Friday, October 23, 2020

ಧರ್ಮಬೋಧಕನಿಗೆ ವಿದ್ಯಾರ್ಥಿನಿಯರೇ ಟಾರ್ಗೆಟ್​ : ಕಾಮಪ್ರಚೋದನೆಯ ಆರೋಪದಲ್ಲಿ ಸಾಮ್ಯುವೆಲ್​ ಎರೆಸ್ಟ್..!

ಮಂಗಳೂರು : ಹಲವು ಪ್ರಕರಣಗಳ ಆರೋಪಿ ದುಬೈನಲ್ಲಿ ಹೃದಯಾಘಾತಕ್ಕೆ ಬಲಿ..!

ಮಂಗಳೂರು : ಹಲವು ಪ್ರಕರಣಗಳ ಆರೋಪಿ ದುಬೈನಲ್ಲಿ ಹೃದಯಾಘಾತಕ್ಕೆ ಬಲಿ..! ಮಂಗಳೂರು : ಕೊಲೆ, ಕೊಲೆಯತ್ನ , ದರೋಡೆ ಸೇರಿದಂತೆ ಉಳ್ಳಾಲ ಸಹಿತ ಮಂಗಳೂರಿನ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳ ಆರೋಪಿಯಾಗಿದ್ದ ಟಾರ್ಗೆಟ್ ತಂಡದ...

ಉಳ್ಳಾಲದಲ್ಲಿ ಬೈಕ್ ಅಪಘಾತ:1 ಸಾವು ಇಬ್ಬರು ಗಂಭೀರ..!

ಉಳ್ಳಾಲದಲ್ಲಿ ಬೈಕ್ ಅಪಘಾತ:1 ಸಾವು ಇಬ್ಬರು ಗಂಭೀರ..! ಮಂಗಳೂರು : ಉಳ್ಳಾಲದಲ್ಲಿ ಮಿತಿಮೀರಿದ ವೇಗದ ಬೈಕ್ ಚಾಲನೆಗೆ ಓರ್ವ ಸತ್ತು- ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅಮಿತ ವೇಗದಲ್ಲಿ ಧಾವಿಸಿದ ಬೈಕ್ ಪಾದಚಾರಿಗೆ ಢಿಕ್ಕಿ ಹೊಡೆದು ರಸ್ತೆ...

ಉಡುಪಿಯಲ್ಲಿ ಖತರ್‌ ನಾಕ್ ಇರಾನಿ ಗ್ಯಾಂಗ್ ಮಟ್ಟ ಹಾಕಿದ ಡಿಸಿಐಬಿ ಪೊಲೀಸ್‌ ತಂಡ..!

ಉಡುಪಿಯಲ್ಲಿ ಖತರ್‌ ನಾಕ್ ಇರಾನಿ ಗ್ಯಾಂಗ್ ಮಟ್ಟ ಹಾಕಿದ ಡಿಸಿಐಬಿ ಪೊಲೀಸ್‌ ತಂಡ..! ಉಡುಪಿ : ರಾಜ್ಯದ ವಿವಿಧೆಡೆಗಳಲ್ಲಿ ವಯಸ್ಸಾದ ಒಂಟಿ ಹೆಂಗಸರು ಹಾಗೂ ಗಂಡಸರನ್ನು ನಯವಾದ ಮಾತುಗಳಿಂದ ವಂಚಿಸಿ ಚಿನ್ನಾಭರಣಗಳನ್ನು ಕಳವು ಮಾಡುತಿದ್ದ...

ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ:ಆಡಿಯೋ ಸಂದೇಶ ಕಳುಹಿಸಿ ತಪ್ಪೊಪ್ಪಿಕೊಂಡ ಆರೋಪಿ ಸತೀಶ್ ಕುಲಾಲ್..!

ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ:ಆಡಿಯೋ ಸಂದೇಶ ಕಳುಹಿಸಿ ತಪ್ಪೊಪ್ಪಿಕೊಂಡ ಆರೋಪಿ ಸತೀಶ್ ಕುಲಾಲ್..! ಬಂಟ್ವಾಳ :  ಚಿತ್ರ ನಟ ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ. ಪೊಲೀಸರಿಗೆ ಆಡಿಯೋ ಸಂದೇಶ ಕಳುಹಿಸಿ ಆರೋಪಿ...

Breaking News: ಉಡುಪಿ ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಸ್ಥಳಿಯ ಮೀನುಗಾರಿಗೆ ಹಲ್ಲೆ ಬೋಟಿಗೆ ಹಾನಿ : ಉದ್ವಿಗ್ನ ಪರಿಸ್ಥಿತಿ..!

Breaking News: ಉಡುಪಿ ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಸ್ಥಳಿಯ ಮೀನುಗಾರಿಗೆ ಹಲ್ಲೆ ಬೋಟಿಗೆ ಹಾನಿ : ಉದ್ವಿಗ್ನ ಪರಿಸ್ಥಿತಿ..! ಉಡುಪಿ: ಹೊರ ರಾಜ್ಯದ ಮೀನುಗಾರರು ರಾಜ್ಯದ ಕರಾವಳಿ ಪ್ರವೇಶಿಸಿ ಸ್ಥಳೀಯ ಮೀನುಗಾರರಿಗೆ ಕಿರುಕುಳ ಕೊಡುವ...

ಧರ್ಮಬೋಧಕನಿಗೆ ವಿದ್ಯಾರ್ಥಿನಿಯರೇ ಟಾರ್ಗೆಟ್​ : ಕಾಮಪ್ರಚೋದನೆಯ ಆರೋಪದಲ್ಲಿ ಸಾಮ್ಯುವೆಲ್​ ಎರೆಸ್ಟ್..!

ಚೆನೈ :  ಅಪ್ರಾಪ್ತ ವಿದ್ಯಾರ್ಥಿನಿಯರ ಜತೆ ಅಶ್ಲೀಲ ವರ್ತನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಇರುವ ಶಾಲಾ ವಿದ್ಯಾರ್ಥಿಗಳಿಗೆ ಬೈಬಲ್​ ಪ್ರಚಾರ ಮಾಡುವ ಸ್ಕ್ರಿಪ್ಚರ್​ ಯೂನಿಯನ್​ ಹೆಸರಿನ ಕ್ರಿಶ್ಚಿಯನ್​ ಸಂಘಟನೆಯೊಂದು ತನ್ನ ಧರ್ಮಬೋಧಕರೊಬ್ಬರನ್ನು ಅಮಾನತು ಮಾಡಿದೆ. ಜೊತೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಮಾಡಲಾಗಿದೆ.

ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿರುವ ಸುಮಾರು 20ಕ್ಕೂ ಹೆಚ್ಚು ಸ್ಕ್ರೀನ್​ ಶಾಟ್​ಗಳನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್​ ಆಗುತ್ತಿದೆ.

ಇದರ ಬೆನ್ನಲ್ಲೇ ಆರೋಪಿ ಧರ್ಮಬೋಧಕ ಸಾಮ್ಯುವೆಲ್​ ಜೈಸುಂದರ್​ ಎಂಬುವರನ್ನು ಅಮಾನತು ಮಾಡಲಾಗಿದೆ. ಸಾಮ್ಯುಯೆಲ್​ ಜೈಸುಂದರ್​ರನ್ನು ಸ್ಕ್ರಿಪ್ಚರ್​ ಯೂನಿಯನ್​ ತನ್ನ ಇಂಗ್ಲಿಷ್​ ಪಬ್ಲಿಕೇಶನ್​ನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತ್ತು.

