Connect with us

  DAKSHINA KANNADA

  ಶಾಲಾ ಮಕ್ಕಳ ಸಾಗಾಟ ವಾಹನಗಳಿಗೆ “ಸ್ಕೂಲ್ ಕ್ಯಾಬ್” ನೋಂದಣಿ ಕಡ್ಡಾಯ

  Published

  on

  ಮಂಗಳೂರು: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಮತ್ತು ವಾಪಸ್ ಮನೆಗೆ ಬಿಡುವ ಖಾಸಗಿ ವಾಹನಗಳಲ್ಲಿ ಮಕ್ಕಳ ಸುರಕ್ಷತೆ ಸಂಬಂಧಿಸಿ ಸರಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

  ಮಕ್ಕಳನ್ನು ಕೊಂಡೊಯ್ಯುವ ವಾಹನಗಳು ಇನ್ಮುಂದೆ ಸಾರಿಗೆ ಪ್ರಾಧಿಕಾರದ “ಸ್ಕೂಲ್ ಕ್ಯಾಬ್” ಎಂದು ನೋಂದಣಿ ಮಾಡುವುದು ಕಡ್ಡಾಯ.

  ಕರ್ನಾಟಕ ಮೋಟಾರು ವಾಹನ ಕಾಯ್ದೆ 2012 (ತಿದ್ದುಪಡಿ) ಕಾಯ್ದೆ 2024 ರಡಿ ಈ ಹೊಸ ಆದೇಶ ಹೊರಡಿಸಲಾಗಿದೆ. ವಾಹನ ಮಾಲಕರು ಅಥವಾ ಚಾಲಕರು ಶಾಲಾ ಮುಖ್ಯಸ್ಥರಿಂದ ವಾಹನದ ವಿವರ, ಚಾಲಕರ ವಿವರ ಮತ್ತು ವಿದ್ಯಾರ್ಥಿಗಳ ವಿವರವನ್ನು ಒಳಗೊಂಡ ಪತ್ರವನ್ನು ಪಡೆದು ನೋಂದಣಿ ಪ್ರಾಧಿಕಾರದ ಮುಂದೆ ಹಾಜರುಪಡಿಸಿ, “ಸ್ಕೂಲ್ ಕ್ಯಾಬ್” ಎಂದು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

  Click to comment

  Leave a Reply

  Your email address will not be published. Required fields are marked *

  DAKSHINA KANNADA

  ಕಳ್ಳರನ್ನು ಹಿಡಿದ 60 ರ ವೃದ್ಧೆ..!

  Published

  on

  ಮಂಗಳೂರು :ವೃದ್ಧೆ ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ್ದ ಕಳ್ಳರಿಬ್ಬರಿನ್ನು ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುಂಡ್ಯಾ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.

  ಅಂಗಡಿಯಲ್ಲಿ ವೃದ್ಧ ಮಹಿಳೆ ಒಬ್ಬರೇ ಇದ್ದ ವೇಳೆ ಸ್ಕೂಟಿಯಲ್ಲಿ ಬಂದಿದ್ದ ಇಬ್ಬರು ವೃದ್ಧೆಯ ಕತ್ತಿನ ಸರ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಜಾಗೃತಗೊಂಡ ಮಹಿಳೆ ತಕ್ಷಣ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

  ತ್ರೇಸಿಯಾಮ್ಮ ಅವರಿಗೆ 60 ವರ್ಷ ವಯಸ್ಸಾಗಿದ್ದು, ಅಡ್ಡಹೊಳೆ ಹೆದ್ದಾರಿಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಕಳ್ಳತನ ನಡೆಸಲೆಂದೇ ಬಂದಿದ್ದ ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25), ಎಂಬವರು ಮಂಗಳೂರಿನಲ್ಲಿ ವಾಹನ ಮಾರಾಟಗಾರಿಂದ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿ ಕಳ್ಳತನ ಮಾಡಿದ್ದಾರೆ. ಅದೇ ಸ್ಕೂಟಿಯಲ್ಲಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಚಿನ್ನದ ಸರ ಎಳೆಯಲು ಹೋಗಿ‌ ಸಿಕ್ಕಿಬಿದ್ದಿದ್ದಾರೆ.

