Connect with us

LATEST NEWS

ಭಾರತದಲ್ಲಿ ಸ್ತ್ರೀಯರಿಗೆ ಸಮಾನ ಡಿಜಿಟಲ್ ಅವಕಾಶ : ಅಮೆರಿಕದ USAID ನೊಂದಿಗೆ ರಿಲಾಯನ್ಸ್ ಫೌಂಡೇಶನ್ ಒಪ್ಪಂದ..

Published

on

ಭಾರತದಲ್ಲಿ ಸ್ತ್ರೀಯರಿಗೆ ಸಮಾನ ಡಿಜಿಟಲ್ ಅವಕಾಶ : ಅಮೆರಿಕದ USAID ನೊಂದಿಗೆ ರಿಲಾಯನ್ಸ್ ಫೌಂಡೇಶನ್ ಒಪ್ಪಂದ..

ಮುಂಬೈ: ದೇಶದಲ್ಲಿ ಗಣನೀಯವಾಗಿ ಬೆಳೆಯುತ್ತಿದೆ ಡಿಜಿಟಲ್ ಕ್ಷೇತ್ರ. ತೀವ್ರ ಪೈಪೋಟಿಯ ಈ ಕ್ಷೇತ್ರದಲ್ಲಿ ಪುರುಷರು ಮತ್ತು ಮಹಿಳೆಯರ ಮಧ್ಯೆ ಅಂತರವೂ ಸೃಷ್ಟಿಯಾಗಿದೆ.ಈ ಅಂತರವನ್ನು ತಗ್ಗಿಸಿ ಸರಿಪಡಿಸುವ ನಿಟ್ಟಿನಲ್ಲಿ ಅಮೆರಿಕದ USAID ಮತ್ತು ಭಾರತದ ರಿಲಾಯನ್ಸ್ ಫೌಂಡೇಶನ್ ಕೈಜೋಡಿಸಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ಮಹಿಳೆಯರ ಜಾಗತಿಕ ಅಭಿವೃದ್ಧಿ ಮತ್ತು ಸಮೃದ್ಧಿ ಯೋಜನೆ ಭಾಗವಾಗಿ ಈ ಒಪ್ಪಂದವನ್ನು ಮಾಡಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಅಮೆರಿಕ ಅಧ್ಯಕ್ಷರ ಸಲಹೆಗಾರ್ತಿ, ಟ್ರಂಪ್ ಪುತ್ರಿ ಇವಾಂಕ ಟ್ರಂಪ್, ಅಮೆರಿಕದ ಉಪಕಾರ್ಯದರ್ಶಿ ಸ್ಟೀಫನ್ ಬೇಗುನ್ ಮತ್ತು ಯುಎಸ್​ಎಐಡಿ ಅಧಿಕಾರಿ ಬೋನ್ನೀ ಗ್ಲಿಕ್ ಅವರು ಸಾಕ್ಷಿಯಾಗಿದ್ದರು.

ಈ ಸಂದರ್ಭ ಮಾತನಾಡಿದ ಇವಾಂಕ ಟ್ರಂಪ್ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ವಿವಿಧ ಯೋಜನೆಗಳನ್ನ ಕೈಗೊಳ್ಳಲೆಂದು ಡಬ್ಲ್ಯೂ-ಜಿಡಿಪಿ ಫಂಡ್ ರಚಿಸಲಾಗಿದೆ.

ಅಮೆರಿಕ ಸರ್ಕಾರದ ಸಂಪನ್ಮೂಲ ಮತ್ತು ಪರಿಣತಿಯ ಜೊತೆಗೆ ಖಾಸಗಿ ವಲಯವನ್ನೂ ಜೋಡಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಯುಎಸ್​ಎಐಡಿಯ ಅಧಿಕಾರಿ ಜಾನ್ ಬಾರ್ಸಾ ಮಹಿಳೆಯರನ್ನು ಹೊರಗಿಟ್ಟು ಜಾಗತಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ.

