Connect with us

    LATEST NEWS

    ಲಖನೌಗೆ ರಿಷಭ್ ಪಂತ್ ಸಾರಥಿ

    Published

    on

    ಮಂಗಳೂರು/ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರನ್ನು ನೇಮಕ ಮಾಡಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂತ್, ಈ ಬಾರಿ ತಂಡ ಚೊಚ್ಚಲ ಟ್ರೋಫಿ ಜಯಿಸಲು ಸಂಪೂರ್ಣ ಸಾಮರ್ಥ್ಯ ಬಳಸಿ ಆಡುವುದಾಗಿ ಹೇಳಿದ್ದಾರೆ.

    ‘ನಾನು ತಂಡಕ್ಕಾಗಿ ನನ್ನ 200 ಪ್ರತಿಶತವನ್ನು ನೀಡುತ್ತೇನೆ. ಅದು ನಿಮಗೆ ನನ್ನ ಬದ್ಧತೆಯಾಗಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ನನ್ನ ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತೇನೆ. ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಹೊಸ ಆರಂಭ ಮತ್ತು ಹೊಸ ಶಕ್ತಿಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಪಂತ್ ಹೊಸ ನಾಯಕನಾಗಿ ನೇಮಕಗೊಂಡ ನಂತರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಪತ್ನಿ ಯಾರು ಗೊತ್ತಾ!? ಆಕೆಯೂ ಕ್ರೀಡಾಪಟು!

    ‘ನಾವು ಹೊಸ ಭರವಸೆ, ಆಕಾಂಕ್ಷೆ, ಹೊಸ ಆತ್ಮವಿಶ್ವಾಸದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸುತ್ತೇವೆ. ನಮ್ಮ ಹೊಸ ನಾಯಕ ರಿಷಭ್ ಪಂತ್ ಅವರನ್ನು ನಿಮಗೆಲ್ಲರಿಗೂ ಪರಿಚಯಿಸಲು ನಾನು ಬಯಸುತ್ತೇನೆ’ ಎಂದು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಹೇಳಿದ್ದಾರೆ.

    ಕಳೆದ ವರ್ಷ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು 27 ಕೋಟಿ ರೂ. ನೀಡಿ ಲಖನೌ ತಂಡ ಖರೀದಿಸಿತ್ತು.

     

    DAKSHINA KANNADA

    ಮಂಗಳೂರು : ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ : ಪ್ರಯಾಗ್ ರಾಜ್ ಕುಂಭಮೇಳ ಪ್ರಯಾಣ

    Published

    on

    ಮಂಗಳೂರು : 144 ವರ್ಷಗಳ ಬಳಿಕ ನಡೆಯುವ ಮಹಾ ಕುಂಭಮೇಳದಲ್ಲಿ ಅಖಿಲ ಭಾರತೀಯ ಸಂತಸಮಿತಿ ಕರ್ನಾಟಕ ಘಟಕದಿಂದ ಕಾರ್ಯಕರ್ತರು 2025 ಜನವರಿ 25 ರಿಂದ 30 ರವರೆಗೆ ಭಾಗವಹಿಸುವುದಾಗಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.

    ವಿಶ್ವದ ಅತೀ ದೊಡ್ಡ ಉತ್ಸವವೇ ಮಹಾ ಕುಂಭಮೇಳ, ನಾನಾ ಯತಿ ಶ್ರೇಷ್ಠರು ಭಾಗವಹಿಸುವ ಕುಂಭಮೇಳದಲ್ಲಿ ವ್ಯತ್ಯಾಸ್ತ ಹೈದವ ಸಂಘಟನೆಗಳಿಂದ ಚರ್ಚೆ ಬೈಠಕ್ ನಡೆಯುವುದು. ಜನವರಿ 21,22 ದಿನಾಂಕದಲ್ಲಿ ಅಖಿಲ ಭಾರತೀಯ ಸಂತ ಸಮಿತಿಯ ಬೈಠಕ್ ನಡೆಯಲಿದೆ. ಅಖಿಲ ಭಾರತ ಸಂತ ಸಮಿತಿ ಹಾಗೂ ಗಂಗಾ ಮಹಾಸಭೆಯ ಸಂಯುಕ್ತತೆಯಲ್ಲಿ ವಾಸ್ತವ್ಯ ಉಪಹಾರದ ವ್ಯವಸ್ಥೆಯು ಸಂಘಟನೆಯಿಂದ ಮಾಡಲಾಗಿದೆ.