  ಕಳ್ಳರಿಬ್ಬರನ್ನೂ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  Continue Reading

  DAKSHINA KANNADA

  ಜುಲೈ 16. ದ.ಕ, ಉಡುಪಿ ಶಾಲಾ ಕಾಲೇಜಿಗೆ ರಜೆ..!

  Published

  on

  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು,ಸೋಮವಾರ ಜುಲೈ 15 ರಂದು ರಜೆ ನೀಡಲಾಗಿತ್ತು. ನಾಳೆ (ಜುಲೈ 16 )ಕೂಡಾ ರೆಡ್‌ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ ನದಿಗಳು ಉಕ್ಕಿ ಹರಿಯುತ್ತಿದೆ. ಜುಲೈ 15 ರ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಜನರು ತೊಂದರೆ ಅನುಭವಿಸಿದ್ದಾರೆ.

  ತಗ್ಗು ಪ್ರದೇಶಗಳಲ್ಲಿ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಘಟನೆ ಕೂಡಾ ನಡೆದಿದೆ. ಕೆಲೆವಡೆ ಶಾಲೆಯ ಗೋಡೆ ಕುಸಿತವಾಗಿದ್ದು, ಕೆಲವೆಡೆ ಗಾಳಿಗೆ ಶಾಲೆಯ ಹೆಂಚು ಹಾರಿ ಹೋಗಿದೆ. ನದಿಯ ನೀರು ಉಕ್ಕಿ ಹರಿಯುತ್ತಿದ್ದು, ಅಪಾಯದ ಅಂಚಿನಲ್ಲಿದೆ.

  ಹವಾಮಾನ ಇಲಾಖೆಯ ಸೂಚನೆಯಂತೆ ಜುಲೈ 16 ರಂದು ಕೂಡಾ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
  ಭಾನುವಾರದಿಂದ ಶಾಲೆಗೆ ನಿರಂತರ ರಜೆ ಅನುಭವಿಸಿದ ಮಕ್ಕಳಿಗೆ ಬುಧವಾರ ಮೊಹರಂ ಪ್ರಯುಕ್ತ ಸರ್ಕಾರಿ ರಜೆ ಕೂಡ ಸಿಗಲಿದೆ. ಗುರುವಾರದಿಂದ ಮಳೆ ಕಡಿಮೆ ಆಗುವ ಸೂಚನೆ ಇದೆ.

  Continue Reading

  DAKSHINA KANNADA

  ಶಾಲೆಯೊಳಗೆ RSS ಕಾರ್ಯಕ್ರಮ : DC ಗೆ ದೂರು..!

  Published

  on

  ಮಂಗಳೂರು : ಕಡಬ ತಾಲೂಕಿನ ಕರಿಂಬಿಲ ಕಿ.ಪ್ರಾ. ಶಾಲೆಯಲ್ಲಿ ಜು. 14 ರಂದು ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುಪೂಜೆ ಕಾರ್ಯಕ್ರಮ ನಡೆಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

  ಸರಕಾರಿ ಶಾಲೆಯ ಆವರಣದೊಳಗೆ ಅಥವಾ ಮೈದಾನವನ್ನು ಕೂಡಾ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೊಡಬಾರದೆಂಬ ಸುತ್ತೋಲೆ ಇರುವಾಗ ಶಾಲೆಯ ಒಳಗೆಯೇ RSS ಕಾರ್ಯಕ್ರಮವನ್ನು ಮಾಡಲು ಅವಕಾಶ ಕೊಟ್ಟದ್ದು ಹೇಗೆ ಎಂದು ಸ್ಥಳೀಯ ಕೆಲವರು ಶಿಕ್ಷಣ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿದ್ದಾರೆ. ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಬುಲಾವ್ ಹೋಗಿ ಅವರಿಂದ ವಿವರಣೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

  ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಕೆಲವರು ಫೋಟೋವನ್ನು ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಂಡದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ.

  ಈ ಭಾವಚಿತ್ರದಲ್ಲಿ ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಕರಿಂಬಿಲ ಎಂಬ ಹೆಸರಿರುವ ಕರಿಹಲಗೆ ಮತ್ತು ಕೊಟಡಿಯೊಳಗಿನ ದೃಶ್ಯಗಳು ಕಂಡುಬರುತ್ತಿವೆ.

  ಸರ್ಕಾರಿ ಶಾಲೆಯಲ್ಲಿ RSS ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.

  Continue Reading

  LATEST NEWS

  Trending