ಮಹಿಳೆಯರ ಮೇಲೆ ಹೂಡಿಕೆ ಮಾಡಿದರೆ ಬಹಳಷ್ಟು ಪರಿವರ್ತನೆ ತರಲು ಸಾಧ್ಯ. ಮಹಿಳೆಯರು ಮತ್ತು ಪುರುಷರ ಮಧ್ಯೆ ಇರುವ ಆರ್ಥಿಕ ಅಂತರವನ್ನು ತಗ್ಗಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದ್ದಾರೆ ಇನ್ನು ಈ ಯೋಜನೆಯಲ್ಲಿ ರಿಲಾಯನ್ಸ್ ಫೌಂಡೇಶನ್ ಸಂಸ್ಥೆಯನ್ನು ಒಳಗೊಂಡಿರುವುದಕ್ಕೆ ಫೌಂಡೇಶನ್ ಮುಖ್ಯಸ್ಥೆ ನೀತಾ ಅಂಬಾನಿ ಹರ್ಷ ವ್ಯಕ್ತಪಡಿಸಿದ್ದಾರೆ.

ಯುಎಸ್​ಎಐಡಿ ಜೊತೆ ಕೈಜೋಡಿಸುವ ಮೂಲಕ ಡಬ್ಲ್ಯೂ-ಜಿಡಿಪಿಯ ಈ ಕೈಂಕರ್ಯದಲ್ಲಿ ರಿಲಾಯನ್ಸ್ ಫೌಂಡೇಶನ್ ಭಾಗಿಯಾಗಿರುವುದನ್ನು ತಿಳಿಸಲು ನಮಗೆ ಹಮ್ಮೆಯಾಗುತ್ತಿದೆ.

ಡಬ್ಲ್ಯೂ-ಜಿಡಿಪಿ ವುಮೆನ್​ಕನೆಕ್ಟ್ ಚಾಲೆಂಜ್ ಯೋಜನೆಯನ್ನು ದೇಶಾದ್ಯಂತ ಪ್ರಾರಂಭಿಸುತ್ತೇವೆ. ಭಾರತದಲ್ಲಿ ಲಿಂಗೀಯ ಅಂತರ ಹಾಗೂ ಡಿಜಿಟಲ್ ಅಂತರವನ್ನು ತಗ್ಗಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.

ದೇಶಾದ್ಯಂತ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಿಲಾಯನ್ಸ್ ಫೌಂಡೇಶನ್ ಮಹಿಳೆಯರ ಜಾಗತಿಕ ಅಭಿವೃದ್ಧಿ ಮತ್ತು ಸಮೃದ್ಧಿ ಯೋಜನೆ ಭಾಗವಾಗಿ ಈ ಒಪ್ಪಂದವನ್ನು ಮಾಡಿದೆ.

LATEST NEWS

Baindoor: ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ..!

Published

on

ಬೈಂದೂರು: ಬೈಂದೂರು- ಶಿರೂರು ನೆರೆಗುದ್ದೆ ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಯುವಕನೊಬ್ಬನನ್ನು ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸಿಬಂದಿ ರಕ್ಷಿಸಿ ಪ್ರಾಣ ಉಳಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗಾಯಾಳು ವ್ಯಕ್ತಿಯನ್ನು ರಾಜೇಶ್  (25)ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ 10 ಗಂಟೆಗೆ ರೈಲ್ವೆ ಇಲಾಖೆ ನೀಡಿದ ಮಾಹಿತಿಯ ಮೇರೆಗೆ ಆರೋಗ್ಯ ಕವಚ 108 ಸಿಬಂದಿ ಕಾರ್ಯಚರಣೆ ನಡೆಸಿದರು.

ರೈಲ್ವೇ ಸುರಂಗ ಮಾರ್ಗದೊಳಗೆ ಸುಮಾರು 3 ಕಿ.ಮೀ ನಡೆದು ಕೊಂಡು ಹೋಗಿ ಹಳಿಯ ಪಕ್ಕದಲ್ಲಿ ಮುಗುಚಿ ಬಿದ್ದಿದ್ದ ವ್ಯಕ್ತಿಯನ್ನು ಸ್ಟ್ರೆಚರ್ ನಲ್ಲಿ ಹಾಕಿ ಹೊತ್ತು ಹೊರತಂದು ಬೈಂದೂರು ಆಸ್ಪತ್ರೆಗೆ ದಾಖಲಿಸಿದರು.

ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ‌.

ಆ್ಯಂಬುಲೆನ್ಸ್‌ನ ಪೈಲೆಟ್ ಶರಣ ಬಸವ ಮತ್ತು ಇ ಎಂ ಟಿ ಪ್ರತಿಭಾ ಅವರು ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

Continue Reading

LATEST NEWS

ಕೊರಗಜ್ಜನ ಪವಾಡ- ವಾರವಿಡೀ ಕಾಡಿನಲ್ಲಿ ಸಿಲುಕಿದ ಯುವಕನ ರಕ್ಷಣೆ ಮಾಡಿದ ನಾಯಿಯ ಅದ್ದೂರಿ ಮೆರವಣಿಗೆ

Published

on

ಕುಂದಾಪುರ: ತುಳುನಾಡಿನಲ್ಲಿ ಕೊರಗಜ್ಜನ ದೈವದ ಕಾರ್ಣಿಕದ ಶಕ್ತಿ ಅಪಾರವಾದದ್ದು. ಹಾಗಾಗಿ ನಂಬುವ ಜನರಿಗೆ ಕೊರಗಜ್ಜ ಯಾವತ್ತೂ ಕೈ ಬಿಡುದಿಲ್ಲ ಎಂಬ ನಂಬಿಕೆ ಇದೆ.

ಆ ನಂಬಿಕೆಯಂತೆ ಉಡುಪಿ ಜಿಲ್ಲೆಯಲ್ಲೊಂದು ಅಚ್ಚರಿ ಘಟನೆ ನಡೆದಿದೆ.

ಕುಂದಾಪುರದ ಯುವಕನೋರ್ವ ಕಾಣೆಯಾಗಿದ್ದಾನೆ ಎಂದು ತಿಳಿದ ಮನೆಯವರು ದೈವದ ಮೊರೆ ಹೋದ ಬೆನ್ನಲೇ ಆತ ನಾಯಿಯೊಂದಿಗೆ ವಾಪಸು ಮನೆಗೆ ಮರಳಿದ್ದಾನೆ.

ಇದು ನಂಬಿದ ದೈವವೇ ಯುವಕನನ್ನು ಮರಳಿ ಮನೆಗೆ ಕರೆಸಿದೆ ಎಂದು ಗ್ರಾಮಸ್ಥರು ನಂಬಬಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮಚ್ಚೆಟ್ಟು ವ್ಯಾಪ್ತಿಯ ವಿವೇಕಾನಂದ ಎಂಬ ಯುವಕನು ಕಾಡಿಗೆ ಕಟ್ಟಿಗೆ ತರಲು ಎಂದು ಹೋದವನು 8 ದಿನವಾದರೂ ಮನೆಗೆ ವಾಪಸು ಬಂದಿರಲಿಲ್ಲ.

ಹಾಗಾಗಿ ಮನೆಯವರು ದೈವದ ಮೊರೆ ಹೋಗಿದ್ದಾರೆ.

ಈ ವೇಳೆ ಆತ ಜೀವಂತವಾಗಿರುವುದು ತಿಳಿದು ಬಂದ ಕೂಡಲೇ ದೈವದ ಭರವಸೆಯಂತೆ ಪೊಲೀಸರು, ಎಎನ್‌ಎಫ್‌ ಪಡೆಯೊಂದಿಗೆ ಗ್ರಾಮಸ್ಥರು ಹಗಲು ರಾತ್ರಿ ಇಡೀ ಆತನ ಪತ್ತೆಗೆ ಹುಡುಕಾಡಿದ್ದಾರೆ.