    ಇದನ್ನೂ ಓದಿ :  ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?

    ರಾಜ್ಯಾಧ್ಯಕ್ಷರಾದ ಮಂಗಳೂರು ಓಂ ಶ್ರೀ ಮಠದ ಸ್ವಾಮಿ ಹಾಗೂ ಮಾತಾಶ್ರೀ ಓಂ ಶ್ರೀ ಶಿವ ಜ್ಞಾನಮಹಿ ಸರಸ್ವತಿ ಸಮೇತ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ, ಸಮಿತಿ ಮುಖ್ಯ ಕಾರ್ಯದರ್ಶಿ ಕೊಡಗು ಅರಸೀಗುಪ್ಪೆ ಶ್ರೀ ಮಂಜುನಾಥ ಕ್ಷೇತ್ರದ ಸ್ವಾಮಿ ಶ್ರೀ ರಾಜೇಶ್ ನಾಥ್ ಗುರೂಜಿ, ಸಂಘಟನಾ ಕಾರ್ಯದರ್ಶಿ ಕೊಡಗು ಬೆಂಗಳೂರು ವಿರಕ್ತಮಠದ ಶ್ರೀ ನಿಶ್ಚಲ ನಿರಂಜನ ದೇಶೀ ಕೇಂದ್ರ ಸ್ವಾಮೀಜಿ, ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಅರಸೀಕೆರೆ ರುದ್ರಾಕ್ಷ ಫೌಂಡೇಶನ್ ಶ್ರೀ ಜಯಪ್ರಕಾಶ್ ಗುರೂಜಿ, ಕಾರ್ಯದರ್ಶಿಗಳಾದ ಕಡೂರು ಅಯ್ಯಪ್ಪ ಸ್ವಾಮಿ ಕ್ಷೇತ್ರದ ಶ್ರೀ ಭದ್ರಾರಾಜ್ ಸ್ವಾಮೀಜಿ, ಫೌಂಡರ್ ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನ ಹರಿಹರ ಪರಂಪೂಜ್ಯ ಅವಧೂತ ಕವಿ ಗುರುರಾಜ ಗುರೂಜಿ ಹಾಗೂ ಸಮಿತಿಯ ಸಂಯೋಜಕ ಸಮಿತಿ ಅಧ್ಯಕ್ಷ ಅಡ್ವಕೇಟ್ ವೀರೇಶ್ ಅಜ್ಜಣ್ಣನವ‌ರ್ ಹರಿಹರ ಜೊತೆಯಲ್ಲಿ ಸ್ವಾಮೀಜಿಯವರ ಶಿಷ್ಯರು ಭಾಗವಹಿಸಲಿದ್ದಾರೆ.

    Continue Reading

    LATEST NEWS

    ಆರ್‌ಜಿಕರ್ ವೈದ್ಯೆ ಅ*ತ್ಯಾಚಾರ, ಕೊ*ಲೆ ಪ್ರಕರಣ : ಆರೋಪಿ ಸಂಜಯ್ ರಾಯ್‌ಗೆ ಶಿಕ್ಷೆ ಪ್ರಕಟ

    Published

    on

    ಮಂಗಳೂರು/ ಕೊಲ್ಕತ್ತಾ : ಆರ್‌ಜಿಕರ್ ವೈದ್ಯಕೀಯ ಮತ್ತು ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾ*ಚಾರ ನಡೆಸಿ, ಹ*ತ್ಯೆಗೈದಿರುವ ಆರೋಪಿ ಸಂಜಯ್ ರಾಯ್‌ಗೆ ಜೀ*ವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

    ಪಶ್ಚಿಮ ಬಂಗಾಳದ ಸಿಯಾಲ್ದಾ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದು, ಅಪರಾಧಿಗೆ ಜೀ*ವಾವಧಿ ಶಿಕ್ಷೆ ಜೊತೆಗೆ 50,000 ರೂಪಾಯಿ ದಂಡವನ್ನೂ ವಿಧಿಸಿದೆ. ಅಲ್ಲದೇ, ವೈದ್ಯೆಯ ಕುಟುಂಬಕ್ಕೆ 17 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಇದೇ ವೇಳೆ ಆದೇಶಿಸಿದೆ.

