ಮಂಗಳೂರು : ತುಳು ಚಿತ್ರರಂಗ ರಂಗಭೂಮಿ ಹಾಸ್ಯನಟ ಅರವಿಂದ್ ಬೋಳಾರ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೋಳಾರ್ ಅವರು ಚಲಾಯಿಸುತ್ತಿದ್ದ ದ್ವಿಚಕ್ರವಾಹನ ಮಂಗಳೂರು ನಗರದ ಪಂಪ್‌ವೆಲ್ ಮಸೀದಿ ಬಳಿ ಸ್ಕಿಡ್ ಆಗಿ ಅಪಘಾತ ಸಂಭವಿಸಿದ್ದು ಬೋಳಾರ್ ಅವರ ಕಾಲಿಗೆ ಬಲವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಗಾಯಗೊಂಡ ಬೋಳಾರ್ ಅವರನ್ನು ನಗರದ ಖಾಸಾಗಿ ಆಸ್ಪತ್ರೆಗಾಗಿ ದಾಖಲಿಸಲಾಗಿದ್ದು ನಾಳೆ ಕಾಲಿಗೆ ಶಸ್ತ್ರ ಚಿಕಿತ್ಸೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇನ್ನು ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ , ಬೋಳಾರ್ ಅವರು ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಲ ಕಾಲಿನ ಮೂಳೆ ಮುರಿತ ಉಂಟಾಗಿದೆ.
ನಾಳೆ ಅಪರೇಷನ್ ನಡೆಯಲಿದ್ದು ಆಸ್ಪತ್ರೆಗೆ ಸಂಚಾರಿ ಎಸಿಪಿ ಭೇಟಿ ನೀಡಿ ವಿಚಾರಿಸಿದ್ದು ಆರೋಗ್ಯವಾಗಿದ್ದೇನೆ, ತಲೆಗೆ ಹೆಲ್ಮೆಟ್ ಧರಿಸಿದ್ದರಿಂದ ಅನಾಹುತ ತಪ್ಪಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.