ಕಳೆದ ಭಾನುವಾರ  ಟ್ವಿಟರ್​ ಬಳಕೆದಾರ ಅನೇಕ ಸ್ಕ್ರೀನ್​ಶಾಟ್​ಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಸಾಮ್ಯುಯೆಲ್ ತುಂಡುಡುಗೆ ಧರಿಸಿರುವ ಫೋಟೋಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ ಎಂದು 10 ರಿಂದ 15 ವರ್ಷ ನಡುವಿನ ವಿದ್ಯಾರ್ಥಿನಿಯರಿಗೆ ಕೇಳಿರುವ ಆರೋಪ ಎದುರಾಗಿದೆ.

ಅಲ್ಲದೆ, ಒಂದು ನಿರ್ಧಿಷ್ಟ ಸ್ಕ್ರೀನ್​ಶಾಟ್​ನಲ್ಲಿ ಹುಡುಗರಿಗೆ ಯಾವಾಗಲಾದರೂ ಕಿಸ್​ ಮಾಡಿದ್ದೀಯ? ಎಂದು ಪ್ರಶ್ನಿಸಿದ್ದಲ್ಲದೆ, ಆಕೆಯ ರಿಲೇಷನ್​ಶಿಪ್​ ಬಗ್ಗೆ ಕೇಳಿದ್ದಾರೆ.

ಸಾಮ್ಯುಯೆಲ್ ಮತ್ತವರ ತಂಡ ನಿಯಮಿತವಾಗಿ ತಮಿಳುನಾಡಿನಾದ್ಯಂತ ನಡೆಯುವ ಕ್ರಿಶ್ಚಿಯನ್​ ಮಿಶನರಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದರು. ದಶಕಗಳಿಂದ ವಕೇಶನಲ್​ ಬೈಬಲ್​ ಸ್ಕೂಲ್​ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು.

ಅಲ್ಲದೆ, ಬೈಬಲ್​ ಅಧ್ಯಯನಕ್ಕಾಗಿ ಬೇಸಿಗೆ ಶಿಬಿರಗಳನ್ನು ಸಹ ಆಯೋಜಿಸುತ್ತಿದ್ದರು. ಕೆಲ ಯುವತಿಯರು ಸಹ ತಾವು ಅಪ್ರಾಪ್ತೆಯರಾಗಿದ್ದಾಗ ಸ್ಯಾಮೆಯೆಲ್​ ಅನುಚಿತವಾಗಿ ವರ್ತಿಸಿದ್ದಾಗಿ ಆರೋಪಿಸಿದ್ದಾರೆ.

ಅನೇಕ ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾರೆ. ಕೆಲವರಿಗೆ ಫೇಸ್​ಬುಕ್​ ಮೂಲಕ ಬಟ್ಟೆಗಳ ಬಗ್ಗೆ ಕಮೆಂಟ ಮಾಡಿದ್ದಾರೆ.

ಅಶ್ಲೀಲ ಸೆಲ್ಫಿ ಫೋಟೋಗಳನ್ನು ಕಳುಹಿಸುವಂತೆ ಕೇಳಿದ್ದರು ಎಂದು ಸಾಕಷ್ಟು ಹೆಣ್ಣು ಮಕ್ಕಳು ಸ್ಯಾಮೆಯೆಲ್​ ವಿರುದ್ಧ ಆರೋಪಿಸಿದ್ದು, ಎಲ್ಲರ ಸ್ಕ್ರೀನ್​ಶಾಟ್​ಗಳನ್ನು ಸಂಗ್ರಹಿಸಿ, ಟ್ವಿಟರ್​ ಬಳಕೆದಾರರೊಬ್ಬರು ಪೋಸ್ಟ್​ ಮಾಡಿ ಧರ್ಮಬೋಧಕನ ಕರಾಳ ಮುಖವನ್ನು ಅನಾವರಣ ಮಾಡಿದ್ದಾರೆ.

ಇದೀಗ ಆತನನ್ನು ಅಮಾನತು ಮಾಡಲಾಗಿದ್ದು, ಪೊಲೀಸ್​ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.