LATEST NEWS
ಪ್ರತಿಷ್ಠಿತ ಉದ್ಯಮಿ, ಪ್ರಗತಿಪರ ಕೃಷಿಕ ರಘುನಾಥ ಪಯ್ಯಡೆ ಕೂರಿಯಾಳಗುತ್ತು ನಿಧನ
Published
5 months agoon
By
NEWS DESK4ಮಂಗಳೂರು : ಮುಂಬಯಿನ ಪ್ರತಿಷ್ಠಿತ ಪಯ್ಯಡೆ ಗ್ರೂಪ್ ಆಫ್ ಹೋಟೆಲ್ಸ್ ನ ಪಾಲುದಾರ, ಬಂಟ್ವಾಳದ ಪ್ರಗತಿಪರ ಕೃಷಿಕ ರಘುನಾಥ ಪಯ್ಯಡೆ ಕೂರಿಯಾಳಗುತ್ತು ಪಯ್ಯಡೆ ಹೌಸ್ ಅವರು ಇಂದು(ಆ.20) ನಿಧ*ನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ರಘುನಾಥ ಪಯ್ಯಡೆ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಹಿರಿಯ ಸಹೋದರ ಕೇಶವ ಪಯ್ಯಡೆ, ನಾಲ್ಕು ಸಹೋದರರು, ಸಹೋದರಿಯನ್ನು, ಮುಂಬೈ ಹೊಟೇಲ್ ಉದ್ಯಮಿಗಳನ್ನು ಅಗಲಿದ್ದಾರೆ.
ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ದೊಡ್ಡ ಮಟ್ಟಿನ ಕೊಡುಗೈದಾನಿಯಾಗಿ ಗುರುತಿಸಿಕೊಂಡಿದ್ದರು. ಅಮ್ಟಾಡಿ ಮಂಡಲ ಪಂಚಾಯತ್ ಪ್ರಧಾನರಾಗಿ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಬಂಟವಾಳದ ಬಂಟರ ಭವನ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಪ್ರಸ್ತುತ ಬಂಟರ ಸಂಘ ಬೆಳ್ಳೂರು ವಲಯದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ : ಉಡುಪಿ : ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿಯ ಶ*ವ ಬಾವಿಯಲ್ಲಿ ಪತ್ತೆ
ಸಂತಾಪ :
ರಘುನಾಥ ಪಯ್ಯಡೆ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಸ್ಕ್ಯಾಡ್ಸ್ ನ ಅಧ್ಯಕ್ಷ ರವೀಂದ್ರ ಕಂಬಳಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಆ. 21ರಂದು ಬೆಳಗ್ಗೆ 10ಕ್ಕೆ ಕೂರಿಯಾಳಗುತ್ತು ಪಯ್ಯಡೆ ಹೌಸ್ ನಲ್ಲಿ ನಡೆಯಲಿದೆ ಎಂದು ಕುಟುಂಬದ ಪ್ರಕಟಣೆ ತಿಳಿಸಿದೆ.
LATEST NEWS
ಮೊಸಳೆ ತಲೆ ಬುರುಡೆ ಕಳ್ಳ ಸಾಗಣೆ ಯತ್ನ; ಕೆನಡಾ ಮೂಲದ ವ್ಯಕ್ತಿ ಅರೆಸ್ಟ್
Published
15 hours agoon
09/01/2025By
NEWS DESK4ಮಂಗಳೂರು/ನವದೆಹಲಿ : ಮೊಸಳೆಯ ತಲೆಬುರುಡೆ ಕಳ್ಳಸಾಗಣೆಗೆ ಯತ್ನಿಸಿದ ಆರೋಪದಲ್ಲಿ ಕೆನಡಾ ಮೂಲದ ವ್ಯಕ್ತಿಯನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಟರ್ಮಿನಲ್ 3ರಲ್ಲಿ ಕೆನಡಾ ಮೂಲದ ವ್ಯಕ್ತಿ ಮಾಂಟ್ರಿಯಲ್ಗೆ ವಿಮಾನ ಹತ್ತಲು ಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮೊಸಳೆಯ ಮರಿಯನ್ನು ಹೋಲುವ ಸುಮಾರು 770 ಗ್ರಾಂ ತೂಕದ ಚೂಪಾದ ಹಲ್ಲುಗಳನ್ನು ಹೊಂದಿರುವ ತಲೆಬುರುಡೆ ಪತ್ತೆಯಾಗಿದೆ.
ದೆಹಲಿ ಸರ್ಕಾರದ ಅಧೀನದಲ್ಲಿರುವ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ನಡೆಸಿದ ಶೋಧ ಕಾರ್ಯದಲ್ಲಿ ಅದು ಮೊಸಳೆ ಮರಿಯ ತಲೆಬುರುಡೆ ಎಂಬುದಾಗಿ ದೃಢಪಟ್ಟಿದೆ. 1972ರ ವನ್ಯ ಜೀವಿ ಕಾಯ್ದೆಯಡಿಯಲ್ಲಿ ಸಂರಕ್ಷಿತ ಜಾತಿಗೆ ಸೇರಿದ ತಲೆಬುರುಡೆ ಇದಾಗಿದೆ. ಹೆಚ್ಚಿನ ವೈಜ್ಞಾನಿಕ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
LATEST NEWS
ಶರಣಾದ ನಕ್ಸಲರನ್ನು NIA ವಿಶೇಷ ಕೋರ್ಟ್ ಗೆ ಹಾಜರುಪಡಿಸಿದ ಪೊಲೀಸರು!
Published
15 hours agoon
09/01/2025By
NEWS DESK2ಬೆಂಗಳೂರು: ಸಮಾಜದ ಮುಖ್ಯ ವಾಹಿನಿಗೆ ಬರಲು ನಿರ್ಧರಿಸಿ ನಿನ್ನೆ ಮೋಸ್ಟ್ ವಾಂಟೆಡ್ 6 ಜನ ನಕ್ಸಸಲರು ಬೆಂಗಳೂರಿನ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದರು. ಬಳಿಕ ಅವರನ್ನ ವಶಕ್ಕೆ ಪಡೆದ ಪೊಲೀಸರು ಇಂದು ಅವರನ್ನು ಬೆಂಗಳೂರಿನ ಎನ್ಐಎ ವಿಶೇಷ ಕೋರ್ಟಿಗೆ ಹಾಜರುಪಡಿಸಿದ್ದಾರೆ.
ಹೌದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಂಕಿರಣದ ಎನ್ಐಐ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ನಕ್ಸಲರನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಇದೀಗ ಹಾಜರುಪಡಿಸಿದ್ದಾರೆ. ಇದಕ್ಕೂ ಮೊದಲು 6 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಎನ್ಐಎ ವಿಶೇಷ ಕೋರ್ಟ್ ಮುಂದೆ ಇದೀಗ ಹಾಜರುಪಡಿಸಿದ್ದಾರೆ.
LATEST NEWS
ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
Published
16 hours agoon
09/01/2025By
NEWS DESK4ಮಂಗಳೂರು/ಬೆಂಗಳೂರು : ಅತ್ಯಾ*ಚಾರ, ಅಶ್ಲೀ*ಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ನೀಡಿದೆ. ಈ ಮೂಲಕ ಹಲವು ತಿಂಗಳುಗಳ ಬಳಿಕ ಪ್ರಜ್ವಲ್ ರೇವಣ್ಣಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಯಿತು.
ಈ ಸಂದರ್ಭ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆ ನೀಡಿದೆ. ಮುಂದಿನ ಆದೇಶದ ವರೆಗೆ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿ, ಜ.16ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಅ*ತ್ಯಾಚಾರ ಆರೋಪ ಹಾಗೂ ಪೆನ್ ಡ್ರೈವ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಜನವರಿ 13ಕ್ಕೆ ವಿಚಾರಣಾಧೀನ ಕೋರ್ಟ್ನಲ್ಲಿ ಆರೋಪ ನಿಗದಿ ಮಾಡುವುದಕ್ಕೆ ನಿಗದಿಯಾಗಿತ್ತು. ಇದನ್ನು ಪ್ರಶ್ನಿಸಿ ಪ್ರಜ್ವಲ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಪ್ರಜ್ವಲ್ಗೆ ಸ್ವಲ್ಪ ರಿಲೀಫ್ ಕೊಟ್ಟಿದೆ.
ಇದನ್ನೂ ಓದಿ : ಫ್ರಿಡ್ಜ್ನಲ್ಲಿ ನಿಂಬೆಹಣ್ಣಿನ ತುಂಡನ್ನು ಇಟ್ಟರೆ ಏನಾಗುತ್ತೆ ಗೊತ್ತಾ..?
2024ರಲ್ಲಿ ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದಂತೆ ಅಶ್ಲೀ*ಲ ವೀಡಿಯೋಗಳು ವೈರಲ್ ಆಗಿದ್ದವು. ಇದು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು.