Saturday, August 20, 2022

ಮಧ್ಯರಾತ್ರಿಯಲ್ಲಿ ಓಡುತ್ತಿದ್ದ ಯುವಕನ ಸೇನೆಗೆ ಸೇರುವ ಕನಸನ್ನು ನನಸು ಮಾಡಲು ಮುಂದಾದ ಸೇನಾಧಿಕಾರಿ

ನೋಯ್ಡಾ: ನಿನ್ನೆ ರಾತ್ರಿಯಿಂದ 19 ವರ್ಷದ ಯುವಕನೊಬ್ಬ ರಾತ್ರಿ ಮನೆಗೆ ಓಡುತ್ತಲೇ ಹೋಗುವ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಲೇ ಇದೆ.


ಭಾರತೀಯ ಸೇನೆಯನ್ನು ಸೇರಬೇಕು ಎಂಬ ಮಹದಾಸೆಯನ್ನು ಹೊತ್ತ ಯುವಕ ಪ್ರತೀ ದಿನ ಕೆಲಸ ಮುಗಿಸಿಕೊಂಡು 10 ಕಿ.ಮೀ ಓಡುತ್ತಾ ಹೋಗಿ ತನ್ನ ಮನೆಗೆ ತಲುಪುತ್ತಾನೆ.

ಈತನ ಹೆಸರು ಪ್ರದೀಪ್​ ಮೆಹ್ರಾ. ಸೇನೆಗೆ ಸೇರಬೇಕೆಂಬ ಗುರಿಯನ್ನು ಇಟ್ಟುಕೊಂಡಿರುವ ಹುಡುಗ ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವುದು, ಸಿನಿಮಾ ನಿರ್ಮಾಪಕ, ಲೇಖಕ ವಿನೋದ್​ ಕಪ್ರಿ ಶೇರ್ ಮಾಡಿರುವ ವಿಡಿಯೋದಿಂದ ಸ್ಪಷ್ಟವಾಗುತ್ತದೆ.
ಇದೀಗ ಇಂಟರ್‌ನೆಟ್‌ನಿಂದ ವೈರಲ್ ಆಗಿರುವ ಈ ಹುಡುಗನ ಸೇನೆಗೆ ಸೇರುವ ಕನಸನ್ನು ನನಸು ಮಾಡಲು ನಿವೃತ್ತ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಮುಂದೆ ಬಂದಿದ್ದಾರೆ.

ದೇಶಸೇವೆ ಮಾಡಲೆಂದು ತನ್ನದೇ ಆದ ರೀತಿಯಲ್ಲಿ ಸಿದ್ಧತೆಯಲ್ಲಿ ತೊಡಗಿರುವ ಈ ಯುವಕನ ನಿಷ್ಠೆಗೆ ದೇಶಾದ್ಯಂತ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ವಿನೋದ್ ಕಪ್ರಿ ವಿಡಿಯೋವನ್ನು ರೀಟ್ವೀಟ್ ಮಾಡಿಕೊಂಡಿರುವ ಅವರು, ‘ಈ ಯುವಕ ಪ್ರದೀಪ್​ ಉತ್ಸಾಹ, ಜೋಶ್​ ಮೆಚ್ಚಿಕೊಳ್ಳುವಂಥದ್ದಾಗಿದೆ.

ಆತನ ಅರ್ಹತೆಯ ಆಧಾರದ ಮೇಲೆ ಸೇನಾ ನೇಮಕಾತಿ ಪರೀಕ್ಷೆಯನ್ನು ಉತ್ತೀರ್ಣನಾಗಲು ನಾನು ಸಹಾಯ ಮಾಡುತ್ತೇನೆ. ಪ್ರದೀಪ್​ ಬಗ್ಗೆ ನಾನು, ಪೂರ್ವ ಸೇನಾ ಕಮಾಂಡರ್​, ಕುಮಾನ್ ರೆಜಿಮೆಂಟ್‌ನ ಕರ್ನಲ್ ಲೆಫ್ಟಿನೆಂಟ್ ಜನರಲ್​ ರಾಣಾ ಕಲಿಟಾ ಅವರೊಂದಿಗೆ ಮಾತನಾಡಿದ್ದೇನೆ.

ಈ ಹುಡುಗನನ್ನು ತನ್ನ ರೆಜಿಮೆಂಟ್​​ನಲ್ಲಿ ನೇಮಕ ಮಾಡಿಕೊಳ್ಳುವ ಸಂಬಂಧ ಪ್ರಕ್ರಿಯೆಗಳನ್ನು ಅವರು ಶುರು ಮಾಡಿದ್ದಾರೆ, ಜೈ ಹಿಂದ್​’ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ.

ಈತ ಉತ್ತರಾಖಂಡ್​ ಮೂಲದವನಾಗಿದ್ದು ನೊಯ್ಡಾ ಬಳಿ ತನ್ನ ಅಣ್ಣನೊಂದಿಗೆ ವಾಸವಾಗಿದ್ದು, ಮೆಕ್​ಡೊನಾಲ್ಡ್​ನಲ್ಲಿ ಉದ್ಯೋಗಿ. ಬೆಳಗ್ಗೆ ಎದ್ದು ತಿಂಡಿ ಮಾಡಿ ಕೆಲಸಕ್ಕೆ ಬರುವ ಕಾರಣ ಆಗ ಹೀಗೆ ಓಡಲು, ವ್ಯಾಯಾಮ ಮಾಡಲು ಸಾಧ್ಯವಿಲ್ಲ ಎಂದು ಪ್ರತಿದಿನ ಸಂಜೆ ಕೆಲಸ ಮುಗಿಯುತ್ತಿದ್ದಂತೆ 10 ಕಿಮೀ ದೂರದಲ್ಲಿರುವ ಮನೆಗೆ ಓಡಿಕೊಂಡೇ ಹೋಗುತ್ತಿದ್ದಾನೆ. ಇದೊಂದು ಸ್ಫೂರ್ತಿದಾಯಕ ವಿಡಿಯೋ ಎಂದು ಅನೇಕರು ಹೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics