Friday, July 1, 2022

ಮಂಗಳೂರು: ರಸ್ತೆ ಸಂಚಾರಕ್ಕೆ ಬದಲಿ ವ್ಯವಸ್ಥೆ-ಪೊಲೀಸ್‌ ಆಯುಕ್ತರ ಆದೇಶ

ಮಂಗಳೂರು: ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಟಿ.ಎಂ.ಎ. ಪೈ ಹಾಲ್‍ನಿಂದ ಕೊಡಿಯಲ್‌ ಗುತ್ತು ಮುಖ್ಯ ರಸ್ತೆಯವರೆಗೆ ಒಳಚರಂಡಿ ಕೊಳವೆ ಅಳವಡಿಸುವ ಕಾಮಗಾರಿ ಕೈಗೊಂಡ ಪ್ರಯುಕ್ತ ಆ ರಸ್ತೆಗಳಲ್ಲಿ ಮೋಟಾರು ವಾಹನ ಕಾಯ್ದೆ ಪ್ರಕಾರ ಏ.19 ರಿಂದ ಜೂನ್.2 ರವರೆಗೆ 45 ದಿನಗಳ ಕಾಲ ರಸ್ತೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.


ವಿವರ ಇಂತಿದೆ
ಕಾಮಗಾರಿ ನಡೆಯುವ ವೇಳೆ ಬಿಜೈ ಜಂಕ್ಷನ್ ಕಡೆಯಿಂದ ಎಂ.ಜಿ ರಸ್ತೆಯನ್ನು ಪ್ರವೇಶಿಸುವ ಎಲ್ಲಾ ವಾಹನಗಳು ಬಿಜೈ ಜಂಕ್ಷನ್ ನಿಂದ ನೇರವಾಗಿ ಕರಂಗಲ್ಪಾಡಿ ಜಂಕ್ಷನ್ ಕಡೆಗೆ ಚಲಿಸಿ ನಂತರ ಬಲಕ್ಕೆ ತಿರುಗಿ ಪಿ.ವಿ.ಎಸ್ ಜಂಕ್ಷನ್ ಮೂಲಕ ರಸ್ತೆ ಪ್ರವೇಶಿಸುವುದು.

ಕರಂಗಲ್ಪಾಡಿ ಕಡೆಯಿಂದ ಬಂದು ಕೊಡಿಯಲ್ ಗುತ್ತು ಮುಖ್ಯ ರಸ್ತೆ ಮೂಲಕ ಎಂ.ಜಿ. ರಸ್ತೆಯನ್ನು ಪ್ರವೇಶಿಸುವ ಎಲ್ಲ ವಾಹನಗಳು ಕರಂಗಲ್ಪಾಡಿ ಜಂಕ್ಷನ್ ನಿಂದ ನೇರವಾಗಿ ಬಿಜೈ ಜಂಕ್ಷನ್ ಕಡೆಗೆ ಚಲಿಸಿ ನಂತರ ಎಡಕ್ಕೆ ತಿರುಗಿ ಲಾಲ್ ಬಾಗ್ ಜಂಕ್ಷನ್ ಮೂಲಕ ಎಂ.ಜಿ ರಸ್ತೆ ಪ್ರವೇಶಿಸುವುದು.

ಎಂ.ಜಿ ರಸ್ತೆಯಿಂದ ಕೊಡಿಯಲ್ ಗುತ್ತು ಮುಖ್ಯ ರಸ್ತೆಯ ಮೂಲಕ ಕರಂಗಲ್ಪಾಡಿ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಎಂ.ಜಿ ರಸ್ತೆಯಲ್ಲಿ ನೇರವಾಗಿ ಚಲಿಸಿ ಪಿ.ವಿ.ಎಸ್ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಿ ಕರಂಗಲ್ಪಾಡಿ ಕಡೆಗೆ ಹೋಗುವುದು.
ಎಂ.ಜಿ. ರಸ್ತೆಯಿಂದ ಕೊಡಿಯಲ್ ಗುತ್ತು ಮುಖ್ಯ ರಸ್ತೆ ಮೂಲಕ ಬಿಜೈ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಎಂ.ಜಿ ರಸ್ತೆಯಲ್ಲಿ ನೇರವಾಗಿ ಲಾಲ್‍ಬಾಗ್ ಜಂಕ್ಷನ್ ಹೋಗಿ ಅಲ್ಲಿಂದ ಬಲಕ್ಕೆ ತಿರುಗಿ ಬಿಜೈ ಜಂಕ್ಷನ್ ಕಡೆಗೆ ಸಂಚರಿಸುವಂತೆ ಮಂಗಳೂರು ನಗರದ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕನ್ಹಯ್ಯಾಲಾಲ್ ಹತ್ಯೆ ಪ್ರಕರಣ: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಜೈಪುರ: ದೇಶಾದ್ಯಂತ ಸುದ್ದಿಯಾದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಅಖ್ತರ್ ಮತ್ತು ಮೊಹಮ್ಮದ್ ಗೌಸ್ ಉದಯಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು...

ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ: ನಟಿ ಪವಿತ್ರ ಲೋಕೇಶ್‌

ಬೆಂಗಳೂರು: ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ. ಮದುವೆಯೇ ಆಗದಿದ್ದರೆ ನಾನು ಯಾಕೆ ಡಿವೋರ್ಸ್‌ ಕೊಡಬೇಕು ಎಂದು ಕನ್ನಡ ಚಿತ್ರನಟಿ ಪವಿತ್ರ ಲೋಕೇಶ್‌ ಹೇಳಿಕೆ ನೀಡಿದ್ದಾರೆ.ಕೆಲದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ...

ಪುತ್ತೂರಿನಲ್ಲಿ ಸ್ವಿಫ್ಟ್ ಮತ್ತು ಓಮ್ನಿ ಕಾರು ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ

ಪುತ್ತೂರು: ಪುತ್ತೂರಿನ ಮುಂಡೂರು ಗ್ರಾಮದ ಪಂಜಳದಲ್ಲಿ ಸ್ವಿಫ್ಟ್ ಮತ್ತು ಮಾರುತಿ ಓಮ್ನಿ ನಡುವೆ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಹಲವು ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.ಗಾಯಗೊಂಡ ಓಮ್ನಿ ಮತ್ತು ಕಾರಿನಲ್ಲಿದ್ದವರನ್ನು ಪುತ್ತೂರಿನ...