    2024ರ ಆಗಸ್ಟ್ 9 ರಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ ನಡೆಸಿ, ಹ*ತ್ಯೆ ಮಾಡಲಾಗಿತ್ತು. ಈ  ಪ್ರಕರಣಕ್ಕೆ ಇಡೀ ದೇಶದಾದ್ಯಂತ ಭಾರಿ ಆಕ್ರೋಶ ಕೇಳಿ ಬಂದಿತ್ತು. ದೇಶದ ಬಹುತೇಕ ಭಾಗಗಳಲ್ಲಿ ವೈದ್ಯರು ಮುಷ್ಕರ ನಡೆಸಿದ್ದರು.

    ಇದನ್ನೂ ಓದಿ : ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?

    ಆಗಸ್ಟ್ 10 ರಂದು ಸಂಜಯ್ ರಾಯ್‌ನನ್ನು ಬಂಧಿಸಲಾಯಿತು. ಕೊಲ್ಕತ್ತಾ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಪ್ರಕರಣದ ವಿಚಾರಣೆ ನವೆಂಬರ್ 12 ರಂದು ಆರಂಭವಾಗಿತ್ತು. ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಆರೋಪಿಯ ವಿಚಾರಣೆ ಜ.9ರಂದು ಕೊನೆಗೊಂಡಿತ್ತು.

     

    Continue Reading

    BIG BOSS

    ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?

    Published

    on

    ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ ಫಿನಾಲೆ ಸಮೀಪಿಸಿದೆ. ಈ ಬಾರಿ ಇಬ್ಬರು ಸ್ಪರ್ಧಿಗಳು ವಿನ್ನರ್ ಆಗಲಿದ್ದಾರಾ ಎಂಬ ಅನುಮಾನವೊಂದು ವೀಕ್ಷಕರನ್ನು ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ.

    ಗ್ರ್ಯಾಂಡ್ ಫಿನಾಲೆಗೆ ಹತ್ತಿರ ಇರುವಾಗಲೇ ಗೌತಮಿ ಜಾಧವ್ ಮತ್ತು ಧನರಾಜ್ ಆಚಾರ್ ಆಚೆ ಬಂದಿದ್ದಾರೆ. ಹೀಗಾಗಿ ಫಿನಾಲೆ ವಾರಕ್ಕೆ 6 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳ ಪೈಕಿ ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್‌ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    ಆರು ಮಂದಿ ಸ್ಪರ್ಧಿಗಳಲ್ಲಿ ಈ ಬಾರಿ ಇಬ್ಬರು ಸ್ಪರ್ಧಿಗಳು ವಿನ್ನರ್ ಆಗಲಿದ್ದಾರಾ ಎಂಬ ಅನುಮಾನವೂ ಶುರುವಾಗಿದೆ. ಇದಕ್ಕೆ ಒಂದಿಷ್ಟು ಕಾರಣಗಳನ್ನು ನೋಡುವುದಾದರೆ, ಬಿಗ್ ಬಾಸ್ ಸೀಸನ್ 11 ಅನ್ನು ವಿಶ್ಲೇಷಣೆ ಮಾಡಿದಾಗ ಕೆಲವೊಂದಿಷ್ಟು ಸುಳಿವುಗಳು ಸಿಗುತ್ತವೆ. ಬಿಗ್ ಬಾಸ್ ಸೀಸನ್ 11ರ ಆರಂಭದಲ್ಲೇ ಬಿಟ್ಟ ಪ್ರೋಮೋದಲ್ಲಿ ಈ ಬಾರಿ ಎಲ್ಲವೂ ಎರಡೆರಡು ಇರಲಿವೆ ಎನ್ನುವ ಸಂಗತಿಯನ್ನು ತಿಳಿಸಿದ್ದರು.

