ಉಡುಪಿ: ಚಲಿಸುತ್ತಿದ್ದ ರಿಕ್ಷಾಕ್ಕೆ ನಾಯಿಯೊಂದು ಅಡ್ಡಬಂದ ಪರಿಣಾಮ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿ ನಡೆದಿದೆ.
ಮೃತ ರಿಕ್ಷಾ ಚಾಲಕನನ್ನು ಗಣೇಶ್ ಪೂಜಾರಿ (53) ಎಂದು ಗುರುತಿಸಲಾಗಿದೆ.
ಘಟನೆ ವಿವರ
ಆ.23 ರಂದು ಉಪ್ಪೂರು ಗ್ರಾಮದ ಅಮ್ಮುಜೆ ರೈಲ್ವೆ ಒವರ್ ಬ್ರಿಡ್ಜ್ ಬಳಿ ಚಲಿಸುತ್ತಿದ್ದ ಆಪೇ ರಿಕ್ಷಾಕ್ಕೆ ಮುಂಭಾಗದಿಂದ ನಾಯಿಯೊಂದು ಒಮ್ಮೇಲೇ ಅಡ್ಡ ಬಂದಿದೆ.
ನಾಯಿಯನ್ನು ತಪ್ಪಿಸಲು ಹೋಗಿ ರಿಕ್ಷಾ ಮರಕ್ಕೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಚಾಲಕ ಗಣೇಶ್ ಪೂಜಾರಿ ಎದೆ, ತಲೆಗೆ ಗಂಭೀರ ಗಾಯವಾಗಿತ್ತು.
ತಕ್ಷಣ ಮಣಿಪಾಲದ ಖಾಸಗಿ ಆಸ್ಪತ್ರಗೆ ದಾಖಲಿಸಿದಾಗ ಪರೀಕ್ಷಿಸಿದ ವೈಧ್ಯರು ಗಣೇಶ್ ಪೂಜಾರಿ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.