ಕೈಗೆ ಒಪ್ಪಿಸಿದ್ದಾರೆ.

ಚಿಂತಾಮಣಿ ‌ನಗರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂತ್ರಾಲಯದಲ್ಲಿ ರಾಯರಿಗೆ ಪೂಜೆ ಸಲ್ಲಿಸಿದ ಮಾಜಿ CM ಬಿ.ಎಸ್ ವೈ & ಕುಟುಂಬ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರೊಂದಿಗೆ ಸಂಸದರಾದ ಬಿ. ವೈ ರಾಘವೇಂದ್ರ ಅವರು ಹಾಗೂ ಸಹೋದರ ಬಿ. ವೈ ವಿಜಯೇಂದ್ರ ಅವರು...

ಸ್ವಾತಂತ್ರ್ಯ ಸಂಭ್ರಮಕ್ಕೆ ಅಹಿತಕರ ಘಟನೆ ಆಗದಂತೆ ದ.ಕದಲ್ಲಿ ಟೈಟ್ ಸೆಕ್ಯೂರಿಟಿ

ಮಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತೋತ್ಸವಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಇನ್ನೊಂದೆಡೆ ಪೊಲೀಸರು ಬಂದೋಬಸ್ತು ಬಿಗಿಗೊಳಿಸಿದ್ದಾರೆ.ಯಾವುದೇ ಸಂಭಾವ್ಯ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಬಿಗಿ ಕಣ್ಗಾವಲು ಇರಿಸಿದ್ದಾರೆ. ಜಿಲ್ಲಾದ್ಯಂತ ಪ್ರಮುಖ...

ಪ್ರವೀಣ್ ಹತ್ಯೆ ಪ್ರಕರಣ: ಪ್ರಮುಖ ಮೂವರು ಆರೋಪಿಗಳ ಬಂಧನ-ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆ

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಗೌಪ್ಯ ಸ್ಥಳದಲ್ಲಿ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಶಿಯಾಬ್, ಬಶೀರ್, ರಿಯಾಝ್ ಎಂದು...