    ಈ ಮಾದರಿಯಲ್ಲಿ ನೋಡುವುದಾದರೆ, ಬಿಗ್ ಬಾಸ್ ಸೀಸನ್ 11ರ ಆರಂಭದಲ್ಲಿ ಯಾವ ಸೀಸನ್‌ಗಳಲ್ಲೂ ಇಲ್ಲದ ಸ್ವರ್ಗ ಮತ್ತು ನರಕ ಎಂಬ ಎರಡು ಎರಡು ಮನೆಗಳನ್ನು ಮಾಡಲಾಗಿತ್ತು. ಎರಡರಲ್ಲೂ ಸ್ಪರ್ಧಿಗಳನ್ನು ಹಾಕಲಾಗಿತ್ತು. ಇಬ್ಬರಿಗೂ ಟಾಸ್ಕ್‌ಗಳನ್ನು ಮತ್ತು ಮನೆಯ ಕೆಲಸಗಳಲ್ಲಿಯೂ ವ್ಯತ್ಯಾಸವಿತ್ತು.

    ಆರಂಭದಲ್ಲಿ ಬಿಗ್ ಬಾಸ್ ಎರಡು ಮನೆಗಳಿಂದ ಶುರುವಾದ ಕಾರಣ ಈ ಸಲ ವಿನ್ನರ್ ಕೂಡ ಇಬ್ಬರು ಆಗಬಹುದೆಂಬ ಅನುಮಾನ ಹೆಚ್ಚಾಗಿತ್ತು. ಸ್ವರ್ಗ ವಾಸಿಗಳಲ್ಲಿ ಒಬ್ಬರನ್ನು ಮತ್ತು ನರಕ ವಾಸಿಗಳಲ್ಲಿ ಒಬ್ಬರನ್ನು ಸೇರಿ ಇಬ್ಬರು ಸ್ಪರ್ಧಿಗಳನ್ನು ವಿನ್ನರ್ ಮಾಡಬಹುದೆಂಬ ಅನುಮಾನ ಮೂಡಿತ್ತು.

    ಆ ಪ್ರಕಾರ ನೋಡುವುದಾದರೆ, ಬಿಗ್ ಬಾಸ್ ಕನ್ನಡ ಸೀಸನ್ 11ರ ನರಕವಾಸಿಗಳಲ್ಲಿ ಮೋಕ್ಷಿತಾ ಪೈ ಒಬ್ಬರೇ ಈಗ ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್ ಮತ್ತು ಭವ್ಯಾ ಫಿನಾಲೆ ಹಂತದಲ್ಲಿದ್ದಾರೆ. ಇನ್ನುಳಿದ ಹನುಮಂತ ಮತ್ತು ರಜತ್ ವೈಲ್ಡ್ ಕಾರ್ಡ್ ಎಂಟ್ರಿಗಳಾಗಿದ್ದಾರೆ.

    ಬಿಗ್ ಬಾಸ್ ಸೀಸನ್ 3 ರಲ್ಲಿ ನಟಿ ಶೃತಿ ಹೊರತು ಪಡಿಸಿದರೆ ಬೇರೆ ಯಾವ ಸೀಸನ್‌ನಲ್ಲೂ ಮಹಿಳಾ ಸ್ಪರ್ಧಿಗಳು ವಿನ್ನರ್ ಆಗಿರಲಿಲ್ಲ. ಹೀಗಾಗಿ ಈ ಬಾರಿ ನರಕವಾಸಿಗಳಲ್ಲಿ ಫಿನಾಲೆ ಹಂತಕ್ಕೆ ಬಂದ ಒನ್ ಆಂಡ್ ಓನ್ಲಿ ಸ್ಪರ್ಧಿ ಮೋಕ್ಷಿತಾ ಅವರಿಗೆ ಗೆಲುವಿನ ಸಿಹಿ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.

