ಉಡುಪಿ: ಅಲೆಗಳ ಸೆಳೆತಕ್ಕೆ ಸಿಲುಕಿ ನೀರು ಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರನ್ನು ಜೀವ ರಕ್ಷಕ ದಳದವರು ರಕ್ಷಿಸಿದ ಘಟನೆ ಇಂದು ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ನಡೆದಿದೆ.
ಬಿಜಾಪುರ ಮೂಲದ ನಾಲ್ವರು ರಕ್ಷಣೆಗೆ ಒಳಗಾದ ಪ್ರವಾಸಿಗರು.
ಜೀವ ರಕ್ಷಕ ದಳದ ಸಿಬ್ಬಂದಿಗಳು ನೀರಿಗೆ ಇಳಿಯಬೇಡಿ ಎಂಬ ಎಚ್ಚರಿಕೆ ನೀಡಿದ್ದರು ಕೂಡಾ ನೀರಿಗೆ ಇಳಿಯಲು ಮುಂದಾಗಿದ್ದೇ ಈ ದುರಂತ ಸಂಭಿವಿಸಲು ಕಾರಣ ಎನ್ನಲಾಗಿದೆ.
ನಿನ್ನೆ ಸಂಜೆಯೂ ಇಂತಹುದೇ ದುರ್ಘಟನೆ ನಡೆದಿದ್ದು, ಈ ವೇಳೆಯೂ ನಾಲ್ವರು ಪ್ರವಾಸಿಗರನ್ನು ಮಲ್ಪೆ ಜೀವ ರಕ್ಷಕ ದಳ ರಕ್ಷಣೆ ಮಾಡಿತ್ತು.