KADABA
ಸುಬ್ರಮಣ್ಯ: ರಸ್ತೆ ಅವ್ಯವಸ್ಥೆಯಿಂದ ಕಂಗೆಟ್ಟ ಜನ-ಅಪಾಯಕಾರಿ ರೈಲ್ವೇ ಹಳಿಯೇ ಗತಿ…
ಸುಬ್ರಮಣ್ಯ: ರಸ್ತೆಯ ಅವ್ಯವಸ್ಥೆಯಿಂದಾಗಿ ಪುಟ್ಟ ಮಕ್ಕಳು ಸೇರಿದಂತೆ ಸಾರ್ವಜನಿಕರು ರೈಲ್ವೆ ಹಳಿಗಳ ಮೇಲೆ ಮತ್ತು ರಬ್ಬರ್ ಪ್ಲಾಂಟೇಷನ್ ಗೆ ಅಳವಡಿಸಿರುವ ವಿದ್ಯುತ್ ತಡೆಬೇಲಿ ಮಧ್ಯದಲ್ಲಿ ನುಸುಳಿಕೊಂಡು ಅಪಾಯಕಾರಿ ರೀತಿಯಲ್ಲಿ ಮನೆಗೆ ಹೋಗುವ ಸನ್ನಿವೇಶ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಐತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಕಟ್ಟೆಯ ಜನರಿಗೆ ಎದುರಾಗಿದೆ.
ನೆಲ್ಲಿಕಟ್ಟೆಯಿಂದ ಓಟಗಜ್ಜೆಗೆ ಹೋಗುವ ರಸ್ತೆಯನ್ನು ಅಗೆದು ಹಾಕಿ ಇದೀಗ ಸಂಪೂರ್ಣವಾಗಿ ಈ ರಸ್ತೆ ಕೆಸರುಮಯವಾಗಿದೆ.
ತಮಗೆ ಆಗಿರುವ ಸಮಸ್ಯೆಗಳ ಬಗ್ಗೆ ಕಡಬ ತಹಸೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರೂ ಇವರು ನಿದ್ದೆಯಲ್ಲಿದ್ದಾರೆ ಎನ್ನುವ ಆರೋಪ ಸಾರ್ವಜನಿಕರದ್ದು.
ಪ್ರಸ್ತುತ ರಸ್ತೆ ಕೆಟ್ಟುಹೋದ ಹಿನ್ನಲೆಯಲ್ಲಿ ಇವರು ಸಂಚರಿಸುವ ರಸ್ತೆಯಲ್ಲಿ ಸುಮಾರು 2 ಕಿ. ಮೀ ರೈಲ್ವೆ ಟ್ರ್ಯಾಕ್ ಮತ್ತು ಅಪಾಯಕಾರಿ ರೈಲ್ವೆ ಬ್ರಿಡ್ಜ್ ಇದ್ದು ಪುಟ್ಟ ಮಕ್ಕಳ ಸಹಿತ ಸ್ಥಳೀಯರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಎದುರಾಗಿದೆ.
ಇಷ್ಟು ಮಾತ್ರವಲ್ಲದೇ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ಪ್ಲಾಂಟೇಷನ್ ಜಾಗ ಇದ್ದು ಇಲ್ಲೂ ಸುರಕ್ಷಿತ ದೃಷ್ಟಿಯಿಂದ ಸೋಲಾರ್ ವಿದ್ಯುತ್ ತಂತಿ ಬೇಲಿ ಅಳವಡಿಸಲಾಗಿದೆ. ಇದರ ನಡುವೆಯೂ ಮಕ್ಕಳು ನುಸುಳಿಕೊಂಡು ಹೋಗುತ್ತಿದ್ದಾರೆ.
ಮಕ್ಕಳು ಸಂಚರಿಸುವ ವೇಳೆ ಇದನ್ನು ಆಫ್ ಮಾಡಲಾಗುತ್ತಿದೆ ಎನ್ನಲಾಗುತ್ತಿದ್ದರೂ ಏನಾದರೂ ಆಚಾತುರ್ಯ ಆದರೆ ಅಪಾಯ ಎದುರಾಗಬಹುದು.
ಒಟ್ಟಿನಲ್ಲಿ ಕೂಡಲೇ ಈ ರಸ್ತೆಯನ್ನು ಸರಿಪಡಿಸಿ ಜನರು ಭಯರಹಿತರಾಗಿ ಓಡಾಡಲು ಅವಕಾಶ ಮಾಡಿ ಕೊಡಬೇಕೆಂದು ನೀತಿ ಸಾಮಾಜಿಕ ಸಂಘಟನೆ ರಾಜ್ಯಧ್ಯಕ್ಷ ಜಯಂತ್ ಅವರು ಆಗ್ರಹಿಸಿದ್ದಾರೆ.
DAKSHINA KANNADA
ಕೋಡಿಂಬಾಳ ಪರಿಸರದಲ್ಲಿ ಸಾಕು ನಾಯಿಗಳು ನಾಪತ್ತೆ..! ಚಿರತೆ ಹೊತ್ತೊಯ್ದಿರಬಹುದೆಂಬ ಆಂತಕ
ಕಡಬ: ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಮನೆಯಲ್ಲಿ ಸಾಕು ನಾಯಿಗಳು ನಾಪತ್ತೆಯಾಗುತ್ತಿರುವ ಘಟನೆ ಕೋಡಿಂಬಾಳ ಬಳಿಯ ಪುಳಿಕುಕ್ಕು, ಪಂಜ, ನೇರಳ ಪರಿಸರದಲ್ಲಿ ನಡೆಯುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನು ಈ ಪ್ರದೇಶದಲ್ಲಿ ಚಿರತೆಗಳು ಓಡಾಟ ನಡೆಸಿದ್ದು ಸಾಕು ನಾಯಿಗಳನ್ನು ಚಿರತೆಗಳೇ ಎಳೆದೊಯ್ದಿರಬೇಕು ಎಂದು ಸಂಶಯಿಸಲಾಗಿದೆ.
ಪಂಜ ಬಳಿಯ ಕರುಂಬು ನೆಕ್ಕಿಲ ನಿವಾಸಿ ರಾಮಚಂದ್ರ ಭಟ್ ಅವರ ಎರಡು ಸಾಕುನಾಯಿಗಳು ಆ.28ರಂದು ರಾತ್ರಿ ವೇಳೆ ಗೂಡಿನಿಂದ ಹೊರಬಿಟ್ಟ ಬಳಿಕ ತೋಟದತ್ತ ಹೋಗಿದ್ದು ಅನಂತರ ನಾಪತ್ತೆಯಾಗಿವೆ. ಇನ್ನು ಪಕ್ಕದ ಮನೆಯಲ್ಲಿ ಮಲಗಿದ್ದ ಸಾಕು ನಾಯಿಗಳು ಕೂಡಾ ನಾಪತ್ತೆಯಾಗಿವೆ.
17 ವರ್ಷದ ಬಾಲಕ ಚಲಾಯಿಸುತ್ತಿದ್ದ ಎಸ್‌ಯುವಿ ಕಾರು ಡಿ*ಕ್ಕಿ; ಬೈಕ್ ಸವಾರ ಸಾ*ವು
ಸಿಟೌಟ್ ನಲ್ಲಿ ನಾಯಿ ಮಲವಿಸರ್ಜನೆ ಮಾಡಿದ್ದು ಯಾವುದೋ ಪ್ರಾಣಿ ಜೊತೆ ಕಾದಾಡಿರುವ ಕುರುಹುಗಳು ಕೂಡಾ ಕಂಡು ಬಂದಿದೆ. ಈ ಹಿಂದೆಯೂ ಬೊಳ್ಳಾಜೆ, ಪೂಳೆಂಜ, ನೆಕ್ಕಿಲ, ನೇರಳ ಎಂಬ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡಿತ್ತು ಎಂಬ ಸುದ್ದಿ ಹರಡಿತ್ತು. ಹೀಗಾಗಿ ನಾಯಿಗಳನ್ನು ಚಿರತೆ ಹೊತ್ತೊಯ್ದಿರಬಹುದು ಎಂದು ಹೇಳಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
DAKSHINA KANNADA
ಕಛೇರಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ..! ಕ್ಯಾಶ್ ರಿಜಿಸ್ಟರ್ ಮಾಡದ ಬಗ್ಗೆ ಅಸಮಾಧಾನ
ಕಡಬ: ಕಡಬದ ತಾಲೂಕು ಆಡಳಿತ ಸೌಧಕ್ಕೆ ಲೊಕೋಯುಕ್ತ ಎಸ್‌ಪಿ ನಟರಾಜ್ ದಿಢೀರ್ ಬೇಟಿ ನೀಡಿ ಕಚೇರಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಚೇರಿಯಲ್ಲಿ ಸಿಬ್ಬಂದಿಗಳು ಲಾಗಿನ್ ಸಮಯದಲ್ಲಿ ತಮ್ಮಲ್ಲಿರುವ ಕ್ಯಾಶ್ ಲೆಕ್ಕ ಬರೆದಿಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಂದಾಪುರ:ಆಕಸ್ಮಿಕವಾಗಿ ಬೆಂಕಿ ತಗುಲಿ ಫ್ಯಾನ್ಸಿ ಸ್ಟೋರ್ ಭಸ್ಮ
ಪ್ರತಿ ನಿತ್ಯ ಕಚೇರಿಗೆ ಬರುವಾಗ ಮತ್ತು ಕಚೇರಿಯಿಂದ ಹೋಗುವಾಗ ಕ್ಯಾಶ್ ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಕ್ಯಾಶ್ ರಿಜಿಸ್ಟರ್ ಮಾಡಲು ಪುಸ್ತಕ ಇದ್ರೂ ಖಾಲಿ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಇದೆ ವೇಳೆ ಅರ್ಹ ಬಿಪಿಎಲ್ ಕಾರ್ಡ್ ಬಳಕೆದಾರರನ್ನು ಗುರುತಿಸಿ ಉಳಿದವರ ಕಾರ್ಡ್ ಅನರ್ಹಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಐಶಾರಾಮಿ ಕಾರಿನಲ್ಲಿ ಓಡಾಡುವವರು ಕೂಡಾ ಬಿಪಿಎಲ್ ಕಾರ್ಡ್ ಹೊಂದಿರುವ ಕಾರಣ ಅರ್ಹರಿಗೆ ವಂಚನೆ ಆಗುತ್ತಿದೆ ಎಂದು ಅಧಿಕಾರಿಗಳ ಗಮನ ಸೆಳೆದಿದ್ದಾರೆ. ತಾಲೂಕು ಕಚೇರಿಯಲ್ಲಿ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜನರು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಎಸ್‌ಪಿ ನಟರಾಜ್ ಜನರನ್ನು ವಿನಾ ಕಾರಣ ಕಚೇರಿಗಳಿಗೆ ಅಲೆದಾಡಿಸಿದ್ರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಈ ವೇಳೆ ಎಚ್ಚರಿಕೆ ಕೂಡಾ ನೀಡಿದ್ದಾರೆ.
DAKSHINA KANNADA
ಕಳ್ಳರನ್ನು ಹಿಡಿದ 60 ರ ವೃದ್ಧೆ..!
ಮಂಗಳೂರು :ವೃದ್ಧೆ ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ್ದ ಕಳ್ಳರಿಬ್ಬರಿನ್ನು ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುಂಡ್ಯಾ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.
ಅಂಗಡಿಯಲ್ಲಿ ವೃದ್ಧ ಮಹಿಳೆ ಒಬ್ಬರೇ ಇದ್ದ ವೇಳೆ ಸ್ಕೂಟಿಯಲ್ಲಿ ಬಂದಿದ್ದ ಇಬ್ಬರು ವೃದ್ಧೆಯ ಕತ್ತಿನ ಸರ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಜಾಗೃತಗೊಂಡ ಮಹಿಳೆ ತಕ್ಷಣ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತ್ರೇಸಿಯಾಮ್ಮ ಅವರಿಗೆ 60 ವರ್ಷ ವಯಸ್ಸಾಗಿದ್ದು, ಅಡ್ಡಹೊಳೆ ಹೆದ್ದಾರಿಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಕಳ್ಳತನ ನಡೆಸಲೆಂದೇ ಬಂದಿದ್ದ ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25), ಎಂಬವರು ಮಂಗಳೂರಿನಲ್ಲಿ ವಾಹನ ಮಾರಾಟಗಾರಿಂದ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿ ಕಳ್ಳತನ ಮಾಡಿದ್ದಾರೆ. ಅದೇ ಸ್ಕೂಟಿಯಲ್ಲಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಚಿನ್ನದ ಸರ ಎಳೆಯಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಕಳ್ಳರಿಬ್ಬರನ್ನೂ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- FILM6 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
- LATEST NEWS6 days ago
ನ.8 ಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ನಿವೃತ್ತಿ..! 15 ದಿನದಲ್ಲಿ 8 ಪ್ರಮುಖ ತೀರ್ಪು ಸಾಧ್ಯತೆ..!
- DAKSHINA KANNADA7 days ago
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು
- BIG BOSS7 days ago
ಇದೇ ಕಾರಣಕ್ಕೆ ಮೊದಲ ವಾರವೇ ಯಮುನಾ ಶ್ರೀ ನಿಧಿ ಬಿಗ್ಬಾಸ್ ಮನೆಯಿಂದ ಔಟ್ ಆದದ್ದು..!