    ಇದನ್ನೂ ಓದಿ: ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ

    ಇನ್ನು ಬಿಗ್ ಬಾಸ್ ವೀಕ್ಷಕರ ಪ್ರಕಾರ ಸ್ವರ್ಗವಾಸಿಗಳಲ್ಲಿ ಉಗ್ರಂ ಮಂಜು, ತ್ರಿವಿಕ್ರಮ್ ಮತ್ತು ಭವ್ಯಾ ಈ ಮೂವರಲ್ಲಿ ಮಂಜು ಅವರನ್ನು ವಿನ್ನರ್ ಮಾಡಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
    ಬಿಗ್ ಬಾಸ್ ಸೀಸನ್ 11 ರಲ್ಲಿ ಉಗ್ರಂ ಮಂಜು ಕ್ಯಾಪ್ಟನ್ ಆದ ವೇಳೆ ರಾಜನ ಟಾಸ್ಕ್ ಒಂದನ್ನು ನೀಡಲಾಗಿತ್ತು. ಅಲ್ಲಿ ಮಂಜು ರಾಜನಾಗಿದ್ದರು. ಇವರಿಗೆ ತಂಗಿಯಾಗಿದ್ದ ಮೋಕ್ಷಿತಾ ಯುವರಾಣಿಯಾಗಿದ್ದರು. ಈ ಟಾಸ್ಕ್ ಮೂಲಕ ಇವರಿಬ್ಬರು ವಿನ್ನರ್ ಎಂಬ ಸುಳಿವನ್ನು ಮೊದಲೇ ನೀಡಿದ್ದರಾ ಎಂಬ ಡೌಟ್ ವೀಕ್ಷಕರ ಮನದಲ್ಲಿ ಮೂಡಿದೆಯಂತೆ.

    ಈ ಕಾರಣದಿಂದ ಮೋಕ್ಷಿತಾ ಮತ್ತು ಮಂಜು ಇಬ್ಬರೂ ಬಿಗ್ ಬಾಸ್ ವಿನ್ನರ್ ಆಗಬಹುದು ಅಥವಾ ಉಗ್ರಂ ಮಂಜು ವಿನ್ನರ್ ಆಗಿ ಮೋಕ್ಷಿತಾ ರನ್ನರ್ ಆಗಬಹುದು ಇಲ್ಲವೇ ಮೋಕ್ಷಿತಾ ವಿನ್ನರ್ ಆಗಿ ಮಂಜು ರನ್ನರ್ ಆಗಬಹುದು ಎಂಬ ಸುದ್ದಿ ವೈರಲ್ ಆಗುತ್ತಿದೆ.

    ಬಿಗ್ ಬಾಸ್ ಟ್ರೋಫಿ ನೀಡಿದ ಸುಳಿವೇನು ?
    ಈ ಬಾರಿಯ ಬಿಗ್ ಬಾಸ್ ಟ್ರೋಫಿ ಕೂಡ ತುಂಬಾ ಡಿಫರೆಂಟ್ ಆಗಿದೆ. ಪ್ರತಿ ಬಾರಿ ಕಣ್ಣನ್ನು ಹೊಂದಿರುತ್ತಿದ್ದ ಬಿಗ್ ಬಾಸ್ ಟ್ರೋಫಿ ಈ ಬಾರಿ ಎರಡು ರೆಕ್ಕೆಗಳನ್ನು ಹೊಂದಿದೆ. ಎರಡು ರೆಕ್ಕೆಗಳ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಎಂದು ಬರೆದಿದ್ದು, ಇದು ಡಬಲ್ ವಿನ್ನರ್ ಸುಳಿವಿರಬಹುದು ಎನ್ನಲಾಗ್ತಿದೆ.

    ಈ ಎಲ್ಲಾ ವೈರಲ್ ಸಂಗತಿಗಳು ಬಿಗ್ ಬಾಸ್ ವೀಕ್ಷಕರಲ್ಲಿ ಮೂಡಿರುವ ಅನುಮಾನವಾಗಿದೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಸಿಗಲಿದೆ.

     

    Continue Reading

    LATEST NEWS

    Trending