Home ಮಂಗಳೂರು ಕುಮ್ಕಿ ಜಾಗದಲ್ಲಿ ಆರ್ ಸಿ.ಸಿ ಮನೆ ನಿರ್ಮಾಣ : ಉಳ್ಳಾಲ ನಗರಸಭೆಯಿಂದ ತಡೆ

ಕುಮ್ಕಿ ಜಾಗದಲ್ಲಿ ಆರ್ ಸಿ.ಸಿ ಮನೆ ನಿರ್ಮಾಣ : ಉಳ್ಳಾಲ ನಗರಸಭೆಯಿಂದ ತಡೆ

ಕುಮ್ಕಿ ಜಾಗದಲ್ಲಿ ಆರ್ ಸಿ.ಸಿ ಮನೆ ನಿರ್ಮಾಣ : ಉಳ್ಳಾಲ ನಗರಸಭೆಯಿಂದ ತಡೆ

ಮಂಗಳೂರು : ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆ ದಲಿತ ಕಾಲನಿಯ ಬಳಿಯ (ಸರ್ವೆ ಸಂಖ್ಯೆ 103)ವಿಶಾಲ ಖಾಲಿ ಕುಮ್ಕಿ ಜಮೀನಿನಲ್ಲಿ ಸ್ಥಳೀಯ ಹೆಬ್ಬೆಟ್ಟು ನಗರಸಭಾ ಸದಸ್ಯನೋರ್ವನ ಕುಮ್ಮಕ್ಕಿನಿಂದ ಈಗಾಗಲೇ ಅಕ್ರಮವಾಗಿ ಕೆಲವು ಆರ್ ಸಿ.ಸಿ ಮನೆಗಳು ನಿರ್ಮಾಣಗೊಂಡಿದ್ದು ಇದೀಗ ಮತ್ತೆ ನಾಲ್ಕೈದು ಆರ್ ಸಿ.ಸಿ ಮನೆಗಳನ್ನು ಯಾವುದೇ ಪರವಾಣಿಗೆ ದಾಖಲೆಗಳಿಲ್ಲದೆ ಕಟ್ಟಲಾಗುತ್ತಿದ್ದು ಈ ಬಗ್ಗೆ ಸ್ಥಳೀಯ ದಲಿತ ಕಾಲೊನಿ‌ ನಿವಾಸಿಗಳು ಉಳ್ಳಾಲ ನಗರಸಭೆ ಪೌರಾಯುಕ್ತರಾದ ರಾಯಪ್ಪರಿಗೆ ದೂರು ನೀಡಿದ್ದರು.

ತಕ್ಷಣ ಸ್ಪಂದಿಸಿದ ರಾಯಪ್ಪರು ಮಂಗಳವಾರದಂದು ಸ್ಥಳ ಪರಿಶೀಲನೆಗೆ ಸಹಾಯಕ ಅಭಿಯಂತರ ವಿನೋದ್ ನೇತೃತ್ವದ ತಂಡವನ್ನು ಕಳುಹಿಸಿದ್ದಾರೆ.

ಪರಿಶೀಲನೆ ನಡೆಸಿದ ಸಹಾಯಕ ಅಭಿಯಂತರ ವಿನೋದ್ ಅವರು ಮನೆ ನಿರ್ಮಾಣದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.

ಇದೇ ಕುಮ್ಕಿ ಜಾಗದಲ್ಲಿ ನಗರಸಭೆಯ ಮಹಿಳಾ ಸದಸ್ಯೆಯೋರ್ವರೂ ಆರ್.ಸಿ.ಸಿ ಮನೆ ನಿರ್ಮಿಸಲು ಅಡಿಪಾಯ ಹಾಕಿದ್ದು ಈ ಬಗ್ಗೆ ನಗರಸಭಾ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳೀಯ ನಿವೇಶನ ರಹಿತ ದಲಿತ ವಾಸಿಗಳಿಗೆ ಸೂಕ್ತ ನಿವೇಶನ ಕಲ್ಪಿಸದೆ ಪ್ರಭಾವಿಗಳಿಗೆ ನಿಯಮಗಳನ್ನು ಮೀರಿ ಈ ರೀತಿ ಮನೆ ಕಟ್ಟಿಸಿ ಕೊಡಲು ಮುಂದಾಗಿರುವ ಹೆಬ್ಬೆಟ್ಟು ನಗರಸಭಾ ಸದಸ್ಯನ ವಿರುದ್ಧ ಸ್ಥಳೀಯ ದಲಿತ ನಿವಾಸಿಗಳು ಆಕ್ರೋಶಗೊಂಡಿದ್ದಾರೆ

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...