ಆದರೆ ಆತನ ಸುಳಿವು ಸಿಕ್ಕಿರದ ಕಾರಣ ಮನೆಯವರು ಮುಳ್ಳುಗುಡ್ಡೆ ಕೊರಗಜ್ಜ ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರು.

“ಆತ ಹಂದಿಯೊಂದನ್ನು ಓಡಿಸಿಕೊಂಡು ಹೋಗುವಾಗ ದಾರಿ ತಪ್ಪಿದ್ದಾನೆ.  ಹಕ್ಕಿಯೊಂದು ದಾರಿ ತೋರಿಸಿದೆ.

ಹಳದಿ ಬಣ್ಣದ ಅಂಗಿ ಹಾಕಿ ಕಾಡಿನಲ್ಲಿ ಅಡಗಿ ಕುಳಿತ್ತಿದ್ದಾನೆ.

5 ಜನ ಸೇರಿ ಅಲ್ಲಿ ಹೋಗಿ ಹುಡುಕಿ. ಆಗಲಿಲ್ಲವಾದರೆ ಇನ್ನು ಎರಡು ದಿನದ ಒಳಗೆ ಆತ ಮನೆಗೆ ಬರುತ್ತಾನೆ” ಎಂದು ಕ್ಷೇತ್ರದ ಧಮ೯ದಶಿ೯ ಪುನೀತ್ ಅವರು ಹೇಳಿದ್ದರು.

ಅದರಂತೆ ಮಗನ ಬರುವಿಕೆಗೆ ಮನೆಯವರು ಕಾಯುತ್ತಿದ್ದರು.

ಇದೀಗ ಮನೆಯವರಿಗೆ ಹಾಗೂ ಗ್ರಾಮಸ್ಥರಿಗೆ ಕೊರಗಜ್ಜನ ದೈವದ ಶಕ್ತಿ ಅಚ್ಚರಿಯನ್ನುಂಟು ಮಾಡಿದೆ.

ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಪುನೀತ್ ಅವರ ನುಡಿಯಂತೆ ಎಂಟು ದಿನಗಳ ಬಳಿಕ ಆತ ನಾಯಿಯೊಂದಿಗೆ ಮರಳಿ ಬರುತ್ತಾನೆ.

ಆದರೆ ಆತನಿಗೆ ತಾನೂ ಎಲ್ಲಿ ಹೋಗಿದ್ದೆ ಎಂದು ಗೊತ್ತಿಲ್ಲ. ಕಾಡಿನಲ್ಲಿ ಸಿಲುಕಿದ ಕಾರಣ ಆಹಾರವಿಲ್ಲದೆ ವಿವೇಕಾನಂದನು ನಿತ್ರಾಣಗೊಂಡಿದ್ದ.

ಆತನ ಜೊತೆಗಿದ್ದದ್ದು ಮಾತ್ರ  ಮನೆಯ ಸಾಕು ನಾಯಿ, ಆತನ ಮರಳಿ ಬರುವಂತೆ ದಾರಿ ತೋರಿಸಿ ರಕ್ಷಿಸಿದೆ.

ಹಾಗಾಗಿ ಆತನ ಜೀವ ಉಳಿಸಿದ ನಾಯಿಯನ್ನು ಗ್ರಾಮಸ್ಥರು ಸೇರಿ ಅದ್ದೂರಿಯಾಗಿ  ತೆರೆದ ಪಿಕಪ್ ವಾಹನದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಿದರು.

50ಕ್ಕಿಂತ ಹೆಚ್ಚು ಬೈಕ್ ಟೆಂಪೋ ಆಟೋರಿಕ್ಷಾಗಳ ಜೊತೆಗೆ ತೆರೆದ ವಾಹನದಲ್ಲಿ ಚಿಂಟು ಮತ್ತು ವಿವೇಕಾನಂದ ಕುಟುಂಬಸ್ಥರು ಆಪ್ತರನ್ನು ಗೆಳೆಯರ ಬಳಗ ಮೆರವಣಿಗೆ ಮಾಡಿದೆ.

ನಂತರ ಮನೆಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ರೀತಿಯಲ್ಲೇ ವಿವೇಕಾನಂದ ವಾಪಾಸ್ ಬಂದ ಖುಷಿಯನ್ನು ಆಚರಿಸಿದರು.

ಸುತ್ತಮುತ್ತಲ ಮನೆಯವರಿಗೆ ಗೆಳೆಯರ ಬಳಗಕ್ಕೆ ಹುಡುಕಾಡಲು ಸಹಾಯ ಮಾಡಿದ ಎಲ್ಲರಿಗೆ ಶೀನಾ ನಾಯ್ಕ ಕುಟುಂಬ ಸಿಹಿಯೂಟ ಹಾಕಿಸಿದೆ.

Continue Reading

LATEST NEWS

Udupi: ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಸಾಗಾಟಗಾರರ ಮುಷ್ಕರ..!

Published

on

ಉಡುಪಿ: ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಸಾಗಾಟಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾಡಳಿತ ಮತ್ತು ಸರಕಾರದ ನೀತಿಗಳನ್ನು ಖಂಡಿಸಿ ಲಾರಿ, ಟೆಂಪೋ ಚಾಲಕ, ಮಾಲಕರು ಕಟ್ಟಡ ಸಾಮಾಗ್ರಿ ಸಾಗಾಟವನ್ನು ಸ್ಥಗಿತಗೊಳಿಸಿ ಇಂದು ಅನಿರ್ದಿಷ್ಟವಾದಿ ಮುಷ್ಕರ ಕೈಗೊಂಡಿದ್ದಾರೆ.

ಈ ನಿಟ್ಟಿನಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಲಾರಿಗಳನ್ನು ಪಾರ್ಕಿಂಗ್ ಮಾಡಲಾಗಿದೆ.

ಉದ್ಯಾವರ, ಕಟಪಾಡಿ, ಬ್ರಹ್ಮಾವರ,ಕೋಟ ಸಾಸ್ತಾನ, ಕುಂದಾಪುರ, ಬೈಂದೂರು ಭಾಗದಲ್ಲಿ ರಸ್ತೆ ಬದಿ ಲಾರಿ, ಟೆಂಪೋಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ.

ಒನ್ ಸ್ಟೇಟ್ ಒನ್ ಜಿಪಿಎಸ್, ಲಾರಿಗಳ ಮೇಲೆ ಅಕ್ರಮ ಸಾಗಾಟ ನೆಪದಲ್ಲಿ ಕೇಸ್, ಪರವಾನಿಗೆ ಅವ್ಯವಸ್ಥೆ ಮತ್ತು ಜಿಲ್ಲಾಡಳಿತದ ಏಕಾಏಕಿ ಹೊಸ ನಿಯಮಗಳ ಜಾರಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಲಾರಿ ಮಾಲಕರು ಸಮಸ್ಯೆ ಬಗೆ ಹರಿಯುವವರೆಗೆ ಮುಷ್ಕರ ಮುಂದುವರೆಸಲು ನಿರ್ಧಾರವನ್ನು ಮಾಡಿದ್ದಾರೆ.

ಪ್ರತಿಭಟನೆ ಹೀಗೆ ಮುಂದುವರಿದ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಕೂಡ ಇದೆ.

ಈ ವೇಳೆ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಸಾಗಾಟಗಾರರ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕಟಪಾಡಿ ಅವರು ಮಾತನಾಡಿ, ಇದು ಲಾರಿಯವರು ದಂಧೆ ಕೋರರು ಎನ್ನುವುದಾದರೆ ನೀವು ಯಾರು? ಈ ಹಿಂದೆ ಇದ್ದ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳಲಿಲ್ಲ.

ನೀವು ಅನಾದಿ‌ ಕಾಲದಿಂದಲೂ ಶಿಸ್ತು ಬದ್ದ ಪರವಾನಿಗೆ ವ್ಯವಸ್ಥೆ ಯಾಕೆ ಮಾಡಿಲ್ಲ. ಕೋಟಾ ನೋಟ್ ಪ್ರಿಂಟ್ ಮಾಡಿದ ಹಾಗೆ ನಾವು ಪರವಾನಿಗೆ‌ ಪ್ರಿಂಟ್ ಮಾಡಲು ಆಗುತ್ತದಾ?

ನಮ್ಮನ್ನು ಯಾಕೆ ಬಲಿಪಶು ಮಾಡುತ್ತಿದ್ದೀರಿ? ಲಾರಿಯವರ ಮೇಲೆ ದೊಡ್ಡ ದೊಡ್ಡ ಕೇಸ್ ಹಾಕುತ್ತಿದ್ದಾರೆ.

ಕಟ್ಟಡ ಸಾಮಾಗ್ರಿಗಳು ಇಲ್ಲದಿದ್ದರೆ ಎಲ್ಲರಿಗೂ ಸಮಸ್ಯೆ ಎಂದು ಸರ್ಕಾರದ ನಡೆ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

10ಸಾವಿರಕ್ಕೆ ಇದ್ದ ಒಂದು ಲೋಡ್ ಜಲ್ಲಿ ಕಲ್ಲು ಇವತ್ತು 20ಸಾವಿರಕ್ಕೆ ಹಾಕುತ್ತಿದ್ದಾರೆ.

ಇದಕ್ಕೆ ನೇರ ಕಾರಣ ಜಿಲ್ಲಾಡಳಿತ ನಿಮ್ಮ ಅಹಂಕಾರಕ್ಕೆ ನಮ್ಮ ಉತ್ತರ ನಮ್ಮ ಹೆಣ ಬೀಳುವುದು ಅಷ್ಟೇಮುಂದೆ ಏನೆಂದು ನಮಗೆ ದಾರಿ ಕಾಣುತ್ತಿಲ್ಲ.

ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳ ನಿರ್ಧಾರಗಳೇ ನಮಗೆ ಸಮಸ್ಯೆಯಾಗಿದೆ.

ಇದಕ್ಕೆ ನೇರ ಕಾರಣ ಜಿಲ್ಲಾಡಳಿತ ಎಂದು ಆರೋಪಿಸಿ ಅವರು ನಿಮ್ಮ ಅಹಂಕಾರಕ್ಕೆ ನಮ್ಮ ಉತ್ತರ ನಮ್ಮ ಹೆಣ ಬೀಳುವುದು ಅಷ್ಟೇ.

ಮುಂದೆ ಏನೆಂದು ನಮಗೆ ದಾರಿ ಕಾಣುತ್ತಿಲ್ಲ.

ಒಂದು ವೇಳೆ ಜಿಲ್ಲೆಯಲ್ಲಿ ಲಾರಿ ಮಾಲಕರ ಮೇಲೆ ದಬ್ಬಾಳಿಕೆ ನಡೆದರೆ, ಎಲ್ಲಾ ವಾಹನಗಳನ್ನು ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿ ನಮ್ಮನ್ನು ಬಂಧಿಸುವಂತೆ ಆಂದೋಲನ ನಡೆಸುತ್ತವೆ ಎಂದು ಎಚ್ಚರಿಕೆ ನೀಡಿದರು.

ಇಂದು ನಾವು ಬೀದಿಗೆ ಬರಲು ಸರಕಾರ ಮತ್ತು ಜಿಲ್ಲಾಡಳಿತ ಕಾರಣ.

ಈ ಪ್ರತಿಭಟನೆಯಲ್ಲಿ ನ್ಯಾಯ ಸಿಗದೆ ಇದ್ರೆ ನಮ್ಮ ಪ್ರಾಣ ಹೋಗುವ ತನಕ ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದರು.

Continue Reading

LATEST NEWS

Trending